ನ್ಯೂಯಾರ್ಕ್: ಅಮೆರಿಕ ದೇಶದ 233 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಮೊದಲ ಮಹಿಳಾ ಗವರ್ನರ್ ಆಗಿ ಕ್ಯಾತಿ ಹೊಚುಲ್ (62) ಆಯ್ಕೆಯಾಗಿದ್ದಾರೆ.
ಕಚೇರಿಯ ಹನ್ನೊಂದು ಮಹಿಳಾ ಸಿಬ್ಬಂದಿಗಳೊಡನೆ ಅನುಚಿತವಾಗಿ ವರ್ತಿಸಿದ ಹಿನ್ನಲೆಯಲ್ಲಿ ಹಿಂದಿನ ಗವರ್ನರ್ ಆಂಡ್ರ್ಯೂ ಕ್ಯುಮೊ ರಾಜೀನಾಮೆ ನೀಡಿದ್ದರಿಂದ ಲೆಫ್ಟಿನೆಂಟ್ ಗವರ್ನರ್ ಕ್ಯಾತಿಯನ್ನು ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಕ್ಯಾತಿಯ ಅಧಿಕಾರಾವಧಿ 2022 ರ ಡಿಸೆಂಬರ್‌ನಲ್ಲಿ ಮುಕ್ತಾಯವಾಗಲಿದೆ. ಸರಕಾರದ ಎಲ್ಲಾ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿರುವ ಅನುಭವ ಪಡೆದಿರುವ ಕ್ಯಾತಿ 57 ನೇ ಗವರ್ನರ್ ಆಗಿ ಸೇವೆ ಸಲ್ಲಿಸಲು ಸಿದ್ಧಳಿರುವೆ ಎಂದು ತಿಳಿಸಿ ದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಹೊಚುಲ್ ಅಭಿವೃದ್ಧಿ ಮಂಡಳಿಗಳ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಹೆರಾಯಿನ್ ಹಾಗೂ ಒಪಿಯಾಡ್ ನಿಂದನೆಯನ್ನು ಎದುರಿಸುವ ಕಾರ್ಯಪಡೆಯ ಸಹ-ಅಧ್ಯಕ್ಷರು ಆಗಿದ್ದು 2015 ರಲ್ಲಿ ಕಾಲೇಜು ಕ್ಯಾಂಪಸ್ ಗಳಲ್ಲಿನ ದೌರ್ಜನ್ಯವನ್ನು ಎದುರಿಸಲು ‘ಇನಫ್ ಈಸ್ ಇನಫ್’ ಎಂಬ ಅಭಿಯಾನ ಮುನ್ನಡೆಸಿದ ಕೀರ್ತಿಯನ್ನು ಹೊಂದಿದ್ದಾರೆ.