ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
camohanbn@gmail.com
ಬಂಡವಾಳಶಾಹಿ ಮನಸ್ಥಿತಿಯ ಮೂಲಕ ಇತರರನ್ನು ಬೆಳೆಯಲು ಬಿಡದ ದೇಶ ಅಮೆರಿಕ, ಟೆಲಿವಿಷನ್ ಕಾರ್ಯಕ್ರಮಗಳ ಮೂಲಕ ಆಯ್ಕೆಯಾದ ದುರ್ಬಲ ಅಧ್ಯಕ್ಷನೊಬ್ಬನನ್ನು ಬಳಸಿಕೊಂಡು ರಷ್ಯಾ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ನ್ಯಾಟೋ ಮೂಲಕ ಮಾಡುವ ಪ್ರಯತ್ನದಲ್ಲಿತ್ತು.
ಕಪಿಲ್ ಶರ್ಮನ ಹಾಸ್ಯ ಕಾರ್ಯಕ್ರಮ ನಿಮಗೆ ನೆನಪಿರಬೇಕಲ್ಲವೇ? ಹಿಂದಿ ವಾಹಿನಿಯಲ್ಲಿ ಮನೆಮನೆಗಳಲ್ಲಿ ಅತ್ಯಂತ ಜನಪ್ರಿಯ ವಾಗಿದ್ದ
ಕಾರ್ಯಕ್ರಮವಿದು. ಸ್ಟುಡಿಯೋ ಒಳಗೆ ಸಂಪೂರ್ಣವಾಗಿ ನಡೆಯುತ್ತಿದ್ದ ಕಾರ್ಯಕ್ರಮ ದಲ್ಲಿ ಹಾಸ್ಯಕ್ಕೇನೂ ಕೊರತೆ ಇರಲಿಲ್ಲ, ಈ ಕಾರ್ಯ ಕ್ರಮದಲ್ಲಿ ಬಾಲಿವುಡ್‌ನ ಘಟಾನುಘಟಿ ನಾಯಕರು ತಮ್ಮ ಸಿನಿಮಾಗಳನ್ನು ಪ್ರಚಾರ ಮಾಡುತ್ತಿದ್ದರು. ಈ ಕಾರ್ಯ ಕ್ರಮದಲ್ಲಿ ಅಥಿತಿ ಗಳಾಗಿ ಬಂದು ತಮ್ಮ ಸಿನಿಮಾ ಪ್ರಚಾರ ಮಾಡಿದರೆ ದೇಶದಾದ್ಯಂತ ಸಿನಿಮಾಕ್ಕೆ ಉತ್ತಮ ಪ್ರಚಾರ ಸಿಗುತ್ತಿತ್ತು.
ಪಂಜಾಬ್ ಕಾಂಗ್ರೆಸಿನ ನಾಯಕ ನವಜೋತ್ ಸಿಂಗ್ ಸಿಧು ತನ್ನ ಹಾಸ್ಯ ಚಟಾಕಿಗಳ ಮೂಲಕ ಈ ಕಾರ್ಯಕ್ರಮದ ಕೇಂದ್ರ ಬಿಂದು ವಾಗಿದ್ದರು. ಕಪಿಲ್ ಶರ್ಮನ ಕಾರ್ಯಕ್ರಮದಲ್ಲಿ ಹಾಸ್ಯ ಮಾಡುತ್ತಿದ್ದ ರೀತಿಯಲ್ಲಿ ಪಂಜಾಬಿನ ಕಾಂಗ್ರೆಸಿನಲ್ಲಿಯೂ ಸಿದ್ದು ಹಾಸ್ಯ ಮಾಡಲು ಹೋಗಿ ತಾನೇ ಹಾಸ್ಯಾಸ್ಪದ ವ್ಯಕ್ತಿಯಾಗಿ ಹೋಗಿದ್ದಾರೆ. ಈಗ ಇವರ ಸಾಲಿಗೆ ಸೇರ್ಪಡೆಯಾಗಿರುವ ಮತ್ತೊಬ್ಬ ಅಂತಾರಾಷ್ಟ್ರೀಯ ವ್ಯಕ್ತಿ
ಉಕ್ರೇನಿನ ಅಧ್ಯಕ್ಷ ವೋಲೊಡಿಮಿರ್ ಝೆಲೆನ್ಸ್ಕಿ ಈತನೂ ಸಹ ಉಕ್ರೇನಿನ ಹಾಸ್ಯನಟ.
ಮೂಲತಃ ಯಹೂದಿ ದಂಪತಿಗಳ ಪುತ್ರನಾಗಿರುವ ವೋಲೊಡಿಮಿರ್ ತನ್ನ 17ನೇ ವಯಸ್ಸಿನಲ್ಲಿ ನಟನೆಯ ಕಡೆಗೆ ಹೆಚ್ಚು ಗಮನಹರಿಸಿ, ನಾಟಕ ತಂಡಗಳನ್ನು ಸೇರಿಕೊಂಡು ಹಾಸ್ಯನಟನೆ ಮಾಡುತ್ತಿದ್ದ ವ್ಯಕ್ತಿ ನೋಡ ನೋಡುತ್ತಲೇ ಸಾಮಾಜಿಕ ಜಾಲತಾಣದ ಸಂವೇದನಾ ವ್ಯಕ್ತಿಯಾಗಿಬಿಟ್ಟ. ತನ್ನದೇ ಆದ ನಿರ್ಮಾಣ ಸಂಸ್ಥೆ ಹುಟ್ಟಿ ಹಾಕಿದ ಝೆಲೆನ್ಸ್ಕಿ ಜನರಿಗೆ ಆಕರ್ಷಣೆ ಹುಟ್ಟಿಸುವಂತಹ ಸಿನೆಮಾಗಳು, ವೆಬ್ ಸರಣಿ ನಿರ್ಮಿಸಿದ. 1998 ರಿಂದ 2003ರ ನಡುವೆ ನೂರಾರು ಪ್ರದರ್ಶನ ಗಳನ್ನು ಈತನ ಸಂಸ್ಥೆಯು ರಷ್ಯಾದಲ್ಲಿ ನೀಡುತ್ತಿತ್ತು, ನಂತರ ಸಂಪೂರ್ಣವಾಗಿ ಉಕ್ರೇನಿನ ಕಡೆಗೆ ತನ್ನ ಗಮನ ಹರಿಸಿದ ಈತ ತನ್ನ ಸ್ವಂತ ಸಂಸ್ಥೆಯಡಿಯಲ್ಲಿ ಹಲವು ಕಾರ್ಯ ಕ್ರಮಗಳನ್ನು ನಿರ್ಮಿಸಿದ. ಮನೋರಂಜನಾ ವಲಯದಲ್ಲಿ ತನ್ನ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಝೆಲೆನ್ಸ್ಕಿ 2008 ರಲ್ಲಿ ’ಲವ್ ಇನ್ ದಿ ಬಿಗ್ ಸಿಟಿ’ ಸಿನಿಮಾ ಮೂಲಕ ಮತ್ತಷ್ಟು ಜನಪ್ರಿಯನಾದ.
2014 ರಲ್ಲಿ ಉಕ್ರೇನ್ ಸರಕಾರವು ರಷ್ಯಾ ಕಲಾವಿದರು ತನ್ನ ನೆಲದಲ್ಲಿ ಕಾರ್ಯಕ್ರಮ ನೀಡುವುದನ್ನು ನಿಷೇಧಿಸಿತು. ಇದರ ವಿರುದ್ಧ ಧ್ವನಿ ಎತ್ತಿದ ಝೆಲೆನ್ಸ್ಕಿ ರಷ್ಯಾ ಕಲಾವಿದರ ಪರವಾಗಿ ನಿಂತಿದ್ದ, ಅಲ್ಲಿನ ಸರಕಾರ ಈತನ ಧ್ವನಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. 2014 ರಲ್ಲಿ ಈತನ ಅಭಿನಯದ ಚಲನಚಿತ್ರ ‘ದಿ ಬಿಗ್ ಸಿಟಿ’ಚಿತ್ರವನ್ನು ಉಕ್ರೇನ್ ಸರಕಾರ ನಿಷೇಧಿಸಿದಾಗ ಉಕ್ರೇನ್ ಸರಕಾರದ ವಿರುಧ್ದ ಹರಿಹಾಯ್ದಿದ್ದ.
’ಡಾನ್ ಬಾಸ್’ ಪ್ರಾಂತ್ಯದಲ್ಲಿ ಪ್ರತ್ಯೇಕತಾವಾದಿಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದ ಉಕ್ರೇನ್ ಸೈನ್ಯಕ್ಕೆ ಒಂದು ಮಿಲಿಯನ್ ಹಣಕಾಸಿನ ನೆರವು ನೀಡುವ ಮೂಲಕ ಸಹಾಯ ಮಾಡಿದ್ದ. ಈತನ ವಿರುದ್ಧ ರಷ್ಯಾ ದೇಶದ ಕೆಲ ಸಂಸದರು ಶಾಸಕರು ಸಹ ಧ್ವನಿ ಎತ್ತಿದ್ದರು, ತನ್ನ ಹಾಸ್ಯ ಕಾರ್ಯಕ್ರಮಗಳನ್ನೇ ಬಂಡವಾಳ ಮಾಡಿಕೊಂಡ ಝೆಲೆನ್ಸ್ಕಿದೂರದರ್ಶನ ಹಾಗೂ ಸಾಮಾಜಿಕ ಜಾಲತಾಣ
ಗಳ ಮೂಲಕ ಉಕ್ರೇನಿನಲ್ಲಿ ಪ್ರಖ್ಯಾತನಾಗುತ್ತಿದ್ದ.
2015ರಲ್ಲಿ ಈತನ ಚಿತ್ರ ನಿರ್ಮಾಣ ಸಂಸ್ಥೆಯಡಿಯಲ್ಲಿ ’ಸರ್ವೆಂಟ್ ಆಫ್ ದಿ ಪೀಪಲ್’ಎಂಬ ವೆಬ್ ಸರಣಿ ನಿರ್ಮಿಸಲಾಯಿತು. ಈ ವೆಬ್ ಸರಣಿಯಲ್ಲಿ ಉಕ್ರೇನ್ ದೇಶದ ಅಧ್ಯಕ್ಷನ ಪಾತ್ರ ನಿರ್ವಹಿಸಿ ದೇಶದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಹಾಸ್ಯದ ಮೂಲಕ ತೋರಿಸು ತ್ತಿದ್ದ. ಡ್ಯಾನಿಷ್ ಶೇಟ್ ಅಭಿನಯದ ’ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಚಲನಚಿತ್ರದ ಮಾದರಿಯಲ್ಲಿ ’ಉಕ್ರೇನ್’ನಲ್ಲಿ ಈತ ವೆಬ್ ಸರಣಿ ನಿರ್ಮಾಣ ಮಾಡಿ ಹೇಗೆ ತಾನು ದೇಶದ ಅಧ್ಯಕ್ಷನಾಗುತ್ತೇನೆ ಎಂಬುದನ್ನು ತೆರೆಯ ಮೇಲೆ ಹೇಳಿದ. ಡ್ಯಾನಿಷ್ ಶೇಟ್ ತನ್ನ ಹಾಸ್ಯ ಚಟಾಕಿಗಳ ಮೂಲಕ ರಾಜಕೀಯ ನಾಯಕರ ಕಾಲೆಳೆಯುವ ರೀತಿಯಲ್ಲಿ ಈತನೂ ಕೂಡ ತನ್ನ ದೇಶದ ರಾಜಕೀಯ ನಾಯ ಕರ ಕಾಲೆಳೆಯುತ್ತಿದ್ದ. ರಷ್ಯಾ ದೇಶದ ಪರವಾಗಿದ್ದ ತನ್ನ ದೇಶದ ಅಧ್ಯಕ್ಷನನ್ನು ಅಣಕು ಮಾಡುತ್ತಿದ್ದ.
ಹೀಗಾಗಿ ನೋಡ ನೋಡುತ್ತಲೇ ಅಲ್ಲಿನ ಜನರಿಗೆ ಝೆಲೆನ್ಸ್ಕಿಯೇ ನೈಜ ಜೀವನದಲ್ಲಿ ಅಧ್ಯಕ್ಷನಾಗಿ ಕಂಡುಬಂದ. ಇದನ್ನೇ ಬಂಡವಾಳ ಗಿಸಿಕೊಂಡ ಝೆಲೆನ್ಸ್ಕಿ 2018 ರಲ್ಲಿ ತನ್ನ ವೆಬ್ ಸರಣಿ ಶೀರ್ಷಿಕೆಯಾದ ’ಸರ್ವೆಂಟ್ ಆಫ್ ದಿ ಪೀಪಲ್’ ಹೆಸರಿನಲ್ಲಿ ರಾಜಕೀಯ ಪಕ್ಷ ಕಟ್ಟಿ ದೇಶದಲ್ಲಿ ಬದಲಾವಣೆ ತರುತ್ತೇನೆ ಎಂದು ಹೇಳಿ ತನ್ನ ಚುನಾವಣೆ ಪ್ರಚಾರ ಆರಂಭಿಸಿದ. ಕೇವಲ ಮೂರು ತಿಂಗಳಲ್ಲಿ ಅದು ವರ್ಚುವಲ್ ಸಭೆಗಳ ಮೂಲಕ ಅಂದಿನ ಅಧ್ಯಕ್ಷನನ್ನು ಸೋಲಿಸಿಬಿಟ್ಟ.
ಏಪ್ರಿಲ್ 2019 ರಲ್ಲಿ ಎರಡನೇ ಬಾರಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಝೆಲೆನ್ಸ್ಕಿ ಶೇ. 75% ರಷ್ಟು ಮತ ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿಧ. ಒಂದೇ ಒಂದು ವೆಬ್ ಸರಣಿ ಮೂಲಕ ಪರಿಚಿತ ನಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಮಾಡಿದ ೪೧
ವರ್ಷದ ವ್ಯಕ್ತಿಯೊಬ್ಬ ಉಕ್ರೇನ್ ಅಧ್ಯಕ್ಷನಾಗಿದ್ದ. ಝೆಲೆನ್ಸ್ಕಿಅಧ್ಯಕ್ಷನಾದ ನಂತರ ಪಾಶ್ಚಿಮಾತ್ಯ ದೇಶಗಳ ಜೊತೆ ಹೆಚ್ಚಿನ ಸಂಬಂಧ ಬೆಳೆಸಲು ಶುರುಮಾಡಿದ್ದ,
ಸೋವಿಯತ್ ಒಕ್ಕೂಟದಿಂದ ಹೊರಬಂದಿದ್ದ ಉಕ್ರೇನ್ ಪಾಶ್ಚಿಮಾತ್ಯ ದೇಶಗಳ ತಾಳಕ್ಕೆ ಕುಣಿಯುವುದು ರಷ್ಯಾ ಅಧ್ಯಕ್ಷ ’ಪುಟಿನ್’ಗೆ ಇಷ್ಟವಿರಲಿಲ್ಲ. ಏಷ್ಯಾ ಖಂಡದ ದೇಶಗಳ ಆಂತರಿಕ ವಿಚಾರದಲ್ಲಿ ಸದಾ ಮೂಗು ತೋರಿಸುವ ಅಮೇರಿಕಾ, ಹಾಸ್ಯ ನಟನೊಬ್ಬ ಉಕ್ರೇನ್
ದೇಶದ ಅಧ್ಯ ಕ್ಷನಾದ ಕೂಡಲೇ ರಷ್ಯಾ ವಿರುದ್ಧ ಆತನನ್ನು ತಿರುಗಿಸುವ ಕಾರ್ಯ ಮಾಡಿತು. ಝೆಲೆನ್ಸ್ಕಿ 2024ರ ವೇಳೆಗೆ ಉಕ್ರೇನ್‌ನ್ನು ಐರೋಪ್ಯ ಒಕ್ಕೂಟಕ್ಕೆ ಸೇರಿಸುತ್ತೇನೆಂಬ ಭರವಸೆ ನೀಡಿದ್ದ, ಐರೋಪ್ಯ ಒಕ್ಕೂಟದ ಹಲವು ದೇಶಗಳು ಅಮೇರಿಕಾದ ತಾಳಕ್ಕೆ ಕುಣಿದ
ಝೆಲೆನ್ಸ್ಕಿಗೆ ಬೆಂಬಲ ಸೂಚಿಸಿದವು.
ಏಷ್ಯಾ ಭಾಗದಲ್ಲಿ ತನ್ನ ನಿಯಂತ್ರಣ ಸಾಽಸುವ ಸಲುವಾಗಿ ಸ್ಥಾಪಿತವಾಗಿದ್ದ ’ನ್ಯಾಟೋ’ ಸಂಸ್ಥೆಯೊಳಗೆ ಉಕ್ರೇನ್ ಸೇರಿಸಬೇಕೆಂಬ ಬೇಡಿಕೆ ಹೆಚ್ಚಾಗುತ್ತಿತ್ತು, ಆದರೆ ಪುಟಿನ್ ’ರಷ್ಯಾ’ ಭದ್ರತೆಯ ದೃಷ್ಟಿಯಿಂದ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದ್ದರು. ಅಮೇರಿಕಾ ನಂಬಿಕೊಂಡು ಝೆಲೆನ್ಸ್ಕಿ ರಷ್ಯಾ ವಿರುದ್ಧ ಆಗಾಗ ಹೇಳಿಕೆಗಳನ್ನು ಕೊಡುತ್ತಲೇ ಇದ್ದ, ಇದನ್ನು ಪುಟಿನ್ ಸಹಿಸಿಕೊಳ್ಳುವ ಪರಿಸ್ಥಿತಿ ಯಲ್ಲಿರಲಿಲ್ಲ.
ಪಾಕಿಸ್ತಾನಕ್ಕೆ ಸಹಾಯ ಮಾಡುವ ಮೂಲಕ ಒಂದು ಕಾಲದಲ್ಲಿ ಭಾರತಕ್ಕೆ ಇರುಸು ಮುರುಸು ಮಾಡಿದ್ದು ಹಾಗೂ ತನ್ನ ಪಕ್ಕದಲ್ಲಿರುವ ’ದಕ್ಷಿಣ ಅಮೇರಿಕಾ’ ಖಂಡದಲ್ಲಿನ ಹಲವು ದೇಶಗಳನ್ನು ಅಮೇರಿಕಾ ಸರ್ವನಾಶ ಮಾಡಿದ್ದನ್ನು ಪುಟಿನ್ ನೋಡಿದ್ದರು. ದಕ್ಷಿಣ ಅಮೆರಿಕಾದ
ಕೋಸ್ಟರೀಕಾ, ಪನಾಮ, ಚಿಲಿ ದೇಶಗಳಲ್ಲಿ ಹೇರಳವಾಗಿ ಸಿಗುತ್ತಿದ್ದ ಬಾಳೆಹಣ್ಣುಗಳ ಸಲುವಾಗಿ ನೂರು ವರ್ಷಗಳ ಕಾಲ ರಾಜಕೀಯ ಅರಾಜಕತೆ ಸೃಷ್ಟಿಸಿತ್ತು. ಇಂದಿಗೂ ಸಹ ಅಲ್ಲಿನ ದೇಶಗಳ ಜೊತೆ ಜಗತ್ತಿನ ಇತರ ದೇಶಗಳ ಸಂಪರ್ಕ ಬಹಳ ಕಡಿಮೆ, ತನ್ನ ಬಂಡವಾಳಶಾಹಿ ಮನಸ್ಥಿತಿಯ ಮೂಲಕ ಇತರರನ್ನು ಬೆಳೆಯಲು ಬಿಡದ ದೇಶ ಅಮೇರಿಕಾ.
ರಷ್ಯಾಕ್ಕೆ ಸೆಡ್ಡು ಹೊಡೆಯುವ ವಿಚಾರವಾಗಿ ಉಕ್ರೇನ್‌ನನ್ನು ತನ್ನ ಕೈಗೊಂಬೆಯನ್ನಾಗಿಸಲು ನಿರ್ಧರಿಸಿದ್ದ ಅಮೆರಿಕಕ್ಕೆ ಪುಟಿನ್ ದೊಡ್ಡ ಶಾಕ್ ನೀಡಿದ್ದಾರೆ. ಟೆಲಿವಿಷನ್ ಕಾರ್ಯಕ್ರಮಗಳ ಮೂಲಕ ಆಯ್ಕೆಯಾದಂತಹ ದುರ್ಬಲ ಅಧ್ಯಕ್ಷನೊಬ್ಬನನ್ನುಬಳಸಿಕೊಂಡು ರಷ್ಯಾ
ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಅಮೇರಿಕಾ ತನ್ನ ನ್ಯಾಟೋ ಮಿತ್ರರ ಮೂಲಕ ಮಾಡುವ ಪ್ರಯತ್ನದಲ್ಲಿತ್ತು. ತಾನು ಕಾಲಿಟ್ಟ ಪ್ರತಿ ಯೊಂದು ದೇಶದಲ್ಲಿಯೂ ಅಲ್ಲಿನ ಪ್ರತ್ಯೇಕತಾವಾದಿಗಳು ಅಥವಾ ದುರ್ಬಲರನ್ನು ಬಳಸಿಕೊಂಡು ಅರಾಜಕತೆ ಸೃಷ್ಟಿಸುವ ಕೆಲಸವನ್ನು ಅಮೇರಿಕಾ ಶತಶತಮಾನದಿಂದಲೂ ಮಾಡಿಕೊಂಡು ಬಂದಿದೆ.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಹಠಕ್ಕೆ ಬಿದ್ದ ರಷ್ಯಾ ಉಕ್ರೇನ್‌ನಲ್ಲಿದ್ದ ಮತ್ತದೇ ದುರ್ಬಲ ಹಾಸ್ಯನಟನನ್ನು ಪದಚ್ಯುತಿ ಗೊಳಿಸುವುದು ಸೂಕ್ತವೆಂದು ನಿರ್ಧರಿಸಿತ್ತು. ಮೇ 2021ರಿಂದಲೇ ರಷ್ಯಾ ತನ್ನ ಸೈನ್ಯವನ್ನು ಉಕ್ರೇನ್‌ನಿನ ಗಡಿಭಾಗಗಳಲ್ಲಿ ನಿಯೋಜಿ ಸಲು ಶುರುಮಾಡಿತ್ತು, ನ್ಯಾಟೋ ದೇಶಗಳು ಇದು ಕೇವಲ ಹೆದರಿಸುವ ತಂತ್ರವೆಂದು ಭಾವಿಸಿದ್ದವು.
ರಷ್ಯಾ ದೇಶವು ಯುದ್ಧ ಸಾರಿದರೆ ನ್ಯಾಟೋ ದೇಶಗಳು ಉಕ್ರೇನ್ ದೇಶದ ಬೆಂಬಲಕ್ಕೆ ನಿಲ್ಲುತ್ತವೆಂದು ಹೇಳಿದ್ದವು, ನ್ಯಾಟೋ ದೇಶಗಳು ರಷ್ಯಾ ವಿರುದ್ಧ ನಿಲ್ಲುವುದು ಸುಲಭದ ಮಾತಲ್ಲ, ತಮ್ಮ ಸೈನಿಕರನ್ನು ರಷ್ಯಾ ವಿರುದ್ಧ ಯುದ್ಧ ಮಾಡಲು ನ್ಯಾಟೋ ಸದಸ್ಯ ದೇಶಗಳು ಕಳುಹಿಸಿದರೆ ಆ ದೇಶದ ವಿರುದ್ಧ ಪುಟಿನ್ ಯುದ್ಧ ಮಾಡದೇ ಇರಲು ಸಾಧ್ಯವೇ? ಫ್ರೆಂಚ್ ಯುದ್ಧ ವಿಮಾ ನಗಳು ನ್ಯಾಟೋ ಪಡೆ ಯೊಂದಿಗೆ ರಷ್ಯಾ ವಿರುದ್ಧ ಯುದ್ಧಕ್ಕೆ ನಿಂತರೆ ಪುಟಿನ್ ಫ್ರಾನ್ಸ್ ವಿರುದ್ಧ ಯುದ್ಧಕ್ಕೆ ಹೋಗುತ್ತಾರೆ, ಸ್ಪೇನ್ ದೇಶದ ಸೈನಿಕರು ನಿಂತರೆ ಅವರ ವಿರುದ್ಧ ಹೋಗುತ್ತಾರೆ, ಅಮೇರಿಕಾ ಸೈನಿಕರು ನ್ಯಾಟೋ ಪಡೆಯ ಪರವಾಗಿ ನಿಂತರೆ ರಷ್ಯಾ ಅಮೇರಿಕಾ ವಿರುದ್ಧ ಯುದ್ಧ ಮಾಡದೇ ಇರಲು ಸಾಧ್ಯವೇ? ತೋಳ ಬಂತು ತೋಳ ಕಥೆಯಂತೆ ನ್ಯಾಟೋ ದೇಶಗಳು ಉಕ್ರೇನಿನ ಪರವಾಗಿ ನಿಂತಿದ್ದವು. ಇಷ್ಟು ಸಣ್ಣ ಸಾಮಾನ್ಯ ಜ್ಞಾನ ಅರಿಯದ ಹಾಸ್ಯನಟನೊಬ್ಬ ಉಕ್ರೇನ್ ಅಧ್ಯಕ್ಷನಾಗಿದ್ದು ಮಾತ್ರ ಆ ಜನರ ದುರಂತ.