ಕುಮಾರ್ ಶೇಣಿ, ಉಪನ್ಯಾಾಸಕರು, ಪುತ್ತೂರು
ಜಗತ್ತಿಿನ ಆರ್ಥಿಕ ಬದಲಾವಣೆಯ ವಿಚಾರಗಳಲ್ಲಿ ಚೀನಾದ ಗಮನಕ್ಕೆೆ ಬಂದಿತ್ತು. ಅದಕ್ಕಾಾಗಿ ಚೀನಾ ಆರ್ಥಿಕ ಬೆಳವಣಿಗೆಗೆ ಅಗತ್ಯವಿರುವಷ್ಟು ಉದಾರೀಕರಣ ನೀತಿಯನ್ನು ಅನುಸರಿಸುವುದರಲ್ಲಿ ತಪ್ಪೇನಿಲ್ಲ ಎಂಬುದನ್ನು ಸಾರಾಸಗಟಾಗಿ ಒಪ್ಪಿಿಕೊಂಡಿದೆ.
ಪ್ರಥಮ ಮಹಾಯುದ್ಧದ ಅಂತ್ಯಕಾಲದಲ್ಲಿ, ಜಗತ್ತಿಿನಲ್ಲಿ ಹೊಸದೊಂದು ಕ್ರಾಾಂತಿಯನ್ನು ಸೃಷ್ಟಿಿಸಿ, ಜಗತ್ತಿಿನಲ್ಲಿ ಅನೇಕ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿಿದ್ದ ಸಮತಾವಾದ ಇಂದು ಶತಮಾನವನ್ನು ದಾಟಿ ಮುನ್ನಡೆದಿದೆ. ಈ ಶತಮಾನದ ಹಾದಿಯಲ್ಲಿ, ಅನೇಕ ಬದಲಾವಣೆಗಳನ್ನು ಮಾಡಿಕೊಂಡು, ತನ್ನದೇ ಹಾದಿಯಲ್ಲಿ ಬೆಳೆದು ಬಂದ, ಕಾರ್ಲ್‌ಮಾರ್ಕ್‌ಸ್ ಕಂಡ ವರ್ಗರಹಿತ ಸಮಾಜದ ಕನಸು ಯಶಸ್ವಿಿಯಾಗಿದೆಯೇ ಎಂದು ಪ್ರಶ್ನೆೆ ಮಾಡಿಕೊಳ್ಳುವಷ್ಟರ ಮಟ್ಟಿಿಗೆ ಬೆಳೆದು ನಿಂತಿದೆ. ಶತಕ ದಾಟಿದ ಸಮತಾವಾದ ತನ್ನ ಸಮತೆಯನ್ನು ಕಾಪಾಡಿಕೊಳ್ಳವಲ್ಲಿ ಯಶಸ್ವಿಿಯಾಗಿದೆಯೇ ಎಂಬುದೇ ಒಂದು ದೊಡ್ಡ ಪ್ರಶ್ನೆೆ ಜಗತ್ತಿಿನಲ್ಲಿ ಕಾಡತೊಡಗಿದೆ.
1918ರಲ್ಲಿ ನಡೆದ ಕಮ್ಯುನಿಸ್‌ಟ್ ಕ್ರಾಾಂತಿ ಯಶಸ್ವಿಿಯಾಗಿ, ಅಧಿಕಾರ ದೊರಕಿದ ತಕ್ಷಣ ಲೆನಿನ್ ನೂತನ ಸೋವಿಯತ್ ರಷ್ಯಾಾವನ್ನು ನಿರ್ಮಿಸುವಲ್ಲಿ ನಿರತನಾದ. ರಷ್ಯಾಾದ ಗಡಿಗಳನ್ನು ಭದ್ರವಾಗಿಸಿದ. ಕಾರ್ಮಿಕರ ಯೂನಿಯನ್‌ಗಳನ್ನು ರಚಿಸಿ, ಕಮ್ಯುನಿಸಂನ ನೆಲೆಯನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಿಸಿದ. ಒಟ್ಟಾಾಗಿ ಒಂದು ಬಲಿಷ್ಠ ಕಮ್ಯುನಿಸ್‌ಟ್ ರಾಷ್ಟ್ರವನ್ನು ನಿರ್ಮಿಸಲು ತನ್ನ ಎಲ್ಲಾಾ ತಂತ್ರಗಳನ್ನು ಪ್ರಯೋಗಿಸಿದ. ಕೊನೆಗೆ 1922ರಲ್ಲಿ ಯೂನಿಯನ್ ಆಫ್ ಸೋವಿಯತ್ ಸೋಷಿಯಲಿಸ್‌ಟ್ ರಿಪಬ್ಲಿಿಕ್‌ಸ್ (ಯುಎಸ್‌ಎಸ್‌ಆರ್) ಅನ್ನು ನಿರ್ಮಿಸುವಲ್ಲಿ ಯಶಸ್ವಿಿಯಾದ ಎಂದು ಹೇಳಬಹುದು. ಇದಿಷ್ಟು ಯಶಸ್ಸು ಲೆನಿನ್‌ಗೆ ಸೇರಿತು.
ಲೆನಿನ್ ನಂತರದ ಅಧಿಕಾರಕ್ಕೆೆ ಬಂದ ಸ್ಟಾಾಲಿನ್ ತಂದ ಆರ್ಥಿಕ ಯೋಜನೆಗಳು, ರಷ್ಯಾಾವನ್ನು ಅಭಿವೃದ್ಧಿಿಯ ಪಥದತ್ತ ಕೊಂಡೊಯ್ದವು. ಎರಡನೇ ಮಹಾಯುದ್ಧದ ಆರಂಭದವರೆಗೆ ಯಾವುದೇ ಸಮಸ್ಯೆೆಗಳು ರಷ್ಯಾಾದಲ್ಲಿ ಉಂಟಾಗಿರಲಿಲ್ಲ. ಯಾವಾಗ ಎರಡನೇ ಮಹಾಯುದ್ಧ ಆರಂಭವಾಯಿತೋ, ರಷ್ಯಾಾದ ಆರ್ಥಿಕತೆ ದಿಕ್ಕೆೆಟ್ಟು ಹೋಯಿತು. ಜರ್ಮನ್ನರ ಆಕ್ರಮಣ, ರಷ್ಯಾಾದ ಆರ್ಥಿಕತೆಯನ್ನು ಹಾಳುಗೆಡಹಿತು. ಕೆಲವೊಂದು ದಾಖಲೆಗಳ ಪ್ರಕಾರ ಎರಡನೇ ಮಹಾಯುದ್ಧದಲ್ಲಿ ಅತೀ ಹೆಚ್ಚಿಿನ ನಷ್ಟವನ್ನು ಅನುಭವಿಸಿದ್ದು ರಷ್ಯಾಾ, ಆದ್ದರಿಂದ ಯುದ್ಧ ನಂತರದ ಕಾಲಘಟ್ಟದಲ್ಲಿ ರಷ್ಯಾಾದ ಮರು ನಿರ್ಮಾಣದ ಕೆಲಸ ಸ್ಟಾಾಲಿನ್ ಹೆಗಲಿಗೇರಿತು.
ಆದರೆ, ಸ್ಟಾಾಲಿನ್ ರಷ್ಯಾಾದ ಮರು ನಿರ್ಮಾಣದ ಕಾರ್ಯದಲ್ಲಿ ತಪ್ಪುು ಹೆಜ್ಜೆೆ ಇಟ್ಟರು ಎಂದೇ ಹೇಳಬಹುದು. ಎರಡನೇ ಮಹಾಯುದ್ಧದ ನಂತರ ಕಮ್ಯೂನಿಸಂನ ವಿಸ್ತರಣಾ ಕಾರ್ಯಕ್ಕೆೆ ಸ್ಟಾಾಲಿನ್ ಅಡಿಯಿಟ್ಟರು. ಇದು ರಷ್ಯಾಾದ ಕಮ್ಯುನಿಸಂನ ಮೇಲೆ ಒಂದು ದೊಡ್ಡ ಪರಿಣಾಮವನ್ನು ಬೀರಿತು. ರಷ್ಯಾಾವು ಯೂರೋಪಿನ ದೇಶಗಳ ಮೇಲೆ ತನ್ನ ಪ್ರಭಾವವನ್ನು ಬೀರಲು ಪ್ರಯತ್ನಿಿಸಿದಾಗ, ಅಮೆರಿಕ ತೀವ್ರವಾಗಿ ವಿರೋಧಿಸಲು ಆರಂಭಿಸಿತು. ಇದು ಶೀತಲ ಸಮರಕ್ಕೆೆ ಕಾರಣವಾಯಿತು ಎಂಬುದು ಜಗತ್ತಿಿಗೇ ತಿಳಿದಿರುವ ಸತ್ಯ.
ಶೀತಲ ಸಮರದ ಪರಿಣಾಮವನ್ನು ರಷ್ಯಾಾ ಜಗತ್ತಿಿನ ಮುಂದೆ ಮರೆಮಾಚುತ್ತಲೇ ಬಂದಿತು. ಆದರೆ, ವಾಸ್ತವವನ್ನು ರಷ್ಯಾಾದ ಜನರ ಮುಂದೆ ಮುಚ್ಚಿಿಡಲು ಕಮ್ಯುನಿಸಂನ ನಾಯಕರಿಂದ ಸಾಧ್ಯವಾಗಲೇ ಇಲ್ಲ. ಜನರ ಆರ್ಥಿಕ ಪರಿಸ್ಥಿಿತಿ ತೀವ್ರವಾಗಿ ಹದಗೆಟ್ಟುತ್ತು. ಕೊನೆಗೆ 1980ರ ದಶಕದಲ್ಲಿ ಅಧಿಕಾರಕ್ಕೆೆ ಬಂದ ಮಿಖಾಯಿಲ್ ಗೋರ್ಬಚೆವ್ ವಾಸ್ತವತೆಯನ್ನು ಒಪ್ಪಿಿಕೊಂಡರು. ಇದು ಸೋವಿಯತ್ ಯೂನಿಯನ್‌ನ ಅಧ:ಪತನಕ್ಕೆೆ ಕಾರಣವಾಯಿತು. ರಷ್ಯಾಾದಲ್ಲಿ ಕಮ್ಯುನಿಸಂನ ಛಾಯೆ ಮರೆಯಾಗಿ, ಪ್ರಜಾಪ್ರಭತ್ವದ ಚಿತ್ರಣ ಮೂಡತೊಡಗಿತು. ಕೊನೆಗೆ 1991ರಲ್ಲಿ ಲೆನಿನ್ ಸ್ಥಾಾಪಿಸಿದ್ದ ಯುಎಸ್‌ಎಸ್‌ಆರ್ ವಿಸರ್ಜನೆಗೊಂಡಿತು.
ಯುಎಸ್‌ಎಸ್‌ಆರ್‌ನ ಅಂತ್ಯಕ್ಕೆೆ ಹಲವು ಕಾರಣಗಳು ಸಿಗುತ್ತವೆ. ಅದರಲ್ಲಿ ಸ್ಟಾಾಲಿನ್ ವಿಸ್ತರಣಾವಾದ ನೀತಿಯೇ ಮೊದಲನೆಯದು. ಎರಡನೇ ಮಹಾಯುದ್ಧದ ನಂತರ ಸ್ಟಾಾಲಿನ್ ಕಮ್ಯುನಿಸಂನ ವಿಸ್ತರಣೆಯ ಮೊರೆಹೋಗದೆ, ರಷ್ಯಾಾದ ಆರ್ಥಿಕ ಬೆಳವಣಿಗೆಯತ್ತ ಗಮನ ಹರಿಸಿದ್ದರೆ ಆರ್ಥಿಕ ಸಮಸ್ಯೆೆ ಉಂಟಾಗುತ್ತಿಿರಲಿಲ್ಲ. ಇನ್ನೊೊಂದು ಮುಖ್ಯ ವಿಚಾರವೆಂದರೆ ಜನರ ಮೇಲಿನ ಪೂರ್ಣ ನಿಯಂತ್ರಣ ಸಾಧ್ಯವಿಲ್ಲ ಎಂಬುದು ಸ್ಟಾಾಲಿನ್‌ಗೆ ಅರಿವಿರಲಿಲ್ಲ.
ಜಗತ್ತಿಿನ ಆರ್ಥಿಕ ಬದಲಾವಣೆಯ ವಿಚಾರಗಳು ಚೀನಾದ ಗಮನಕ್ಕೆೆ ಬಂದಿತ್ತು. ಅದಕ್ಕಾಾಗಿ ಚೀನಾ ಆರ್ಥಿಕ ಬೆಳವಣಿಗೆಗೆ ಅಗತ್ಯವಿರುವಷ್ಟು ಉದಾರೀಕರಣ ನೀತಿಯನ್ನು ಅನುಸರಿಸುವುದರಲ್ಲಿ ತಪ್ಪೇನಿಲ್ಲ ಎಂಬುದನ್ನು ಸಾರಾಸಗಟಾಗಿ ಒಪ್ಪಿಿಕೊಂಡಿತು. ಇದರಿಂದ ಚೀನಾ ವಿಶ್ವದ ಒಂದು ಬೃಹತ್ ಆರ್ಥಿಕ ಶಕ್ತಿಿಯಾಗಿ ಬೆಳೆದು ನಿಂತಿದೆ ಎಂಬುದುರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ರಷ್ಯಾಾದಲ್ಲಿ ವ್ಲಾಾಡಿಮಿರ್ ಪುಟಿನ್ ಅಧಿಕಾರಕ್ಕೆೆ ಬರುವವರೆಗೆ ಯಾವುದೇ ಸ್ಥಿಿರ ಬದಲಾವಣೆಗಳು ಕಂಡುಬರಲಿಲ್ಲ. ವ್ಲಾಾಡಿಮಿರ್ ಪುಟಿನ್ ಅಧಿಕಾರ ಬಂದ ನಂತರ ಆರ್ಥಿಕ ಸ್ಥಿಿತಿ ಬದಲಾಗುತ್ತಾಾ ಸಾಗಿದರೂ, ರಾಜಕೀಯ ಅಧಿಕಾರ ಉಳ್ಳವರ ಸೊತ್ತು ಎಂಬ ಪರಿಕಲ್ಪನೆ ಬದಲಾಗಲೇ ಇಲ್ಲ.
ಇದೇ ಪುಟಿನ್ ನಾಲ್ಕನೆ ಬಾರಿಗೆ ಅಧಿಕಾರದ ಗದ್ದುಗೆ ಏರಿದ್ದಾಾರೆ. ಸ್ಟಾಾಲಿನ್‌ನ ನಂತರ ದೀರ್ಘಾವಧಿಗೆ ಅಧಿಕಾರದಲ್ಲಿ ಮುಂದುವರಿದಿದ್ದಾಾರೆ. ಆದರೆ, ರಷ್ಯಾಾದ ಅಧಿಕಾರ ಸಿದ್ಧಾಾಂತವನ್ನು ಒಂದು ಸ್ಥಿಿರತೆಗೆ ತರುವಲ್ಲಿ ಪುಟಿನ್ ಯಶಸ್ವಿಿಯಾಗಿಲ್ಲ ಎಂಬುದು ಸತ್ಯ. ಸಮತಾವಾದ, ಉದಾರವಾದ, ರಾಷ್ಟ್ರೀಯವಾದ ಮಿಶ್ರಣವಾಗಿ ಬದಲಾಗಿಹೋಗಿದೆ. ಆದರೆ, ಅಮೆರಿಕ ವಿರೋಧಿ ನಿಲುವು ಮಾತ್ರ ಹಾಗೇ ಉಳಿದಿದೆ ಎಂಬುದು ವಿಶೇಷ.
ಇದರ ಜತೆಗೆ ಚೀನಾದಲ್ಲಿ ಹುಟ್ಟಿಿಕೊಂಡ ಸಮತಾವಾದ ಕುರಿತು ಅನೇಕ ಪ್ರಶ್ನೆೆಗಳು ಇವೆಯಾದರೂ, ಜಪಾನ್ ವಿರುದ್ಧದ ಹೋರಾಟದ ನಂತರ ಮಾವೋತ್ಸೆೆ ತುಂಗ್ ಜನಪ್ರಿಿಯನಾಗುತ್ತಾಾನೆ ಎಂಬುದು ಸತ್ಯ. ಕೆಲವೊಂದು ದಾಖಲೆಗಳ ಪ್ರಕಾರ ಹಿಂಸಾತ್ಮಾಾಕ ಮಾರ್ಗದ ಮೂಲಕ ಚೀನಾದಲ್ಲಿ ಕಮ್ಯುನಿಸಂ ಅಧಿಕಾರಕ್ಕೆೆ ಬಂತು ಎಂಬ ವಾದವೂ ಇದೆ. ಆದರೆ, ಚೀನಾ ಸಮತಾವಾದವು ದಿನದಿಂದ ದಿನಕ್ಕೆೆ ಬದಲಾಗುತ್ತಲೇ ಸಾಗಿದೆ. ಮಾವೋನ ಸಿದ್ಧಾಾಂತಗಳಿಂದ ಪ್ರೇರಿತಗೊಂಡು ನಿರ್ಮಾಣಗೊಂಡ ಕಮ್ಯುನಿಸಂನ ಆಡಳಿತ, ಇಂದು ಮಾವೋನ ಪ್ರಶ್ನಾಾತೀತ ನಾಯಕತ್ವವನ್ನು ಕ್ಸಿಿ ಜಿನ್ ಪಿಂಗ್ ಅನುಸರಿಸುತ್ತಿಿದ್ದಾಾರೆ. ಇತ್ತೀಚೆಗೆ ಸಾಂವಿಧಾನಿಕ ಬದಲಾವಣೆಯನ್ನು ತರುವುದರೊಂದಿಗೆ ಅಜೀವ ಅಧಿಕಾರವಧಿಯನ್ನು ಪಡೆದುಕೊಂಡಿದ್ದಾಾರೆ. ಕಮ್ಯುನಿಸಂಗೂ, ಸರ್ವಾಧಿಕಾರಕ್ಕೂ ನಡುವಿನ ಗೆರೆ ಬಹಳ ತೆಳ್ಳಗಿರುತ್ತದೆ ಎಂಬುದನ್ನು ಅದು ಸಾಬೀತುಪಡಿಸುತ್ತಿಿದೆ.
ಹೀಗೆ ಯೂರೋಪಿನಲ್ಲಿ ವರ್ಗರಹಿತ ಸಮಾಜದ ನಿರ್ಮಾಣದ ಕಾರ್ಲ್‌ಮಾರ್ಕ್ಸನ ಕನಸು ಅಲ್ಲಿ ಕೈಗೂಡದಿದ್ದರೂ, ರಷ್ಯಾಾದ ಕ್ರಾಾಂತಿಯ ಮೂಲಕ ನನಸಾಯಿತು. ಆದರೆ, ಕಾರ್ಲ್‌ಮಾರ್ಕ್‌ಸ್‌ನ ಕನಸಿನ ಕಮ್ಯುನಿಸಂ ರಷ್ಯಾಾದಲ್ಲೂ ಕಂಡುಬರಲಿಲ್ಲ. ಆದ್ದರಿಂದ ಸಮತಾವಾದ ಎಂಬುದು ಕೇವಲ ಸಿದ್ಧಾಾಂತ ಮಾತ್ರ. ಅದನ್ನು ಆಚರಣೆಗೆ ತರುವುದು ಕಷ್ಟ ಸಾಧ್ಯ ಎಂಬುದು ಸ್ಟಾಾಲಿನ್‌ಗೆ ಎರಡನೇ ಮಹಾಯುದ್ಧದ ನಂತರ ಅರಿವಾಗಿತ್ತು. ಅದಕ್ಕಾಾಗಿ ಮುಂದಿನ ಎಲ್ಲಾಾ ಕಾಲಘಟ್ಟಗಳಲ್ಲೂ ಸಮತಾವಾದ ಬದಲಾವಣೆ ಮಾಡುತ್ತಾಾ ಬರಲಾಗಿದೆ. ಅದು ಚೀನಾಕ್ಕೆೆ ಬಂದಾಗಲಂತೂ, ಕಾರ್ಲ್‌ಮಾರ್ಕ್ಸನ ಕಮ್ಯುನಿಸಂ ಮರೆಯಾಗಿತ್ತು ಎಂಬುದು ಕಟುಸತ್ಯ. *ನಂತರ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೂ ಸಮತಾವಾದದ ಚಿಂತನೆಗಳೂ ಆರಂಭವಾದಾಗ ಕಮ್ಯುನಿಸಂ ಹೀಗೂ ಬದಲಾಗಬಹುದು ಎಂದು ಅಚ್ಚರಿ ಮೂಡಿಸಿತು. ಹೀಗೆ ಯಾವುದೇ ಹಂತದಲ್ಲೂ ಸಮತಾವಾದ ಸಮತೆಯನ್ನು ಉಳಿಸಿಕೊಳ್ಳಲೇ ಇಲ್ಲ.
ನೈತಿಕತೆ ಎಂಬುದು ಯಾವುದೇ ಸಿದ್ಧಾಾಂತದಿಂದ ಮರೆಯಾದರೂ ಅದು ಉಳಿಯಲು ಸಾಧ್ಯವಿಲ್ಲ ಎಂಬ ಮಾತಿದೆ. ಬಹುಶಃ ಅದಕ್ಕೆೆ ಉತ್ತಮ ಉದಾಹರಣೆ ಕಾರ್ಲ್‌ಮಾರ್ಕ್‌ಸ್‌ನ ಕಮ್ಯುನಿಸಂ ಎಂದೇ ಹೆಳಬಹುದು. ಮಾರ್ಕ್‌ಸ್ ಹೇಳಿದ ಶೋಷಣೆ ರಹಿತ ಸಮಾಜದ ಅಡಿಪಾಯವನ್ನು ಹೇಳಿಕೊಟ್ಟ ಸಮತಾವಾದವನ್ನು ಶೋಷಣೆಯ ಪರಮಾವಧಿ ಎಂಬಂತೆ ಬಳಸಿದ ಸಮತಾವಾದದ ನಾಯಕರು ಇಂದು ಕಂಡುಬರುತ್ತಾಾರೆ. ತನ್ನ ಸಿದ್ಧಾಾಂತದ ಪ್ರತಿಪಾದನೆಗಾಗಿ, ಕಮ್ಯುನಿಸ್‌ಟ್ ನಾಯಕರು ಹಿಂಸಾತ್ಮಾಾಕ ಮಾರ್ಗವನ್ನೇ ಬಳಸಿದರು ಎಂಬುದು ಅನೇಕ ದಾಖಲೆಗಳಲ್ಲಿ ಮುದ್ರಿಿತಗೊಂಡಿದೆ. ಕೆಲವು ರಾಜಕೀಯ ಚಿಂತಕರ ಮಾತುಗಳ ಪ್ರಕಾರ ಕಾರ್ಲ್‌ಮಾರ್ಕ್‌ಸ್ ತಾನು ಮಾರ್ಕ್ಸಿಿಸ್‌ಟ್ ಅಲ್ಲ ಎಂದು ಹೇಳಿಕೊಂಡಿದ್ದಾಾನೆ ಎಂದು ಬರೆಯುತ್ತಾಾರೆ. ಕಮ್ಯುನಿಸಂನ ಈ ಅಸ್ಥಿಿರತೆಯನ್ನು ಊಹಿಸಿಯೇ ಮಾರ್ಕ್‌ಸ್ ಹಾಗೇ ಹೇಳಿರಬಹುದೇ ಎಂಬುದು ಪ್ರಶ್ನಾಾರ್ಹ ವಿಚಾರ.