Saturday, 9th November 2024

ದೆಹಲಿಯಲ್ಲಿ ಲಾಕ್‌ಡೌನ್ ಹೇರುವ ಆಲೋಚನೆ ಇಲ್ಲ: ಕೇಜ್ರಿವಾಲ್

#Arvind Kejrival

ನವದೆಹಲಿ: ಒಮಿಕ್ರಾನ್ ವ್ಯಾಪಿಸುತ್ತಿರುವ ಬೆನ್ನಲ್ಲೇ ಎಲ್ಲೆಡೆ ಭೀತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ, ಸರ್ಕಾರವು ವೈರಾಣುವಿನ ಬಾಧೆ ಎದುರಿಸಲು ಸಂಪೂರ್ಣ ಸಜ್ಜಾಗಿರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಗಾಬರಿಯಾಗಬೇಕಾದ ಅಗತ್ಯವಿಲ್ಲ. ಪರಿಸ್ಥಿತಿಯನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿ ದ್ದೇನೆ. ಸಾಮಾಜಿಕ ಅಂತರ ಕಾಯ್ದು ಕೊಂಡು ಮಾಸ್ಕ್‌ಗಳನ್ನು ಧರಿಸಲು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಹಾಸಿಗೆಗಳು, ಮದ್ದು ಹಾಗೂ ಆಮ್ಲಜನಕದ ಲಭ್ಯತೆಯ ಕುರಿತಂತೆ ನಾವಾಗಲೇ ಸಭೆಗಳಲ್ಲಿ ಚರ್ಚಿಸಿದ್ದೇವೆ,” ಎಂದಿರುವ ಕೇಜ್ರಿವಾಲ್, ದೆಹಲಿಯಲ್ಲಿ ಲಾಕ್‌ಡೌನ್ ಹೇರುವ ಆಲೋಚನೆ ಇಲ್ಲ ಎಂದಿದ್ದಾರೆ.

ದೆಹಲಿ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್, ದೆಹಲಿ ಸರ್ಕಾರವು ಕೋವಿಡ್ ಪ್ರಕರಣಗಳ ದಟ್ಟಣೆಯನ್ನು ಗಮನಿಸಿ ಹಂತಹಂತ ವಾದ ಪ್ರತಿಕ್ರಿಯಾ ಕ್ರಿಯಾ ಯೋಜನೆಗೆ ಮುಂದಾ ಗುವುದಾಗಿ ತಿಳಿಸಿದ್ದಾರೆ.

ಪ್ರತಿ 1000 ಮಂದಿಯಲ್ಲಿ 5 ಮಂದಿಗೆ ಕೋವಿಡ್ ಪಾಸಿಟಿವ್ ಕಂಡುಬಂದಲ್ಲಿ, ಮೊದಲ ಹಂತದ ಪ್ರತಿಕ್ರಿಯೆಗೆ ಮುಂದಾಗ ಲಾಗುವುದು. ಹೀಗೆ ಮುಂದುವರೆದು 14-15/1000 ಮಂದಿ ಪಾಸಿಟಿವ್‌ ಕಂಡುಬಂದಲ್ಲಿ ರೆಡ್ ಅಲರ್ಟ್ ಘೋಷಿಸಲಾಗುವುದು.

ದೆಹಲಿಯಲ್ಲಿ ಭಾನುವಾರ 63 ಮಂದಿಗೆ ವೈರಸ್ ಸೋಂಕು ತಗುಲಿರುವುದು ಕಂಡು ಬಂದಿದೆ. ದೆಹಲಿಯಲ್ಲಿ ಮೊದಲ ಬಾರಿಗೆ ಒಮಿಕ್ರಾನ್ ಪ್ರಕರಣ ದಾಖಲಾಗಿದೆ.