Friday, 20th September 2024

ಭಾರತ್‌ ನೆಟ್‌ ಗ್ರಾಮೀಣ ಭಾರತ ಕನೆಕ್ಟ್

ಅಭಿಮತ

ಪ್ರಕಾಶ್ ಶೇಷರಾಘವಾಚಾರ್‌

sprakashbjp@gmail.com

ಕೋವಿಡ್ ಸಂಕಟದ ತರುವಾಯ ಉತ್ತಮ ಅಂತರ್ಜಾಲ ಸೇವೆಯು ದೇಶದ ಮೂಲೆ ಮೂಲೆಗೂ ಅತ್ಯವಶ್ಯಕವಾಗಿದೆ. ಗ್ರಾಮೀಣ ಭಾಗದಲ್ಲಿ ಅಂತರ್ಜಾಲ ಬಳಕೆಯು ಶೇ.400ರಷ್ಟು ಹೆಚ್ಚಾಗಿದೆ. ಪ್ರಾಯಶ: ಕೇಂದ್ರ ಸರಕಾರ 2016ರಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಟ್ರಾಯ್ ಸಲಹೆಗೆ ಮನ್ನಣೆ ನೀಡಿದ್ದರೆ ಈ ವೇಳೆಗೆ ಭಾರತ್ ನೆಟ್ ತನ್ನ ಗುರಿ ತಲುಪಬಹುದಿತ್ತೇನೊ. ಮೋದಿ ಸರ ಕಾರವು ಸ್ವಪ್ರತಿಷ್ಠೆಗೆ ಬಲಿಯಾಗದೆ ಸಮಸ್ಯೆಯನ್ನು ಗುರುತಿಸಿ ಯೋಜನೆಯ ಯಶಸ್ಸಿಗೆ ಖಾಸಗಿ ಸಹಭಾಗಿತ್ವಕ್ಕೆ ಮುಂದಾಗಿದೆ.

2011ರಲ್ಲಿ ಯುಪಿಎ ಸರಕಾರವು ಗ್ರಾಮೀಣ ಭಾರತವನ್ನು ಅಂತರ್ಜಾಲ ಸಂಪರ್ಕಕ್ಕೆ ಜೋಡಿಸಲು ಭಾರತ್ ನೆಟ್ ಯೋಜನೆಗೆ ಚಾಲನೆ ನೀಡುತ್ತದೆ. ಯೋಜನೆ ಉದ್ದೇಶ ದೇಶದ 2.5ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ನೀಡಿ ದೇಶದ 6.5ಲಕ್ಷ ಗ್ರಾಮಗಳಿಗೆ ಇಂಟರ್ ನೆಟ್ ಸೌಲಭ್ಯ ಒದಗಿಸು ವುದು. ಯೋಜನೆಯನ್ನು ಜಾರಿಗೆ ತರುವ ಸಲುವಾಗಿ ಭಾರತ್ ಬ್ರಾಡ್ ಬ್ಯಾಂಡ್ ನೆಟ್ ವರ್ಕ್ ಲಿಮಿಟೆಡ್ ಎಂಬ ಸಂಸ್ಥೆ ರಚನೆಯಾಗುತ್ತದೆ.

2014 ರಲ್ಲಿ ನಗರ ಪ್ರದೇಶದಲ್ಲಿ 27 ಕೋಟಿ ಮತ್ತು ಗ್ರಾಮೀಣ ಭಾಗದಲ್ಲಿ 10 ಕೋಟಿ ಜನರು ಇಂಟರ್ ನೆಟ್ ಬಳಕೆ ಮಾಡುತ್ತಿದ್ದರು. ಈ ಅಗಾಧವಾದ ಅಂತರ ವನ್ನು ಕಡಿಮೆ ಮಾಡಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಮತೋಲನ ತರುವುದು ಭಾರತ್ ನೆಟ್‌ನ ಮೂಲ ಉದ್ದೇಶ. ನೀರು, ವಿದ್ಯುತ್, ರಸ್ತೆ ಮುಂತಾದ ಮೂಲ ಭೂತ ಸೌಕರ್ಯಗಳ ಅಗತ್ಯವಿರುವ ಹಾಗೆ ಡಿಜಿಟಲ್ ಯುಗದಲ್ಲಿ ಇಂಟರ್ ನೆಟ್ ಸೌಲಭ್ಯವೂ ಗ್ರಾಮೀಣ ಭಾಗದಲ್ಲಿ ಅಷ್ಟೆ ಅನಿವಾರ್ಯ ವಾಗಿದೆ. ಬದಲಾಗುತ್ತಿರುವ ಜೀವನ ಶೈಲಿ ಮತ್ತು ಸರ್ಕಾರದ ಅನೇಕ ಉಪ ಕ್ರಮಗಳು ಇಂದು ಆನ್ ಲೈನ್ ಮೂಲಕ ಜಾರಿಯಾಗುತ್ತಿದೆ.

ಬಹು ಮುಖ್ಯವಾಗಿ ಕೃಷಿ ಉತ್ಪನ್ನಗಳ ಮಾರಾಟ ಇದೀಗ ದೊಡ್ಡ ಪ್ರಮಾಣದಲ್ಲಿ ಆನ್ ಲೈನ್ ಮೂಲಕ ನಡೆಯುತ್ತಿದೆ. ಹೀಗಾಗಿ ಗ್ರಾಮೀಣ ಅಭಿವೃದ್ಧಿಯಲ್ಲಿ ಅಂತರ್ಜಾಲದ ಲಭ್ಯತೆಯು ಬಹು ಮುಖ್ಯ ಪಾತ್ರ ವಹಿಸು ತ್ತಿದೆ. ಮಹತ್ವ ಪೂರ್ಣ ಭಾರತ್ ನೆಟ್ ಯೋಜನೆಯು 2011 ರಲ್ಲಿ ಆರಂಭಗೊಂಡಿತ್ತು ಆದರೆ ಅನುಷ್ಠಾನದಲ್ಲಿ ಕನಿಷ್ಠ ಪ್ರಗತಿಯ ಕಾರಣ 2014ರಲ್ಲಿ ಯುಪಿಎ ಸರ್ಕಾರ ಪದತ್ಯಾಗ ಮಾಡಿದಾಗ ಕೇವಲ 53 ಗ್ರಾಮ ಪಂಚಾಯಿತಿಗಳಿಗೆ ಭಾರತ್ ನೆಟ್ ಅಡಿಯಲ್ಲಿ ಸಂಪರ್ಕ ನೀಡಲಾಗಿತ್ತು.

ನರೇಂದ್ರ ಮೋದಿ ಪ್ರಧಾನಿಯಾದ ತರುವಾಯ ಭಾರತ್ ನೆಟ್ ಯೋಜನೆಗೆ ಹೆಚ್ಚಿನ ಆದ್ಯತೆ ದೊರೆಯಿತು. ಇದಕ್ಕೆ ಬೇಕಾದ ಬಂಡವಾಳವನ್ನು “ಸಾರ್ವತ್ರಿಕ ಸೇವಾ ಬಾಧ್ಯತೆ ನಿಽ”ಯಲ್ಲಿ 80000 ಸಾವಿರ ಕೋಟಿ ರು. ಅನುದಾನದ ಬೆಂಬಲವನ್ನು ನೀಡಿ ಇದರ ಗತಿಯನ್ನು ತೀವ್ರಗೊಳಿಸಲಾಯಿತು. ಮೊದಲನೆ ಹಂತದಲ್ಲಿ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 100000 ಗ್ರಾಮ ಪಂಚಾಯಿತಿಗಳಿಗೆ ಒಎಫ್ಸಿ ಕೇಬಲ್ ಅಳವಡಿಸಲಾಗಿದೆ. ಇದರಲ್ಲಿ 300000 ಗ್ರಾಮಗಳು ಸೇರಿವೆ. ಈ ಯೋಜನೆಯಿಂದ ಈ – ಆಡಳಿತ, ಈ -ಆರೋಗ್ಯ , ಈ -ಬ್ಯಾಂಕಿಂಗ್ , ಈ -ಶಿಕ್ಷಣ, ಈ -ಕಾರ್ಮಸ್ , ಈ -ಮಂಡಿ, ಪೋಸ್ಟ್ ಆಫೀಸ್ ಸೇವೆ ಮತ್ತು ಅಂರ್ತಜಾಲದಲ್ಲಿನ ಇತರ ಸೇವೆಗಳನ್ನು ಪಡೆಯಬಹುದಾಗಿದೆ.

ದೇಶದ 250000 ಗ್ರಾಮ ಪಂಚಾಯಿತಿಗಳಿಗೆ ೧೦೦Iಚಿmo ಬ್ರಾಡ್ ಬ್ಯಾಂಡ್ ಸೇವೆಯನ್ನು ಒದಗಿಸಲು ನಿರ್ಧರಿಸಲಾಗಿದೆ. 2019 ರ ಸ್ವಾತಂತ್ರ್ಯ ದಿನಾ ಚರಣೆಯಂದು ಕೆಂಪುಕೋಟೆಯ ಭಾಷಣದಲ್ಲಿ ಪ್ರಧಾನಿಯವರು ಬ್ರಾಡ್ ಬ್ಯಾಂಡ್ ಸೇವೆಯನ್ನು ಎಲ್ಲಾ ಗ್ರಾಮಗಳಿಗೆ ವಿಸ್ತರಿಸುವ ಘೋಷಣೆಯನ್ನು ಮಾಡಿದರು. ಈ ಯೋಜನೆಯಲ್ಲಿ ವೈಫೈ ಟವರ್‌ಗಳ ಸಂಖ್ಯೆಯನ್ನು ಈಗಿನ 0.46 ನಿಂದ ಸಾವಿರ ಸಂರ್ಪಕಕ್ಕೆ ಒಂದು ಟವರ್ ಅಳವಡಿಸುವುದು ಹಾಗೂ ಪ್ರಸಕ್ತ 5.65 ಲಕ್ಷ ಟವರ್ ಗಳನ್ನು 10 ಲಕ್ಷಕ್ಕೆ ಹೆಚ್ಚಳ ಮಾಡಲಾಗುವುದು.

ಡಿಜಿಟಲ್ ಇಂಡಿಯಾ ಸಾಕಾರವಾಗಬೇಕಾದರೆ ಗ್ರಾಮೀಣ ಭಾರತವು ಅದರ ಸರಿಸಮನಾದ ಪಾಲುದಾರ ಆದಾಗ ಮಾತ್ರ ಅದು ಸಫಲವಾಗುವುದು. ಈ ನಿಟ್ಟಿನಲ್ಲಿ ಭಾರತ್ ನೆಟ್ ಯೋಜನೆಯ ಅನುಷ್ಠಾನವು ಮಹತ್ವ ಪಡೆದಿದೆ. ಒಮ್ಮೆ ಈ ಯೋಜನೆ ಪೂರ್ಣವಾದರೆ 600 ಮಿಲಿಯನ್ ಗ್ರಾಮೀಣ ಜನರು ಅಂತರ್ಜಾಲವನ್ನು ಬಳಕೆ ಮಾಡುತ್ತಾರೆ ಎಂದು ಅಂದಾಜಿಸಲಾಗಿದೆ. ಪ್ರಸಕ್ತ ನಗರ ಪ್ರದೇಶದಲ್ಲಿ ಶೇ.67% ಮತ್ತು ಗ್ರಾಮೀಣ ಭಾಗದಲ್ಲಿ 32% ಅಂತರ್ಜಾಲ ಸಂರ್ಪಕವಿರುವುದು. 2020ರಲ್ಲಿ ನಗರ ಪ್ರದೇಶದಲ್ಲಿ ಶೇ.4ರಷ್ಟು ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಳವಾದರೆ ಗ್ರಾಮೀಣ ಭಾಗದಲ್ಲಿ ಶೇ.13ರಷ್ಟು ಹೆಚ್ಚಳವಾಗಿದೆ. ಗ್ರಾಮೀಣ ಭಾಗದಲ್ಲಿ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ನಗರ ಪ್ರದೇಶಕ್ಕೆ ಹೋಲಿಸಿದರೆ ೩ಪಟ್ಟು ವೇಗದಲ್ಲಿ ಹೆಚ್ಚಳವಾಗುತ್ತಿದೆ.

ಭಾರತ್ ನೆಟ್ ಯೋಜನೆಯಡಿಯಲ್ಲಿ ದೇಶಾದ್ಯಂತ ಈಗಾಗಲೇ 525706 ಕಿಮಿ ಒಎಫ್ಸಿ ಕೇಬಲ್ ಗಳನ್ನು ಅಳವಡಿಸಲಾಗಿದೆ ಮತ್ತು 173000 ಗ್ರಾಮ
ಪಂಚಾಯತಿಗಳಿಗೆ ಒಎಫ್ಸಿ ಕೇಬಲ್ ಸಂರ್ಪಕ ಒದಗಿಸಲಾಗಿದೆ ಮತ್ತು 160076 ಗ್ರಾಮ ಪಂಚಾಯಿತಿಗಳು ಸಂಪೂರ್ಣ ಸಂಪರ್ಕ ಪಡೆದಿವೆ ಇದಲ್ಲದೆ 104298 ವೈ- ಹಾಟ್ ಸ್ಪಾಟ್‌ಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ ಈಗಾಗಲೇ 65074 ಸಕ್ರಿಯವಾಗಿದೆ. ಈ ಯೋಜನೆಯಲ್ಲಿ ಕೇಂದ್ರ ಸರಕಾರ ಹೈಸ್ಪೀಡ್‌ಗೆ ಬೇಕಾದ ಬ್ರಾಡ್ ಬ್ಯಾಂಡ್ ಅಂತರ್ಜಾಲ ಸೇವೆಯನ್ನು ನೀಡುತ್ತದೆ. ತದನಂತರ ಕೊನೆಯ ಹಂತದ ಸಂಪರ್ಕವನ್ನು ರಾಜ್ಯ ಸರ್ಕಾರಗಳು ಕೈಗೊಳ್ಳಬೇಕಾಗುತ್ತದೆ. ಇವರಿಬ್ಬರ ಸಹಯೋಗದಲ್ಲಿ ಮಾತ್ರ ಯೋಜನೆಯ ಯಶಸ್ಸು ಅವಲಂಭಿತವಾಗಿದೆ.

ವಾಸ್ತವವಾಗಿ ಈ ಯೋಜನೆಯು 2020ರಲ್ಲಿ ಮುಗಿಯಬೇಕಾಗಿತ್ತು. ಆದರೆ ಅನುಷ್ಠಾನದ ವೇಳೆ ಹಲವಾರು ಅಡ್ಡಿ ಆತಂಕಗಳು ತಾಂತ್ರಿಕ ಸವಾಲುಗಳು ಮತ್ತು ಕೋವಿಡ್ ಸಂಕಟದ ಕಾರಣ ನಿಗದಿತ ಸಮಯದಲ್ಲಿ ಮುಗಿಯದೆ ಮತ್ತೆ 2023 ಕ್ಕೆ ಹೊಸ ಗಡವು ನೀಡಲಾಗಿದೆ. ಈ ಯೋಜನೆಯನ್ನು ತ್ವರಿತವಾಗಿ ಮುಗಿಸಲು ಮತ್ತು ಹೆಚ್ಚಿನ ಬಂಡವಾಳ ಆಕರ್ಷಿಸಲು ಸರಕಾರ ಮತ್ತು ಖಾಸಗಿ ಜಂಟಿ ಸಹಯೋಗದಲ್ಲಿ 16 ರಾಜ್ಯದಲ್ಲಿ ಅನುಷ್ಠಾನಕ್ಕೆ ಮುಂದಾಗಿದೆ.

ಮೂರನೇ ಹಂತದ ಯೋಜನೆಯ ಜಾರಿಗೆ ಈಗಾಗಲೇ ಕೇಂದ್ರ ಸರ್ಕಾರ 19041 ಕೋಟಿ ರು. ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿದೆ. ಖಾಸಗಿ ಪಾಲುದಾರಿಕೆ ಯಿಂದ ಯೋಜನೆಯನ್ನು ನಿಗದಿತ ಅವಽಯಲ್ಲಿ ಪೂರ್ಣಗೊಳಿಸಲು ಸಾಧ್ಯವಿದೆ. ತಾಂತ್ರಿಕ ನೆರವು ಮತ್ತು ನಿರ್ವಹಣೆ ಮತ್ತು ಯೋಜನೆಯ ಅನುಷ್ಠಾನದಲ್ಲಿ ವೇಗ ಹಾಗೂ ದಕ್ಷತೆಯ ಕಾರಣ ಬಳಕೆದಾರರಿಗೆ ಉತ್ತಮ ಸೇವೆ ದೊರೆಯುವಂತಾಗುವುದು.

ಕೇಂದ್ರ ಸರಕಾರ ಹೊಸ ನೀತಿಯನ್ನು ಘೋಷಿಸಿದ ತರುವಾಯ ಈಗಾಗಲೇ 40 ಖಾಸಗಿ ಸಂಸ್ಥೆಗಳು ಈ ಯೋಜನೆಯ ಭಾಗವಾಗಲು ಉತ್ಸುಕತೆ ಯನ್ನು
ತೋರಿದ್ದಾರೆ. ಕೋವಿಡ್ ಸಂಕಟದ ತರುವಾಯ ಉತ್ತಮ ಅಂತರ್ಜಾಲ ಸೇವೆಯು ದೇಶದ ಮೂಲೆ ಮೂಲೆಗೂ ಅತ್ಯಾವಶ್ಯಕ ವಾಗಿದೆ. ಗ್ರಾಮೀಣ ಭಾಗದಲ್ಲಿ ಅಂತರ್ಜಾಲ ಬಳಕೆಯು ಶೇ.400ರಷ್ಟು ಹೆಚ್ಚಾಗಿದೆ. ಪ್ರಾಯಶಃ ಕೇಂದ್ರ ಸರಕಾರ 2016ರಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಟ್ರಾಯ್ ಸಲಹೆಗೆ ಮನ್ನಣೆ ನೀಡಿದ್ದರೆ ಈ ವೇಳೆಗೆ ಭಾರತ್ ನೆಟ್ ತನ್ನ ಗುರಿ ತಲುಪಬಹುದಿತ್ತೇನೊ. ಮೋದಿ ಸರಕಾರವು ಸ್ವಪ್ರತಿಷ್ಠೆಗೆ ಬಲಿಯಾಗದೆ ಸಮಸ್ಯೆಯನ್ನು ಗುರುತಿಸಿ ಯೋಜನೆಯ
ಯಶಸ್ಸಿಗೆ ಖಾಸಗಿ ಸಹಭಾಗಿತ್ವಕ್ಕೆ ಮುಂದಾಗಿದೆ.

ಇಂಟರ್ ನೆಟ್ ಲಭ್ಯತೆಯು ಗ್ರಾಮೀಣ ಭಾಗದ ಆರ್ಥಿಕ ಪ್ರಗತಿಗೆ ಸಹಕಾರಿಯಾಗುತ್ತಿದೆ. ಈಗಾಗಲೇ ತೆರದಿರುವ ಈ – ಕಿಯೋಸ್ಕ್ ಗಳು ರೈತರಿಗೆ ಕೃಷಿ ಸಂಬಂಧ ಹಲವಾರು ಮಾಹಿಗಳನ್ನು ನೀಡುತ್ತಿವೆ. ಆಧುನಿಕ ಕೃಷಿ ಪದ್ಧತಿಯನ್ನು ಅರಿಯಲು ರೈತಾಪಿ ವರ್ಗ ಇದರ ಮೊರೆ ಹೋಗುತ್ತಿದ್ದಾರೆ. ಶಾಲಾ ಕಾಲೇಜು ಗಳು ಬಂದ್ ಆಗಿ ಆನ್ ಲೈನ್ ಪಾಠಗಳು ಇದೀಗ ಸಾಮಾನ್ಯವಾಗಿರುವಾಗ ಗ್ರಾಮೀಣ ಭಾಗದಲ್ಲಿ ಇಂಟರ್ ನೆಟ್ ಲಭ್ಯತೆಯು ಅನಿವಾರ್ಯವಾಗಿದೆ.

ಈ ಕಾಮರ್ಸ್ ತನ್ನ ಬಾಹುಗಳನ್ನು ವಿಸ್ತರಿಸಿಕೊಂಡು ಗ್ರಾಮೀಣ ಭಾಗಕ್ಕೂ ತನ್ನ ಸೇವೆ ಒದಗಿಸಲು ಸಹಾಯಕವಾಗಿದೆ. ಗ್ರಾಮೀಣ ಉತ್ಪಾದನೆಗಳಿಗೂ
ದೇಶಾದ್ಯಂತ ಮಾರುಕಟ್ಟೆ ಕಂಡುಕೊಳ್ಳಲು ಅಂರ್ತಜಾಲ ಅತ್ಯಗತ್ಯ ಹೀಗಾಗಿ ಹಳ್ಳಿ ಹಳ್ಳಿಗೂ ಭಾರತ್ ನೆಟ್ ಯೋಜನೆಯನ್ನು ವಿಸ್ತರಿಸಿರುವುದು ದೇಶೀಯ
ಪದಾರ್ಥಗಳಿಗೆ ಹಾಗೂ ಗುಡಿ ಕೈಗಾರಿಕೆಗಳಿಗೆ ಲಾಭದಾಯಕವಲ್ಲದೆ ಗ್ರಾಮೀಣ ಭಾಗದ ಅರ್ಥಿಕತೆಯು ಸುಧಾರಿಸಲು ಸಹಾಯಕವಾಗಿದೆ.

ಶೇ.೯೭ರಷ್ಟು ಮೊಬೈಲ್ ಫೋನ್‌ಗಳಲ್ಲಿ ಅಂರ್ತಜಾಲ ಸಂಪರ್ಕವಿರುವುದು. ಗ್ರಾಮೀಣ ಭಾಗದ ಜನರು ಹೆಚ್ಚು ಹೆಚ್ಚು ಆನ್ ಲೈನ್ ಮುಖಾಂತರ ಖರೀದಿಸುವ
ಪ್ರವೃತ್ತಿಯು ಹೆಚ್ಚಾಗಿರುವುದು ಅಂಕಿ ಅಂಶಗಳು ದೃಢಪಡಿಸುತ್ತದೆ. ಭಾರತ್ ನೆಟ್ ಯೋಜನೆಯ ವಿಸ್ತರಣೆಯು ಆನ್ಲೈನ್ ಮಾರಾಟಕ್ಕೆ ವರವಾಗಿ ಪರಿಣಮಿಸಿದೆ.
ಮನರಂಜನೆಗಾಗಿ ಒಟಿಟಿ ವೇದಿಕೆ ಮತ್ತು ಇತರ ಅಂರ್ತಜಾಲ ಮೂಲಗಳು ಈಗ ಎಲ್ಲೆಡೆ ಉಪಯೋಗದಲ್ಲಿದೆ. ಇದು ಕೇವಲ ನಗರಕ್ಕೆ ಸೀಮಿತವಾಗಿಲ್ಲ ಗ್ರಾಮೀಣ ಭಾಗದಲ್ಲಿಯೂ ಇಂಟರ್ ನೆಟ್ ಲಭ್ಯತೆಯ ಕಾರಣ ಹೆಚ್ಚು ಹೆಚ್ಚು ಇದನ್ನು ಬಳಸುತ್ತಿದ್ದಾರೆ.

ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸರಕಾರದ ಸಹಾಯ ಧನ ನೇರವಾಗಿ ವರ್ಗಾಯಿಸಲು ಮತ್ತು ಮನ್ ರೇಗ, ಬೆಳೆವಿಮೆ, ಕಿಸಾನ್ ಸಮ್ಮಾನ್ ಮುಂತಾದ
ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅಂರ್ತಜಾಲ ವ್ಯವಸ್ಥೆಯು ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಭಾರತ್ ನೆಟ್ ಯೋಜನೆಯು ತ್ವರಿತ ಅನುಷ್ಠಾನ ಮತ್ತು ತಾಂತ್ರಿಕ ದೋಷರಹಿತ ಸೇವೆ ನೀಡುವುದು ಅತ್ಯಗತ್ಯವಾಗಿದೆ. ಭಾರತ್ ನೆಟ್ ಯೋಜನೆಯಲ್ಲಿ ಅಳವಡಿಸಿರುವ ಒಎಫ್ಸಿ ಕೇಬಲ್‌ಗಳ
ನಿರ್ವಹಣೆ ಮಾಡುವ ಸಲುವಾಗಿಯೇ ಒಂದು ಲಕ್ಷ ಗ್ರಾಮೀಣ ಯುವಕರನ್ನು ತರಬೇತಿ ನೀಡಲು ಇದೀಗ ಯೋಜನೆಯನ್ನು ರೂಪಿಸಲಾಗಿದೆ.

ಈ ಯೋಜನೆಯಲ್ಲಿ ನಿರ್ವಹಣಾ ಭಾಗವು ಸುಧಾರಿಸಬೇಕಾದ ಅಗತ್ಯವಿದೆ. ಯೋಜನೆಯ ಸಫಲತೆಗೆ ಇದು ಬಹು ದೊಡ್ಡ ಕಂಟಕವಾಗಿ ಪೂರ್ಣ ಪ್ರಮಾಣದಲ್ಲಿ
ಕಾರ್ಯಾರಂಭ ಮಾಡಲು ವಿಳಂಬವಾಗುತ್ತಿದೆ. ವಿಶ್ವದಲ್ಲಿಯೇ ಭಾರತದಲ್ಲಿ ಡೇಟಾ ದರಗಳು ಅತ್ಯಂತ ಅಗ್ಗ. ಭಾರತದಲ್ಲಿ 1 ಜಿಬಿಗೆ ಸರಾಸರಿ 18.50 ರು. ಇದ್ದರೆ ಅಮೆರಿಕಾದಲ್ಲಿ ಅದರ ದರ 868 ರು. ಗಳು ವಿಶ್ವದಲ್ಲಿ ಸರಾಸರಿ 600 ರು. ದರವಿದೆ ಎಂದು “ಕೇಬಲ್ ಕೊ ಡೇಟಾ ಯುಕೆ” ಎಂಬ ಸಂಸ್ಥೆಯ ಅಧ್ಯಯನ ತಿಳಿಸುತ್ತದೆ. ಮುಖೇಶ್ ಅಂಬಾನಿಯವರ ಜಿಯೋ ಟೆಲಿಕಾಂ ಅಂರ್ತಜಾಲ ಸೇವೆಗೆ ಪಾದಾರ್ಪಣೆ ಮಾಡಿದರ ಫಲ ದೇಶದಲ್ಲಿ ಮೊಬೈಲ್ ದರದಲ್ಲಿ ಮತ್ತು ಡೇಟಾ ಬಳಕೆಯ ದರದಲ್ಲಿ ಬೃಹತ್ ಪ್ರಮಾಣದ ಕಡಿತ ಉಂಟಾಯಿತು ಎಂಬುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ.

ಡಿಜಿಟಲ್ ಇಂಡಿಯಾ ಸಫಲಗೊಳಿಸುವ ಸಲುವಾಗಿ ಭಾರತ್ ನೆಟ್ ಯೋಜನೆಯ ಮುಖಾಂತರ ಭಾರತದ ಗ್ರಾಮೀಣ ಜನತೆಗೂ ನಗರ ಮಟ್ಟದ ಸೌಕರ್ಯ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಮೋದಿ ಸರಕಾರವು ಅವಿರತವಾಗಿ ಕಾರ್ಯೋನ್ಮುಖವಾಗಿದೆ. ಆಧುನಿಕ ತಂತ್ರಜ್ಞಾನದ ಲಾಭ ಗ್ರಾಮೀಣ ಭಾರತಕ್ಕೂ ದೊರೆಯುವ ಹಾಗೆ ಮಾಡುತ್ತಿರುವ ಶ್ರೇಯಸ್ಸು ಮೋದಿ ಸರಕಾರಕ್ಕೆ ಸಲ್ಲುತ್ತದೆ.