Saturday, 30th November 2024

ಏರ್​ಪೋರ್ಟ್​​ನಲ್ಲಿ ಭದ್ರತಾ ಸಿಬ್ಬಂದಿ- ಸೇನಾಧಿಕಾರಿಗಳ ಜಗಳ

ಬೆಂಗಳೂರು: ಭಾರತೀಯ ಸೇನೆಯ ಇಬ್ಬರು ಅಧಿಕಾರಿಗಳು ಬೆಂಗಳೂರು ಏರ್​ಪೋರ್ಟ್​​ನಲ್ಲಿ ಭದ್ರತಾ ಸಿಬ್ಬಂದಿ ಮತ್ತು ಸೇವಾ ಸಿಬ್ಬಂದಿಯೊಂದಿಗೆ ಜಗಳ ತೆಗೆದು, ಉದ್ವಿಗ್ನತೆ ಸೃಷ್ಟಿಸಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​​​ನಲ್ಲಿ ಶುಕ್ರವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೇನಾಧಿಕಾರಿಗಳಾದ ಠಾಕೂರ್ ಬರುವಾರ್ ಮತ್ತು ಪಿಯೂಷ್ ರಜಪೂತ್ ಹೀಗೆ ಗಲಾಟೆ ಸೃಷ್ಟಿಸಿದ್ದರು.

ತಮ್ಮ ಕಾರನ್ನು ವಿಐಪಿ ಲೇನ್​​ ನಲ್ಲಿ ಬಿಡುವಂತೆ ಭದ್ರತಾ ಸಿಬ್ಬಂದಿಗೆ ಒತ್ತಾಯಿ ಸಿದ್ದಾರೆ. ಒಪ್ಪದಿದ್ದಾಗ ಕ್ಯಾತೆ ತೆಗೆದು, ಹೊಡೆದಿದ್ದಾರೆ. ಇವರಿಬ್ಬರನ್ನೂ ಬಂಧಿಸಲಾಗಿತ್ತು. ನಂತರ ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.

ಜಮ್ಮು-ಕಾಶ್ಮೀರದ ನೋಂದಣಿ ಸಂಖ್ಯೆ ಇರುವ ಕಾರಿನಲ್ಲಿ, ಸಿವಿಲ್​ ಉಡುಗೆಯಲ್ಲಿ (ಸಮವಸ್ತ್ರವಲ್ಲದ ಸಾದಾ ಉಡುಪು) ಬಂದಿದ್ದ ಇವರು ತಮ್ಮ ವಾಹನವನ್ನು ಒಮ್ಮೆಲೇ ವಿಐಪಿ ಲೇನ್​​ಗೆ ಬಂದಿದ್ದಾರೆ. ಆಗ ಅಲ್ಲಿದ್ದ ಖಾಸಗಿ ಸೆಕ್ಯೂರಿಟಿ ಗಾರ್ಡ್​ ಸೇನಾಧಿಕಾರಿ ಗಳನ್ನು ತಡೆದಿದ್ದಾನೆ.  ‘ನಮ್ಮನ್ನು ಯಾರು ಅಂದುಕೊಂಡೆ, ನಾವಿಬ್ಬರೂ ಸೇನಾಧಿಕಾರಿ ಗಳು. ನಮ್ಮನ್ನೂ ಈ ವಿಐಪಿ ಮಾರ್ಗದಲ್ಲಿಯೇ ಬಿಡಬೇಕು’ ಎಂದು ರೇಗಿದ್ದಾರೆ.

ಹಾಗಿದ್ದಾಗ್ಯೂ ಸೆಕ್ಯೂರಿಟಿ ಗಾರ್ಡ್​ ತನ್ನ ಪಟ್ಟು ಬಿಡಲಿಲ್ಲ. ಕೋಪಗೊಂಡ ಕ್ಯಾಪ್ಟನ್ ಬರುವಾರ್ ಮೊದಲು​ ಸೆಕ್ಯೂರಿಟಿ ಗಾರ್ಡ್​ಗೆ ಥಳಿಸಿದ್ದಾರೆ. ಏರ್​ಪೋರ್ಟ್​​ನಲ್ಲಿ ಇದ್ದ ಇನ್ನಿತರ ಸೆಕ್ಯೂರಿಟಿ ಸಿಬ್ಬಂದಿ ಈ ದೃಶ್ಯ ನೋಡಿ ಅಲ್ಲಿಗೆ ಓಡಿ ಬಂದಿದ್ದಾರೆ. ಆಗ ಸೇನಾಧಿಕಾರಿಗಳು ಅವರಿಗೂ ಹೊಡೆದಿದ್ದಾರೆ.