ಕೋಲ್ಕತಾ: ಕೋಲ್ಕತ್ತಾದ ಜಾಧವ್ ಪುರ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಬೈಸಾಕ್ ಮೊಂಡಲ್ ಅವರಿಗೆ ಫೇಸ್ ಬುಕ್ ಭಾರೀ ಆಫರ್ ನೀಡಿದೆ.
ಕಂಪ್ಯೂಟರ್ ಸೈನ್ಸ್ ನ ನಾಲ್ಕನೇ ವರ್ಷದ ವಿದ್ಯಾರ್ಥಿ ಮೊಂಡಲ್ ಗೆ ಲಂಡನ್ ನಲ್ಲಿ ಉದ್ಯೋಗ ನೀಡಲು ನಿರ್ಧರಿಸಿರುವ ಫೇಸ್ ಬುಕ್, ಅವರಿಗೆ ನಿಗದಿ ಮಾಡಿರುವ ವಾರ್ಷಿಕ ಸಂಬಳ ಬರೋಬ್ಬರಿ 1.8 ಕೋಟಿ ರೂಪಾಯಿಗಳು..!
ಈ ವರ್ಷ ಕಂಪನಿಯೊಂದು ನೀಡುತ್ತಿರುವ ಅತ್ಯಧಿಕ ಆಫರ್ ಆಗಿದೆ. ಮೊಂಡಲ್ ಈ ಆಫರ್ ಅನ್ನು ಸ್ವೀಕರಿಸಿದ್ದು, ಮುಂದಿನ ಸೆಪ್ಟಂಬರ್ ವೇಳೆಗೆ ಕಾರ್ಯ ನಿರ್ವಹಿಸ ಲಿದ್ದಾರೆ.
ಬಿರ್ಭಮ್ ನ ರಾಮಪುರ್ಹಾತ್ ನ ರೈತ ಕುಟುಂಬಕ್ಕೆ ಸೇರಿದ ಮೊಂಡಲ್ ತಂದೆ ಕೃಷಿಕ ರಾಗಿದ್ದರೆ, ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದಾರೆ. ಮಗನಿಗೆ ಬಂದಿರುವ ಆಫರ್ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ನಾನು ಮುಂದಿನ ಸೆಪ್ಟಂಬರ್ ನಲ್ಲಿ ಫೇಸ್ ಬುಕ್ ನಲ್ಲಿ ಉದ್ಯೋಗಕ್ಕೆ ಸೇರುವೆ. ಫೇಸ್ ಬುಕ್ ನಿಂದ ಆಫರ್ ಬರುವ ಮುನ್ನ ನನಗೆ ಗೂಗಲ್ ಮತ್ತು ಅಮೇಜಾನ್ ನಿಂದ ಉದ್ಯೋಗದ ಆಫರ್ ಗಳು ಬಂದಿದ್ದವು. ಆದರೆ, ಫೇಸ್ ಬುಕ್ ಉತ್ತಮ ವೇತನ ನೀಡುವ ಭರವಸೆ ನೀಡಿದ್ದರಿಂದ ಅವೆರಡೂ ಆಫರ್ ಗಳನ್ನು ತಿರಸ್ಕರಿಸಿದೆ ಎಂದು ಮೊಂಡಲ್ ತಿಳಿಸಿದ್ದಾರೆ.