Friday, 18th October 2024

ಪ್ರಜ್ಞೆಗಳೆನ್ನುವ ವಂಡರ್‌ – ಪರಿಸಮಾಪ್ತಿ

ಶಿಶಿರ ಕಾಲ

shishirh@gmail.com

ಓದುಗರಾದ ಶ್ರೀ ಸುರೇಂದ್ರ ಪಾಟೀಲ್ ಅವರು ಪ್ರಜ್ಞೆಗಳ ಮೇಲೆ ಬರೆದ ಈ ಲೇಖನ ಸರಣಿಗೆ ಪ್ರತಿಕ್ರಿಯಿಸುತ್ತ ಒಂದು ಘಟನೆ ಯನ್ನು ನೆನಪಿಸಿದ್ದಾರೆ. ಆ ಘಟನೆ ಈ ಇಡೀ ಪ್ರಜ್ಞೆಯ ವ್ಯಾಪ್ತಿಯಲ್ಲಿ ಎಲ್ಲಿ ಬರುತ್ತದೆ ಎನ್ನುವ ಪ್ರಶ್ನೆಯನ್ನು ಎತ್ತಿದ್ದಾರೆ. ಅವರ ಪ್ರಶ್ನೆ ತೀರಾ ಸಮಂಜಸವಾದುದು.

ಹಿಂದಿನವಾರ ನೋವಿನ ಬಗ್ಗೆ, ನೋವು ಎಂಬ ಪ್ರಜ್ಞೆಯ ಬಗ್ಗೆ ಬರೆದಿದ್ದೆ. ಪಾಟೀಲರು ನೆನಪಿಸಿದ್ದು 11 ಜೂನ್ 1963 ರಲ್ಲಿ ವಿಯೆಟ್ನಾಮ್‌ನಲ್ಲಿ ನಡೆದ ಘಟನೆಯನ್ನು. ಆ ದಿನ ಬೆಳಿಗ್ಗೆ ದಕ್ಷಿಣ ವಿಯೆಟ್ನಾಮ್ ನ ಸೈಗೊನ್‌ನ ನಾಲ್ಕು ರಸ್ತೆ ಸೇರುವ ಜಾಗ ದಲ್ಲಿ ನೂರಾರು ಬೌದ್ಧ ಭಿಕ್ಷುಗಳು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ಸೇರಿದ್ದರು. ಆ ಸಮಯ ದಲ್ಲಿ ರೋಮನ್ ಕ್ಯಾಥೊಲಿಕ್ ಅನ್ನು ನೆಚ್ಚಿದ್ದ ನ್ಗೋ ಡಿ ದಿಯೆಮ್ ವಿಯೆಟ್ನಾಮ್‌ನ ಅಧ್ಯಕ್ಷ.

ಆತ ಸರಕಾರೀ ಮುಖ್ಯ ಸ್ಥಾನಮಾನಗಳಲ್ಲಿ ಮತ್ತು ಸೈನ್ಯದಲ್ಲಿ ಕೇವಲ ರೋಮನ್ ಕ್ಯಾಥೋಲಿಕ್ ಧರ್ಮದವರಿಗಷ್ಟೇ ಅವಕಾಶ ಎನ್ನುವ ಕಾನೂನನ್ನು ಜಾರಿಗೆ ತಂದಿದ್ದ. ತರುವಾಯ ಬೌದ್ಧ ನಿರ್ನಾಮ ಕಾರ್ಯ ಶುರುವಾಗಿತ್ತು. ಬೌದ್ಧರಿಗೆ ಬದುಕ ಬೇಕೆಂದರೆ ಕ್ರಿಶ್ಚನ್ನರಾಗಿ ಮತಾಂತರ ಹೊಂದಲೇಬೇಕಿಕಾದ ಸ್ಥಿತಿ. ಬೌದ್ಧ ಧರ್ಮವೆಂದರೆ ಅದು ಸನಾತನ ಧರ್ಮ. ಆ ಕಾಲದಲ್ಲಿ ಬೌದ್ಧ ಧರ್ಮಿಗಳೇ ಅಲ್ಲಿ ಬಹುಸಂಖ್ಯಾತರಾಗಿದ್ದರೂ ಇಂತಹ ಅವಸ್ಥೆ. ಆ ದಿನದ ಈ ಪ್ರತಿಭಟನೆಗಿಂತ ಒಂದು ತಿಂಗಳು ಮೊದಲು ಬೌದ್ಧರು ಗೌತಮ ಬುದ್ಧನ ಹುಟ್ಟಿದ ದಿನದಂದು ತಮ್ಮ ಧ್ವಜವನ್ನು ಹಾರಿಸಲಿಕ್ಕೆ ಬಿಟ್ಟಿರಲಿಲ್ಲ.

ಒಂಭತ್ತು ಭಿಕ್ಷುಗಳನ್ನು ಇದೇ ರೋಮನ್ ಕ್ಯಾಥೋಲಿಕ್ ಸೈನಿಕರು ರಸ್ತೆ ಮಧ್ಯೆ ಗುಂಡು ಹೊಡೆದು ಕೊಂದಿದ್ದರು. ಈ ಘಟನೆಯ ತರುವಾಯದ ಪ್ರತಿಭಟನೆ ಇದಾಗಿತ್ತು. ಅದು ವಿಯೆಟ್ನಾಮ್‌ನ ಯುದ್ಧದ ದಿನಗಳು. ಈ ಎಲ್ಲ ಪ್ರತಿಭಟನೆಗಳನ್ನು ಅಮೆರಿಕ ಸೇರಿದಂತೆ ಹಲವು ಪಾಶ್ಚಾತ್ಯ ಪತ್ರಕರ್ತರು ಕವರ್ ಮಾಡುತ್ತಿದ್ದರು. ದೇಶದುದ್ದಕ್ಕೂ ಹಲವು ಪ್ರತಿಭಟನೆ ಗಳಾಗುತ್ತಿದ್ದವು. ಆದರೆ ಆ ದಿನ ಪಾಶ್ಚಾತ್ಯ ಪತ್ರಕರ್ತರಿಗೆ ವಿಶೇಷ ಆಹ್ವಾನ ನೀಡಲಾಗಿತ್ತು.

ಇವತ್ತು ಒಂದು ಅಭೂತಪೂರ್ವ ಘಟನೆ ನಡೆಯಲಿದೆ ಎಂದು ಅವರಿಗೆಲ್ಲ ಸೂಚನೆ ನೀಡಲಾಗಿತ್ತು. ಅಂತೆಯೇ ಅಲ್ಲಿ ಹಲವು ಪತ್ರಕರ್ತರು ನೆರೆದಿದ್ದರು. ಪ್ರತಿಭಟನೆಯಲ್ಲಿ ನೂರಾರು ಬೌದ್ಧ ಭಿಕ್ಷುಗಳು ಸೇರಿದ್ದರು. ಅದೆಲ್ಲದರ ನಡುವೆ ಆ ನಾಲ್ಕು ರಸ್ತೆ
ಸೇರುವ ಮುರ್ಕಿಯಲ್ಲಿ ಒಂದು ಕಾರು ಬಂದು ನಿಂತಿತು. ಅದರಿಂದ ಮೂರು ಬೌದ್ಧ ಭಿಕ್ಷುಗಳು ಇಳಿದರು. ಅದರಬ್ಬ ಥಿಕ್ ಕ್ವಾ ಡೋಕ್. ಆತ ರಸ್ತೆಯ ಮಧ್ಯೆ ಪದ್ಮಾಸನ ಹಾಕಿ ಕುಳಿತ. ಆತನ ಜತೆಯಲ್ಲಿ ಬಂದಿದ್ದ ಇನ್ನೊಬ್ಬ ಭಿಕ್ಷು ಆತನ ಮೇಲೆ ಪೆಟ್ರೋಲ್ ಸುರಿದ. ಥಿಕ್ ಕ್ವಾ ಡೋಕ್ ತನ್ನಲ್ಲಿದ್ದ ಬೆಂಕಿಯ ಪಟ್ಟಣದ ಕಡ್ಡಿಯನ್ನು ಗೀರಿ ತನ್ನ ದೇಹಕ್ಕೆ ಬೆಂಕಿ ಹಚ್ಚಿಕೊಂಡ.

ಪತ್ರಕರ್ತರೆಲ್ಲ ನೋಡನೋಡುತ್ತ ಇರುವಂತೆ ಆತ ಕೆಲವೇ ಕ್ಷಣಗಳಲ್ಲಿ ಅಗ್ನಿಗೆ ಆಹುತಿಯಾಗಿ ಇಹ ಲೋಕ ತ್ಯೆಜಿಸಿದ. ಈ ಘಟನೆ ಅಂದಿನ ಇಡೀ ಜಗತ್ತನ್ನು ಅವಕ್ಕಾಗಿಸಿತ್ತಂತೆ. ಕೆಲವರು ಆತನನ್ನು ಹುಚ್ಚ, ತಲೆ ಸರಿಯಿಲ್ಲದವ ಎಂದೆಲ್ಲ ಅಂದದ್ದಾಯ್ತು. ಹುಚ್ಚನೆಂದೇ ಇಟ್ಟು ಕೊಂಡರೂ ಥಿಕ್ ಕ್ವಾ ಡೋಕ್ ಮನುಷ್ಯನ ಬೇಸಿಕ್ ಪ್ರಜ್ಞೆಗೆ ಪ್ರಶ್ನೆಯಾಗಿಯೇ ಉಳಿಯುತ್ತಾನೆ. ಏಕೆಂದರೆ ಆತ ತನ್ನ ದೇಹಕ್ಕೆ ಬೆಂಕಿ ಹಚ್ಚಿಕೊಂಡು ಸಂಪೂರ್ಣ ಕರಕಲಾಗಿ ಬೀಳುವವರೆಗೆ ಒಂಚೂರೂ ಅಲುಗಾಡುವುದಿಲ್ಲ, ಕೂಗುವು ದಿಲ್ಲ, ಬೊಬ್ಬೆಹೊಡೆಯುವುದಿಲ್ಲ.

ಥೇಟ್ ಗೊಂಬೆಯೊಂದಕ್ಕೆ ಬೆಂಕಿ ಹಚ್ಚಿದಂತೆ – ಧ್ಯಾನಸ್ಥನಾಗಿ, ತಟಸ್ಥನಾಗಿ. ಈ ವಿಡಿಯೋವನ್ನು ನೀವು ಯೌಟ್ಯೂಬ್‌ನಲ್ಲಿ ನೋಡಬಹುದು.’Vietnamese Buddhist Monk Self Immolation’’ ಎಂದು ಹುಡುಕಿದರೆ ಸಿಗುತ್ತದೆ. ನೋವು ಎನ್ನುವ ಪ್ರಜ್ಞೆ ಸಹಜವಾಗಿ ದೇಹ ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಅದೆಷ್ಟೇ ಗಟ್ಟಿ ಮನಸ್ಸು ಮಾಡಿದರೂ ಬೆಂಕಿಯ ಉರಿ ದೇಹಕ್ಕೆ ತಾಕಿದಾಗ ಕೂಗಿ ಬೊಬ್ಬೆಹೊಡೆಯಲೇಬೇಕು. ಇದು ಸಹಜ ಪ್ರಜ್ಞೆ, ಪ್ರತಿಕ್ರಿಯೆ.

ಒಂದು ಚಿಕ್ಕ ಬೆಂಕಿಯ ಗಾಯವೇ ನಮ್ಮನ್ನು ಧೃತಿಗೆಡಿಸಿಬಿಡುತ್ತದೆ. ಹಾಗಿರುವಾಗ ಥಿಕ್ ಕ್ವಾ ಡೋಕ್‌ನ ಇಡೀ ದೇಹವನ್ನು ಬೆಂಕಿ ಸುಡುವಾಗ ಆತ ಅಲ್ಲಾಡಲೇ ಇಲ್ಲ, ಪದ್ಮಾಸನದಲ್ಲಿಯೇ ಕೊತಿದ್ದ! ಇದೆಲ್ಲ ಹೇಗೆ ಸಾಧ್ಯ ಎಂದು ಪ್ರಶ್ನಿಸುವುದಕ್ಕಿಂತ ಈ
ಘಟನೆ ಮನುಷ್ಯನ ಮಿದುಳು ಅತ್ಯವಶ್ಯ ಜೀವ ಪ್ರಜ್ಞೆಗಳನ್ನು ಮೀರಬಹುದು ಎನ್ನುವುದಕ್ಕೆ ಹಿಡಿದ ಕನ್ನಡಿಯಂತೆ ಕಾಣಿಸುತ್ತದೆ. ನೋವು, ಉರಿ, ಸ್ಪರ್ಶ, ಜೀವ ಭಯ, ದೇಹ ರಕ್ಷಣೆ ಎಂಬಿತ್ಯಾದಿ ನೂರೆಂಟು ಪ್ರಜ್ಞೆಗಳನ್ನೂ ಮೀರಿ ನಮ್ಮ ಮನಸ್ಸು ಧ್ಯಾನ ಸ್ಥಿತಿ ಯಲ್ಲಿ ಅದೆಷ್ಟು ಗಟ್ಟಿತನದಿಂದ ವ್ಯವಹರಿಸಬಹುದು ಎನ್ನುವುದಕ್ಕೆ ಬಹುಷಃ ಇದಕ್ಕಿಂತ ಇನ್ನೊಂದು ಸನ್ನಿವೇಷ ವಿಡಿಯೋ ದಲ್ಲಿ ದಾಖಲಾದದ್ದು ಸಿಗಲಿಕ್ಕಿಲ್ಲ.

ಇದು ಇಡೀ ಮನಸ್ಸಿನ ತಾಕತ್ತಿನ ಪರಮೋಚ್ಚ ಪರೀಕ್ಷೆಗೆ ಸಾಕ್ಷಿ ಎಂಬಂತೆ ಈ ವಿಡಿಯೋ, ಘಟನೆ ನಮ್ಮೆದಿರುಗೆ ನಿಲ್ಲುತ್ತದೆ,
ಸಾಧ್ಯತೆಯನ್ನು ಪ್ರಶ್ನಿಸುವವರನ್ನು ಮರುಪ್ರಶ್ನಿಸುತ್ತದೆ. ಇಂದಿನ ಜಗತ್ತಿನ ಅತ್ಯಾಧುನಿಕತೆಯ ದ್ಯೋತಕ ಮೊಬೈಲ್ ಫೋನ್. ಅದರಲ್ಲಿ ಐಫೋನ್‌ನದು ಮೇಲಗೈ. ಅಂತಹ ಫೋನ್, ಆಪಲ್ ಕಂಪನಿಯನ್ನು ಕಟ್ಟಿ ನಿಲ್ಲಿಸಿದ್ದು ಸ್ಟೀವ್ ಜಾಬ್ಸ್. ಸ್ಟೀವ್‌ನ ಆತ್ಮಕಥೆ ಯಲ್ಲಿ ಅದೆಷ್ಟೋ ಬಾರಿ ಸನಾತನ ಧರ್ಮದ ಬಗ್ಗೆ, ಹೇಗೆ ಈ ಧರ್ಮದ ವಿಚಾರಗಳು ಆತನ ಬದಿಕಿನ ದೆಸೆಯನ್ನೇ ಬದಲಿಸಿದೆ ಎನ್ನುವುದರ ಉಲ್ಲೇವಿದೆ.

ಸ್ಟೀವ್ ಅತ್ಯಂತ ಹೆಚ್ಚು ಕೋಟ್ ಮಾಡುತ್ತಿದ್ದ ಪುಸ್ತಕವೆಂದರೆ ‘ಯೋಗಿಯ ಆತ್ಮಕಥೆ’. ಈ ಪುಸ್ತಕದಲ್ಲಿ ಈ ರೀತಿಯ ಅದೆಷ್ಟೋ
ಅತಿಮಾನುಷವೆನ್ನಿಸುವ, ಅಸಾಮಾನ್ಯ ಸನ್ಯಾಸಿಗಳ ಉಲ್ಲೇಖವಿದೆ. ಹಸಿವು: ಇದು ಇನ್ನೊಂದು ಅತ್ಯವಶ್ಯ ಪ್ರಜ್ಞೆ. ಹಸಿವಾದಾಗ ಜೈವಿಕವಾಗಿ ದೇಹದಗುವ ಬದಲಾವಣೆಗಳು ನಾನಾ ರೀತಿಯ ಕೆಲಸವನ್ನು ಮಾಡಿಸುತ್ತವೆ. ಹಲವರಲ್ಲಿ ಹಸಿವು ಜಾಸ್ತಿಯಾದರೆ ಅನಗತ್ಯ ಸಿಟ್ಟು ಹುಟ್ಟಿಕೊಳ್ಳುತ್ತದೆ. ಹಸಿವಾದಾಗ ಶಾಪಿಂಗ್‌ಗೆ ಹೋದರೆ ಅನವಶ್ಯಕ ವಸ್ತುಗಳನ್ನು ಖರೀದಿಸಿ ತರುವುದು ಬಹು ತೇಕರಲ್ಲಿ ಸಾಮಾನ್ಯ. ಗಬಗಬ ಮುಕ್ಕುವ, ಕೂಡಿಹಾಕುವ ಆಸೆ ತಾರಕಕ್ಕೇರುವುದು ಹಸಿವಿನ ಪ್ರಜ್ಞೆಯಿಂದ. ಆಹಾರ ಸಿಕ್ಕಿದಾಗ ಹೊಟ್ಟೆಗೆ ಬೇಕಾದದ್ದಕ್ಕಿಂತ ಜಾಸ್ತಿ ತಿನ್ನುತ್ತೇವೆ, ತಿನ್ನುವಾಗ ಹೊಟ್ಟೆ ತುಂಬಿದ್ದು ತಕ್ಷಣ ಗೊತ್ತಾಗುವುದಿಲ್ಲ. ನಮಗೆ ಅದು ತಿಳಿಯಲು ಇಪ್ಪತ್ತು ನಿಮಿಷ ಬೇಕು.

ಆ ನಡುವೆ ಎಷ್ಟು ತಿಂದರೂ ಹಸಿವು ತೀರಿದ ಅನುಭವವಾಗುವುದಿಲ್ಲ. ಈ ಕಾರಣಕ್ಕೇ ನಾವು ತಿಂದ ಸುಮಾರು ಇಪ್ಪತ್ತು ನಿಮಿಷದ ನಂತರ ಅತಿಯಾಗ ತಿಂದ, ಹೊಟ್ಟೆ ತುಂಬಿ ತ್ರಾಸಾಗುವ ಅನುಭವವಾಗುವುದು. ಈ ಹೊಟ್ಟೆ ತುಂಬಿದ ಪ್ರeಯನ್ನು ನಮ್ಮ ಮಿದುಳು ತಡವಾಗಿ ಗ್ರಹಿಸುವುದು ನಮ್ಮ ಸ್ಥೂಲಕಾಯ – ಒಬೆಸಿಟಿಗೆ ನೇರ ಕಾರಣ. ಹಿಂದೊಂದು ಕಾಲದಲ್ಲಿ, ಆದಿ ಮಾನವನ ಸಮಯದಲ್ಲಿ ಇದು ಅತ್ಯವಶ್ಯ ಪ್ರe ಲೋಪವೇ ಆಗಿತ್ತು.

ಏಕೆಂದರೆ ಆಗ ಬೇಕೆಂದಾಗ ಆಹಾರ ಸಿಗುತ್ತಿರಲಿಲ್ಲ. ಹಾಗಾಗಿ ಸಿಕ್ಕಿದಾಗ ಬೇಕಾದ್ದಕ್ಕಿಂತ ಹೆಚ್ಚಿಗೆಯೇ ತಿನ್ನುವಂತೆ ಇದೇ ದೇಹ ಪ್ರಚೋದಿಸುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಆಹಾರಕ್ಕೆ ಕೊರತೆಯಿಲ್ಲದ ಸ್ಥಿತಿಯಿರುವಾಗ ಇದೇ ಪ್ರಜ್ಞೆ ಬೊಜ್ಜು ತುಂಬುವು ದಕ್ಕೆ ಕಾರಣವಾಗಿರುವುದು ಜೀವ ಅಣಕ. ಅದೇ ಹಸಿವಿನ ಪ್ರಜ್ಞೆಯನ್ನೇ ಅಣಕಿಸುವ ರೀತಿಯಲ್ಲಿ ಬದುಕಿದ ಗಿರಿಬಾಲಾ ಎನ್ನುವ ನಿರಾಹಾರ ಯೋಗಿನಿ ಈ ಹಸಿವಿನ ಪ್ರಜ್ಞೆಯನ್ನೇ ಪ್ರಶ್ನಿಸುತ್ತಾಳೆ. ಆಕೆಯ ಉಲ್ಲೇಖ ಕೂಡ ಯೋಗಿಯ ಆತ್ಮಕಥೆಯಲ್ಲಿದೆ, ಓದಿಕೊಳ್ಳಬಹುದು.

ನಿದ್ರೆ: ಇದು ಎಷ್ಟು ಮುಖ್ಯ ಎಂದು ಎಲ್ಲರಿಗೂ ಗೊತ್ತು. ಇಂತಿಷ್ಟು ಹೊತ್ತು ನಿದ್ರಿಸಬೇಕು ಎಂದು ಡಾಕ್ಟರ್ ಆದಿಯಾಗಿ
ವಿಜ್ಞಾನ ಜಗತ್ತೇ ಹೇಳುತ್ತದೆ. ಸುಸ್ತಾದಾಗ ದೇಹಕ್ಕೆ ನಿದ್ರಿಸಬೇಕೆನ್ನುವ ಪ್ರಜ್ಞೆ ಮೂಡುವುದು, ನಿದ್ರೆಗೆ ಜಾರುವುದು, ನಿದ್ರಿಸುವಾಗ ಇಡೀ ದೇಹ ಮತ್ತೊಂದು ದಿನಕ್ಕೆ ಶಕ್ತಿ ತುಂಬಿ ಕೊಂಡು ತಯಾರಾಗುವುದು ಎಲ್ಲ ನಿಮಗೆ ಗೊತ್ತು. ಆದರೆ ಒಮ್ಮೆ ವಿಚಾರ ಮಾಡಿ ನೋಡಿ. ಇಡೀ ದಿನದಲ್ಲಿ ನಿದ್ರಾವಸ್ಥೆ ಜೀವಿಯ ಅತ್ಯಂತ ದುರ್ಬಲ ಅವಸ್ಥೆ ಕೂಡ ಹೌದು.

ನಿದ್ರೆಯಲ್ಲಿದ್ದಾಗ ಅನ್ಯ ಪ್ರಾಣಿಗಳು ದಾಳಿ ಮಾಡಬಹುದು, ಹಾವು, ಚೇಳು ಕಡಿಯಬಹುದು ಇತ್ಯಾದಿ. ರಾತ್ರಿಯೇ ಅತ್ಯಂತ ಕುತ್ತದ ಸಮಯ. ಈ ಹಿನ್ನೆಲೆಯಲ್ಲಿ ವಿಕಾಸವಾದದಲ್ಲಿ ನಿದ್ರೆಯನ್ನು ಮನುಷ್ಯ, ಉಳಿದ ಪ್ರಾಣಿಗಳು, ಜೀವಿಗಳು ಅದ್ಯಾವತ್ತೋ ಮೀರಬೇಕಿತ್ತು. ಆದರೆ ಹಾಗಾಗಿಲ್ಲ. ಅದು ಮಾತ್ರ ಉಳಿದುಕೊಂಡುಬಿಟ್ಟಿದೆ. ಮನುಷ್ಯನ ದೇಹದೊಳಕ್ಕಿರುವ ಸಮಯಪ್ರಜ್ಞೆ  ರಾತ್ರಿಯಾಯಿತೆಂದರೆ ನಿದ್ರಿಸಬೇಕೆಂದು ಒತ್ತಾಯಿಸುತ್ತದೆ. ನಿದ್ರಿಸದ ದೇಹ ಅತ್ಯಂತ ದುರ್ಬಲವಾಗುತ್ತದೆ. ಆಹಾರವಲ್ಲದೇ ಅದೆಷ್ಟೋ ದಿನ ಬದುಕಬಹುದು ಆದರೆ ನಿದ್ರಿಸದೇ ಏಳೆಂಟು ದಿನ ಕಳೆದರೆ ಸಾಯುವ ಸಾಧ್ಯತೆ ಗರಿಷ್ಠ.

ಈ ನಿದ್ರಿಸಬೇಕೆಂಬುವ ಹಂಬಲದ ಹಿನ್ನೆಲೆಯ ಪ್ರಜ್ಞೆಯ ಸುತ್ತ ಅದೆಷ್ಟೋ ಈ ರೀತಿಯ ಚರ್ಚಾರ್ಹ ಪ್ರಶ್ನೆಗಳು ಹುಟ್ಟಿ ಕೊಳ್ಳುತ್ತವೆ. ಆದರೆ ನ್ಯೂಜರ್ಸಿಯ ಎಲ್ ಹಾರ್ಪಿನ್ ಯಾವತ್ತೂ ನಿದ್ರಿಸಲೇ ಇಲ್ಲ – ಆದರೂ 94 ವರ್ಷ ಬದುಕಿದ್ದ. ಅಮೆರಿಕನ್ ವಿಜ್ಞಾನಿಗಳ ಪ್ರಕಾರ ಆತನಿಗೆ ಏನೋ ಒಂದು ಸಮಸ್ಯೆಯಿತ್ತು. ಆದರೆ ಸ್ವ ಇಚ್ಛೆಯಿಂದ ನಿದ್ರಿಸದ ಅದೆಷ್ಟೋ ಸಂತರು ನಮ್ಮ ಭಾರತೀಯ ಇತಿಹಾಸದಲ್ಲಿದ್ದಾರೆ. ಭಾರತದವರೇ ಆದ ರಾಮ್ ಗೋಪಾಲ್ ಮಜುಂದಾರ್ ನಿದ್ರಿಸದ ಸಂತ ಎಂದೇ ಹೆಸರುವಾಸಿ. ಇದಕ್ಕೇನನ್ನುತ್ತೀರಿ? ಅಘೋರಿ ಬಾಬಾಗಳಲ್ಲಿ ಕೆಲವರು ಜೀವಮಾನವಿಡೀ ಒಂದೇ ಕಾಲಿನಲ್ಲಿ ನಿಲ್ಲುವವರು, ಒಂದು ಕೈ ಮೇಲೆತ್ತಿ ಕೊಂಡೇ ಇರುವವರು ಇತ್ಯಾದಿ.

ಅವರ ನಂಬಿಕೆ, ಉದ್ದೇಶ ಇವನ್ನೆಲ್ಲ ಬದಿಗಿಟ್ಟು ಒಮ್ಮೆ ವಿಚಾರ ಮಾಡಿ ನೋಡಿ. ದೇಹದ ಇರುವಿಕೆಯ ಪ್ರಜ್ಞೆ, ಸಂಧಿ ಪ್ರಜ್ಞೆ ಇವು ನಮ್ಮ ದೇಹವನ್ನು ಎಷ್ಟು ಬಾಗಿಸಬಹುದು ಎನ್ನುವುದನ್ನು ನಿಯಂತ್ರಿಸುತ್ತವೆ. ಈ ಪ್ರಜ್ಞೆಯಿಲ್ಲದಿದ್ದಲ್ಲಿ ಇಡೀ ದೇಹದಲ್ಲಿ ಒಂದೂ ಮೂಳೆ, ಸಂಧಿ ಸರಿಯಿರುತ್ತಿರಲಿಲ್ಲ. ಅಂತೆಯೇ ನಮ್ಮ ಮಾಂಸಖಂಡಗಳ ಮೇಲೆ ಸ್ವಲ್ಪ ಒತ್ತಡ ಬೀಳುತ್ತಿದ್ದಂತೆ ಕೈ ಕಾಲು ಸೋಲುವುದು ಸಹಜ ಅನುಭವ. ಆಗ ಘಾಸಿಯಾಗದಂತೆ ನಮ್ಮ ದೇಹ ಪ್ರತಿ ಕ್ರಿಯಿಸುತ್ತದೆ. ಆದರೆ ಈ ಅಘೋರಿ ಬಾಬಾ ಗಳು ಕೇವಲ ಮನೋ ನಿಗ್ರಹದಿಂದ ಈ ಪ್ರಜ್ಞೆಯನ್ನೇ ಮೀರಬಲ್ಲರು.

ಇವರೆಲ್ಲ ಮನುಷ್ಯ ಸಹಜ, ಜೀವಿ ಸಹಜ ಪ್ರಜ್ಞೆಯನ್ನು ಯಾವ ಹಂತಕ್ಕೆ ಹೋಗಿ ಮೀರಬಹುದು ಎನ್ನುವುದಕ್ಕೆ ನಮ್ಮೆದುರಿಗೇ ಇರುವ ಉದಾಹರಣೆಗಳು. ಈ ಎಲ್ಲವುದನ್ನು ನೋಡುವಾಗ ಯಾವುದೇ ಪೂರ್ವಜರ ಪವಾಡಗಳು, ಅತಿ ಮಾನುಷ ವ್ಯವಹಾರ ಗಳು ವಿಜ್ಞಾನಿಕ ಹಿನ್ನೆಲೆಯಲ್ಲಿ ಪ್ರಶ್ನಿಸಲು ಅಧೈರ್ಯವಾಗುತ್ತದೆ. ಧ್ಯಾನ ಸಮಾಧಿ, ಇಚ್ಚಾಮರಣ ಎನ್ನುವುದು ಅದ್ಯಾವುದೋ ತಾತಪ್ಪನ ಕಾಲದ ಕಟ್ಟುಕಥೆ ಎನ್ನುವವರಿದ್ದಾರೆ.

ಆದರೆ ಸ್ವ ಇಚ್ಛೆಯಿಂದ, ಮಲಗಿ ಜೀವ ಬಿಡುವ ಬೌದ್ಧ ಭಿಕ್ಷುಗಳ ವಿಡಿಯೋ ಇಂಟರ್ನೆಟ್ಟಿನ ತುಂಬೆ ತುಂಬಿಕೊಂಡಿವೆ. ಅವೇನು ಫೇಕ್ ವಿಡಿಯೊಗಳಲ್ಲ ! ರುಚಿಯ ಗ್ರಹಿಕೆಯೆನ್ನುವುದು ಇನ್ನೊಂದು ಪ್ರಜ್ಞೆ. ವಿಷವಲ್ಲದ್ದು ರುಚಿ, ದೇಹಕ್ಕೆ ಒಗ್ಗದ್ದು ಅಹಿತ ಎನ್ನಿಸಬೇಕು. ಆದರೆ ಗೋಬಿ ಮಂಚೂರಿ ಅದರ ರುಚಿಗಿಂತ ಮಿಗಿಲಾಗಿ ಅದರ ಕೆಂಬಣ್ಣ ಹೆಚ್ಚಿದಂತೆ, ಪರಿಮಳದಿಂದ ಹೆಚ್ಚಿಗೆ ಸ್ವಾದಿಷ್ಟವೆನ್ನಿಸುತ್ತದೆ.

ಇಲ್ಲಿ ರುಚಿಯನ್ನು ಕೇವಲ ನಾಲಿಗೆಯಷ್ಟೇ ಅಲ್ಲದೇ ಕಣ್ಣು ಮತ್ತು ಪರಿಮಳವನ್ನು ಗ್ರಹಿಸುವ ಪ್ರಜ್ಞೆ ನಿರ್ದೇಶಿಸುತ್ತದೆ. ನೆಗಡಿ ಯಾದಾಗ ಅಥವಾ ಕಣ್ಣು ಮುಚ್ಚಿಕೊಂಡು ತಿಂದರೆ ಅದೇ ಆಹಾರ ಅಷ್ಟು ರುಚಿಸುವುದಿಲ್ಲ. ಪ್ರಜ್ಞೆಗಳು ನಮ್ಮ ಇಡೀ ವ್ಯವಹಾರವನ್ನು ನಿರ್ದೇಶಿಸುತ್ತವೆ. ನಾವು ಸೇವಿಸುವ ಹಣ್ಣು, ತರಕಾರಿ ಸಹಜವಾಗಿ ಹಾಳಾಗಿರಬಾರದು, ಓರೆ ಕೋರೆ ಇರಬಾರದು ಎಂದು ಬಯಸುತ್ತೇವೆ. ಇದು ಮೂಲದಲ್ಲಿ ಆರೋಗ್ಯದೆಡೆಗಿನ ಜೀವ ಪ್ರಜ್ಞೆ. ಈ ಒಂದು ಪ್ರಜ್ಞೆ ನಾವು ಅಂಗಡಿಗೆ ಹೋಗಿ ತರಕಾರಿ ಆಯುವಾಗ ನಮ್ಮನ್ನು ನಿರ್ದೇಶಿಸುತ್ತದೆ.

ಈ ಪ್ರಜ್ಞೆಯೇ ನಾವು ಲೆಕ್ಕ ಮೀರಿ ಕೀಟನಾಶಕಗಳನ್ನು ಬಳಸುವುದಕ್ಕೂ ಕಾರಣವಾಗುತ್ತದೆ. ಬ್ಯಾಲೆ – ಸಮತೋಲನ
ಇನ್ನೊಂದು ಪ್ರಜ್ಞೆ. ಅದರ ಬಗ್ಗೆ ಹಿಂದೆ ಬರೆದಿದ್ದೆ. ನೀವು ಮೊಬೈಲ್ ನಲ್ಲಿರುವ ಒಂದಿಷ್ಟು ಫೋಟೋಗಳನ್ನು ತೆರೆದು ನೋಡಿ.
ಅಲ್ಲಿ ಅತ್ಯಂತ ಇಷ್ಟವಾಗುವ ಫೋಟೋ ಅಲ್ಲಿರುವ ಲೈನುಗಳಿಗೆ, ಹಿಂದಿನ ಆಗಸಕ್ಕೆ ಅಥವಾ ಇನ್ನೊಂದಕ್ಕೆ ಸಮತೋಲನ ದಲ್ಲಿದ್ದ zಗಿರುತ್ತದೆ. ಇದು ಸಮತೋಲನದ ಪ್ರಜ್ಞೆಯ ಮುಂದುವರಿದ ಭಾಗ. ಹೀಗೆ ಅದೆಷ್ಟೋ ಸುಪ್ತ ಪ್ರಜ್ಞೆಗಳು ನಮಗರಿ ವಿಲ್ಲದಂತೆ ನಮ್ಮನ್ನು ನಿತ್ಯ ನಿರ್ದೇಶಿಸುತ್ತವೆ.

ಪ್ರಜ್ಞೆಗಳನ್ನು ನಾವು ಪಂಚೇಂದ್ರಿಯಗಳ ಸಾಧ್ಯತೆ ಎಂದಷ್ಟೇ ಸೀಮಿತಗೊಳಿಸಿ ತಪ್ಪಾಗಿ ಅರ್ಥೈಸುವುದೇ ಯಾವತ್ತೂ ಮಾಡುವ ಪ್ರಮಾದ. ಪ್ರಜ್ಞೆಯ ಇರುವನ್ನು ಗ್ರಹಿಸುವುದನ್ನೇ ಟ್ಞoಜಿಟ್ಠoಛಿoo ಎಂದು ಇಂದಿನ ಆಧುನಿಕ ಜಗತ್ತು ಕರೆಯುವುದು. ಇದನ್ನು ಜಾಗೃತಗೊಳಿಸುವುದೇ ಸನಾತನ ಧರ್ಮದ ಎಲ್ಲ ಕಾರ್ಯಾಚರಣೆಗಳ, ಧ್ಯಾನದ ಕೆಲಸ. ಧ್ಯಾನವನ್ನು ಆ ಕಾರಣಕ್ಕೆ ಪರಮೋಚ್ಚ ಜಾಗೃತ, ಪ್ರಜ್ಞಾ ಸ್ಥಿತಿ ಎನ್ನುವುದು. ಸುಮ್ಮನೆ ಇದನ್ನೆಲ್ಲ ಬೊಗಳೆಯೆಂದು ಒಂದು ಕಡೆ ನಮ್ಮ ಜ್ಞಾನವನ್ನೇ ಅಸಡ್ಡೆ ಮಾಡು ತ್ತಿರುವಾಗ ಅತ್ತ ಪಾಶ್ಚಿಮಾತ್ಯ ವಿeನ ಮಾತ್ರ ಜೀವಮಯದಿಂದ ಕ್ರಮೇಣ ಪ್ರಾಣಮಯ, ಮನೋಮಯದತ್ತ ಹೊರಳುತ್ತಿದೆ.

ಇದನ್ನೆಲ್ಲ ಅವರು ಮೊದಲು ಒಪ್ಪಿದನಂತರ ನಾವು ಇನ್ನೊಮ್ಮೆ ಒಪ್ಪಿಕೊಳ್ಳುತ್ತೇವೆ ಬಿಡಿ. ಆಗ ಇದೆಲ್ಲ ನಮಗೇ ಗೊತ್ತಿದ್ದದ್ದೇ
ಇತ್ತು, ಇದೆಲ್ಲ ನಮ್ಮದೇ, ಚಕ್ರ, ಕುಂಡಲಿನಿ ಆವಿಷ್ಕರಿಸಿದ್ದೇ ನಾವು ಎಂದು ಹೇಳಿಕೊಂಡರಾಯಿತು.