Thursday, 19th September 2024

ಬ್ರಾಹ್ಮಣರನ್ನು ಬೈಯ್ಯಲು ಜಯವೀರ ಮೇಲಿಂದ ಉದುರಿದ್ದಾರೆಯೇ?

ಅಭಿಮತ

ಪಿ. ವಿಷ್ಣುಶರ್ಮಾ

ಶ್ರೀಜಯವೀರ ವಿಕ್ರಮ ಸಂಪತ್‌ಗೌಡರ ‘ ಪ್ರಶ್ನೆೆ ಮಾಡಲು ಬ್ರಾಾಹ್ಮಣರೇನು ಮೇಲಿಂದ ಇಳಿದು ಬಂದವರಾ?’ ಲೇಖನದ ಕುರಿತು ಒಂದು ಪ್ರತಿಕ್ರಿಿಯೆ.
ಜಯವೀರ ಅವರು ಈ ಹಿಂದೆಯೇ ರಘುನಾಥ್ ಗುರೂಜಿ ಅವರ ವಿವಾದಕ್ಕೆೆ ಸಂಬಂಧಿಸಿದಂತೆ ವಿಶ್ವವಾಣಿಯಲ್ಲಿ ಸಾಕಷ್ಟು ಖಾರವಾಗಿಯೇ ಪ್ರತಿಕ್ರಿಿಯಿಸಿದ್ದರು. ಅದನ್ನು ಬ್ರಾಾಹ್ಮಣರೆಲ್ಲರೂ ಉತ್ತಮ ಭಾವನೆಯಿಂದ ಆರೋಗ್ಯಕರ ದೃಷ್ಟಿಿಯಿಂದಲೇ ಸ್ವೀಕರಿಸಿದ್ದರು. ಅಷ್ಟು ಸಾಕಾಗಿತ್ತು. ಮತ್ತೆೆ ಮತ್ತೆೆ ಜಯವೀರ ಅವರು ತಾವೇನೋ ಬ್ರಾಾಹ್ಮಣ ಸಮುದಾಯವನ್ನು ಉದ್ಧರಿಸಲು ಮೇಲಿಂದ ಉದುರಿದ ಅವತಾರ ಪುರುಷರಂತೆ ಇಡೀ ಬ್ರಾಾಹ್ಮಣ ಜಾತಿಯನ್ನೇ ಅವಹೇಳನ ಮಾಡುತ್ತಾಾ ಉಪದೇಶಾಮೃತ ನೀಡುವ ಪ್ರಯತ್ನ ಮಾಡಿದ್ದಾಾರೆ.

ಜಯವೀರ ಅವರು ತಾವು ಮಾತ್ರ ನಿಷ್ಠುರರು, ಪ್ರಾಾಮಾಣಿಕರು ಮತ್ತು ಸಮಾಜೋದ್ಧಾಾರಕರು ಎಂಬ ಭಾವನೆಯಿಂದ ಬ್ರಾಾಹ್ಮಣರನ್ನು ಹೀಗಳೆಯಲು ಗುತ್ತಿಿಗೆ ತೆಗೆದುಕೊಂಡವರಂತೆ ತಮ್ಮ ಅಕ್ಷರ ಕತ್ತಿಿಯನ್ನು ಝಳಪಿಸುತ್ತಾಾ ಎಷ್ಟು ಬೈದರೂ ಬೈಸಿಕೊಂಡು ಸುಮ್ಮನಿರುತ್ತಾಾರೆ ಎಂದು ಪುಂಖಾನುಪುಂಖವಾಗಿ ಬಡಪಾಯಿ ಬ್ರಾಾಹ್ಮಣರ ಮೇಲೆ ಸವಾರಿ ಮಾಡಲು ಹೊರಟಿರುವುದು ಅವರಿಗೆ ಶೋಭೆ ತರುವ ಸಂಗತಿಯಲ್ಲ. ಇಷ್ಟಕ್ಕೂ ಜಯವೀರ ಅವರು ಅಷ್ಟುದ್ದಕ್ಕೂ ಬರೆದಿರುವ ಲೇಖನದಲ್ಲಿ ಇರುವ ಹೊಸ ವಿಷಯವಾದರೂ ಏನು?

ಇದು ಶೇ.99 ಬ್ರಾಾಹ್ಮಣರಿಗೆ ಗೊತ್ತಿಿರುವ ಸಂಗತಿಯೇ. ಅದನ್ನು ಜಯವೀರ ಅವರಿಂದ ಕಲಿಯುವ ಕರ್ಮವಾದರೂ ಬ್ರಾಾಹ್ಮಣರಿಗೆ ಏನಿದೆ? ಇಷ್ಟಕ್ಕೂ ಯಾರೋ ಒಂದಷ್ಟು ಜನ ಮಾಡಿದ ತಪ್ಪಿಿಗೆ ಇಡೀ ಸಮುದಾಯದ ಜನ್ಮವನ್ನೇ ಜಾಲಾಡುವುದು ಎಷ್ಟು ಸರಿ? ಬ್ರಾಾಹ್ಮಣರಿಗೆ ಜ್ಞಾಾನೋದಯ ದಯಪಾಲಿಸಲು ಹೊರಟು ಜಯವೀರರು ಒಂದು ಸಮುದಾಯವನ್ನು ಸಾರ್ವಜನಿಕವಾಗಿ ಅವಹೇಳನ ಮಾಡಿ ತಮ್ಮ ಯಾವುದೋ ಸುಪ್ತ ಆಕ್ರೋೋಶವನ್ನು ತೀರಿಸಿಕೊಂಡಿದ್ದಾಾರಷ್ಟೇ. ಬಹುತೇಕ ಬ್ರಾಾಹ್ಮಣರಾರೂ ನಾವೇ ಶ್ರೇಷ್ಠರು, ಜಗತ್ತಿಿನಲ್ಲಿ ನಮಗಿಂತ ಶ್ರೇಷ್ಠವಾದವರು ಯಾರೂ ಇಲ್ಲ, ನಾವೇ ಜಗತ್ತಿಿನ ಜ್ಞಾಾನದ ಸೃಷ್ಟಿಿಕರ್ತರು, ನಾವೇ ಜಗತ್ತಿಿಗೆ ಎಲ್ಲವನ್ನೂ ನೀಡಿದವರು ಎಂಬ ಹೆಗ್ಗಳಿಕೆಯಿಂದ ಬೀಗುವುದಿಲ್ಲ. ಬ್ರಾಾಹ್ಮಣರಿಗೆ ಸ್ವಾಾಭಿಮಾನ, ಆತ್ಮವಿಶ್ವಾಾಸ ಇರುತ್ತದೆ ನಿಜ. ಆದರೆ, ಯಾರೋ ಗರುಡಗಂಬದ ಬಳಿ ಹರಟೆ ಹೊಡೆಯುತ್ತಾಾ ಕುಳಿತ ನಾಲ್ಕು ಜನರನ್ನೇ ಇಡೀ ಬ್ರಾಾಹ್ಮಣ ಸಮುದಾಯವನ್ನು ಪ್ರತಿನಿಧಿಸುವ ಬೃಹಸ್ಪತಿಗಳು ಎಂದು ಜಯವೀರನಂತಹವರು ಪತ್ತೆೆ ಮಾಡಿ ಇಡೀ ಬ್ರಾಾಹ್ಮಣರೇ ದುರಹಂಕಾರಿಗಳು ಎಂದು ಬಿಂಬಿಸಹೊರಟಿರುವುದು ತೀರಾ ವಿಷಾದದ ಸಂಗತಿ.

ಈಗ ಬ್ರಾಾಹ್ಮಣರು ಯಾರ ವಿದ್ಯೆೆ ಕಿತ್ತುಕೊಳ್ಳುತ್ತಿಿದ್ದಾಾರೆ? ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ಏನು ಶೋಷಣೆ ಮಾಡುತ್ತಿಿದ್ದಾಾರೆ? ವೃತ್ತಿಿಶಿಕ್ಷಣದ ಒಂದು ಸೀಟು, ಒಂದು ಉದ್ಯೋೋಗ ದೊರಕಿಸಿಕೊಳ್ಳಲು ಅವರು ಹರಸಾಹಸ ಮಾಡಬೇಕಿದೆ. ಬದುಕಿನ ಭದ್ರತೆ ಕಂಡುಕೊಳ್ಳಲು ಹೆಣಗಾಡಬೇಕಿದೆ. ಇದು ಒಂದೆಡೆಯಾದರೆ ಸ್ಥಿಿತಿವಂತ ಬ್ರಾಾಹ್ಮಣರು ಶಿಕ್ಷಣ ಕ್ಷೇತ್ರಕ್ಕೆೆ ನೀಡಿರುವ ಕೊಡುಗೆ ಯಾವ ಇತರೆ ವರ್ಗಕ್ಕೂ ಕಮ್ಮಿಿ ಇಲ್ಲ. ಹಿಂದೆ ಅಕ್ಷರದ ಅವಶ್ಯಕತೆ ಇದ್ದದ್ದು ಬ್ರಾಾಹ್ಮಣರಿಗೆ ಮಾತ್ರ. ಅದು ಅವರ ಬದುಕಿನ ಮೂಲಾಧಾರವಾಗಿತ್ತು. ಬೇರೆಯವರಲ್ಲಿ ಕೌಶಲವಿತ್ತು. ಆ ಕೌಶಲದಿಂದ ಅವರು ಬದುಕಿದ್ದರು. ಅವರಿಗೆ ಅಕ್ಷರದ ಅಗತ್ಯ ಇದೆ ಎಂದು ಅವರಿಗೆ ಅನಿಸಿರಲಿಲ್ಲ. ಸಾವಿರಾರು ವರ್ಷಗಳ ಹಿಂದೆ ಮೆರೆದದ್ದು ಕೌಶಲ, ಅಕ್ಷರ ಅಲ್ಲ. ಗುಡಿ ಕಟ್ಟಿಿದವರು, ಶಿಲೆ ಕೆತ್ತಿಿದವರು, ಮಡಿಕೆ ಮಾಡಿದವರು, ಹೀಗೆ ಕೌಶಲ್ಯವಿದ್ದವರು ಜಗದ್ವಿಿಖ್ಯಾಾತರಾದರು. ಬ್ರಾಾಹ್ಮಣರ ತಾಳೆಗರಿ ಗಂಟು ಗೆದ್ದಲು ತಿಂದು ಎಲ್ಲಿ ಮಾಯವಾಯಿತೋ ದೇವರಿಗೇ ಗೊತ್ತು?. ಆದರೆ ಜಕಣಾಚಾರಿ ಅಕ್ಷರ ಬಲ್ಲವರಿಗೆ, ಅಕ್ಷರ ಗೊತ್ತಿಿಲ್ಲದವರಿಗೆ, ಹೀಗೆ ಎಲ್ಲರಿಗೂ ಗೊತ್ತು. ವಸ್ತುಸ್ಥಿಿತಿ ಹೀಗಿರುವಾಗ ಯಾವುದೋ ಕಾಲದಲ್ಲಿ ಬ್ರಾಾಹ್ಮಣರು ಅಕ್ಷರ ಕಿತ್ತುಕೊಂಡಿದ್ದರು ಎಂದು ವಿಷಕಾರುವುದು ಈಗ ಎಷ್ಟು ಸಮಂಜಸ?

ಈಗ ಬ್ರಾಾಹ್ಮಣರು ಯಾರ ಆಸ್ತಿಿ ಕಿತ್ತುಕೊಂಡಿದ್ದಾಾರೆ? ಯಾರು ಈಗ ಬ್ರಾಾಹ್ಮಣರಿಗಾಗಿ ಉತ್ತು, ಬಿತ್ತಿಿ ಕಾಳು ತಂದು ಮನೆಗೆ ಹಾಕಿ ಪೋಷಿಸುತ್ತಿಿದ್ದಾಾರೆ. ನೂರಾರು ಬ್ರಾಾಹ್ಮಣರು ಉಂಬಳವಾಗಿ ಬಂದಿದ್ದ ಜಮೀನನ್ನು ಕಳೆದುಕೊಂಡು ಹೊಟ್ಟೆೆ ಪಾಡಿಗಾಗಿ ಊರೇ ಬಿಟ್ಟು ಹೋಗಿದ್ದಾಾರೆ ಎಂಬ ಸತ್ಯವನ್ನು ತಿಳಿಯವ ಪ್ರಯತ್ನ ಏಕೆ ಮಾಡುತ್ತಿಿಲ್ಲ? ಅಥವಾ ಸತ್ಯ ಗೊತ್ತಿಿದ್ದೂ ಆತ್ಮವಂಚನೆಯ ಸೋಗಲಾಡಿತನವೇ? ಸಾಮಾಜಿಕವಾಗಿ ಬ್ರಾಾಹ್ಮಣರು ಅಸ್ಪಶ್ಯತೆಯನ್ನೇನೂ ಆಚರಿಸುತ್ತಿಿಲ್ಲ. ಯಾವ ಜಾತಿಯನ್ನೂ ಅವಹೇಳನ ಮಾಡುತ್ತಿಿಲ್ಲ. ನಿಂದನೆ ಮಾಡುತ್ತಿಿಲ್ಲ. ಮಡಿವಂತಿಕೆಯ ಪ್ರದರ್ಶನ ಮಾಡುತ್ತಿಿಲ್ಲ. ತಮ್ಮ ಶ್ರೇಷ್ಠತೆಯ ಶಂಕ ಊದಿಕೊಳ್ಳಲು ಪುರಸೊತ್ತೂ ಇಲ್ಲ. ಯಾರ ಅನ್ನವನ್ನೂ ಕಿತ್ತುಕೊಂಡಿಲ್ಲ.

ಬಾಹ್ಮಣರ ಬಗ್ಗೆೆ ಸಂಶೋಧನೆಯನ್ನೇ ಮಾಡಿದಂತೆ ಮೇಲಿಂದ ಮೇಲೆ ನೀತಿ ಸಂಹಿತೆಯ ಫರ್ಮಾನು ಹೊರಡಿಸುವ ಜಯವೀರರಿಗೆ ಇವೆಲ್ಲಾಾ ಗೊತ್ತಿಿಲ್ಲವೇ?
ಬ್ರಾಾಹ್ಮಣರಿಗೆ ಅವರದೇ ಆದ ಒಂದು ದೇವರಿಲ್ಲ ಎಂದು ಜಯವೀರರು ಟೀಕಿಸಿದ್ದಾಾರೆ. ಅದು ಬ್ರಾಾಹ್ಮಣರ ಹೆಗ್ಗಳಿಕೆ, ದೊಡ್ಡತನ. ಇಡೀ ಮನುಕುಲಕ್ಕೇ ಅಕ್ಷರ ವಂಚಿಸಿದವರು ಎಂಬ ಆರೋಪ ಹೊತ್ತಿಿರುವ ಬ್ರಾಾಹ್ಮಣರಿಗೆ ತಮಗೊಂದು ದೇವರನ್ನು ಸೃಷ್ಟಿಿಸಿಕೊಳ್ಳುವ ಜಾಣ್ಮೆೆ, ಬುದ್ದಿವಂತಿಕೆ ಇರಲಿಲ್ಲವೇ?ಅದನ್ನು ಬೇರೆಯವರ ಮೇಲೆ ಬಲವಂತವಾಗಿ ಹೇರಿ ಆ ದೇವರನ್ನೇ ಪೂಜೆ ಮಾಡುವಂತೆ ಮಾಡುವ ಮಾರ್ಗಗಳು ಇರಲಿಲ್ಲವೇ? ಇತ್ತು, ಆದರೆ ಅವರು ಅಷ್ಟು ಸಂಕುಚಿತ ಮನೋಭಾವದವರಾಗಿರಲಿಲ್ಲ. ಬೇರೆ ವರ್ಗದ ದೇವರುಗಳನ್ನೇ ತಮ್ಮ ದೇವರು ಅಂದುಕೊಂಡರು. ಕ್ಷತ್ರಿಿಯ ರಾಜರನ್ನೇ ಮರ್ಯಾದಾ ಪುರುಷ ಎಂದು ಸ್ತುತಿಸಿದರು. ಗೊಲ್ಲ ಶ್ರೇಷ್ಠನನ್ನು ಹೆಗಲ ಮೇಲೆತ್ತಿಿಕೊಂಡು ಮೆರೆದರು. ಸಂಸ್ಕಾಾರವಂತ, ಧರ್ಮಶೀಲ ಗುರುಗಳನ್ನೇ ಜಾತಿ, ಕುಲ ನೋಡದೆ ತಮ್ಮ ಕುಲಸಂಜಾತರೆಂದು ಬಗೆದರು. ‘ಸರ್ವೇ ಜನಾಃ ಸುಖಿನೋ ಭವಂತು’ ಎಂದು ಹಾರೈಸಿದರು. ಇದು ಬ್ರಾಾಹ್ಮಣರ ಶ್ರೇಷ್ಠತೆ ಅಲ್ಲವೇ?

ಹೀಗೇ ಹೇಳುತ್ತಾಾ ಹೋದರೆ ಜಯವೀರರು ಎತ್ತಿಿರುವ ಎಲ್ಲಾಾ ಆಕ್ಷೇಪಗಳಿಗೂ ಸಮರ್ಥವಾಗಿ ಉತ್ತರ ನೀಡುವಷ್ಟು ಜ್ಞಾಾನ, ಚೈತನ್ಯ ಮತ್ತು ವಸ್ತುಸ್ಥಿಿತಿಯ ಅರಿವು ಬ್ರಾಾಹ್ಮಣರಿಗಿದೆ. ಎಲ್ಲಾಾ ಜಾತಿಗಳ ಒಳಗೆ ಒಂದು ಆಂತರಿಕ ಭಿನ್ನಮತ, ಅಸಮಧಾನ ಇದ್ದದ್ದೇ. ಇದು ಒಕ್ಕಲಿಗ, ಲಿಂಗಾಯಿತ, ಹಿಂದುಳಿದ ವರ್ಗ, ಹೀಗೆ ಯಾವುದೇ ಜಾತಿ, ಧರ್ಮವನ್ನೂ ಬಿಟ್ಟದ್ದಿಲ್ಲ. ವ್ಯವಸ್ಥೆೆಯೊಳಗೆ ಇದ್ದುಕೊಂಡು ಅದನ್ನು ಸರಿ ಮಾಡುವುದು ಜಾಣತನ. ರಘುನಾಥ್ ಗುರೂಜಿಯವರು ನನ್ನ ಮಟ್ಟಿಿಗೆ ಹೇಳುವುದಾದರೆ ಯಾವ ತಪ್ಪೂೂ ಮಾಡಿಲ್ಲ. ಅವರು ಕ್ಷಮೆ ಕೇಳುವ ಅವಶ್ಯಕತೆ ಖಂಡಿತಾ ಇಲ್ಲ. ಅದು ಎಲ್ಲಾಾ ಮುಗಿದ ಮೇಲೆ ಮತ್ತೆೆ ಪತ್ರಿಿಕೆಯಲ್ಲಿ ತುಂಬಾ ಆರ್ದ್ರರಾಗಿ, ದಯನೀಯವಾಗಿ ಕ್ಷಮೆ ಕೇಳಿದ್ದು ನಿಜಕ್ಕೂ ಬೇಸರದ ಸಂಗತಿ. ಆದರೆ ಗುರೂಜಿ ಮಾಡಿದ್ದರಲ್ಲಿ ಒಂದು ತಪ್ಪಿಿದೆ. ಬ್ರಾಾಹ್ಮಣ ಅಥವಾ ವೈದಿಕ ಸಮಾಜದ ಓರೆಕೊರೆಗಳನ್ನು ತಿದ್ದುವುದರಲ್ಲಿ ತಪ್ಪಿಿಲ್ಲ. ಆದರೆ ಅದನ್ನೂ ಅಂತಹ ಬ್ರಾಾಹ್ಮಣ ವೇದಿಕೆಗಳಲ್ಲಿ, ಸಮಾಜದ ಸಂಘಟನೆಗಳಲ್ಲಿ ಅವರು ಧ್ವನಿ ಎತ್ತಬೇಕಾಗಿತ್ತು. ಅದು ಬಿಟ್ಟು ಅವರು ಆ ವಿಷಯವನ್ನು ಪತ್ರಿಿಕೆಯಲ್ಲಿ ಬಹಿರಂಗವಾಗಿ ಬರೆಯುವ ಅವಶ್ಯಕತೆ ಏನಿತ್ತು? ಎಂಬುದು ಅರ್ಥವಾಗುತ್ತಿಿಲ್ಲ. ಹೀಗೆ ಗುರೂಜಿ ಬರೆದರೆ, ಅಥವಾ ಜಯವೀರರು ವೀರಾವೇಶದಿಂದ ಬೊಬ್ಬಿಿಟ್ಟರೆ ಸುಧಾರಣೆ ಆದೀತಾ? ಅದು ಒಂದು ಸಮುದಾಯದ ಭಾವನೆಗಳನ್ನು ಮತ್ತಷ್ಟು ಕೆರಳಿಸಿದಂತಾಗುತ್ತದೆ ಅಷ್ಟೇ. ಬ್ರಾಾಹ್ಮಣರನ್ನು ಬೈದು ಬ್ರಾಾಹ್ಮಣ್ಯದ ಟ್ಯಾಾಗ್ ಹಾಕಿಕೊಳ್ಳಬಹುದೇ ಹೊರತು ಕಲಾಂರಂತೆ, ಅಂಬೇಡ್ಕರ್ ಅವರಂತೆ ಜಯವೀರರು ಒರಿಜನಲ್ ಬ್ರಾಾಹ್ಮಣರಾಗಲು ಸಾಧ್ಯವಿಲ್ಲ ಎಂಬುದನ್ನು ಮರೆಯಬಾರದು.

Leave a Reply

Your email address will not be published. Required fields are marked *