Sunday, 10th November 2024

ಎರಡನೇ ಟೆಸ್‌ಟ್‌‌ಗೆ ಬೌಲ್ಟ್ ಇಲ್ಲ

ಕ್ರೈಸ್‌ಟ್‌‌ಚರ್ಚ್:
ಇಂಗ್ಲೆೆಂಡ್ ವಿರುದ್ಧ ಮೊದಲ ಟೆಸ್‌ಟ್‌ ಪಂದ್ಯದಲ್ಲಿ ಇನಿಂಗ್‌ಸ್‌ ಜಯ ಸಾಧಿಸಿದ್ದ ನ್ಯೂಜಿಲೆಂಡ್ ತಂಡಕ್ಕೆೆ ಎರಡನೇ ಪಂದ್ಯ ಆರಂಭಕ್ಕೂ ಮುನ್ನವೇ ಆಘಾತ ಉಂಟಾಗಿದೆ. ಇದೇ 29 ರಿಂದ ಆರಂಭವಾಗುವ ಎರಡನೇ ಟೆಸ್‌ಟ್‌ ಪಂದ್ಯಕ್ಕೆೆ 14 ಸದಸ್ಯರ ಕಿವೀಸ್ ತಂಡವನ್ನು ಬುಧವಾರ ನ್ಯೂಜಿಲೆಂಡ್ ಕ್ರಿಿಕೆಟ್ ಪ್ರಕಟಿಸಿದ್ದು, ಹಿರಿಯ ವೇಗಿ ಟ್ರೆೆಂಟ್ ಬೌಲ್ಟ್ ಅವರು ತಂಡದಿಂದ ಹೊರಗುಳಿಯಲಿದ್ದಾರೆ.

ಟ್ರೆೆಂಟ್ ಬೌಲ್ಟ್ ಜತೆಗೆ ಕಾಲಿನ್ ಗ್ರ್ಯಾಾಂಡ್ ಹೋಮ್ ಅವರು ಮೊದಲನೇ ಟೆಸ್‌ಟ್‌ ಪಂದ್ಯದ ವೇಳೆ ಸ್ನಾಾಯು ನೋವಿನಿಂದ ಬಳಲುತ್ತಿಿದ್ದಾರೆ. ಈ ಹಿನ್ನೆೆಲೆಯಲ್ಲಿ ಹ್ಯಾಾಮಿಲ್ಟನ್ ನಲ್ಲಿ ಜರುಗುವ ದ್ವಿಿತೀಯ ಟೆಸ್‌ಟ್‌‌ಗೆ ಅಲಭ್ಯರಾಗಿದ್ದಾರೆ.
ಮೊದಲನೇ ಟೆಸ್‌ಟ್‌ ಪಂದ್ಯದ ಕೊನೆಯ ದಿನ ಕೇವಲ ಒಂದು ಓವರ್ ಮಾತ್ರ ಬೌಲ್ಟ್ ಬೌಲಿಂಗ್ ಮಾಡಿದ್ದರು. ನಂತರ ಅವರು ಸ್ನಾಾಯು ನೋವಿಗೆ ಒಳಗಾದ ಬಳಿಕ ಫೀಲ್ಡ್ ತೊರೆದಿದ್ದರು.

ಮಂಗಳವಾರ ಎಂಆರ್‌ಐ ಸ್ಕಾಾ ್ಯನ್ ಮಾಡಲಾಗಿದ್ದು, ಬೌಲ್ಟ್ ಅವರ ಬಲಗೈನ ಪಕ್ಕೆೆಲಬುಗಳಲ್ಲಿ ಬದಲಾವಣೆ ಕಂಡುಬಂದಿದೆ. ಇನ್ನೂ, ಮೊದಲನೇ ಪಂದ್ಯದ ದ್ವಿಿತೀಯ ಇನಿಂಗ್ಸ್ ವೇಳೆ ಫೀಲ್ಡಿಿಂಗ್ ಮಾಡುತ್ತಿಿದ್ದ ವೇಳೆ ಕಾಲಿನ್ ಗ್ರ್ಯಾಾಂಡ್‌ಹೋಮ್ ಗಾಯಕ್ಕೆೆ ತುತ್ತಾಾಗಿದ್ದರು.
ಡೆರ್ಲಿ ಮಿಚೆಲ್ ಅವರನ್ನು ತಂಡಕ್ಕೆೆ ಮರಳಿ ಕರೆಯಲಾಗಿದೆ. ಇವರ ಜತೆ, ಟಾಡ್ ಆಸ್ಟೆೆ ್ಲ ಹಾಗೂ ಲೂಕಿ ಫರ್ಗೂಸನ್ ಅವರನ್ನು ಈ ಹಿಂದೆ ದೇಶೀಯ ಕ್ರಿಿಕೆಟ್ ಆಡಲು ಬಿಡುಗಡೆ ಮಾಡಲಾಗಿತ್ತು. ಇದೀಗ ಅವರನ್ನು ತಂಡಕ್ಕೆೆ ಕರೆಸಿಕೊಳ್ಳಲಾಗಿದೆ.