ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ – ೭೬
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ಕ್ಯಾಪ್ಟನ್ ಪ್ರಕಾಶ್ ಅಂಗಡಿ ಅಭಿಮತ
ಕ್ಲಿಷ್ಟಕರ ವಾತಾವರಣದಲ್ಲಿ ನಡೆದ ದುರಸ್ತಿ ಕಾರ್ಯಾಚರಣೆ ಕುರಿತು ವಿಶ್ಲೇಷಣೆ
ಬೆಂಗಳೂರು: ಪ್ರಪಂಚದ ಅತಿ ಎತ್ತರದ ಪ್ರದೇಶ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಕೆಟ್ಟು ನಿಂತಿದ್ದ ಭಾರತೀಯ ಯುದ್ಧ ಹೆಲಿಕಾಪ್ಟರ್ ರಿಪೇರಿ ಮಾಡಿದ ರೋಚಕ
ಸಂಗತಿಗಳನ್ನು ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ಕ್ಯಾಪ್ಟನ್ ಪ್ರಕಾಶ್ ಅಂಗಡಿ ಅವರು ವಿವರಿಸಿದರು.
ಗ್ಲೇಸಿಯರ್‌ನಲ್ಲಿ ಕೆಟ್ಟು ನಿಂತಿದ್ದ ಹೆಲಿಕಾಪ್ಟರ್ ವಾಪಸ್ ತರಲು ಸಾಧ್ಯವಾಗಿರಲಿಲ್ಲ. ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಪೈಲೆಟ್ ತಕ್ಷಣ ಹೆಲಿಕಾಪ್ಟರ್ ಅನ್ನು ಮಂಜಿನ ಮೇಲೆ ಇಳಿಸಿದ್ದರು. ಆ ನಂತರ ಹೆಲಿಕಾಪ್ಟರ್ ಹಿಮದಲ್ಲಿ ಸಿಲುಕಿತ್ತು. ಅದನ್ನು ಅಲ್ಲಿಂದ ಬಿಡಿಸಿ ಮತ್ತೆ ವಾಪಸ್ ತರಲು ಸಾಧ್ಯ ವಾಗಿರಲಿಲ್ಲ. ಮೈನಸ್ 25 ರಿಂದ 30 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಈ ಪ್ರದೇಶದಲ್ಲಿ ಹೆಲಿಕಾಪ್ಟರ್ ಅನ್ನು ರಿಪೇರಿ ಮಾಡುವುದು ಸಾಧ್ಯವಾಗಿರಲಿಲ್ಲ. ಆನಂತರ ನಡೆಸಿದ ಕಾರ್ಯಾಚರಣೆ ರಣರೋಚಕ ಎಂದು ವಿವರಿಸಿದರು ಕ್ಯಾಪ್ಟನ್ ಪ್ರಕಾಶ್ ಅಂಗಡಿ.
ಸಿಯಾಚಿನ್‌ನಲ್ಲಿ ಕೆಲಸ ಮಾಡುತ್ತಿದ್ದ ಹೆಲಿಕಾಪ್ಟರ್ ಅರ್ಧ ಮುಚ್ಚಿ ಹೋಗಿತ್ತು. ಹಿಮದಿಂದ ತುಂಬಿತ್ತು. ಒಂದು ದಿನ ಕಾದರೆ ಹಿಮದಿಂದ ತುಂಬಿ ಹೋಗುತ್ತೆ ಎಂದು ಹಿಮ ತೆರವು ಮಾಡಲಾಗುತ್ತಿತ್ತು. ರಾತ್ರಿ 12 ರವರೆಗೆ ಹಿಮ ಬೀಳುತ್ತಲೇ ಇತ್ತು. ಹೆಲಿಕಾಪ್ಟರ್ ಸುತ್ತಲೂ ಗೋಡೆ ಥರ ರೂಪುಗೊಂಡಿತ್ತು. ನಮ್ಮ ತಂಡಕ್ಕೂ ಅಲ್ಲಿ ಕುಡಿಯುವ ನೀರು ಸಿಗಲ್ಲ. 22 ಕಿ.ಮೀ ಆಚೆ ನೀರು ಸಿಗುತ್ತಿತ್ತು. ಸಣ್ಣ ಟ್ಯಾಂಕ್ ಮೂಲಕ ನೀರು ತೆಗದುಕೊಂಡು ಬರಿತ್ತಿದ್ದರು. ಒಂದು ದಿನ ನೀರು ಬರ ಇಲ್ಲ. ಅಲ್ಲಿ ನೀರೆ ಊಟ. ಆಹಾರ ತಿನ್ನಲು ಸಾಧ್ಯವಿಲ್ಲ. ಆ ಸಮಯದಲ್ಲಿ ಜಿಪ್ಸಿಮ್ ರಿಪೇರಿ ಮಾಡೆದೆವು. 22 ಕಿ.ಮೀ ಹೋದೆವು. ಬಿಎಸ್‌ಎಫ್ ಕಮಾಂಡರ್ ಮೂರು ತಿಂಗಳಿನಿಂದ ಅಲ್ಲಿ ಇದ್ದರು.
ರಾತ್ರಿ ಮೂರು ಗಂಟೆಗೆ ಹೊರಬಂದಾಗ ಆಕಾಶದಲ್ಲಿ ನಕ್ಷತ್ರಗಳು ಕಣ್ಣಿಗೆ ರಾಚುವಂತಿತ್ತು ಎಂಬ ಅನುಭವ ಹಂಚಿಕೊಂಡರು. ಹಿಮದಲ್ಲಿ ಹೆಲಿಕಾಪ್ಟರ್ ಒಂದು ಕೆಟ್ಟು ಹೋಗಿರುತ್ತದೆ. ಒಂದು ಹೆಲಿಕಾಪ್ಟರ್‌ನಲ್ಲಿ ಹೋಗಿ ಎಲ್ಲಾ ವಿಷಯಗಳ ಕುರಿತು ಅರ್ಥ ಮಾಡಿಕೊಂಡೆ. ಕ್ಲಿಷ್ಟಕರ ಸವಾಲು ಎದುರಿಸುತ್ತಿದ್ದೆ. ತಾಂತ್ರಿಕ ಸವಾಲು, ಹಾಗೂ ಜೀವಂತ ಇರೋದೆ ದೊಡ್ಡ ಸಂಕಷ್ಟ. ತಂಡದ ಜವಾಬ್ದಾರಿ ನಾಯಕನ ಮೇಲಿರುತ್ತದೆ. ಕ್ಲಿಷ್ಟಕರ ಪ್ರದೇಶದಲ್ಲಿ ಸಂವಹನ ಕೂಡ ಕಷ್ಟ. ಯಾವುದೇ ವೈದ್ಯಕೀಯ ಸೌಲಭ್ಯ ಇರಲ್ಲ. ಆಕ್ಸಿಜನ್ ೪೦-೫೦ ಇರುತ್ತದೆ.
ನಮ್ಮ ದೇಹ ಶೇ. 40 ರಷ್ಟು ಸನ್ನzಗಿರುತ್ತದೆ. ಇದಕ್ಕಾಗಿ ಕೆಟ್ಟು ಹೋಗಿದ್ದ ಹೆಲಿಕಾಪ್ಟರ್‌ವೊಂದನ್ನು ಚಂಡೀಗಢದಲ್ಲಿ ಪಡೆದು ಸಂಕಷ್ಟದ ಸಮಯದಲ್ಲಿ
ಎದುರಾಗುವ ಸವಾಲುಗಳು ಕುರಿತು ಮೈದಾನದಲ್ಲಿ ತರಬೇತಿ ಮಾಡಿದೆವು ಎಂದು ವಿವರಿಸಿದರು. 14 ದಿನ ಹಿಮ ಪ್ರದೇಶದಲ್ಲಿ ಇದ್ದೆವು.
‘ಬಂದಿದ್ದೇವೆ. ವಾಪಸ್ ಹೋಗಬಾರದು ಗೆಲ್ಲಬೇಕೆಂಬ ಛಲ ಇತ್ತು. ರಷ್ಯನ್ ರಕ್ಷಣಾ ತಜ್ಞರು ಆಗಲ್ಲ ಅಂತಾ ಹೇಳಿದ್ದ ವಿಮಾನ ರಿಪೇರಿ ಮಾಡಿದೆವು. ಐದಾರು ತಿಂಗಳು ಹೆಲಿಕಾಪ್ಟರ್ ಹಾಗೆ ಇತ್ತು. ಶೀತ ಪ್ರದೇಶದಲ್ಲಿತ್ತು. ಆರು ತಿಂಗಳ ನಂತರ ರಿಪೇರಿ ಮಾಡೆದೆವು. ಏರ್ ಟೆಸ್ಟ ಮಾಡಿದೆವು. ಬಳಿಕ ಅದು ಸಿದ್ಧವಾಯಿತು. ವಿಮಾನ ಹಾರಿದಾಗ ಮಕ್ಕಳ ತರ ಖುಷಿಯಾದೆವು. ನಾವು ಮಾಡಿದ ಕೆಲಸ ಸಾರ್ಧಕವಾಯಿತಲ್ಲ ಅಂತಾ ಸಂತೋಷ ಆಯಿತು. 20 ನಿಮಿಷ ಹೆಲಿಕಾಪ್ಟರ್ ವಸ್ತುಸ್ಥಿತಿ ಬಗ್ಗೆ ತಿಳಿಯಿತು. ಅದು ಮುಂದಿನ ನಿಲ್ದಾಣದಲ್ಲಿ ತಂಗಿತು. ಆಗ ನಮಗೆ ಆನಂದವಾಯಿತು. ಈ ಹೆಲಿಕಾಪ್ಟರ್‌ನಲ್ಲಿ ಹೊರಗೆ ಬಂದ ಮೇಲೆ ರೆಡ್
ಕಾರ್ಪೆಟ್ ಸನ್ಮಾನ ಸಿಕ್ಕಿತು ಎಂದರು.
ಹೋದ ಕಡೆಯಲ್ಲ ಸಾಕಷ್ಟು ಸವಾಲು: ವಾಯುಸೇನೆಯಲ್ಲಿ ಬೇಕಾದ ರೀತಿಯಲ್ಲಿ ಯೋಧರನ್ನು ತಯಾರಿಗೊಳಿಸುತ್ತಾರೆ. ಬೌದ್ಧಿಕ ಮತ್ತು ದೈಹಿಕವಾಗಿ ಬದ್ಧವಾಗಿರುತ್ತದೆ. ಕಮಾಂಡೋ ತರಬೇತಿ ನೀಡಲಾಗುತ್ತದೆ. ಬಳಿಕ ಆಪರೇಷನಲ್ ಯೂನಿಟ್ ಕಡೆ ಹೋಗುತ್ತೇವೆ.
ವಾಯುನೆಲೆಗೆ ಹೋದಮೇಲೆ 60-7೦ ಜನರನ್ನು ಕಮಾಂಡ್ ಮಾಡಲಾಗುತ್ತದೆ. ಯುದ್ಧಕ್ಕೆ ಸಿದ್ಧರನ್ನಾಗಿಸಲಾಗುತ್ತದೆ. ಇದರ ಜತೆಗೆ ಸಾಮಾನ್ಯ ಕೆಲಸ ಇರುತ್ತದೆ. ಹೆಲಿಕಾಪ್ಟರ್ ಎಲ್ಲಿ ಬೇಕಾದರೂ ಇಳಿಯಲು ಅವಕಾಶ ಇದೆ. ಎರೆಡೆರಡು ವರ್ಷಕ್ಕೆ ಅಸ್ಸಾಂನಿಂದ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಸಿಲ್ಚಾರ್ ಕಡೆ ಹೋಗಿ ಕಾರ್ಯನಿರ್ವಹಿಸಿದೆ. ಹೋದ ಕಡೆಯಲ್ಲ ಸಾಕಷ್ಟು ಸವಾಲು ಎದುರಿಸಿದೆ. ಅಸ್ಸಾಂನ ಕುಂಬಿ ಗ್ರಾಮದಲ್ಲಿ ೧೫ ದಿನ ವಿದ್ಯುತ್ ಇರಲಿಲ್ಲ. ಮಳೆ ಬಂದು ಇರುವ ಬ್ರಿಕ್ಸ್ ಕೂಡ ಮುಳುಗಿತು. ಇಂತಹ ಪರಿಸ್ಥಿತಿಗಳು ಎದುರಾಗುತ್ತದೆ. ಕಾಂಗೋದಲ್ಲಿ ನಡೆದ ಯುದ್ಧ ನಮ್ಮ ಜೀವನ ಬದಲಾಯಿಸಿತು. ಕಡು ಬಡತನ, ಜನರಿಗೆ ನೀಡಿದ ಹಿಂಸೆ ಪ್ರತ್ಯಕ್ಷವಾಗಿ ನೋಡಿದೆವು. ರಷ್ಯಾ, ಫ್ರಾನ್ಸ್, ಬಾಂಗ್ಲಾದೇಶ, ಪಾಕಿಸ್ತಾನ ಮಿಲಿಟರಿ ಜತೆ ನಾವು ಕೆಲಸ ಮಾಡಿದ್ದೇವೆ. ಇದೆಲ್ಲವೂ
ನಮಗೊಂದು ಅಪರೂಪದ ಅನುಭವ ಎಂದು ತಿಳಿಸಿದರು.
ಎನ್‌ಸಿಸಿ ಶಿಸ್ತು, ಮನಸ್ಥೈರ್ಯ ತುಂಬಿತು!
ನಾನು ನಿಪ್ಪಾಣಿಯಲ್ಲಿ ಜನಿಸಿದೆ. ದೊಡ್ಡ ಕುಟುಂಬದ ಕೊನೆಯ ಸದಸ್ಯ. ಚಿಕ್ಕವನಿದ್ದಾಗ ಯಾವಾಗಲೂ ಅಲರ್ಜಿ ಕಾಯಿಲೆಗಳು ಕಾಡುತ್ತಿದ್ದವು. ಆಗ ವೈದ್ಯರು ತುಂಬಾ ವೀಕ್ ಇದಿಯಾ ಅಂದರು. ಆರೋಗ್ಯ ಸುಧಾರಣೆ ಪ್ರಯತ್ನಿಸಲು ಯೋಚಿಸಿದೆ. ಬಳಿಕ ಎನ್‌ಸಿಸಿ ಸೇರಿಕೊಂಡೆ. ೧೦ ದಿನಗಳ ಕ್ಯಾಂಪ್ ಗೆ ಹೋದ ಮೇಲೆ ಒಂದೆ ದಿನಕ್ಕೆ ಅಳುತಾ ಕೂತೆ. ಮೇಷ್ಟ್ರು ಸಮಾಧಾನ ಮಾಡಿದರು. ರಾತ್ರಿಪೂರ ಅಳುತ್ತಾ ಶಾಲೆಯ ಗೇಟಿನ ಬಳಿ ಕುಳಿತಿದ್ದೆ. ಬಳಿಕ ನನ್ನನ್ನು ಮನೆಗೆ
ಕಳುಹಿಸಿದರು. ಎಲ್ಲರೂ ವಾಪಸ್ ಬಂದ ಬಳಿಕ ನಡೆದ ಘಟನೆಗಳು ಬದುಕನ್ನು ಬದಲಿಸಿತು. ಬಳಿಕ ಮೇಷ್ಟು ಎನ್‌ಸಿಸಿ ಯಿಂದ ತೆಗೆದು ಹಾಕುವೆ ಅಂದರು. ನನ್ನನ್ನು ಸ್ನೇಹಿತರು ಟೀಕೆ ಮಾಡಿದರು.
ಮತ್ತೆ ಎನ್‌ಸಿಸಿ ಅಽಕಾರಿ ಬಳಿ ಹೋಗಿ ವಿನಂತಿ ಮಾಡಿ ಮತ್ತೆ ಸೇರಿಕೊಂಡೆ. ಎನ್‌ಸಿಸಿ ಶಿಬಿರಕ್ಕೆ ಹೋಗಿ ತರಬೇತಿ ಪೂರ್ತಿಗೊಳಿಸಲು ತೀರ್ಮಾನಿಸಿದ್ದೆ.
ಎನ್‌ಸಿಸಿ ಶಿಸ್ತು, ಮನಸ್ಥೈರ್ಯ ತುಂಬಿತು. ದೈಹಿಕ ಸದೃಢತೆಗೆ ಅನುಕೂಲ ವಾಯಿತು ಎಂದು ಗ್ರೂಪ್ ಕ್ಯಾಪ್ಟನ್ ಪ್ರಕಾಶ್ ಅಂಗಡಿ ತಿಳಿಸಿದರು.
***
ಸೈನಿಕರು ದೇಶದ ರಕ್ಷಣೆಗೆ ಹಾಗೂ ನಮ್ಮ ಜೀವ ಕಾಪಾಡುವ ಪರಮ ಪವಿತ್ರ ಕಾಯಕದಲ್ಲಿ ತೊಡಗಿದ್ದಾರೆ. ರಾಷ್ಟ್ರಧ್ವಜ ಸೈನಿಕರ ಉಸಿರಿನಿಂದ
ಹಾರಾಡುತ್ತಿದೆ. ನಮ್ಮ ದೇಶ ಎಲ್ಲ ಕಡೆಗಳಿಂದಲೂ ಶತ್ರುಗಳಿಂದ ಆವೃತವಾಗಿದೆ. ವೈರಿ ರಾಷ್ಟ್ರಗಳ ಜತೆ ಸೆಣೆಸಬೇಕಾಗುತ್ತದೆ. ಕ್ಯಾಪ್ಟನ್ ಪ್ರಕಾಶ್ ಅಂಗಡಿ
ಅವರು ವಾಯುಸೇನೆಯಲ್ಲಿ ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ವಿಶಿಷ್ಟ ಸೇವಾ ಮೆಡಲ್ ಪಡೆದರು. ಜಗತ್ತಿನ ಅತಿ ಎತ್ತರದ ಸಿಯಾಚಿನ್ ಸಮರ
ಭೂಮಿಯಲ್ಲಿ ಹೋರಾಡಿದ್ದಾರೆ.
-ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು