Thursday, 19th September 2024

ದೇವ ಮಾನವನಾಗಲು ಧರ್ಮ ಬೇಕು

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ – 80

ಧರ್ಮ ಇಲ್ಲದಿದ್ದರೆ ಪೈಚಾಶಿಕ ಕೃತ್ಯ ಹೆಚ್ಚುತ್ತವೆ 

ಅಧ್ಯಾತ್ಮ ಮತ್ತು ಧರ್ಮ ಒಂದಕ್ಕೊಂದು ಸಂಬಂಧವಿದೆ: ಸ್ವಾಮಿ ಶಾಂತಿ ವ್ರತಾನಂದ ಅಭಿಮತ

ಬೆಂಗಳೂರು: ಮಾನವ ಮಾನವನಾಗಿರಲು ನಿಜವಾದ ಅಸ್ತಿತ್ವ ಅರ್ಥ ಮಾಡಿಕೊಂಡು ದೇವ ಮಾನವನಾಗಲು ಧರ್ಮ ಬೇಕು. ಪ್ರಾಣಿ ಹಾಗೂ ಮನುಷ್ಯರಲ್ಲಿ ಭಯ, ಕಾಮ ಸಮಾನವಾಗಿದೆ. ಆದರೆ ಮಾನವರಲ್ಲಿ ಇರುವ ವಿಶೇಷ ಅಂದರೆ ಧರ್ಮ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಶಾಂತಿವ್ರತಾನಂದ ಸ್ವಾಮೀಜಿ
ತಿಳಿಸಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಧರ್ಮ ಇಲ್ಲ ಅಂದರೆ ಪೈಶಾಚಿಕ ಕೃತ್ಯಗಳು ನಡೆಯುತ್ತದೆ.  ಪ್ರಾಮಾಣಿಕ-ಅಪ್ರಾಮಾಣಿಕ, ನೈತಿಕ-ಅನೈತಿಕ ಕೆಲಸ ಮಾಡುವ ವಿಚಾರ ಮಾನವನದ್ದು. ಧರ್ಮ ಧರಿಸುವುದು. ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ಆಚರಣೆ ಮಾಡಿದಾಗ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ವಿವರಿಸಿದರು.

ಧರ್ಮದ ಹೆಸರಲ್ಲಿ ರಕ್ತಪಾತ, ಅನ್ಯಾಯ, ಅತ್ಯಾಚಾರ, ಹಿಂಸೆ ನಡೆದಿದೆ. ನಮಗ್ಯಾಕೆ ಬೇಕು ಧರ್ಮ ಎನ್ನುತ್ತಾರೆ ಕೆಲ ಜನ. 21 ಶತಮಾನದಲ್ಲಿ 11-15 ಮಿಲಿಯನ್ ಜನ ಸತ್ತಿzರೆ ಧರ್ಮದಿಂದ. ಯುರೋಪ್‌ನಲ್ಲಿ 3 ಲಕ್ಷ ಜನರನ್ನು ಸುಟ್ಟು ಹಾಕಲಾಗಿದೆ. ಕಮ್ಯುನಿ ಐಡಿಯಾಲಜಿಯಿಂದ 65 ರಿಂದ 100 ಮಿಲಿಯನ್ ಜನ ಕಗ್ಗೋಲೆ ಆಗಿದೆ. ಕಮ್ಯುನಿ ಹೆಸರಿನಲ್ಲಿ ರಕ್ತಪಾತವಾಗಿದೆ. ಹಿಂದೂಗಳಲ್ಲಿ ಧರ್ಮದ ಹೆಸರಿನಲ್ಲಿ ೫೦ ರಿಂದ ೧ ಲಕ್ಷ ಹಿಂಸೆಯ ಪ್ರಕರಣಗಳು ಇರಬಹುದು. ಆರ್ಯ, ಸನಾತನ ಧರ್ಮದಲ್ಲಿ ಇದು ಆಗಲಿಲ್ಲ. ೧೮ನೇ ಶತಮಾನ ದವರೆಗೆ ಧರ್ಮದ ಹೆಸರಿನಲ್ಲಿ ಅಸ್ಪೃಶ್ಯತೆ ತಂದೆವು.

ಇದಕ್ಕೆ ಧರ್ಮ ಕಾರಣವಲ್ಲ. ಸಾಮಾಜಿಕ-ರಾಜಕೀಯ ಕಾರಣ ಎಂದರು. ಯೌವ್ವನರು ಬಂದು ನಮ್ಮ ದೇಶಕ್ಕೆ ಬಂದಾಗ. ಸಿಕ್ಕ ಹೆಣ್ಣ ಮಕ್ಕಳನ್ನು ಕೆಟ್ಟದಾಗಿ ಬಳಸಿಕೊಂಡರು. ಪೈಶಾಚಿಕ ಕೃತ್ಯಗಳನ್ನು ಮಾಡಿ ಹಳ್ಳಿಗಳನ್ನು ಸುಟ್ಟರು. ಮೊಘಲರು ಇದೇ ಕಾಲದಲ್ಲಿ ಮುಂದುವರಿಯಿತು. ತಮ್ಮ ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಕೊಳ್ಳಬೇಕು ಎಂದು ರಾತ್ರಿ ಮದುವೆಗಳನ್ನು ಮಾಡಿದರು. ಆಗಿನ ಕಾಲಘಟ್ಟದಲ್ಲಿ ಯುವತಿ ಯುವತಿಯರನ್ನು ವೇಶ್ಯಾವಟಿಕೆಯಲ್ಲಿ ತೊಡಗಲು ಹಿಂಸೆ ಮಾಡುತ್ತಿದ್ದರು. ಸತಿಸಹಗಮನ ಪದ್ಧತಿ, ಜಾತಿ ಪದ್ಧತಿ ವೇದ, ಉಪನಿಷತ್ತುಗಳಲ್ಲಿ ಇರಲಿಲ್ಲ. ವರ್ಣಾಶ್ರಮ ಇತ್ತು. ಕೆಲ ದಿನಗಳ ನಂತರ ಧರ್ಮ ಹೆಸರಿನಲ್ಲಿ ಮೇಲು- ಕೀಳು ಭಾವನೆಗಳು ಕೇಳಿ ಬಂದಿವೆ. ಧರ್ಮ ಏಕೆ ಬೇಕು ಅಂದರೆ ಸ್ವಾತಂತ್ರ್ಯ ವ್ಯಕ್ತಿಯಾಗಲು.

ಸನ್ನಿವೇಶಕ್ಕೆ ದಾಸರಾಗಿರುತ್ತೇವೆ. ನಮ್ಮ ಮೇಲೆ ನಾವು ನಿಯಂತ್ರಣ ಏರಬೇಕು ಎಂದು ಮಾಹಿತಿ ನೀಡಿದರು. ವಿeನ, ತಂತ್ರeನ ಆವಿಷ್ಕಾರಗಳು ನೈಸರ್ಗಿಕ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ನಡೆಯತ್ತಿವೆ. ನನಗೆ ಇಷ್ಟ ಪಟ್ಟಂತೆ ಜೀವನ ಪ್ರಕೃತಿಯಿಂದ ಸ್ವತಂತ್ರ್ಯರಾಗುವುದು ಭೌತಿಕವಾದುದು. ಬಾಹ್ಯವಾಗಿ ನಮ್ಮ
ಪಂಚೇಂದ್ರಿಯಗಳು ನಿಯಂತ್ರಣದಲ್ಲಿ ಇಡಬೇಕು. ನಿನ್ನನ್ನು ನೀನು ಅರ್ಥಮಾಡಿಕೊಂಡು ಆತ್ಮವಿಶ್ವಾಸದಿಂದ ಸಾಕ್ಷಾತ್ಕಾರ ಪಡೆದಾಗ ಮೋಕ್ಷ ಪಡೆಯುತ್ತೇವೆ. ನಾನು ಯಾವಾಗಲೂ ಇರಬೇಕು ಎಂಬ ಆಲೋಚನೆ. ನನ್ನ ಸ್ವಭಾವವೇ ಅಸ್ತಿತ್ವ. ಬುದ್ದಿವಂತರಾಗಲು ಇಷ್ಟಪಡುತ್ತೇವೆ. ನಮ್ಮ ಸ್ವರೂಪ, ಸ್ವಭಾವ ಚಿತ್ ಎಂದು ಉಪನಿಷತ್ ಹೇಳುತ್ತದೆ. ಇಂದ್ರಿಯ ತೃಷ್ಠೀಕರಣ ಆನಂದ ವಸ್ತುಗಳಲ್ಲಿ ಇಲ್ಲ. ನಿನ್ನ ಸ್ವರೂಪವೇ ಆನಂದ. ಅದನ್ನು ಅರ್ಥ ಮಾಡಿಕೊಂಡರೆ ಸ್ವತಂತ್ರನಾಗಿರ ಬಹುದು ಎಂದು ಹೇಳಿದರು.

ಧರ್ಮ ಮತ್ತು ಅಧ್ಯಾತ್ಮ

ಬೇರೆಯಲ್ಲ ನಿಜವಾದ ಸ್ವಾತಂತ್ರ್ಯ ನಮ್ಮನ್ನು ಅವು ಅರ್ಥ ಮಾಡಿಕೊಂಡು ಇಂದ್ರಿಯಗಳನ್ನು ನಿಯಂತ್ರಿಸಲು ಸಾಧು ಸಂತರ ಉಪದೇಶ ಅರ್ಥ ಮಾಡಿಕೊಳ್ಳ
ಬೇಕು. ಧರ್ಮವನ್ನು ಉಪಕರಣವಾಗಿ ಉಪಯೋಗಿಸಿದರೆ ಸಮಸ್ಯೆ, ರಕ್ತಪಾತ, ಯುದ್ಧಕ್ಕೆ ಆಹ್ವಾನ. ಪಾಶ್ಚಾತ್ಯ ದೇಶಗಳಲ್ಲಿ ಧರ್ಮ ಅಂದರೆ ಒಂದು ದೇವರು, ಶಾಸ, ಗುರು. ಧರ್ಮ ಮತ್ತು ಆಧ್ಯಾತ್ಮ ಬೇರೆ ಬೇರೆಯಲ್ಲ. ಗುರಿ ಹಾಗೂ ಮಾರ್ಗವೂ ಹೌದು. ಧರ್ಮ ಅಂದರೆ ಸಾಕ್ಷಾತ್ಕಾರ. ನೈಜ ಸ್ವರೂಪ ತಿಳಿದುಕೊಳ್ಳ ಬೇಕು. ಆತ್ಮ, ಸಾಕ್ಷಾತ್ಕಾರ ಗುರಿ. ನೈತಿಕ ಜೀವನ ನಡೆಸಬೇಕು. ಮನಸು, ಇಂದ್ರಿಯ ನಿಗ್ರಹದಿಂದ ಆತ್ಮ ಸಾಕ್ಷಾತ್ಕಾರ ಸಾಧ್ಯ. ಆಲೋಚನೆ, ವ್ಯಕ್ತಿಗಳ ಪರಿಶುದ್ಧತೆಯೂ ಗುರಿ ಹಾಗೂ ಮಾರ್ಗ ಹೌದು ಎಂದು ಶಾಂತಿ ವ್ರತಾನಂದ ಸ್ವಾಮೀಜಿ ಸಂದೇಶ ನೀಡಿದರು.

ಧರ್ಮ ಏಕೆ ಬೇಕು?
ಧರ್ಮ ಉಪಕರಣವಲ್ಲ, ಪೂಜಿಸಿದರೆ ಪರಮ ಲಾಭ ತಂದುಕೊಡುತ್ತದೆ

ಪೈಶಾಚಿಕತೆ ಇರಬಾರದು. ಪಶುತ್ವದಿಂದ ಮಾನವತ್ವಕ್ಕೆ ವಿಕಾಸ ಆಗಬೇಕು. ಉತ್ತಮ ವ್ಯಕ್ತಿಯಾಗಲು ಧರ್ಮ ಬೇಕು

ಧರ್ಮ ಇರುವುದು ವಿಕಾಸ, ಸತ್ಯದರ್ಶನಕ್ಕೆ

ಧರ್ಮದ ಹೆಸರಿನಲ್ಲಿ ಕ್ರೌಂದತೆ, ರಕ್ತಪಾತವಾದರೆ ಆದು ಸ್ವಾರ್ಥತೆ

ಶಾಶ್ವತ ಆನಂದ ಪಡೆಯಲು ಧರ್ಮದಿಂದ ಮಾತ್ರ ಸಾಧ್ಯ

ನಾನು, ಭಗವಂತ, ಜಗತ್ತು ನಡುವಿನ ಸಂಬಂಧ ತಿಳಿಸಿಕೊಡುತ್ತದೆ ಆಧ್ಯಾತ್ಮ.

***

ಶಾಂತಿವ್ರತಾನಂದ ಸ್ವಾಮೀಜಿ ಅವರು ಬೆಂಗಳೂರು ವಿವಿಯಲ್ಲಿ ಚಿನ್ನದ ಪದಕ ಹಾಗೂ ಮೈಸೂರು ವಿವಿಯಲ್ಲಿ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಅನೇಕ ವಿವಿಗಳಲ್ಲಿ ವಿದ್ವತ್ ಕುರಿತು ಪ್ರವಚನ ಮಾಡಿದ್ದಾರೆ. 1 ಲಕ್ಷಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯುವ ಸಬಲೀಕರಣ, ಏಕಾಗ್ರತೆ ಅಧ್ಯಾತ್ಮಿಕ ಕುರಿತು ಉಪನ್ಯಾಸ ನೀಡಿzರೆ. ಮೈಸೂರಿನ ಕರ್ನಾಟಕ ಆಡಳಿತ ಸಂಸ್ಥೆಯಲ್ಲಿ ತರಬೇತಿ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. 50 ಕ್ಕೂ ಹೆಚ್ಚು ಸಂಶೋಧನಾ ಕೃತಿಗಳು ಅನೇಕ ದೈನಿಕಗಳಲ್ಲಿ ಪ್ರಕಟವಾಗಿದೆ. ಸಂಸ್ಕೃತ, ಕನ್ನಡ, ಬಂಗಾಳಿ, ಹಿಂದಿ ಹೀಗೆ ಅನೇಕ ಭಾಷೆಗಳು ಕಲಿತಿದ್ದಾರೆ.
-ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು