Saturday, 23rd November 2024

ಫನ್ನಿ ಉತ್ತರಗಳನ್ನು ಕೊಟ್ಟು ವಿನ್ನರ್ ಆದವರಲ್ಲಿ ಹರ್ಷ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 84

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕೇಳುಗರ ಫಟಾಫಟ್ ಮಾತು 

ಬೆಂಗಳೂರು: ನಾನು ಪುಸ್ತಕದ ಹುಳುವಾದ್ರೆ; ಸಿಟಿ ಬಸ್‌ನಲ್ಲಿ ಕಂಡಕ್ಟರ್ ಆದ್ರೆ; ಅಂತಿಂಥ ಹೆಣ್ಣು ನೀನಲ್ಲ; ಒಂದೇ ಬಟ್ಟೆಯಲ್ಲಿ ಒಂದು ವಾರ ಕಳೆದಾಗ; ತಲೆ ತಿನ್ನುವ ಆಸಾಮಿ ಸಹಪ್ರಯಾಣಿಕನಾದಾಗ; ಪಕ್ಕದ ಸೀಟಿನಲ್ಲಿ ಸುಂದರ ಹುಡುಗಿ; ಲಿಪ್‌ಸ್ಟಿಕ್ ಹಚ್ಚೋಕೆ ಮರೆತಾಗ; ಈಗ್ಲೂ ನಂಗೆ ನೀವು ಇಷ್ಟ ಕಣ್ರೀ;
ದೇವರ ದರ್ಶನಕ್ಕೆ ಕ್ಯೂ ನಿಂತಾಗ ಪ್ರಕೃತಿಕರೆ ಬಂದಾಗ ಎಂಬ ವಿಷಯಗಳ ಕುರಿತು ಹಾಸ್ಯಮಯವಾಗಿ ಮಾತುಗಾರಿಕೆ ಕಂಡುಬಂತು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಭಾನುವಾರ ನಡೆದ ವಿಷಯ ನಮ್ಮದು, ಮಾತು ನಿಮ್ಮದು: ಫಟಾಫಟ್ ಮಾತಾಡಿ ಎಂಬ ಕಾರ್ಯಕ್ರಮದಲ್ಲಿ ಮೂಡಿಬಂದ ಸಾಕಷ್ಟು ವಿಷಯಗಳು ಕೇಳುಗರಿಗೆ ಹಿತವಾಗಿದ್ದವು. ಪ್ರತಿಯೊಂದು ವಿಷಯ ತನ್ನದೇ ಶೈಲಿಯಲ್ಲಿ ಉತ್ತರಿಸಿದ್ದು, ಕೇಳುಗರ ಗಮನ ಸೆಳೆದಿತ್ತು. ನಾನು ಐಪಿಎಸ್ ಆಫೀಸರ್ ಆದರೆ ಎಂಬ ವಿಷಯಕ್ಕೆ ಎಮ್‌ಎನ್‌ಸಿ ಕಂಪನಿಯ ಉದ್ಯೋಗಿ ಜ್ಯೋತಿ ಪ್ರಕಾಶ್ ಮಾತನಾಡಿ, ಎಲ್ಲ ಕಡೆಗಳಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶ ದೊರೆಯುತ್ತಿದೆ. ನಾನು ಐಪಿಎಸ್ ಆಫೀಸರ್ ಆದರೆ ಶಾಲಾ-ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಉತ್ತಮ ಮಾರ್ಗದಲ್ಲಿ ಹೋಗುವಂತೆ ಪ್ರೋತ್ಸಾಹಿಸುತ್ತೇನೆ.

ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಸ್ಕಿಲ್ ಕಳಿತುಕೊಳ್ಳಲು ಪ್ರೋತ್ಸಾಹ ನೀಡುತ್ತೇನೆ. ನನ್ನ ಮಾವನೂ ಪೊಲೀಸ್ ಅಧಿಕಾರಿ. ನನ್ನ ತಾಯಿಗೂ ನಾನು ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಇದೆ. ಅದರಂತೆ ನಾನು ಐಪಿಎಸ್ ಆಫೀಸರ್ ಆದರೆ ಸಮಾಜದ ಒಳಿತಿಗಾಗಿ ದುಡಿಯುತ್ತೇನೆ ಎಂದು ಹೇಳಿದರು. ನನ್ನ ದೃಷ್ಟಿಯಲ್ಲಿ ನನ್ನ ಗಂಡ ವಿಷಯದ ಬಗ್ಗೆ ಇನ್ಫೋಸಿಸ್ ಉದ್ಯೋಗಿ ಪೂರ್ಣ ಮೊಕಾಶಿ ಮಾತನಾಡಿ, ಗಂಡಂದಿರು ಹೆಂಡತಿಯನ್ನು ಸಮಾನವಾಗಿ ಕಾಣಬೇಕು. ಅತ್ತೆ ತಮ್ಮ ಮಗನನ್ನು ಹೇಗೆ ನೋಡಿಕೊಂಡರೋ ಅದೇ ರೀತಿ ನಾನು ನನ್ನ ಮಗನನ್ನು ನೋಡಿಕೊಳ್ಳಬೇಕು. ಹೊಂದಾಣಿಕೆಯಿಂದ ಜೀವನ ನಡೆಸಬೇಕು. ಸಹಕಾರ ತುಂಬಾ ಮುಖ್ಯ ಎಂದರು.

ಬಹುಮಾನ ವಿಜೇತರು

ಮೊದಲ ಬಹುಮಾನ
ರಜತ್ ಉದಯ್‌ಕುಮಾರ್

ಎರಡನೇ ಬಹುಮಾನ
ಜ್ಯೋತಿ ಪ್ರಕಾಶ್

ಮೂರನೆ ಬಹುಮಾನ
ಕೆ.ಎಸ್.ಪ್ರೇಮಾ, ಪೂರ್ಣ ಮೊಕಾಶಿ

ಪ್ರೋತ್ಸಾಹಕ ಬಹುಮಾನ
ಮುರಳಿಕೃಷ್ಣ, ನಾಗೇಂದ್ರ, ದರ್ಶನ್

ವಿಶೇಷ ಬಹುಮಾನ
ಸಂಜನಾ ಎ.ಪಾಟೀಲ್

ತೀರ್ಪುಗಾರರು: ಷಡಕ್ಷರಿ, ಲಲಿತ ಲಕ್ಷ್ಮೀ