ಮುಂಬೈ: ಷೇರು ಮಾರುಕಟ್ಟೆ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಏರಿಕೆ ದಾಖಲಿಸಿದೆ.
ಷೇರು ಪೇಟೆಯಲ್ಲಿ 1366 ಷೇರುಗಳು ಏರಿಕೆಯನ್ನು ಕಂಡಿದ್ದರೆ, 737 ಷೇರುಗಳು ಕುಸಿತ ಕಂಡಿದೆ. 30 ಷೇರುಗಳು ಬಿಎಸ್‌ಇ 46.94 ಅಂಕ ಅಥವಾ ಶೇ.0.08ರಷ್ಟು 58434.87ಕ್ಕೆ ತಲುಪಿದೆ. ನಿಫ್ಟಿ 14.90 ಅಂಕ ಅಥವಾ ಶೇ.0.09ರಷ್ಟು ಹೆಚ್ಚಳವಾಗಿ 17412.40ಕ್ಕೆ ತಲುಪಿದೆ. ನಿಫ್ಟಿ 50 ಸ್ಟಾಕ್‌ಗಳಲ್ಲಿ 30 ಏರಿಕೆ ದಾಖಲಿಸಿ ದ್ದರೆ, ಇನ್ನುಳಿದ ಸ್ಟಾಕ್‌ಗಳು ಕುಸಿದಿದೆ.
ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಲಾಗಿದ್ದು ದರ 5.4ಕ್ಕೆ ತಲುಪಿದೆ. ಈ ಸಂದರ್ಭದಲ್ಲಿ ಷೇರು ಮಾರುಕಟ್ಟೆ ಏರಿಕೆಯಾಗಿದ್ದು ಸೋಮವಾರವು ಲಾಭವನ್ನು ವಿಸ್ತರಿಸಿದೆ.
ಆರಂಭಿಕ ವಹಿವಾಟಿನಲ್ಲಿ ಎಂ&ಎಂ, ಪವರ್ ಗ್ರಿಡ್, ಡಾ ರೆಡ್ಡೀಸ್, ಟೈಟಾನ್, ಭಾರ್ತಿ ಏರ್‌ಟೆಲ್, ಮಾರುತಿ, ರಿಲಯನ್ಸ್, ಎಲ್‌ಟಿ, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಇಂಡಸ್ ಇಂಡ್ ಬ್ಯಾಂಕ್, ವಿಪ್ರೋ ಷೇರುಗಳು ಏರಿಕೆಯನ್ನು ಕಂಡಿದೆ.
ಹಿಂದೂಸ್ತಾನ್ ಯೂನಿಲಿವರ್, ಟಾಟಾ ಸ್ಟೀಲ್ಸ್, ಸನ್ ಫಾರ್ಮಾ, ಐಟಿಸಿ, ಎಚ್‌ಡಿಎಫ್‌ಸಿ, ನೆಸ್ಲೆ ಇಂಡಿಯಾ, ಹೆಚ್‌ಸಿಎಲ್ ಟೆಕ್, ಟಿಸಿಎಸ್, ಎನ್‌ಟಿಪಿಸಿ, ಬಜಾಜ್ ಫಿನ್‌ಸರ್ವ್, ಏಷ್ಯನ್ ಪೇಂಟ್ಸ್, ಇನ್ಫೋಸಿಸಿ, ಟೆಕ್ ಎಂ, ಐಸಿಐಸಿಐ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಕೋಟಕ್ ಮಹೀಂದ್ರಾ, ಎಸ್‌ಬಿಐ ಇನ್ಶೂರೆನ್ಸ್ ಸ್ಟಾಕ್‌ಗಳು ಕುಸಿತ ಕಂಡಿದೆ.