ಕೋಲ್ಕತ್ತಾ: ನಗರದ ಗಾರ್ಡನ್ ರೀಚ್ ಪ್ರದೇಶದಲ್ಲಿ ಕೋಲ್ಕತ್ತಾ ಪೊಲೀಸರು ನಕಲಿ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿ ಕನಿಷ್ಠ ಎಂಟು ಮಂದಿ ಯನ್ನು ಬಂಧಿಸಿದ್ದಾರೆ.
ಸುಳಿವಿನ ಮೇರೆಗೆ ಪೊಲೀಸರು ಗಾರ್ಡನ್ ರೀಚ್ ಪ್ರದೇಶದ ಮನೆಯೊಂದರ ಮೇಲೆ ದಾಳಿ ನಡೆಸಿ, ಯಾವುದೇ ಪರವಾನಗಿ ಇಲ್ಲದೆ ಕಾರ್ಯ ನಿರ್ವಹಿಸು ತ್ತಿದ್ದ ಕಾಲ್ ಸೆಂಟರ್ ಅನ್ನು ದಾಳಿ ಮಾಡಲಾ ಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕಾಲ್ ಸೆಂಟರ್ ಮಾಲೀಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 13 ಲ್ಯಾಪ್‌ಟಾಪ್‌ಗಳು, ಎಂಟು ಮೊಬೈಲ್ ಫೋನ್‌ಗಳು, ನಾಲ್ಕು ಹಾರ್ಡ್ ಡಿಸ್ಕ್‌ಗಳು ಮತ್ತು ₹ 19 ಲಕ್ಷವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಂಪ್ಯೂಟರ್ ವ್ಯವಸ್ಥೆಯನ್ನು ಸರಿಪಡಿಸುವ ನೆಪದಲ್ಲಿ ಅವರು ಜನರನ್ನು ವಂಚಿಸುವ ಮೂಲಕ ಹಣವನ್ನು ಸಂಗ್ರಹಿಸುತ್ತಿದ್ದಾರೆ ಎಂದು ತೋರುತ್ತದೆ. ಬ್ಯಾಂಕ್ ಖಾತೆಗೆ ಜಮಾ ಮಾಡಿದ ಹಣವನ್ನು ಇಟ್ಟುಕೊಂಡಿದ್ದರು ಮತ್ತು ನಂತರ ಅಗತ್ಯಕ್ಕೆ ಅನುಗುಣವಾಗಿ ಬೇರೆಯವರಿಗೆ ವರ್ಗಾಯಿಸುತ್ತಿದ್ದರು’ ಎಂದು ಅಧಿಕಾರಿ ಹೇಳಿದರು.