Saturday, 30th November 2024

ಹಸಿರುಮನೆ ಪರಿಣಾಮಕ್ಕೆ ಕಾನೂನನ್ನು ತರುತ್ತಾರಾ ?

ಅಭಿಮತ

ಪ್ರಕಾಶ ಹೆಗಡೆ

ಭೂಮಿಯ ವಾತಾವರಣದಲ್ಲಿ ಶಾಖವನ್ನು ಸೆರೆಹಿಡಿಯುವ ಹಸಿರುಮನೆ ಪರಿಣಾಮಕ್ಕೆ ಇಂಗಾಲದ ಡೈಆಕ್ಸೈಡ್ ಹಾಗೂ ಮೀಥೇನ್ ಪ್ರಾಥಮಿಕ ಕೊಡುಗೆದಾರ ಎಂದು ನಮ್ಮೆಲ್ಲರಿಗೂ ತಿಳಿದ ವಿಷಯ. ಅಂತೆಯೇ ಅತಿಯಾದ ಇಂಗಾಲವನ್ನು ಮತ್ತು ಮೀಥೇನ್ ಅನ್ನು ವಾತಾವರಣದಲ್ಲಿ ಹೊರ ಸೂಸುವುದರಿಂದ ಜಾಗತಿಕ ತಾಪಮಾನ ಏರಿಕೆಯಾಗಿ ಹವಾಮಾನದಲ್ಲಿ ಸೂರ್ಯನ ಶಾಖ ಹಾಗೂ ವಿಚಿತ್ರ ಮಳೆಯ ವೈಪರೀತ್ಯಗಳು ಉಂಟಾಗಿ ಅವುಗಳ ಸಂಬಂಽತ ದುಷ್ಪರಿಣಾಮಗಳನ್ನು ಜಗತ್ತು ಅನುಭವಿಸುತ್ತಿದೆ.

ಹಾಗಾಗಿ ಇಂಗಾಲದ ತೆರಿಗೆಯನ್ನು ವಿಽಸಿ ಸರಕಾರಗಳು ಈ ಪ್ರಕ್ರಿಯೆಗಳಿಗೆ ಅಂಕುಶ ಹಾಕಲು ಪ್ರಯತ್ನಿಸುತ್ತಿವೆ. ಕಲ್ಲಿದ್ದಲು, ತೈಲ, ಗ್ಯಾಸೋಲಿನ್ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಇಂಗಾಲ ಆಧಾರಿತ ಇಂಧನಗಳನ್ನು ಸುಡುವ ಕಂಪನಿಗಳ ಮೇಲೆ ವಿಽಸಲಾಗುವ ಶುಲ್ಕವೇ ಈ ತೆರಿಗೆಯಾಗಿದೆ. ಈ ಇಂಧನ ಗಳ ಸುಡುವಿಕೆಯು ಇಂಗಾಲದ ಡೈಆಕ್ಸೈಡ್ ಮತ್ತು ಮೀಥೇನ್‌ಗಳಂತಹ ಹಸಿರುಮನೆ ಅನಿಲಗಳನ್ನು ಉತ್ಪಾದಿಸುತ್ತದೆ. ಈ ಅನಿಲಗಳು ವಾತಾವರಣ ವನ್ನು ಬಿಸಿಯಾಗಿಸಿ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತದೆ. ಇಂಗಾಲದ ತೆರಿಗೆ ಮಾಲಿನ್ಯದ ಮೇಲಿನ ತೆರಿಗೆಯ ಒಂದು ರೂಪವಾಗಿದೆ. ಇದನ್ನು ಸರಕಾರಗಳು ಪರೋಕ್ಷ ತೆರಿಗೆಯಾಗಿ ಸಂಗ್ರಹಿಸುತ್ತವೆ.

ಪರೋಕ್ಷ ತೆರಿಗೆಯು ಸರಕುಗಳ ಖರೀದಿಯ ಮೇಲೆ ವಿಽಸಲಾಗುವ ಜಿಎಸ್‌ಟಿ ಅಥವಾ ಕಸ್ಟಮ್ಸ ಸುಂಕದಂತೆಯೇ ಇರುತ್ತದೆ. ಇದರಲ್ಲಿ ಇಂಗಾಲದ ಹೊರ ಸೂಸುವಿಕೆಯ ಪ್ರಮಾಣ/ಸಂಖ್ಯೆಯ ಆಧಾರದ ಮೇಲೆ ಪಳೆಯುಳಿಕೆ ಇಂಧನಗಳ ಉತ್ಪಾದನೆ, ವಿತರಣೆ ಮತ್ತು ಬಳಕೆಯ ಮೇಲೆ ಸುಂಕವನ್ನು ವಿಧಿಸ ಲಾಗುತ್ತದೆ. ಈ ತೆರಿಗೆಯು ಸಂಬಂಧಿಸಿದ ಸರಕುಗಳ ಮಾರಾಟದ ಬೆಲೆ ಹೆಚ್ಚಿಸಿ, ಅತಿಯಾದ ಇಂಗಾಲದ ಹೊರಸೂಸುವಿಕೆ ಇಂಧನಗಳ ಬೇಡಿಕೆಯನ್ನು ಕಡಿಮೆ ಮಾಡುತ್ತದೆ.

ಅರ್ಥಾತ್, ಹೆಚ್ಚಿನ ಇಂಗಾಲದ ಹೊರಸೂಸುವಿಕೆಗೆ ಕಾರಣವಾದ ಕಲ್ಲಿದ್ದಲು, ಪೆಟ್ರೋಲ್ ಹಾಗೂ ನ್ಯಾಚುರಲ್ ಗ್ಯಾಸ್ ಬಳಕೆಯನ್ನು ಕಡಿಮೆ ಮಾಡಲು ಪ್ರಚೋದಿಸುತ್ತವೆ. ಮತ್ತು ನೈಸರ್ಗಿಕ ಅನಿಲದಂತಹ ಕಡಿಮೆ ಇಂಗಾಲದ ಹೊರಸೂ ಸುವಿಕೆ ಇಂಧನಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ. ಅವುಗಳೆಂದರೆ – ಪವನ ಶಕ್ತಿ, ಸೌರ ಶಕ್ತಿ, ತರಂಗ ಶಕ್ತಿಯಂತಹ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ.

೧೯೯೦ರಲ್ಲಿ ಫಿನ್‌ಲ್ಯಾಂಡ್ ಇಂಗಾಲದ ತೆರಿಗೆಯನ್ನು ಪರಿಚಯಿಸಿದ ಮೊದಲ ದೇಶವಾಯಿತು. ಫಾಸ್ಸಿಲ್ ಇಂಧ ನಗಳ ಬಳಸುವಿಕೆಯ ಮೇಲೆ ಈ ತೆರಿಗೆ ವಿಽಸಲಾಗುತ್ತದೆ. ಇದಾದ ಕೆಲವೇ ದಿನಗಳಲ್ಲಿ ಇಂಗ್ಲೆಂಡ್ ಮತ್ತು ಸ್ವೀಡನ್ ಇಂಗಾಲದ ತೆರಿಗೆಯನ್ನು ಪರಿಚಯಿಸಿದವು. ಈಗ ಜಗತ್ತಿನ ಮೂವತೈದು ದೇಶಗಳು ಇಂಗಾಲದ ತೆರಿಗೆಯನ್ನು ತಮ್ಮ ದೇಶಗಳಲ್ಲಿ ಸಂಗ್ರಹಣೆ ಮಾಡುತ್ತಿವೆ. ಭಾರತವು ಕಲ್ಲಿದ್ದಲಿನ ಆಮದಿನ ಮೇಲೆ ಪ್ರತಿ ಮೆಟ್ರಿಕ್ ಟನ್‌ಗೆ ೪೦೦
ರು. ಇಂಗಾಲದ ತೆರಿಗೆಯನ್ನು ವಿಧಿಸುತ್ತದೆ. ಜಾಗತಿಕ ತಾಪಮಾನ ಏರಿಕೆಯನ್ನು ಎದುರಿಸಲು ಅಂತಾರಾಷ್ಟ್ರೀಯ ಕ್ರಮಕ್ಕೆ ಅಡಿಪಾಯ ಹಾಕುವ ೨೦೧೫ರ ಪ್ಯಾರಿಸ್ ಒಪ್ಪಂದದಂತೆ ದೇಶಗಳು ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಪ್ರತಿಜ್ಞೆ ಮಾಡಿವೆ.

ಇಲ್ಲಿಯವರೆಗೆ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶದ (ಯುಎನ್‌ಎಫ್ ಸಿಸಿಸಿ) ಪ್ರತಿಜ್ಞೆಗೆ ಜಗತ್ತಿನ ೧೯೫ ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಪ್ಯಾರಿಸ್ ಒಪ್ಪಂದ ದೀರ್ಘಾವಧಿಯ ತಾಪಮಾನದ ಏರಿಕೆ ಮೇಲೆ ಕ್ರಮ ಕೈಗೊಳ್ಳುವ ಗುರಿಯನ್ನು ಹೊಂದಿದೆ. ಇದು ಜಾಗತಿಕ ಮೇಲ್ಮೈ ತಾಪಮಾನದ
ಏರಿಕೆಯನ್ನು ಕೈಗಾರಿಕಾ-ಪೂರ್ವ ಮಟ್ಟಕ್ಕಿಂತ ೨ ಡಿಗ್ರಿ ಸೆಲ್ಸಿಯಸ್ (೩.೬ ಡಿಗ್ರಿ -ರನ್‌ಹೀಟ) ಗಿಂತ ಕಡಿಮೆ ಪ್ರಮಾಣವನ್ನು ತಲುಪುವ ಉದ್ದೇಶ ಹೊಂದಿದೆ. ೨೧ನೇ ಶತಮಾನದ ಮಧ್ಯದ ವೇಳೆಗೆ ನಿವ್ವಳ ಶೂನ್ಯವನ್ನು ತಲುಪಬೇಕು ಎಂದು ಪ್ರತಿಜ್ಞೆ ಮಾಡಿವೆ.

ಈ ನಿಟ್ಟಿನಲ್ಲಿ ದೇಶಗಳು ಇಂಗಾಲ ಹಾಗೂ ಮೀಥೇನ್ ಹೊರಸೂಸುವಿಕೆ ಮೂಲಗಳನ್ನು ಕಂಡುಕೊಂಡು ಅವುಗಳ ಉತ್ಪಾದನೆ ಕಡಿತಗೊಳಿಸಲು ವಿವಿಧ ರೀತಿಯ ನಿರ್ಬಂಧಗಳು ಮತ್ತು ನಿಯಂತ್ರಣಗಳನ್ನು ತಮ್ಮ ದೇಶಗಳ ಕಾನೂನಿನ ಚೌಕಟ್ಟಿನಲ್ಲಿ ಜಾರಿಗೊಳಿಸುತ್ತಿವೆ. ವಿಚಿತ್ರವೆನಿಸಿದರೂ ಸತ್ಯ. ನಮಗೆ ತಿಳಿದಿರುವಂತೆ ಡೆನ್ಮಾರ್ಕ್ ಜಾನುವಾರು ಉತ್ಪಾದನೆಗೆ ಹೆಸರುವಾಸಿಯಾಗಿದೆ. ಖ್ಯಾತಿಯೊಂದಿಗೆ ಜಾನುವಾರಗಳಿಂದ ಪರಿಸರಕ್ಕೆ ಧಕ್ಕೆ ತರುವ ನಕಾರಾತ್ಮಕ ಮುಖವೂ ತೋರಿ ಬರುತ್ತದೆ.

ಜಾನುವಾರುಗಳಿಂದ ಹೊರಬರುವ ಮೀಥೇನ್ ಅನಿಲವೇ ಈ ಇನ್ನೊಂದು ಮುಖ. ಡೆನ್ಮಾರ್ಕ್ ದೇಶದ ರೈತರು ಹಸಿರುಮನೆ ಅನಿಲವನ್ನು ಹೊರ ಸೂಸುವ ತಮ್ಮ ಜಾನುವಾರುಗಳು, ಕುರಿಗಳು ಮತ್ತು ಹಂದಿಗಳ ಮೇಲೆ ೨೦೩೦ ರಿಂದ ಸರಕಾರಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಮೀಥೇನ್ ಅನಿಲಗಳ ಹೊರಸೂಸುವಿಕೆಗೆ ಕಾರಣವಾಗುವ ಜಾನುವಾರುಗಳ ವ್ಯವಹಾರವನ್ನು ಮಾಡುವ ರೈತರನ್ನು ಗುರಿಯಾಗಿಸಿಕೊಂಡಿರುವುದರಿಂದ ತೆರಿಗೆ ವಿಧಿಸಿದ ವಿಶ್ವದ ಮೊದಲ ದೇಶವಾಗಿದೆ. ಹೋದ ವರ್ಷ, ೨೦೨೫ರಲ್ಲಿ ಜಾರಿಗೆ ಬರುವಂತೆ ನ್ಯೂಜಿಲೆಂಡ್ ಇದೇ ರೀತಿಯ ಕಾನೂನನ್ನು ಜಾರಿಗೆ ತಂದಿತ್ತು. ಆದರೆ ರೈತರ ಟೀಕೆ ಮತ್ತು ಇತ್ತೀಚಿನ ಸರಕಾರ ಬದಲಾವಣೆಯಿಂದಾಗಿ ಈ ಕಾಯಿದೆಯನ್ನು ಹಿಂಪಡೆಯಲಾಗಿದೆ.

ಇಂಗಾಲದ ಡೈಆಕ್ಸೈಡ್ ಸಾಮಾನ್ಯವಾಗಿ ಹವಾಮಾನ ಬದಲಾವಣೆಯಲ್ಲಿ ಹೆಚ್ಚಿನ ಗಮನವನ್ನು ಪಡೆಯುತ್ತದೆಯಾದರೂ, ಮೀಥೇನ್ ಒಂದು ಕಾಲಾವಧಿಯಲ್ಲಿ ಇಂಗಾಲಕ್ಕಿಂತ ಹೆಚ್ಚು ಶಾಖವನ್ನು ಸೆರೆಹಿಡಿಯುತ್ತದೆ. ಯುಎಸ್ ನ್ಯಾಷನಲ್ ಓಷಿಯಾನಿಕ್ ಅಟ್ಮಾಸಿಯರಿಕ್ ಅಡ್ಮಿನಿಸ್ಟ್ರೇಷನ್‌ನ ಪ್ರಕಾರ, ಮೀಥೇನ್ ಹೊರಸೂಸುವಿಕೆಯನ್ನು ನಿಯಂತ್ರಿಸಲು ನಾವು ಇಂಗಾಲಕ್ಕಿಂತ ಹೆಚ್ಚಿನ ಗಮನ ಹರಿಸಬೇಕಾಗಿದೆ. ಮನುಷ್ಯರ ಚಟುವಟಿಕೆಗಳಿಂದ ಉಂಟಾಗುವ ಹೊರಸೂಸುವಿಕೆಯ ಸುಮಾರು ಶೇ.೩೨ ಪ್ರತಿಶತದಷ್ಟು ಭಾಗವು ಜಾನುವಾರಗಳಿಂದ ಉಂಟಾಗುತ್ತದೆ ಎಂಬುದು ಆತಂಕದ ವಿಷಯ. ಅನೇಕ ದೇಶಗಳು ಸದ್ಯದ ಇದೇ ದಿಶೆಯಲ್ಲಿ ಕಾಯಿದೆಗಳನ್ನು ಜಾರಿಗೊಳಿಸಬಹುದು.

ಇಂಗಾಲ ಮತ್ತು ಮೀಥೇನ್ ತಯಾರಿಕೆಯಲ್ಲಿ ಅನಿಯಂತ್ರಿತ ಕೃಷಿ ಚಟುವಟಿಕೆಗಳೂ ಕಾರಣವೆಂದರೆ ಆಶ್ಚರ್ಯ ವಾಗಬಹುದು ಪ್ರಸ್ತುತ ಸಂಭವಿಸು ತ್ತಿರುವ ಹೆಚ್ಚಿನ ಪರಿಸರ ನಾಶಕ್ಕೆ ಪ್ರಾಣಿ ಕೃಷಿ ಉದ್ಯಮವು ಪ್ರಮುಖ ಕಾರಣವಾಗಿದೆ. ಅನೇಕ ದೇಶಗಳಲ್ಲಿ, ಭಾರತವೂ ಸೇರಿದಂತೆ, ತೆರಿಗೆ ಪ್ರೋತ್ಸಾಹಕ ನಿಯಮಗಳು ಕೃಷಿಗೆ ಸಂಬಂಧಿತ ಚಟುವಟುಕೆಗಳಲ್ಲಿ ಹೆಚ್ಚು ಹೂಡಿಕೆ ಮಾಡಲು ಕಾರಣವಾಗಿದೆ. ಈ ಹಾನಿಕಾರಕ ಪರಿಣಾಮಗಳು ಅತಿಯಾದ ಮೇಯಿಸುವಿಕೆ, ಆವಾಸಸ್ಥಾನದ ನಷ್ಟ, ಅತಿಯಾದ ಮೀನುಗಾರಿಕೆಯಂತಹ ಹೆಚ್ಚಿದ ಚಟುವಟಿಕೆಗಳಿಂದ ಸಂಭವಿಸುತ್ತವೆ.

ಒಂದು ವಿಶ್ವಾಸಾರ್ಹ ವರದಿಯ ಪ್ರಕಾರ, ಮಾನವ ಬಳಕೆಗಾಗಿ ಜಾನುವಾರುಗಳನ್ನು ಬೆಳೆಸುವುದು ಒಟ್ಟು ಜಾಗತಿಕ ಹಸಿರುಮನೆ ಅನಿಲ ಹೊರ ಸೂಸುವಿಕೆಯ ಸುಮಾರು ಶೇ.೧೫ ಪ್ರತಿಶತವನ್ನು ಉತ್ಪಾದಿಸುತ್ತದೆ. ಇದು ಒಟ್ಟು ಎಲ್ಲ ಸಾರಿಗೆ ವಾಹನಗಳ ಹೊರಸೂಸುವಿಕೆಗಳಿಗಿಂತ ಹೆಚ್ಚಾಗಿದೆ ಹಾಗೂ ಸುಮಾರು ಶೇ.೭೦ ಪ್ರತಿಶತದಷ್ಟು ಕೃಷಿ ಭೂಮಿಯನ್ನು ಬಳಸುತ್ತದೆ. ಇದು ಅರಣ್ಯನಾಶ, ಜೀವವೈವಿಧ್ಯತೆಯ ನಷ್ಟ ಮತ್ತು ಜಲ ಮಾಲಿನ್ಯಕ್ಕೆ ಕಾರಣವಾಗಿದೆ. ಒಂದು ಪೌಂಡ್ ಗೋಮಾಂಸವನ್ನು ಸಂಸ್ಕರಿಸಲು ೨,೫೦೦ ಗ್ಯಾಲನ್ ನೀರು ಬೇಕಾಗುತ್ತದೆ. ಮೊಟ್ಟೆಗೆ ೪೭೭ ಗ್ಯಾಲನ್ ನೀರು ಮತ್ತು ಚೀಸ್ ತಯಾರಿಸಲು ಸುಮಾರು ೯೦೦ ಗ್ಯಾಲನ್ ನೀರು ಬೇಕಾಗುತ್ತದೆ.

ನಮ್ಮ ಮಾಂಸ ಮತ್ತು ಹೈನು ಉತ್ಪಾದನೆಯನ್ನು ನಿಲ್ಲಿಸುವುದರಿಂದ ಹಸಿರುಮನೆ ಅನಿಲ ಹೊರಸೂಸುವಿಕೆಯ ಹೆಚ್ಚಳವನ್ನು ೩೦ ವರ್ಷಗಳವರೆಗೆ
ತಡೆಹಿಡಿಯಬಹುದು ಎಂದು ಹೊಸ ಅಧ್ಯಯನವು ಸೂಚಿಸುತ್ತದೆ. ಮೌಲ್ಯವರ್ಧನೆಗಿಂತ ಹೆಚ್ಚಿನ ಹಾನಿಯನ್ನು ಹೊಂದಿರುವ ಪ್ರಾಣಿ ಉತ್ಪಾದನೆ ಮತ್ತು ಕೃಷಿಗೀಗ ಕಡಿವಾಣ ಹಾಕಬೇಕಾಗಿದೆ. ನಾವು ಮಾಡಬೇಕಾಗಿರುವುದು ಇಷ್ಟೇ. ಮಾಂಸ ಮತ್ತು ಹೈನುಗಾರಿಕೆಗೆ ಪರ್ಯಾಯವಾದ ಆಹಾರ ಪದ್ಧತಿಯನ್ನು ಅನುಸರಿಸುವುದು. ಅಂದರೆ ಸಸ್ಯ ಆಧಾರಿತ ಆಹಾರ ವ್ಯವಸ್ಥೆಗೆ ಹೊಂದಿಕೊಳ್ಳುವುದು. ಭಾರತದಲ್ಲಿ ಈ ದಿಕ್ಕಿನಲ್ಲಿ ಹೇಗೆ ಕಾನೂನು ಗಳನ್ನು ಜಾರಿಗೊಳಿಸುತ್ತಾರೆನ್ನುವುದು ಕುತೂಹಲಕರ ವಿಷಯ.

(ಲೇಖಕರು: ಹವ್ಯಾಸಿ ಬರಹಗಾರರು ಮತ್ತು
ಚಾರ್ಟಡ್ ಅಕೌಟಂಟ್)