ಗುಬ್ಬಿ: ತಾಲೂಕು ಬಿದರೆ ಗ್ರಾಮದಲ್ಲಿ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆಗೆ ಚಾಲನೆ ನೀಡಲಾ ಯಿತು.
ಗುಬ್ಬಿ ಶಾಸಕ ಎಸ್ಆರ್ ಶ್ರೀನಿವಾಸ್ ಅವರಿಗೆ ಜೆಡಿಎಸ್ ಪಕ್ಷದ ವತಿಯಿಂದ ಆದ ಅನ್ಯಾಯದ ವಿರುದ್ಧ ಪಕ್ಷದ ಬೂತ್ ಮಟ್ಟದ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಲಾಗಿದೆ ಎಂದು ಮಾಜಿ ತಾಲೂಕು ಜೆಡಿಎಸ್ ಅಧ್ಯಕ್ಷ ಗುರು ರೇಣುಕಾ ರಾಧ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು 1983 ರಿಂದ ಜೆಡಿಎಸ್ ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ನಂತರ ಗುಬ್ಬಿ ತಾಲೂಕು ಅಧ್ಯಕ್ಷರಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ ದ್ದೇನೆ.
ಇತ್ತೀಚಿನ ರಾಜಕೀಯ ವಿದ್ಯಮಾನಗಳಿಂದ ಬೇಸತ್ತು ಪಕ್ಷದ ವತಿಯಿಂದ ಶಾಸಕರಿಗಾದ ಅನ್ಯಾಯವನ್ನು ಮನಗಂಡು ಶ್ರೀನಿವಾಸ್ ರವರನ್ನು ಬೆಂಬಲಿಸುವುದಾಗಿ ತಿಳಿಸಿದರು.
ಯುವ ಮುಖಂಡ ಕೆ ಆರ್ ವೆಂಕಟೇಶ್ ಮಾತನಾಡಿ ಪಕ್ಷದ ಎಲ್ಲಾ ಕಾರ್ಯಕರ್ತರು ಸಹ ಇಷ್ಟು ದಿನ ತಾಳ್ಮೆಯಿಂದ ಕಾದಿದ್ದಾದರೂ ಸಹ ಜಿಲ್ಲಾಧ್ಯಕ್ಷರಾಗಲಿ, ರಾಜ್ಯಾಧ್ಯಕ್ಷರಾಗಲಿ ಅಥವಾ ಪಕ್ಷದ ವರಿಷ್ಠರಾಗಲಿ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡದಿರುವುದು ಬೇಸರ ತಂದಿದ್ದು ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ರಾಜೀನಾಮೆ ಪರ್ವ ಮುಂದು ವರಿಯುವುದು ಎಂದು ತಿಳಿಸಿದರು.
ಮುಖಂಡರಾದ ಜುಂಜೇಗೌಡ ಮಾತನಾಡಿ, ಪ್ರತಿ ಶನಿವಾರ ಪ್ರತಿ ಗ್ರಾಮದಲ್ಲಿ ರಾಜೀನಾಮೆ ಪರ್ವ ಆರಂಭಿಸಲಾಗುವುದು ವಾಸಣ್ಣನವರಿಗೆ ತಾಲೂಕಿನಾದ್ಯಂತ ನಿಷ್ಠಾವಂತ ಕಾರ್ಯಕರ್ತರಿದ್ದು ಅಪಾರ ಅಭಿಮಾನಿ ಬಳಗ ಹೊಂದಿದ್ದು ಅವರ
ಮುಂದಿನ ನಡೆಯನ್ನು ಬೆಂಬಲಿಸುವುದಾಗಿ ತಿಳಿಸಿದರು.
ಪ್ರಪ್ರಥಮವಾಗಿ ರಾಜಿನಾಮೆ ಪರ್ವ ತಾಲೂಕಿನ ಬಿದರೆ ಗ್ರಾಮದಲ್ಲಿ ಪ್ರಾರಂಭವಾಗಿದ್ದು ಅನೇಕ ಮಹಿಳಾ ಕಾರ್ಯಕರ್ತರು ಸಹ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಾಜಿ ರಾವ್, ಕೆ ಆರ್ ವೆಂಕಟೇಶ್, ಜುಂಜೇಗೌಡ, ಯತೀಶ್, ಸುಮತಿರಾಜ್, ರಮೇಶ್, ಆದಿರಾಜ್, ಮೂರ್ತಣ್ಣ ಜಗದೀಶ್, ಶಿವಲಿಂಗಯ್ಯ, ಮೈಲಾರಯ್ಯ, ಮುಂತಾದವರಿದ್ದರು.