Sunday, 1st December 2024

Hari Parak Column: ದರ್ಶನ್‌ ಗೆ ʼಬ್ಯಾಕ್‌ʼ ಟು ʼಬ್ಯಾಕ್‌ʼ ಸಮಸ್ಯೆ

ತುಂಟರಗಾಳಿ

ಸಿನಿಗನ್ನಡ
ನಮ್ಮ ಸಿನಿಮಾಗಳಲ್ಲಿ ಮಾಸ್ ಸಿನಿಮಾಸ್ ಜಾಸ್ತಿ ಫೇಮಸ್ ಅಂತ ಎಲ್ಲರಿಗೂ ಗೊತ್ತು. ಆದರೆ ಆಗಾಗ ಕ್ಲಾಸ್ ಸಿನಿಮಾಗಳೂ ಬರ್ತಾ
ಇರ್ತವೆ. ಬಂದ ಕ್ಲಾಸ್ ಸಿನಿಮಾಗಳೆಲ್ಲ ಕ್ಲಾಸಿಕ್ ಅನ್ನಿಸಿಕೊಳ್ಳಲ್ಲ. ಆದರೆ ಕಳೆದ ವಾರ ಬಿಡುಗಡೆಯಾದ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಹಲವು ಪ್ರಶ್ನೆಗಳನ್ನು ಎತ್ತುತ್ತೆ. ಅದಕ್ಕೆ ಮನುಷ್ಯತ್ವದ ಉತ್ತರವನ್ನೂ ಕೊಡುತ್ತೆ. ‘ನಾನು ಬಾಲ್ಕನಿ ಕ್ಲಾಸ್ ಪ್ರೇಕ್ಷಕರಿಗೂ ಸಿನಿಮಾ ಮಾಡಲ್ಲ, ಗಾಂಧಿ ಕ್ಲಾಸಿಗೂ ಸಿನಿಮಾ ಮಾಡಲ್ಲ’ ಅಂತ ಮಿಡಲ್ ಕ್ಲಾಸ್ ಕಥೆ ಹೇಳಿದ್ದಾರೆ ನಿರ್ದೇಶಕ ನಾಗರಾಜ್ ಸೋಮಯಾಜಿ. ಅದನ್ನು ಹೇಳೋಕೆ
ಅವರು ತಗೊಂಡಿರೋದು 2 ಗಂಟೆ. ಆದರೆ ಈ 2 ಗಂಟೆಯಲ್ಲಿ ಅವರು ಈ ಜೀವನ ಅಂದ್ರೆ ಮೂರು ದಿನದ ಬಾಳು ಅನ್ನೋದನ್ನು ತುಂಬಾ ಸಮರ್ಥವಾಗಿ ಹೇಳಿ‌ದ್ದಾರೆ.

ಸಿನಿಮಾದ ಸ್ಟಾರ್ ಕಾಸ್ಟ್ ದೊಡ್ಡದಾಗಿದ್ದರೂ ಸಿನಿಮಾವನ್ನು ‌ಮೀರಿ ಬೆಳೆಯುವ ಸ್ಟಾರ್‌ಗಳು ಇಲ್ಲಿಲ್ಲ. ಇಂಥ ಅಪ್ಪಟ ನಟ-ನಟಿಯರನ್ನು ಬಳಸಿ ಕೊಂಡು ಸಿಂಪಲ್ ಆಗೊಂದು ಲೈಫ್ ಸ್ಟೋರಿ ಹೇಳಿದ್ದಾರೆ ನಾಗರಾಜ್ ಸೋಮಯಾಜಿ. ಮಧ್ಯಮ ವರ್ಗದ ಕುಟುಂಬದ ಮಕ್ಕಳು, ಆದರೆ ಅವರಲ್ಲಿರೋ ದೊಡ್ಡ ದೊಡ್ಡ ಆಸೆಗಳು, ಅವರಲ್ಲಿ ಇಲ್ಲದೇ ಇರೋ ಸಣ್ಣ ಬುದ್ಧಿ, ಈ ಸಿನಿಮಾದ ಹೈಲೈಟ್. ಹಾಸಿ ಹೊದ್ದುಕೊಳ್ಳುವಷ್ಟು ಸಮಸ್ಯೆ ಗಳು ಇದ್ದರೂ, ಹಾಸಿ ಹೊದ್ದುಕೊಳ್ಳುವಷ್ಟು ಇದ್ದರೆ ಸಾಕು ಅನ್ನೋ ಜೀವನ ಮೀರಿ ಬೆಳೆಯುವ ಅವರ ಆಶಯಗಳ ಮಧ್ಯೆ ಸಿನಿಮಾ ಬೆಳೆಯುತ್ತೆ. ಮರ್ಯಾದೆ ಪ್ರಶ್ನೆಯ ಕಥೆ ಒಂದು ಹಂತದಲ್ಲಿ ಸೇಡಿನ ಪ್ರಶ್ನೆಯಾಗಿ ಚೇಂಜ್ ಆದ್ರೂ ಅದನ್ನ ರೆಗ್ಯುಲರ್ ಕಮರ್ಷಿಯಲ್ ರೇಂಜ್‌ಗೆ ತಗೊಂಡು ಹೋಗದೆ ಮನುಷ್ಯತ್ವದ ಉತ್ತರ ಕೊಟ್ಟೇ ಸಿನಿಮಾ ಮುಗಿಸಿದ್ದಾರೆ ನಿರ್ದೇಶಕರು ಅನ್ನೋದು ಈ ಸಿನಿಮಾದ ಹೆಗ್ಗಳಿಕೆ.

ಈ ಸಿನಿಮಾ ಸಹಜವಾಗಿದೆ ಅನ್ನಿಸೋಕೆ ಅದೂ ಒಂದು ಕಾರಣ. ಮಧ್ಯಮ ವರ್ಗದ ಕಥೆ ಅಂದ್ರೆ ಅದು ಮುಗ್ಗಲು ಬಂದಿರೋ ಹಳೇ ವಸ್ತು
ಅನ್ನಿಸಬಹುದು. ಆದರೆ ಮಗ್ಗಲು ಬದಲಾಯಿಸಿದಾಗಲೊಮ್ಮೆ ಜೀವನ ಹೊಸ ಆಯಾಮಕ್ಕೆ ತೆರೆದುಕೊಳ್ಳುವ ಈ ವರ್ಗದ ಕಥೆಯನ್ನು, ಸ್ವರ್ಗಕ್ಕೆ
ಹತ್ತಿರ ಆಗೋದು ಮನುಷ್ಯತ್ವದಿಂದ ಮಾತ್ರ ಅಂತ ನಿರೂಪಿಸಲಾಗಿದ್ದೆ.

ಲೂಸ್‌ ಟಾಕ್-‌ ದರ್ಶನ್‌ ತೂಗುದೀಪ

ಏನ್ ದರ್ಶನ್ ಅವರೇ ನಿಮ್ಮ ಬ್ಯಾಕ್ ಸಮಸ್ಯೆ ಹೇಗಿದೆ?

  • ಅಯ್ಯೋ, ಬ್ಯಾಕ್ ಟು ಬ್ಯಾಕ್ ಸಮಸ್ಯೆಗಳನ್ನು ನೋಡಿ ನೋಡಿ, ಈ ಬ್ಯಾಕ್ ಸಮಸ್ಯೆ ಕಾಮನ್ ಆಗೋಗಿದೆ ಬಿಡಿ.
  • ನಿಜ ಬಿಡಿ. ಮತ್ತೆ ನೀವು ಜೈಲಿಗೆ ಕಮ್‌ಬ್ಯಾಕ್ ಮಾಡೋದು ಯಾವಾಗ?
  • ನನ್ ‘ಬಾಡಿ’ಗೆ ಸಮಸ್ಯೆ ಆಗಿದೆ ಅಂತ ಆಸ್ಪತ್ರೆ ಅನ್ನೋ ‘ಬಾಡಿಗೆ’ ಗೂಡಿಗೆ ಬಂದಿದ್ದೀನಿ. ವಾಪಸ್ ಹೋಗ್ಲೇಬೇಕಲ್ಲ.
  • ಅದ್ಸರಿ. ಆದ್ರೆ, ನೀವು ಬೆನ್ನುನೋವು ಅಂತ ಸುಮ್ನೆ ನಾಟಕ ಮಾಡ್ತಾ ಇದ್ದೀರಾ ಅಂತ ಹೇಳ್ತಾರೆ ನಿಜಾನಾ?
  • ಅದ್ಯಾಕ್ರೀ ಬೆನ್ನುನೋವು ಯಾರಿಗೆ ಬೇಕಾದರೂ ಬರಬಹುದು, ‘ಬೆನ್’ ಸ್ಟೋಕ್ಸ್‌ ಗೂ ಬರುತ್ತೆ.
  • ಸರಿ, ಆಸ್ಪತ್ರೆ ಜೀವನ ಹೆಂಗಿದೆ? ಡಾಕ್ಟ್ರು ಏನಂದ್ರು?
  • ಜೈಲ್ ಥರ ಇಲ್ಲೂ, ನಂಗೆ ಅದ್ ಬೇಕು, ಇದ್ ಬೇಕು ಅಂತ ಡಿಮ್ಯಾಂಡ್ ಮಾಡಂಗಿಲ್ಲ, ನಾವ್ ಕೊಟ್ಟಿದ್ ತಗೊಂಡು ಸುಮ್ನೆ ಇರ್ಬೇಕು ಅಂದ್ರು.
  • ನೀವು ಆಸ್ಪತ್ರೆಗೆ ಬರೋ ಬದಲು, ಬಿಗ್ ಬಾಸ್‌ಗೆ ಹೋಗಿದ್ದಿದ್ರೆ ನೂರು ದಿನ ಆರಾಮಾಗಿರ್ಬೋದಿತ್ತಲ್ಲ?
  • ಅಯ್ಯೋ ಸುಮ್ನೆ ಇರ್ರಿ, ಆ ಬಿಗ್ ಬಾಸ್‌ಗಿಂತ ಈ ಜೈಲೇ ಎಷ್ಟೋ ವಾಸಿ, ಅಲ್ಲಿ ಸುದೀಪ್ ಬೇರೆ ಇರ್ತಾನೆ.

  • (ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್
ಚರ್ಚ್ ಒಂದರಲ್ಲಿ ಕೆಲಸ‌ ಮಾಡುತ್ತಿದ್ದ 18 ವರ್ಷದ ಹುಡುಗ ತನ್ನ ಒಂದು ತಪ್ಪನ್ನು ಕನ್ ಫೆಸ್ ಮಾಡಿಕೊಳ್ಳಲು ಚರ್ಚಿಗೆ ಹೋದ. ಫಾದರ್ ಅವರನ್ನು ಕಂಡು “ಫಾದರ್, ನಾನು ಒಂದು ಹುಡುಗಿಯ ಜತೆ ದೈಹಿಕ ಸಂಬಂಧ ಬೆಳೆಸಿದ್ದೇನೆ. ನನಗೆ ನನ್ನ ತಪ್ಪಿನ ಅರಿವಾಗಿದೆ. ಈಗ ನಾನು ಅದನ್ನು ಕನ್-ಸ್ ಮಾಡಿಕೊಳ್ಳುತ್ತಿದ್ದೇನೆ” ಅಂದ. ಕನ್ ಫ್ಯೂಷನ್ ಫಾರ್ಮಾಲಿಟಿಗಳನ್ನೆ ಮುಗಿಸುವ ಮುಂಚೆ ಫಾದರ್ “ಸರಿ ಕಣಪ್ಪಾ, ನಿನ್ನ ಕನ್
ಫ್ಯೂಷನ್‌ಗೆ ವ್ಯವಸ್ಥೆ ಮಾಡುತ್ತೇನೆ. ಆದರೆ ನೀನು ಸಂಬಂಧ ಬೆಳೆಸಿದ ಆ ಹುಡುಗಿಯ ಹೆಸರೇನು?” ಅಂತ ಕೇಳಿದರು. ಅದಕ್ಕೆ ಹುಡುಗ “ಸಾರಿ ಫಾದರ್, ನಾನು ಅದನ್ನು ಡಿಸ್‌ಕ್ಲೋಸ್ ಮಾಡೊಕಾಗಲ್ಲ” ಅಂದ. ಫಾದರ್ ಕೇಳುತ್ತಲೇ ಹೋದರು, ಹುಡುಗ ಉತ್ತರಿಸುತ್ತಲೇ ಹೋದ.

“ಅದ್ಸರಿ, ನಮ್ಮ ಏರಿಯಾದಲ್ಲಿ ಅಂಥ ಹುಡುಗಿಯರು ಯಾರಿದ್ದಾರೆ?”
“ಸಾರಿ ಫಾ ದರ್, ಅದನ್ನು ಡಿಸ್ ಕ್ಲೋಸ್ ಮಾಡೋಕಾಗಲ್ಲ” “ಚರ್ಚ್ ಹಿಂದಿನ ರೋಡಿನ ತೆರೆಸಾನಾ?”
“ಸಾರಿ ಫಾದರ್, ಅದನ್ನು ಡಿಸ್ ಕ್ಲೋಸ್ ಮಾಡೋಕಾಗಲ್ಲ” “ಲೈಬ್ರೆರಿಯನ್ ಕ್ಯಾಥಿನಾ?”
“ಸಾರಿ ಫಾದರ್, ಅದನ್ನು ಡಿಸ್ ಕ್ಲೋಸ್ ಮಾಡೋಕಾಗಲ್ಲ” “ಫ್ಲವರ್ ಶಾಪ್‌ನಲ್ಲಿ ಕೆಲಸ ಮಾಡೋ ರೋಸಿ?”
“ಸಾರಿ ಫಾದರ್, ಅದನ್ನು ಡಿಸ್ ಕ್ಲೋಸ್ ಮಾಡೋಕಾಗಲ್ಲ”
ಸರಿ, ಫಾದರ್‌ಗೆ ಇವನು ಬಾಯಿ ಬಿಡಲ್ಲ ಅಂತ ಗೊತ್ತಾಯ್ತು. ಕನ್ ಫೆಷನ್ ಮುಗಿಸಿ, “ನೀನು ಯಾರ ಹೆಸರನ್ನೂ ಹೇಳಲಿಲ್ಲ. ಅದನ್ನು ನಾನು
ಮೆಚ್ಚಿದ್ದೇನೆ. ಆದರೆ ತಪ್ಪಿಗೆ ಶಿಕ್ಷೆ ಆಗಲೇಬೇಕು. ಹಾಗಾಗಿ ನೀನು 4 ವಾರಗಳ ಕಾಲ ಚರ್ಚಿಗೆ ಬರುವಂತಿಲ್ಲ” ಅಂತ ಹೇಳಿ ಕಳುಹಿಸಿದ.
ಹೊರಗೆ ಬಂದ ಹುಡುಗನನ್ನು ಅವನ ಸ್ನೇಹಿತ ಕೇಳಿದ, “ನೋಡಿದ್ಯಾ ಸತ್ಯ ಹೇಳಿ ಏನ್ ಉಪಯೋಗ? ಅದರಿಂದ ನಿಂಗೇನ್ ಸಿಕ್ತು?”. ಅದಕ್ಕೆ ಕಿಲಾಡಿ ಹುಡುಗ ತುಂಟದನಿಯಲ್ಲಿ ಹೇಳಿದ “4 ವಾರಗಳ ರಜೆ ಮತ್ತು ನನ್ನಂಥ ಹುಡುಗರ ಬಲೆಗೆ ಬೀಳುವಂಥ 3 ಹುಡುಗಿಯರ ಡೀಟೇಲ್ಸ್”.‌

ಲೈನ್‌ ಮ್ಯಾನ್
ಇರೋವರ್ಗೂ ತುಂಬಾ ಚೆನ್ನಾಗಿದ್ದು ಬಿಟ್ ಹೋಗೋ ಟೈಮಲ್ಲಿ ಕಿರಿಕ್ ಮಾಡಿ ತಮ್ಮ ಸಣ್ಣ ಬುದ್ಧಿ ತೋರಿಸೋರು
೧. ಗರ್ಲ್ ಫ್ರೆಂಡು
೨. ಮನೆ ಓನರ್ರು

ಕುತ್ತಿಗೆವರೆಗೂ ಇರೋ ನದಿ ನೀರಲ್ಲಿ ಮುಳುಗಿದ್ದ ಜಿರಾಫೆ ಹಂದಿಗೆ ಹೇಳಿತಂತೆ, ‘ಜಿಗಿಯೋ ಲೇ, ಇದೇನ್ ಆಳ ಇಲ್ಲ’ ಅಂತ

  • ಉಪದೇಶ ಯಾರು ಕೊಡ್ತಾರೆ ಅನ್ನೋದು ಮುಖ್ಯ
    ಫೇಸ್‌ಬುಕ್ ಕಾಮೆಂಟ್‌ಗಳಿಗೆ ಎರಡೆರಡು ಸಲ ರಿಯಾಕ್ಟ್ ಮಾಡಿದ್ರೆ ಮಾತ್ರ ಆಗ್ತಿದೆ ಅಂತ ಮೋದಿಗೆ ದೂರು ಕೊಟ್ಟನಂತೆ
  • One nation, One reaction
    ಧೂಮಪಾನದಿಂದ ಆರೋಗ್ಯ ಕೆಡಿಸಿಕೊಂಡವರನ್ನು ಏನೆನ್ನಬಹುದು?
  • ‘ಹೋಮ’ ಸಿಕ್
    ಸಿಗರೇಟು ಸೇದುವ
    ಹುಡುಗಿಯರನ್ನು ಏನಂತಾರೆ?
  • ಹೋಮ ‘ಚಿಕ್’
    ಚಿಕ್ಕವಯಸ್ಸಿನ ಹುಡುಗರು ಸಿಗರೇಟು ಸೇದುವುದನ್ನು ಏನಂತಾರೆ?
  • ‘ಮಾಸ್ಟರ್’ ಸ್ಮೋಕ್
    ಸಿಗರೇಟು ಸೇದಿ ಸತ್ತವರ ಶ್ರದ್ಧಾಂಜಲಿ ಕಾರ್ಯಕ್ರಮ
  • ಸ್ಮೋಕಾಚರಣೆ
    ಒಂದು ಡೌಟು
  • ನೋ ಸ್ಮೋಕಿಂಗ್ ಅಂದ್ರೆ ‘ಕಿಂಗ್’ ಸಿಗರೇಟು ಸೇದಬಾರದು ಅಂತ ಅರ್ಥನಾ?
    ಇನ್ನೊಂದ್ ಡೌಟು
  • ನಿಂಗೆ ‘ಇಗೋ’ ಜಾಸ್ತಿ ಅಂತ ಹೇಳಿದಾಗ, ‘ಹೌದು’ ಅಂತ ಒಪ್ಪಿಕೊಳ್ಳೋನಿಗೆ ಇಗೋ ಇದೆ ಅಂತ ಅರ್ಥನಾ? ಇಲ್ಲ ಅಂತ ಅರ್ಥನಾ?
    ಕಾವೇರಿ ನದಿ ‘ದಡ’ದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಅನ್ನು ಏನಂತಾರೆ ?
  • ಕಾವೇರಿ ‘ಬ್ಯಾಂಕ್’
    ವಿದ್ಯೆ, ಕೆಲಸ ಇಲ್ಲದೆ ಮನೆಗೆ ದೊಡ್ಡ ತಲೆನೋವಾಗಿರುವ ಮಗ
  • ಅಮೃತಾಂಜನೀಪುತ್ರ

ಇದನ್ನೂ ಓದಿ: Hari Parak Column: ರಿಯಾನ್‌ ಪರಾಗ್‌ Pan India Star