Saturday, 14th December 2024

ಹಾರ್‌ಸಿಬಿ- ಮುಂದುವರಿದ ಅಧ್ಯಾಯ

ತುಂಟರಗಾಳಿ

ಸಿನಿಗನ್ನಡ

ಇತ್ತೀಚೆಗೆ ಕೆಲವರು ಸಿನಿಮಾ ಆಡಿಷನ್ ಗೆ ಅಂತ ಕರೆದು, ಅಲ್ಲಿಗೆ ಅವಕಾಶಕ್ಕಾಗಿ ಬರುವರನ್ನು ಬಕ್ರಾ ಮಾಡುತ್ತಿರುವ ಘಟನೆಗಳು ವರದಿಯಾಗಿವೆ. ಹಾಗೆ ಸಿನಿಮಾದಲ್ಲಿ ನಟಿಸುವ ಅವಕಾಶಕ್ಕೆ ಅಂತ ಬಂದವರ ಬಳಿ, ‘ನೀವು ಕಲಾವಿದರ ಸಂಘದ ಕಾರ್ಡ್ ಮಾಡಿಸಿಕೊಳ್ಳಬೇಕು. ಅದಕ್ಕೆ ಇಷ್ಟು ಖರ್ಚಾಗುತ್ತೆ, ಅದೆಲ್ಲಾ ನಾವೇ ಮಾಡಿಸಿಕೊಡ್ತೀವಿ’ ಅಂತ ದುಡ್ಡು ಪೀಕಿಸುತ್ತಿರೋ ಇವರನ್ನು ನೋಡಿದ ಮೇಲೆ ಯಂಡಮೂರಿ ವೀರೇಂದ್ರನಾಥ್ ಅವರು ‘ದುಡ್ಡು ಮಾಡುವುದು ಹೇಗೆ?’ ಎಂಬ ತಮ್ಮ ಪುಸ್ತಕದಲ್ಲಿ ಬರೆದ ಒಂದು ವಿಷಯ ನೆನಪಾಯಿತು.

ಯಂಡಮೂರಿ ಇದನ್ನ ಎಷ್ಟು ಜಾಣ್ಮೆಯಿಂದ ಬರೆದಿದ್ದಾರೆ ಅಂದ್ರೆ, ಯಾರೂ ಈ ರೀತಿ ಮೋಸ ಮಾಡುವವರ ಮೇಲೆ ಕೇಸು ಹಾಕುವಂತಿಲ್ಲ. ಆ ಪ್ಲ್ಯಾನ್ ಏನಪ್ಪಾ ಅಂದ್ರೆ, ನಾವು ಸಿನಿಮಾ ಮಾಡ್ತಾ ಇದ್ದೀವಿ, ಕಲಾವಿದರು ಬೇಕಾಗಿದ್ದಾರೆ ಅಂತ ಕಾಲ್ ಮಾಡೋದು. ಅಲ್ಲಿಗೆ ಬರುವವರಿಗೆಲ್ಲ, ನಿಮಗೆ ನಮ್ಮ ಸಿನಿಮಾದಲ್ಲಿ ಅಭಿನಯಿಸೋಕೆ ತರಬೇತಿ ಕೊಡ್ತೀವಿ, ತರಬೇತಿ ಮುಗಿದ ಮೇಲೆ ನಾವು ಸಿನಿಮಾ ಮಾಡುವಾಗ ನಿಮ್ಮನ್ನ ಕರೆದು ೧೦೦ ಪರ್ಸೆಂಟ್ ಅವಕಾಶ ಕೊಡುತ್ತೇವೆ ಅಂತ ಅಗ್ರಿಮೆಂಟ್ ಮಾಡಿ ಕೊಡ್ತೀವಿ.

ಆದ್ರೆ ತರಬೇತಿಗೆ ಅಂತ ನೀವು ೨೫ ಸಾವಿರ ರುಪಾಯಿ ಕೊಡಬೇಕು ಅಂತ ಎಲ್ಲರಿಂದ ೨೫ ಸಾವಿರ ರುಪಾಯಿ ತಗೊಂಡು, ಅದರಲ್ಲಿ ಒಂದೆರಡು ಸಾವಿರ ಖರ್ಚು ಮಾಡಿ, ಯಾವುದೋ ಕೆಲಸಕ್ಕೆ ಬಾರದ ಕೆಲವು ತರಬೇತಿ ಕೊಟ್ಟಂತೆ ಮಾಡಿ ಕಳಿಸೋದು. ಇವರ ಪ್ಲ್ಯಾನ್ ಏನಪ್ಪಾ ಅಂದ್ರೆ ಕಥೆ ಅಲ್ಲಿಗೇ ಮುಗೀತು. ಅವರು ಯಾವತ್ತೂ ಸಿನಿಮಾ ಮಾಡೋದೇ ಇಲ್ಲ. ಅವರು ಅಗ್ರಿಮೆಂಟ್
ನಲ್ಲಿ ಹೇಳಿರೋದು ‘ನಾವು ಸಿನಿಮಾ ಮಾಡುವಾಗ ೧೦೦ ಪಸೆಂಟ್ ನಿಮ್ಮನ್ನು ಕರೆದು ಅವಕಾಶ ಕೊಡ್ತೀವಿ’ ಅಂತ. ಸಿನಿಮಾ ಮಾಡೇ ಮಾಡ್ತೀವಿ ಅಂತೇನೂ ಹೇಳಿಲ್ಲ. ಅಲ್ಲಿಗೆ ಅವರು ಸಿನಿಮಾ ಮಾಡಲ್ಲ, ಇವರಿಗೆ ಅವಕಾಶ ಸಿಗಲ್ಲ. ಆದರೆ, ಅವರಿಗೆ ಮಾತ್ರ
ಪ್ರತಿಯೊಬ್ಬರಿಂದ ಕಮ್ಮಿ ಅಂದ್ರೂ ೨೦ ಸಾವಿರ ರುಪಾಯಿ ಉಳಿಯುತ್ತೆ. ಪುಣ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಇಂಥ ಕೆಲಸ ಇನ್ನೂ ಯಾರೂ ಮಾಡಿಲ್ಲ.

ಆರ್‌ಸಿಬಿ ಹೆಡ್

ಏನ್ರೀ ನಿಮ್ದು ಸಮಸ್ಯೆ, ಈ ಸಲನೂ ಕಪ್ ನಮ್ದಲ್ಲ ಅಲ್ವಾ?
– ನೋಡ್ರೀ…

ಅಯ್ಯೋ, ನೋಡೋಕಾಗ್ತಾ ಇಲ್ಲ ನೀವ್ ಆಡೋದನ್ನ ಅಂತನೇ ಕೇಳ್ತಾ ಇರೋದು ಕಣ್ರೀ. ಇಲ್ಲಿವರೆಗೂ ಬರೀ ಒಂದ್ ಮ್ಯಾಚ್ ಗೆದ್ದಿದ್ದೀರಲ್ಲ. ಏನ್ ಮಾಡೋದು ಹೇಳಿ?

– ವರ್ಲ್ಡ್ ಕಪ್ ಸೀರೀಸ್‌ನಲ್ಲಿ ಇಂಡಿಯಾದವ್ರು ಎಲ್ಲಾ ಮ್ಯಾಚ್ ಗೆದ್ದು, ಕೊನೆಗೆ ಫೈನಲ್ ಮ್ಯಾಚನ್ನ ದೇವರಿಗೆ ಬಿಟ್ರು, ನಾವು
ಎಲ್ಲಾನೂ ದೇವರಿಗೆ ಬಿಟ್ಟು ಒಂದೇ ಒಂದ್ ಮ್ಯಾಚ್ ಗೆದ್ದಿದ್ದೀವಿ. ಇದೇ ವಾಸಿ ಅಲ್ವಾ?

ಸರಿ, ನೀವ್ ಯಾಕೆ ಸೋಲ್ತಾ ಇದ್ದೀರ ಅಂತನಾದ್ರೂ ನಿಮಗೆ ಗೊತ್ತಾ?
– ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ನಮ್ ಬೋಲರ್ಸ್ ‘ನೀವ್ ಅದೆಂಗ್ ಔಟ್ ಆಗ್ತೀರೋ ನಾವೂ ನೋಡ್ತೀವಿ’ ಅಂತ ಹಠಕ್ಕೆ ಬಿದ್ರೆ
ನಾವ್ ಏನ್ ಮಾಡೋದು ಹೇಳಿ?.

ಅದೂ ನಿಜನೇ, ಆದ್ರೆ ಹಿಂಗೇ ಆದ್ರೆ ತಂಡಕ್ಕೆ ಕೆಟ್ಟ ಹೆಸರು ಬರಲ್ವಾ?
– ಅಯ್ಯೋ, ಈಗಾಗ್ಲೇ ಬಂದಿದೆ ಬಿಡಿ, ನಾವ್ ಹಿಂಗ್ ಸೋಲ್ತಾ ಇರೋದು ನೋಡಿ, ನಿಮ್ಮದು ಆರ್‌ಸಿಬಿ ಅಲ್ಲ, ‘ಹಾರ್’ಸಿಬಿ
ಅಂತಿದ್ದಾರೆ ಎಲ್ರೂ

ಅದೇನೋ, ‘ಇದು ಹೊಸ ಅಧ್ಯಾಯ’ ಅಂತ ಪ್ರಚಾರ ಮಾಡ್ತಾ ಇದ್ರಿ, ಏನಾಯ್ತು?

– ಇನ್ನೇನಾಗುತ್ತೆ. ನಾವೇನೋ ಹೊಸ ಅಧ್ಯಾಯ ಅಂತ ಹೇಳ್ಕೊಂಡ್ವಿ, ಇವ್ರ್ ಆಡ್ತಾ ಇರೋದ್ ನೋಡಿದ್ರೆ ಇದು ಬರೀ
ಮುಂದುವರಿದ ಅಧ್ಯಾಯ ಅನ್ನಿಸ್ತಾ ಇದೆ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಒಂದಿನ ಕಾರ್‌ನಲ್ಲಿ ಒಬ್ಬ ವ್ಯಕ್ತಿ ತುಂಬಾ ಫಾಸ್ಟ್ ಆಗಿ ಹೋಗ್ತಾ ಇದ್ದ. ಹೈವೇನಲ್ಲಿ ಟ್ರಾಫಿಕ್ ಪೊಲೀಸ್ ಹಿಡಿದ್ರು. ಯಾಕೆ ಓವರ್ ಸ್ಪೀಡಿಂಗ್ ಮಾಡ್ತಾ ಇದ್ದೀರಾ ಅಂತ ಕೇಳಿದ್ದಕ್ಕೆ, ನನ್ನ ಕೆಲಸಕ್ಕೆ ಲೇಟ್ ಆಗ್ತಾ ಇದೆ ಅದಕ್ಕೆ ಫಾಸ್ಟ್ ಆಗಿ ಹೋಗ್ತಾ ಇದ್ದೆ ಅಂದ. ಏನಂಥ ಅರ್ಜೆಂಟ್ ಕೆಲ್ಸ, ಎಲ್ಲಿ ಕೆಲ್ಸ ಮಾಡೋದು ನೀನು, ಏನು ನಿನ್ನ ಕೆಲ್ಸ ಅಂತ ಕೇಳಿದ್ರು ಪೊಲೀಸ್. ಅದಕ್ಕೆ ಆ ವ್ಯಕ್ತಿ ನಾನು ಜಂಬೋ ಸರ್ಕಸ್‌ನಲ್ಲಿ ಕೆಲ್ಸ ಮಾಡ್ತಾ ಇರೋದು, ಅಲ್ಲಿ ನಾನು ಬ್ಯಾಲೆನ್ಸಿಂಗ್ ಕೆಲ್ಸ ಮಾಡ್ತೀನಿ.

ಒಂದ್ ಇಪ್ಪತ್ತು ರಿಂಗ್‌ಗಳನ್ನ ಗಾಳಿಯಲ್ಲಿ ಎಸೆದು, ಅವು ಕೆಳಗೆ ಬರ್ತಾ ಇದ್ದ ಹಾಗೆ ಹಿಡಿಯುತ್ತಾ ಮತ್ತೆ ಕೈಯಲ್ಲಿರೋದನ್ನ ಮೇಲೆ ಎಸೆದು ಹಿಡಿಯುತ್ತಾ ಬ್ಯಾಲೆನ್ಸ್ ಮಾಡೋದು ನನ್ನ ಕೆಲಸ ಅಂದ. ಅದಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ನಿನ್ನ ನಂಬೋದು
ಹೆಂಗೆ, ಎಲ್ಲಿ, ಒಂದ್ಸಲ ಇಲ್ಲೇ ಮಾಡಿ ತೋರಿಸು ಅಂದ. ಅದಕ್ಕೆ ಆ ವ್ಯಕ್ತಿ, ಇಲ್ಲ ರಿಂಗ್ ಗಳೆಲ್ಲಾ ಅಲ್ಲೇ ಸರ್ಕಸ್‌ನಲ್ಲಿ ಇರ್ತಾವೆ. ನನ್ನತ್ರ ಇರಲ್ಲ ಅಂದ. ಹೀಗೆ ಪೊಲೀಸ್ ಮತ್ತು ಆ ವ್ಯಕ್ತಿ ಮಧ್ಯೆ ಸಂಭಾಷಣೆ ನಡೆಯುತ್ತಿರುವಾಗ ಅಲ್ಲಿಗೆ ಖೇಮು ಕಾರಲ್ಲಿ
ಬಂದ. ಖೇಮು ಸಂಜೆ ಹೊತ್ತಿಗೇ ಕುಡಿದು ಫುಲ್ ಟೈಟ್ ಆಗಿದ್ದ.

ಇವರಿಬ್ಬರೂ ಮಾತಾಡ್ತಾ ಇರೋದನ್ನ ಗಮನಿಸಿ ಅಲ್ಲೇ ಸೈಡಲ್ಲಿ ನಿಂತುಕೊಂಡ. ಈ ವ್ಯಕ್ತಿ ರಿಂಗ್ ಇಲ್ಲ ಅಂದಿದ್ದಕ್ಕೆ, ಸರಿ ನನ್ನ ಕಾರ್‌ನಲ್ಲಿ ಒಂದಷ್ಟು ರಿಂಗ್ಸ್ ಇದ್ದಾವೆ ಅವುಗಳನ್ನೇ ಎಸೆದು, ಹಿಡಿದು ಬ್ಯಾಲೆನ್ಸ್ ಮಾಡಿ ತೋರಿಸು ಅಂದ ಪೊಲೀಸ್. ಆ ವ್ಯಕ್ತಿ
ಒಪ್ಪಿಕೊಂಡು ಪೊಲೀಸ್ ತಂದುಕೊಟ್ಟ ಆ ರಿಂಗ್‌ಗಳನ್ನ ಮೇಲೆ ಎಸೆದು ಹಿಡಿಯುತ್ತಾ ಬ್ಯಾಲೆನ್ಸ್ ಮಾಡಿ ತೋರಿಸಿದ. ಅದಕ್ಕೆ ಪೊಲೀಸ್, ಸರಿ, ನೀನಿನ್ನು ಹೊರಡು ಅಂತ ಅವನನ್ನು ಕಳಿಸಿದ. ಇದನ್ನು ನೋಡಿದ ಖೇಮು, ತನ್ನ ಕಾರನ್ನು ಅಲ್ಲೇ ಬಿಟ್ಟು,
ಸೀದಾ ಹೋಗಿ ಪೊಲೀಸ್ ಗಾಡಿಯಲ್ಲಿ ಕುಳಿತುಬಿಟ್ಟ. ಪೊಲೀಸ್‌ಗೆ ಆಶ್ಚರ್ಯ ಆಯ್ತು. ಯಾಕೆ ನೀನೇ ಬಂದು ಪೊಲೀಸ್ ಕಾರಲ್ಲಿ ಕೂತೆ ಅಂತ ಕೇಳಿದ್ದಕ್ಕೆ ಖೇಮು ಹೇಳಿದ ‘ಅಯ್ಯೋ, ಅಷ್ಟೆಲ್ಲಾ ರಿಂಗ್ ಎಸೆದು ಹಿಡಿದು ಬ್ಯಾಲೆನ್ಸ್ ಮಾಡಿ ತೋರಿಸಿ, ನಾನು ಕುಡಿದಿಲ್ಲ ಅಂತ ಪ್ರೂವ್ ಮಾಡೋಕೆ ನನ್ ಕೈಲಾಗಲ್ಲ, ನಾನೇ ಹೇಳ್ತಾ ಇದ್ದೀನಿ, ಫುಲ್ ಟೈಟಾಗಿದ್ದೀನಿ. ಅರೆಸ್ಟ್ ಮಾಡಿ ನನ್ನ’.

ಲೈನ್ ಮ್ಯಾನ್

ಆರ್ ಸಿಬಿ ಫ್ಯಾನ್ಸ್ ಹೊಸ ಜೋಕ್

ಗ್ರಹಾಂಬೆಲ್ ಆಗ ತಾನೇ ಟೆಲಿಫೋನ್ ಕಂಡುಹಿಡಿದು ‘ಹುರ್ರೇ’ ಅಂತಿದ್ದ. ತಕ್ಷಣ ಫೋನ್ ರಿಂಗಾಯ್ತು. ಗ್ರಹಾಂಬೆಲ್‌ಗೆ ಯಾಕೋ
ಅನುಮಾನ ಬಂತು. ಫೋನ್ ಎತ್ತಿ, ‘ಹಲೋ, ಯಾರು? ರಜಿನಿಕಾಂತಾ?’ ಅಂದ. ಆ ಕಡೆಯಿಂದ ವಾಯ್ಸ್ ಬಂತು ‘ರಜಿನಿ
ಫೋನ್ ಹ್ಯಾಕ್ ಮಾಡಿದ್ದೀನಿ, ದಿಸ್ ಈಸ್ ದಿನೇಶ್ ಕಾರ್ತಿಕ್’.

ದುಬಾರಿ ಪೆನ್ ತಗೊಳ್ಳೋದರ ಉಪಯೋಗ
– ಅನ್ನಿಸಿದ್ದನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದು

ಸುಪ್ರೀಂ ‘ಕೋರ್ಟ್’ ಜಡ್ಜ್ ಗಳೇ ರೆಬೆಲ್ ಆದ್ರೆ

– oಟ, ಟಡಿ, ಠಿeಛಿ ಚಿZ ಜಿo ಜ್ಞಿ ಡಿeಟoಛಿ ೞ್ಚಟ್ಠ್ಟಠಿೞ..?

ಸೌಂಡ್ ಪಾರ್ಟಿ ಸ್ವಗತ
– ಸೈರನ್ ಹಾಕಿಲ್ಲ ಅಂದ್ರೆ Zಞಚ್ಠ್ಝಿZಛಿಗೇ ಬೆಲೆ ಸಿಗಲ್ಲ. ಹಂಗೇನೆ… ಸೌಂಡ್ ಮಾಡದೇ ಇದ್ರೆ ಮನುಷ್ಯರಿಗೆ ಬೆಲೆ ಸಿಗಲ್ಲ..

ಗಾಂಧಿನಗರದ ಕೆಲವು ಹೀರೋಗಳ ವ್ಯಥೆ
– ನಾನೇ ಇಲ್ಲಿ ನಂಬರು ಒನ್ ಅಂತ ಹೇಳ್ತಾ ಇದ್ರೂ ನಂಬೋರು ಮಾತ್ರ ಯಾರೂ ಇಲ್ಲ.

ಇದೀಗ ತಾನೆ ಹೊಳೆದ ಸುದ್ದಿ: 
– ಬಂಗಾರದ ವಿಷಯದಲ್ಲಷ್ಟೇ ಅಲ್ಲ, ಐಡಿಯಾಗಳ ವಿಷಯದಲ್ಲೂ ಅಷ್ಟೇ….‘ಹೊಳೆಯುವುದೆಲ್ಲಾ’ ಬಂಗಾರ ಅಲ್ಲ.

ಒಂದು ಅಮಿತಾಬ್ ಬಚ್ಚನ್ ಮತ್ತು ಇನ್ನೊಂದು ಲೋಕಲ್ ಬಚ್ಚನ್ ಸುದೀಪ್ ಚಿತ್ರವನ್ನು ಮಲೆಯಾಳಿಗಳು- ಒಂದೇ ರೀತಿ ಉಚ್ಚರಿಸುತ್ತಾರೆ. ಯಾವುದದು?

– ಕೂಲಿ-ಗೂಳಿ

ಯಾವುದೋ ಹಗರಣದಲ್ಲಿ ಇವರದ್ದೇನೂ ತಪ್ಪಿಲ್ಲ ಅಂತಾ ಮಂತ್ರಿಯೊಬ್ಬರ ಬಗ್ಗೆ ಕೋರ್ಟ್ ತೀರ್ಪು ಬಂದರೆ ಆಗ
– ‘ಮಂತ್ರಿಮುಗ್ಧ’

ಕುಡುಕನ ಹತ್ರ ಹೋಗಿ ನಿನ್ನ ಮೇಲೆ ಕೇಸ್ ಹಾಕ್ತೀವಿ ಅಂತ ಹೇಳಿದ್ರೆ ಏನಂತಾನೆ
– ಯಾವ ಬ್ರ್ಯಾಂಡು, ಎಷ್ಟ್ ಕೇಸು? ಹಾಕಿ ಹಾಕಿ ಕೇಸಿದ್ರೆ ಕೈಲಾಸ.

ಬೇಸಿಗೆ ಕಾಲದ ವಿಶೇಷ
– ಎಲ್ಲರೂ ಬೆವರುವುದರಿಂದ, ತಪ್ಪು ಮಾಡಿದವರು ಸಿಕ್ಕಿಹಾಕಿಕೊಳ್ಳೋ ಸಾಧ್ಯತೆ ಕಡಿಮೆ ಇರುತ್ತೆ.