ಆಕೆ ಶಾಲಾ ದಿನಗಳಲ್ಲಿ ಟಿವಿಯಲ್ಲಿ, ಪತ್ರಿಿಕೆಗಳಲ್ಲಿ ತಮ್ಮ ನೆಚ್ಚಿಿನ ಸಿನಿಮಾ ಸ್ಟಾಾರ್‌ಗಳನ್ನು ನೋಡಿ ಸಂತಸಪಡುತಿದ್ದವರು. ಆದರೆ ನಾನು ಮುಂದೊಂದು ನಟಿಯಾಗುತ್ತೇನೆ ಎಂದು ಅಂದುಕೊಂಡವರಲ್ಲ.
ಆದರೆ ಇಂದು ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿ ಪ್ರಸಿದ್ಧಿಿಯನ್ನೂ ಪಡೆದಿದ್ದಾಾರೆ. ಆಕೆಯೇ ನಟಿ ಭೂಮಿಕಾ. ಮೂಲತಃ ಮಂಗಳೂರಿನವರಾದ ಭೂಮಿಕಾ, ಬಾಲ್ಯದಿಂದಲೂ ಚರುಕಾದ ಹುಡುಗಿ. ಶಾಲೆಯಲ್ಲಿ ಓದುತ್ತಿಿರುವಾಗ ರಿಯಲ್ ಸ್ಟಾಾರ್ ಉಪೇಂದ್ರ ಅಭಿನಯದ ಪೇಂದ್ರ ಚಿತ್ರದ ಚಿತ್ರೀಕರಣ ನಡೆಯುತ್ತಿಿತ್ತು. ಶಾಲಾಮಕ್ಕಳ ಒಂದು ದೃಶ್ಯಕ್ಕೆೆ ಭೂಮಿಕಾ ಓದುತ್ತಿಿದ್ದ ತರಗತಿಯ ಮಕ್ಕಳನ್ನು ಚಿತ್ರಕ್ಕೆೆ ಕರೆದೊಯ್ದರು. ಆ ತಂಡದಲ್ಲಿ ಭೂಮಿಕಾ ಕೂಡ ಒಬ್ಬರಾಗಿದ್ದರು. ಅದೇ ಇವರ ಚಿತ್ರವಾಯಿತು. ಆದರೆ ನಟನೆಯಲ್ಲಿಯೇ ತಾನು ಮುಂದುವರಿಯುತ್ತೇನೆ ಅಂದುಕೊಂಡಿರಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುತ್ತಿಿದ್ದ ಭೂಮಿಕಾರಿಗೆ ಅವರ ಸ್ನೇಹಿತರು ಸಿನಿಮಾದಲ್ಲಿ ನಟಿಸುವಂತೆ ಪ್ರೋೋತ್ಸಾಾಹಿಸದರು. ಹಾಗಾಗಿ ಭೂಮಿಕಾ ಕನ್ನಡ ಚಿತ್ರರಂಗದತ್ತ ಮುಖ ಮಾಡಿದರು.
ಆ ಬಳಿಕ ದ್ವಾಾರಕೀಶ್ ನಿರ್ಮಾಣದಲ್ಲಿ, ಸಾಹಸಸಿಂಹ ವಿಷ್ಣುವರ್ಧನ್ ನಾಯಕರಾಗಿ ನಟಿಸುತ್ತಿಿದ್ದ ‘ಆಪ್ತಮಿತ್ರ’ ಚಿತ್ರ ಸೆಟ್ಟೇರುತ್ತಿಿತ್ತು ಈ ಚಿತ್ರದಲ್ಲಿ ನಟಿಸಲು ಸಹ ನಟಿಯರ ಅಗತ್ಯವೂ ಇತ್ತು. ಈ ಸಂದರ್ಭದಲ್ಲಿಯೇ ಭೂಮಿಕಾ ಚಿತ್ರತಂಡದ ಕಣ್ಣಿಿಗೆ ಬಿದ್ದರು. ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದು, ಆಪ್ತಮಿತ್ರ ಚಿತ್ರದಲ್ಲಿ ಭೂಮಿಕಾ ಸತ್ಯಜಿತ್ ಮಗಳಗಿ, ವಾಣಿಯಾಗಿ ಬಣ್ಣ ಹಚ್ಚಿಿದ್ದರು. ತಮಗೆ ನೀಡಿದ ಜವಾಬ್ದಾಾರಿಯನ್ನು ಅಚ್ಚುಕಟ್ಟಾಾಗಿ ನಿಭಾಯಿಸಿದರು. ಎಲ್ಲರೂ ಮೆಚ್ಚುವಂತೆ ಅಭಿನಯಿಸಿದರು. ಈ ಚಿತ್ರದ ನಂತರ ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶ ಇವರಿಗೆ ಒಲಿದುಬಂತು. ಹಾಸ್ಯದ ಕಥಾಹಂದರದ ‘ತರ್ಲೆೆಗಳು ಸಾರ್ ತರಲೆಗಳು’, ಅಹಂ, ಬಿಡಲಾರೆ ಎಂದು ನಿನ್ನ ಚಿತ್ರಗಳಲ್ಲಿ ಅಭಿನಯಿಸಿದರು. ಸಿನಿಪ್ರಿಿಯರನ್ನು ರಂಜಿಸಿದರು.
ತುಳು ಚಿತ್ರದಲ್ಲೂ ಮಿಂಚಿಂಗ್
ಕರಾವಳಿಯ ಬೆಡಗಿಯಾದ ಭೂಮಿಕಾ ತುಳು ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡರು. ನಟಿಸಿದ ತುಳು ಸಿನಿಮಾ ‘ಬ್ರಹ್ಮಶ್ರೀ ನಾರಾಯಣ ಗುರು’ ರಾಜ್ಯಪ್ರಶಸ್ತಿಿ ಪಡೆದುಕೊಂಡಿತು. ‘ಸುಗ್ಗಿಿ’ ಏಳು ಅಂತರರಾಷ್ಟ್ರೀಯ ಪ್ರಶಸ್ತಿಿಗಳನ್ನು ಬಾಚಿಕೊಂಡಿತು.
ಆ ಬಳಿಕ ಮತ್ತೆೆ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಅರಸಿ ಬಂದವು. ‘ಅತಂತ್ರ’ ಸಿನಿಮಾದಲ್ಲಿ ನಟಿಸಿ ಮತ್ತೆೆ ಮುಂಚೂಣಿ ಕಾಯ್ದುಕೊಂಡರು. ಗ್ರಾಾಮೀಣ ಕಥಾಹಂದರ ಹೊಂದಿದ್ದ ಈ ಚಿತ್ರದಲ್ಲಿ ಗೌರಿ ಪಾತ್ರಧಾರಿಯಾಗಿ ಎಲ್ಲರ ಮನಗೆದ್ದರು. ಇದೇ ವೇಳೆ ಸೆಟ್ಟೇರಿದ್ದ ನಟ ಮೋಹನ್ ಅಭಿನಯದ ಹಾಸ್ಯ ಚಿತ್ರ ‘ಹಲೋಮಾಮ’,ದಲ್ಲಿಯೂ ನಟಿಸಿ ಸಿನಿಪ್ರಿಿಯರನ್ನು ನಗಿಸಿದರು. ಕನನಡ ತಮಿಳು ಚಿತ್ರರಂಗದಲ್ಲಿಯೂ ನಟಿಸುವ ಅವಕಾಶ ಭೂಮಿಕಾಗೆ ಒಲಿದು ಬಂತು ‘ಪಾಸಂ’ ಎಂಬ ಚಿತ್ರದಲ್ಲಿ ಮನೋಜ್ಞವಾಗಿಯೇ ಅಭಿನಯಿಸಿದರು. ಚಿತ್ರತೆರೆಗೆ ಬರುವ ಮೊದಲೇ ಕಾಲಿವುಡ್‌ನ ಸಿನಿಮಾ ರಂಗದಲ್ಲೂ ಛಾಪು ಮೂಡಿಸಿದರು. ಸದ್ಯ ಭೂಮಿಕಾ ಅಭಿನಯದ ‘ಬರಗೂರು’, ‘ಬೆಟ್ಟದ ಹಕ್ಕಿಿ’ ಎಂಬ ಮಕ್ಕಳ ಚಿತ್ರದಲ್ಲಿಯೂ ಅಭಿನಯಿಸಿದ್ದು, ಈ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ. ಸದ್ಯ ಈಗ ತಾನೇ ಸೆಟ್ಟೇರಿರುವ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸುತ್ತಿಿದ್ದಾಾರೆ. ಇಂತಹದ್ದೇ ಪಾತ್ರಬೇಕು ಎಂದು ಬಯಸದ ಭೂಮಿಕಾ ತಮಗೆ ನೀಡಿದ ಅಚ್ಚುಕಟ್ಟಾಾಗಿ ನಿಭಾಯಿಸಿ ಅದಕ್ಕೆೆ ಜೀವ ತುಂಬುತ್ತಾಾರೆ. ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಉತ್ತಮ ಚಿತ್ರಗಳಲ್ಲಿ ನಟಿಸಬೇಕು ಎಂಬ ಆಶಯ ಅವರದಾಗಿದೆ. ಭುಮಿಕಾ ಕನಸು ನನಸಾಗಲಿ ಎಂಬುದೇ ನಮ್ಮ ಆಶಯ.