Thursday, 19th September 2024

ವಾಯುಭಾರ ಕುಸಿತ: ಚೆನ್ನೈ, ಉಪನಗರ ಪ್ರದೇಶಗಳಲ್ಲಿ ಭಾರೀ ಮಳೆ

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮವಾಗಿ ಚೆನ್ನೈ ಹಾಗೂ ಅದರ ಉಪನಗರ ಪ್ರದೇಶಗಳಲ್ಲಿ ರಾತ್ರಿಯಿಡೀ ಭಾರೀ ಮಳೆ ಸುರಿದಿದೆ ಹಾಗೂ ಮಳೆ ಮುಂದುವರೆದಿದೆ.

ಚೆಂಬರಂಬಾಕ್ಕಂ ಮತ್ತು ರೆಡ್ ಹಿಲ್ಸ್ ಜಲಾಶಯಗಳಿಂದ 500 ಕ್ಯೂಸಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ. ಅರಕ್ಕೋಣಂ ಬಳಿ ಹಳಿಗಳು ಜಲಾವೃತ ಗೊಂಡಿದ್ದರಿಂದ ಎಂಜಿಆರ್ ಸೆಂಟ್ರಲ್‌ಗೆ ರೈಲುಗಳ ಆಗಮನ ವಿಳಂಬವಾಗಿದೆ ವಾಗಿದೆ ಎಂದು ವರದಿ ಯಾಗಿದೆ.

ಚೆನ್ನೈ ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿರುವ ಚೆಂಬರಂಬಾಕ್ಕಂ ಹಾಗೂ ಪುಝಲ್ ಜಲಾಶಯಗಳನ್ನು ಹೆಚ್ಚುವರಿ ಮಳೆ ನೀರನ್ನು ಹೊರಬಿಡಲು ತೆರೆಯಲಾಗುವುದು ಎಂದು ಅಧಿಕಾರಿ ಗಳು ಪ್ರಕಟಿಸಿದ್ದಾರೆ.

ರಾಜ್ಯ ಜಲಸಂಪನ್ಮೂಲ ಅಧಿಕಾರಿಗಳು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರ ನ್ನು ಸ್ಥಳಾಂತರಿಸಲು ಹಾಗೂ ಸುರಕ್ಷಿತ ಸ್ಥಳ ಗಳಲ್ಲಿ ಇರಿಸಲು ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಶನಿವಾರ ಬೆಳಿಗ್ಗೆಯಿಂದ ಚೆನ್ನೈ ಹಾಗೂ ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳ ಹಲವಾರು ಉಪನಗರಗಳಲ್ಲಿ ಮಳೆ ಯಾಗಿದೆ ಮತ್ತು ರಾತ್ರಿಯಿಂದಲೂ ಮಳೆಯು ಎಡೆಬಿಡದೆ ಸುರಿಯಿತು.

Leave a Reply

Your email address will not be published. Required fields are marked *