Friday, 20th September 2024

ವೈದ್ಯಕೀಯ ಕ್ಷೇತ್ರದ ಮತ್ತೊಂದು ವಿಸ್ಮಯ; ಅಪೆಂಡಿಕ್ಸ್’ನಲ್ಲಿ ಸೀಸ !

ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್

ಕಳೆದ 2 ವಾರಗಳ ಅಂಕಣವು ಅಪರೂಪದ ವೈದ್ಯಕೀಯ ವಿಸ್ಮಯಗಳ ವಿಷಯಗಳನ್ನೊಳಗೊಂಡಿತ್ತು. ಈ ವಾರ ಅದರ
ಮುಂದುವರಿದ ಭಾಗ.

1. ಹೀಗೊಂದು ಅಸಾಮಾನ್ಯ ದಾನ ಪ್ರವೃತ್ತಿ: ಬ್ರೆಜಿಲ್‌ನ 49 ವರ್ಷದ ವ್ಯಕ್ತಿಗೆ ಪಾರ್ಶ್ವವಾಯು ಕಾಯಿಲೆ ಬಂದು ಗುಣವಾ ಯಿತು. ಅದರ ನಂತರ ಆತನ ವರ್ತನೆ ಸಂಪೂರ್ಣ ಬದಲಾಗಿ ಹೋಯಿತು. ಆತ ಅಸಾಮಾನ್ಯ ರೀತಿಯ ದಾನ ಪ್ರವೃತ್ತಿ ಬೆಳೆಸಿ ಕೊಂಡ. ಸಿಕ್ಕ ಸಿಕ್ಕವರಿಗೆಲ್ಲ ತನ್ನ ಹಣವನ್ನು ದಾನ ಮಾಡತೊಡಗಿದ. ರಸ್ತೆಯಲ್ಲಿ ಸಿಕ್ಕ ಮಕ್ಕಳಿಗೆಲ್ಲ ಚಾಕೊಲೇಟ್, ಕ್ಯಾಂಡಿ ಕೊಡುತ್ತಾ ಹೋದ. ಹೀಗೆಯೇ ಈತ ಎಲ್ಲಾ ಕೊಡುತ್ತಾ ಹೋದರೆ ನಾವು ಸಾಲಗಾರರಾಗಿ ಬಿಡುತ್ತೇವೆ ಎಂದು ಆತನ ಹೆಂಡತಿ ಎಚ್ಚೆತ್ತುಕೊಂಡಳು. ವೈದ್ಯರ ಸಲಹೆ ಕೇಳಿದಳು. ಅವರು ಅಮೂಲಾಗ್ರವಾಗಿ ಆ ವ್ಯಕ್ತಿಯನ್ನು ಪರೀಕ್ಷೆ ಮಾಡಿದರು. ಅವನಿಗೆ ತೀವ್ರ ರೀತಿಯ ಮಾನಸಿಕ ಕಾಯಿಲೆ ಅಥವಾ ಮನೋವೈಕಲ್ಯ ಏನೂ ಕಂಡುಬರಲಿಲ್ಲ.

ಸಿಟಿ ಸ್ಕ್ಯಾನ್ ಮಾಡಿ ನೋಡಿದಾಗ ಮೆದುಳಿನ ಹಲವಾರು ಭಾಗಗಳಿಗೆ ರಕ್ತದ ಹರಿವು ಕಡಿಮೆ ಇರುವುದಾಗಿ ಕಂಡು ಬಂದಿತು. ಆತನಿಗೆ ಪಾರ್ಶ್ವವಾಯು ಆದಾಗ ಆ ಎಲ್ಲಾ ಭಾಗಗಳು ನೇರವಾಗಿ ತೊಂದರೆಗೆ ಒಳಗಾದ ಭಾಗಗಳಲ್ಲ. ಆದರೆ ನರಗಳ ಸಂಪರ್ಕ ದಿಂದ ಈ ಭಾಗಗಳಿಗೆ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿಯೇ ಈತನ ಪ್ರವೃತ್ತಿಯಲ್ಲಿ ಬದಲಾವಣೆ ಕಂಡು ಬಂದು ಬಹಳವಾಗಿ ಕೊಡುವ ಕ್ರಿಯೆ ಅಥವಾ ದಾನ ಪ್ರವೃತ್ತಿಯನ್ನು ಈತ ಬೆಳೆಸಿಕೊಂಡ.

2. ಹೆಚ್ಚಿದ ಅನುಭೂತಿ ಶಕ್ತಿ: ಇಂಗ್ಲೆೆಂಡಿನ ಈ ಮಹಿಳೆಗೆ ವಿಪರೀತ ಫಿಟ್ಸ್‌ ಅಥವಾ ನಡುಕಗಳು ಬರುತ್ತಿದ್ದವು. ಅದನ್ನು ಹತೋಟಿಗೆ ತರಲು ವೈದ್ಯರು ಅಮಿಗ್ ಡಲಾ ಎಂಬ ಭಾಗವನ್ನು ತೆಗೆಯುವ ಶಸ್ತ್ರಕ್ರಿಯೆಯನ್ನು ಮಾಡಿದರು. ಈ ಅಮಿಗ್ ಡಲಾ ಭಾಗವು ಬೇರೆಯವರ ಭಾವನೆಯನ್ನು ಗುರುತಿಸುವ ಭಾಗ. ಅದನ್ನು ಶಸ್ತ್ರಕ್ರಿಯೆ ಮಾಡಿ ತೆಗೆದರೆ ಅಂತಹಾ ವ್ಯಕ್ತಿಗೆ ಬೇರೆಯವರ
ಭಾವನೆಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಈ ಶಸ್ತ್ರಕ್ರಿಯೆಯ ನಂತರ ಈಕೆಗೆ ಏನೇನೋ ರೀತಿಯ ಅನುಭವಗಳಾಗ ಹತ್ತಿದವು. ಆಕೆಗೆ ಮಾನಸಿಕವಾಗಿ ವಿಚಿತ್ರ ಅನುಭವಗಳು ಆಗುವುದೇ ಅಲ್ಲದೆ ಹೃದಯವು ತಿರುಗಿದ ಹಾಗೆ, ಗಂಟಲಿನಲ್ಲಿ ಏನೋ
ಒಂದು ರೀತಿಯ ಅಸಾಮಾನ್ಯ ಅನುಭವ – ಈ ರೀತಿಯ ಅನುಭವಗಳು ಹಾಗೆಯೇ ವಿಪರೀತ ದು:ಖ, ವಿಪರೀತ ಕೋಪ – ಈ ರೀತಿಯ ಅನುಭವಗಳೂ ಆಗತೊಡಗಿದವು. ಸಂಶೋಧಕರು ಆಕೆಯ ಮಾನಸಿಕ ಸ್ಥಿತಿಯನ್ನು ಪರೀಕ್ಷಿಸಲಾಗಿ ಅದು ಎಲ್ಲಾ
ರೀತಿಯಲ್ಲಿ ಸರಿಯಿರುವುದನ್ನು ಕಂಡುಕೊಂಡರು. ಭಾವನೆಗಳನ್ನು ನಿಯಂತ್ರಿಸುವ ಅಮಿಗ್ ಡಲಾ ಭಾಗ ಇಲ್ಲದಿದ್ದರೂ ಅದರ ನಷ್ಟವನ್ನು ತುಂಬಲು ಮೆದುಳಿನ ಉಳಿದ ಭಾಗಗಳು ಹಾಗೂ ನರ ಸಂಪರ್ಕಗಳು ಈ ರೀತಿಯ ಆಕೆಯ ಭಾವನೆಗಳು ಹಾಗೂ ಅನುಭವಗಳಿಗೆ ಕಾರಣ ಎಂದು ವಿಜ್ಞಾನಿಗಳ ಅನಿಸಿಕೆ.

3. ಅಪೆಂಡಿಕ್ಸ್‌‌ನಲ್ಲಿ ಸೀಸ: 8 ವರ್ಷದ ಬಾಲಕನ ರಕ್ತದಲ್ಲಿ ಅಸಾಮಾನ್ಯ ಮಟ್ಟದ ಸೀಸದ ಅಂಶವು 2 ವರ್ಷಗಳಿಗೂ ಜಾಸ್ತಿ
ಇತ್ತು. ವೈದ್ಯರು ಅನುಮಾನಿಸಿ ಪರೀಕ್ಷಿಸಿದಾಗ ದೇಹದ ಅಸಾಮಾನ್ಯ ಭಾಗದಲ್ಲಿ ಸೀಸದ ಗುಂಡುಗಳು ಅಥವಾ ತುಣುಕುಗಳು ಸಿಕ್ಕಿದವು. ಆ ಕೇಸ್ ನ ವಿವರಗಳು ಹೀಗಿವೆ. ಆಸ್ಟ್ರೇಲಿಯಾದ 8 ವರ್ಷದ ಬಾಲಕ ವಿಪರೀತ ಹೊಟ್ಟೆನೋವು ಎಂದು ಆಸ್ಪತ್ರೆಗೆ ಅಡ್ಮಿಟ್ ಆದ. ವೈದ್ಯರು ಹೊಟ್ಟೆೆಯ ಭಾಗದ ಎಕ್ಸ್ ರೇ ಮಾಡಿದಾಗ ಜೀರ್ಣಾಂಗ ವ್ಯೂೆಹದಲ್ಲಿ ಹಲವಾರು ಸಣ್ಣ ಸಣ್ಣ
ವಸ್ತುಗಳು ಇರುವುದು ಕಂಡು ಬಂದಿತು. ವೈದ್ಯರು ಹೊಟ್ಟೆ ಮತ್ತು ಕರುಳಿನ ಭಾಗ ಸ್ವಚ್ಛವಾಗಲು ಕರುಳನ್ನು ಸ್ವಚ್ಛಗೊಳಿಸುವ ಔಷಧ ಕೊಟ್ಟರೂ ಸಹ ನಂತರ ಎಕ್ಸ್‌ ರೇ ಮಾಡಿ ಪುನಃ ನೋಡಲಾಗಿ ಆ ವಸ್ತುಗಳು ಎಲ್ಲಿಯೂ ಹೋಗದೇ ಅಲ್ಲೇ ಕುಳಿತಿದ್ದವು.
ವೈದ್ಯರು ಅಸಾಮಾನ್ಯವಾದದ್ದು ಆಗಿರಬಹುದು ಎಂದು ಭಾವಿಸಿದರು. ಅದೆಂದರೆ ಬಹುಶಃ ಈ ವಸ್ತುಗಳು ಈತನ ಅಪೆಂಡಿಕ್ಸ್‌‌ ನಲ್ಲಿ ಸಿಕ್ಕಿಹಾಕಿಕೊಂಡಿವೆ ಎಂದು ಊಹಿಸಿದರು. ಆ ಊಹೆಯ ಮೇಲೆ ಶಸ್ತ್ರಕ್ರಿಯೆ ಕೈಗೊಂಡು ಅಪೆಂಡಿಕ್ಸ್‌‌ನ್ನು ಹೊರ ತೆಗೆದರು. ಸಾಮಾನ್ಯಕ್ಕಿಂತ ಅದು 5 ಪಟ್ಟು ಜಾಸ್ತಿ ತೂಕ ಹೊಂದಿತ್ತು. ಅದನ್ನು ಕತ್ತರಿಸಿ ತೆಗೆದಾಗ ಅವರಿಗೆ ಆಶ್ಚರ್ಯಕರವಾಗಿ 57 ಸಣ್ಣ ಸಣ್ಣ ಹರಳುಗಳು ಸಿಕ್ಕಿದವು. ವಿವರವಾಗಿ ವಿಚಾರಿಸಿದಾಗ ಆತನ ಕುಟುಂಬದವರು ಆಹಾರಕ್ಕಾಗಿ ಬೇಟೆಯಾಡಿ ಗುಂಡಿನ ಪೆಲೆಟ್ ಗಳನ್ನು ಸಿಡಿಸಿದ್ದರು. ಆತ ಅದರ ಅರಿವಿಗೆ ಬರದೆ ತನ್ನ ಅಣ್ಣನ ಜೊತೆ ಆಡುವಾಗ ಈ ಗುಂಡಿನ  ತುಣುಕುಗಳನ್ನೊಳ ಗೊಂಡ ಆಹಾರವನ್ನು ಸೇವಿಸಿದ. ಸೇವಿಸಿದ ಆಹಾರ ಕರುಳಿನಲ್ಲಿ ಇರಬೇಕಾದ್ದು ಅಸಾಮಾನ್ಯವಾಗಿ ಅಪೆಂಡಿಕ್ಸ್‌‌ನಲ್ಲಿ ಶೇಖರಗೊಂಡಿತ್ತು.

4. ಕಂಕುಳಿನಲ್ಲಿ ದುರ್ವಾಸನೆ : ಈತನ ಕಂಕುಳಲ್ಲಿರುವ ಕೂದಲು ಸೋಂಕಿಗೆ ತುತ್ತಾಗಿ ವಿಪರೀತವಾದ ಕೆಟ್ಟ ದುರ್ವಾಸನೆ ಉಂಟು ಮಾಡಿತು. 40 ವರ್ಷದ ಈತ ತನ್ನ ಕಂಕುಳಿನ ಭಾಗದಿಂದ ವಿಪರೀತ ವಾಸನೆ ಬರುತ್ತಿದ್ದು, ಅಲ್ಲಿನ ಭಾಗದ ಕೂದಲುಗಳು ತುಂಬಾ ಗಲೀಜಾಗಿವೆ ಎಂದು ದೂರತೊಡಗಿದ. ಪರೀಕ್ಷಿಸಲಾಗಿ ಆತನ ಕರುಳಿನ ಕೂದಲಿನ ಭಾಗದಲ್ಲಿ ಹಳದಿ ವಸ್ತುವೊಂದು
ಕಾಣುತ್ತಿತ್ತು. ವೈದ್ಯರು ಅದನ್ನು ಟ್ರೈಕೋಮೈಕೋಸಿಸ್ ಆಕ್ಸಿಲಾರಿಸ್ ಅಂದರೆ ಕಾರ್ನಿಬ್ಯಾಕ್ಟೀರಿಯಂ ಟೀನಿಯಸ್ ಎಂಬ ಬ್ಯಾಕ್ಟೀರಿಯಾವು ಈತನ ಕಂಕಳಿನ ಕೂದಲಿನಲ್ಲಿ ಉಂಟುಮಾಡಿದ ಸೋಂಕು ಎಂದು ಗುರುತಿಸಿದರು. ನಂತರ ಈತನ ಕಂಕುಳಿನ ಕೂದಲನ್ನು ಸಂಪೂರ್ಣವಾಗಿ ಶೇವ್ ಮಾಡಿ ತೆಗೆಯಲಾಯಿತು. ನಂತರ ಅಲ್ಯೂಮಿನಿಯಂ ಕ್ಲೋರೈಡ್ ಮತ್ತು ಎರಿಥ್ರೋ ಮೈಸಿನ್ ಆಂಟಿಬಯೋಟಿಕ್‌ನಿಂದ ಚಿಕಿತ್ಸೆ ಮಾಡಲಾಯಿತು. ಹಲವು ವಾರಗಳ ನಂತರ ದುರ್ವಾಸನೆ ಬರುವುದು ನಿಂತಿತು.

5. ನೀರಿನ ಅಲೆ ಹಾಯಿಸಿ ಸ್ವ ಶಸ್ತ್ರಚಿಕಿತ್ಸೆೆ : ಕೆಲವರಲ್ಲಿ ಕಣ್ಣಿನ ಮೇಲ್ಭಾಗದಲ್ಲಿ ಪೈಬ್ರಸ್ ಅಂಗಾಂಶವು ಅಸಾಮಾನ್ಯವಾಗಿ ಬೆಳೆಯುತ್ತದೆ. ಇದಕ್ಕೆ ಚಿಕಿತ್ಸೆ ಎಂದರೆ ಕತ್ತರಿಯಿಂದ ಈ ಭಾಗಗಳನ್ನು ಕತ್ತರಿಸಿ ಸಣ್ಣ ಶಸ್ತ್ರಕ್ರಿಯೆ ಮಾಡುವುದು. ಆದರೆ
ಹವಾಯಿಯ ಈತ ಈ ಬೇಡದ ಅಂಗಾಂಶವನ್ನು ನಿವಾರಿಸಲು ತನ್ನದೇ ಉಪಾಯವನ್ನು ಕಂಡುಕೊಂಡ.

ವಿಪರೀತ ನೀರಿನ ಒತ್ತಡವಿರುವ 30 ಅಡಿ ಎತ್ತರದ ನೀರಿನ ಅಲೆಯನ್ನು ಅದರ ಮೇಲೆ ಹಾಯಿಸಿ ಚಿಕಿತ್ಸೆ ಮಾಡಿಕೊಂಡ. ಆತನ ನಿರೀಕ್ಷೆಯಂತೆ ಈ ನೀರಿನ ಅಸಾಮಾನ್ಯ ಒತ್ತಡವು ಆತನ ಕಣ್ಣಿನ ಮೇಲ್ಭಾಗದ ಬೇಡದ ಅಂಗಾಂಶವನ್ನು ಕಿತ್ತು ಹಾಕಿತು. ಆದರೆ
ಆತನ ಕಣ್ಣಿಗೆ ಏನೂ ಹಾನಿಯಾಗಲಿಲ್ಲ ಎಂಬುದೇ ಆತನ ಅದೃಷ್ಟ.

6. ಮೆದುಳಿನಲ್ಲಿ ಕಲ್ಲುಗಳು: ಬ್ರೆಜಿಲ್‌ನ ಒಬ್ಬ ತರುಣ ತಲೆಸಿಡಿಯುವ ರೀತಿಯ ತಲೆನೋವು ಮತ್ತು ಕಣ್ಣು ಮಂಜಾಗುವ ಸಮಸ್ಯೆೆ – ಇವುಗಳಿಂದ ಹತ್ತು ವರ್ಷಗಳ ಕಾಲ ತೊಂದರೆ ಅನುಭವಿಸಿದ. ನಂತರ ಅವು ಈತನ ಮೆದುಳಿನಲ್ಲಿರುವ ಲವಣಾಂಶ ಗಳು ಎಂದು ಗೊತ್ತಾಗಿದ್ದಲ್ಲದೆ ಆ ಲವಣಾಂಶ ಕ್ಯಾಲ್ಸಿಯಂ ಎಂದೂ ತಿಳಿಯಿತು. ಇದು ಅಪರೂಪದ ಕಾಯಿಲೆ ಸೀಲಿಯಾಕ್ ಕಾಯಿಲೆಯ ಅಪರೂಪದ ತೊಡಕುಗಳಲ್ಲಿ ಒಂದು ಎಂದು ನಂತರ ತಿಳಿಯಿತು. ಸೀಲಿಯಾಕ್ ಕಾಯಿಲೆ ದೇಹದ ಕರುಳಿನ ಭಾಗದಲ್ಲಿ ಕಾಣಿಸಿಕೊಳ್ಳುವ ಆಟೋಇಮ್ಯೂನ್ ಕಾಯಿಲೆ. ಇದು ಕರುಳಿನ ಒಳಭಾಗದ ಲೈನಿಂಗ್‌ನ್ನು ನಾಶಪಡಿಸಿ ದೇಹವು ಆಹಾರದಿಂದ ಕೆಲವು ಉತ್ತಮಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಆದರೆ ಅದು ಹೇಗೆ ಈ ಕಾಯಿಲೆ ಈತನ ಮೆದುಳಿನ ಭಾಗದಲ್ಲಿ ಕ್ಯಾಲ್ಸಿಯಂ ಹರಳುಗಳು ಕಟ್ಟುವ ಹಾಗೆ ಆಯಿತು ಎಂಬ ಬಗ್ಗೆೆ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ, ಈತನ ದೇಹದಲ್ಲಿ ಕಬ್ಬಿಣವನ್ನು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿರುವುದರಿಂದ ಈ ರೀತಿಯ
ತೊಂದರೆ ಆಗಿರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ.

7. ಆಹಾರ ಉಂಟುಮಾಡಿದ ಭ್ರಾಂತಿ: ಫಿಜ್ಜಾದ ವಾಸನೆ ಕೆಲವರಿಗೆ ಮತ್ತು ಹಿಡಿಸಬಹುದು. ಆದರೆ ಈ ಮಹಿಳೆಗೆ ಗ್ಲುಟೆನ್ ಒಳಗೊಂಡ ಆಹಾರ ಉಂಟುಮಾಡಿದ ತಲ್ಲಣ ಅಷ್ಟಿಷ್ಟಲ್ಲ. 37  ವರ್ಷದ ಕೆನಡಾದ ಈ ಮಹಿಳೆ ತನ್ನ ಡಾಕ್ಟರೇಟ್
ಪದವಿಗಾಗಿ ಅಭ್ಯಾಸ ಮಾಡುತ್ತಿದ್ದಳು. ಆಕೆಗೆ ಒಮ್ಮೆಲೇ ಒಂದು ರೀತಿಯ ಭ್ರಾಂತಿ ಬರಲಾರಂಭಿಸಿತು. ಯಾರೋ ತನ್ನ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಬರಲಾರಂಭಿಸಿತು. ಆಗ ಅವಳು ವಿಚಿತ್ರವಾಗಿ ವರ್ತಿಸಲಾರಂಭಿಸಿದಾಗ
ಕುಟುಂಬದ ಸದಸ್ಯರು ಮಾನಸಿಕ ವೈದ್ಯರ ಸಲಹೆ ಪಡೆದರು. ಅವರು ಆರಂಭಿಸಿದ ಔಷಧಗಳಿಂದ ಆಕೆಯ ಮಾನಸಿಕ ಅವಸ್ಥೆ ಏನೂ ಬದಲಾಗಲಿಲ್ಲ. ಅದೇ ಸಂದರ್ಭದಲ್ಲಿ ಆಕೆಗೆ ಅಸಾಮಾನ್ಯವಾಗಿ ತೂಕ ಕಡಿಮೆಯಾಗಿರುವುದು ಮತ್ತು ವಿಟಮಿನ್ ಮತ್ತು
ಹಲವು ಲವಣಾಂಶಗಳು ಕಡಿಮೆಯಾಗಿರುವುದು ಕಂಡುಬಂದಿತು. ಆಗ ವೈದ್ಯರು ಈಕೆಗೆ ಸೀಲಿಯಾಕ್ ಕಾಯಿಲೆ ಇರಬಹುದೆಂದು ಅಂದಾಜಿಸಿದರು. ಈ ಕಾಯಿಲೆಯಲ್ಲಿ ಆಹಾರಲ್ಲಿನ ಗ್ಲುಟೆನ್ ಅಂಶವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಂತರ
ವೈದ್ಯರ ಸಲಹೆಯಂತೆ ಆಕೆಗೆ ಗ್ಲುಟೆನ್ ರಹಿತ ಆಹಾರ ಕೊಡಲಾರಂಭಿಸಿದ ನಂತರ ಆಕೆಯ ಭ್ರಾಂತಿ, ಮಾನಸಿಕ ಅಸಾಮಾನ್ಯ ಸ್ಥಿತಿ ಎಲ್ಲವೂ ಇಲ್ಲವಾದವು.

ಆಗ ಸಂಶೋಧಕರಿಗೆ ಈ ಸೀಲಿಯಾಕ್ ಕಾಯಿಲೆ ಈಕೆಯ ಮೆದುಳು ಮತ್ತು ನರವ್ಯೂಹಗಳ ಮೇಲೆ ಏಕೆ ಪ್ರಭಾವ ಬೀರುತ್ತಿದೆ ಎಂದು ಸಮಸ್ಯೆಯಾಯಿತು. ಕರುಳಿನಲ್ಲಿ ಗ್ಲುಟೆನ್‌ನ ಪರಿಣಾಮಗಳನ್ನು ವಿರೋಧಿಸುತ್ತಿರುವ ದೇಹದ ಪ್ರತಿರೋಧ ವ್ಯವಸ್ಥೆಯ
ಜೀವಕೋಶಗಳು ಮೆದುಳಿಗೆ ಪ್ರಯಾಣಿಸಿ ಈ ಪರಿಣಾಮ ಬೀರಲಾಗಿದೆ ಎಂದು ಭಾವಿಸಲಾಗಿದೆ.

8. ಮಹಿಳೆಯ ಅಸಾಮಾನ್ಯ ಸಾವು, ನಂತರದ ಪರಿಣಾಮ: 1994ರಲ್ಲಿ ಅಮೆರಿಕದ ಆಸ್ಪತ್ರೆಯೊಂದರಲ್ಲಿ ಗ್ಲೋರಿಯಾ ರಮಿರೇಜ್ ಎಂಬ ಮಹಿಳೆ ಗರ್ಭಕೊರಳಿನ ಕ್ಯಾನ್ಸರ್‌ನ ಕಾಯಿಲೆಯ ಅಂತಿಮ ಹಂತದಲ್ಲಿ ಕಾಣಿಸಿಕೊಳ್ಳಬಹುದಾದ ತೊಡಕು
ಗಳಿಂದಾಗಿ ಆಸ್ಪತ್ರೆಗೆ ಸೇರಿದಳು. ಆಕೆಯನ್ನು ಚಿಕಿತ್ಸೆ ಮಾಡುತ್ತಿರುವಾಗಲೇ ಹಲವಾರು ವೈದ್ಯಕೀಯ ಸಿಬ್ಬಂದಿಗಳಿಗೆ ಎಚ್ಚರ ತಪ್ಪುವುದು, ಉಸಿರು ಕಟ್ಟುವುದು ಮತ್ತು ಮಾಂಸಖಂಡಗಳ ಸೆಳೆತ – ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳತೊಡಗಿದವು.
ಅದೇ ಸಂದರ್ಭದಲ್ಲಿ ಆಕೆಯ ರಕ್ತದಿಂದ ಅಮೋನಿಯಾದ ವಾಸನೆ ರೀತಿಯ ದುರ್ವಾಸನೆ ಬರುವುದನ್ನು ನರ್ಸ್‌ಗಳು ಗಮನಿಸಿದರು. ಒಟ್ಟಿನಲ್ಲಿ, ಆಕೆಯ ಸಂಪರ್ಕಕ್ಕೆ ಬಂದ 23 ಜನರಿಗೆ ವಿಚಿತ್ರ ರೀತಿಯ ಕಾಯಿಲೆಗಳು ಕಾಡತೊಡಗಿದವು. ಅವರಲ್ಲಿ
5 ಜನರು ಗಂಭೀರ ತೊಂದರೆಯಿಂದ ಆಸ್ಪತ್ರೆಗೇ ದಾಖಲಾದರು. ಆದರೆ ಆ ಆಸ್ಪತ್ರೆಯು ಈ ತೊಂದರೆಗಳ ನಿಜವಾದ ವಿಷಯ ಸರಿಯಾಗಿ ತಿಳಿಸದೆ ಎಲ್ಲಾ ಸಿಬ್ಬಂದಿಗಳಿಗೆ ಮಾಸ್ ಹಿಸ್ಟೀರಿಯಾ ಆಗಿದೆ ಎಂದು ತಿಳಿಸಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಿತು.

9. 400 ಜನರು ಡ್ಯಾನ್ಸ್‌ ಮಾಡಿ ಸತ್ತರು: ಫ್ರಾನ್ಸ್‌‌ನ ಸ್ಟ್ರಾಸ್ ಬರ್ಗ್‌ನಲ್ಲಿ 1518ರಲ್ಲಿ ಒಬ್ಬ ಮಹಿಳೆ ರಸ್ತೆಯಲ್ಲಿ ಡ್ಯಾನ್ಸ್‌ ಮಾಡಲು ಆರಂಭಿಸಿದಳು. ಒಂದು ವಾರದಲ್ಲಿ 34 ಜನರು ಆಕೆಯ ಡ್ಯಾನ್ಸ್ ಜೊತೆ ಸೇರಿಕೊಂಡರು. ಒಂದು ತಿಂಗಳಿನಲ್ಲಿ 400 ಜನರು ಈ ರೀತಿಯ ಡ್ಯಾನ್ಸ್‌ ಮಾಡತೊಡಗಿದರು. ಅವರಲ್ಲಿ ಹಲವರು ಹೃದಯಾಘಾತ, ಪಾರ್ಶ್ವ ವಾಯು ಮತ್ತು ವಿಪರೀತ ಸುಸ್ತು – ಕಾಯಿಲೆಗೆ ಒಳಗಾಗಿ ಸಾಯತೊಡಗಿದರು. ನಗರದ ಅಧಿಕಾರಿಗಳು ಈ ಡ್ಯಾನ್ಸ್‌ ಮಾಡುವವರಿಗೆ ವೇದಿಕೆ ಮತ್ತು ಮೈಕ್ ಒದಗಿಸಿ ದರು. ಹೀಗೆ ಡ್ಯಾನ್ಸ್‌ ಮಾಡಿ ಇವರೆಲ್ಲಾ ಸುಸ್ತಾಗಿ ಡ್ಯಾನ್ಸ್‌‌ ನಿಲ್ಲಿಸುತ್ತಾರೆ ಎಂದು ಅಧಿಕಾರಿಗಳು ಭಾವಿಸಿದರು. ಆದರೆ ಹೆಚ್ಚು ಹೆಚ್ಚು ಜನರು ಈ ಗುಂಪಿಗೆ ಸೇರಿ ಡ್ಯಾನ್ಸ್‌‌ ಮಾಡಲು ತೊಡಗಿದರು. ಇದು ಒಂದು ರೀತಿಯ ಫಂಗಸ್ ಸೋಂಕಿನಿಂದ ಆಗಿರಬಹುದು ಅಥವಾ ಒತ್ತಡದಿಂದ ಉಂಟಾದ ಮಾನಸಿಕ ಪರಿಸ್ಥಿತಿಯಿಂದ ಹೀಗಾಗಿರಬಹುದೆಂದು ಚರಿತ್ರಕಾರರು ಊಹಿಸುತ್ತಾರೆ. ಆದರೆ ಇದಕ್ಕೆ ನಿಜವಾದ ವಿವರಣೆ ಇದುವರೆಗೆ ದೊರಕಿಲ್ಲ.

10. ಈ ಮಹಿಳೆಯ ಕಣ್ಣು ಮುಚ್ಚಿರುತ್ತದೆ. ಮೂಗಿನ ಭಾಗದ ಸೈನಸ್ ಸೋಂಕಿನ ನಂತರ 17 ವರ್ಷದ ಈ ಹುಡುಗಿಗೆ ವಿಚಿತ್ರ ಅನುಭವವಾಗತೊಡಗಿತು. ಕೆಲವು ದಿನಗಳವರೆಗೆ ಆಕೆಗೆ ಕಣ್ಣು ಬಿಡಲು ಸಾಧ್ಯವಾಗುವುದೇ ಇಲ್ಲ. 3-4 ದಿನಗಳ ನಂತರ ಪುನಃ ಆಕೆ ಮೊದಲಿನಂತೆ ಕಣ್ಣು ತೆರೆದು ಎಲ್ಲಾ ಸಾಮಾನ್ಯರಂತೆ ಇರುತ್ತಾಳೆ. ಈಗ ಆಕೆಗೆ 30 ವರ್ಷ. ಆಕೆಯ ರೆಪ್ಪೆೆಯ ಶೇ. 99ರಷ್ಟು ಮಾಂಸಖಂಡಗಳನ್ನು ಶಸ್ತ್ರಕ್ರಿಯೆ ಮಾಡಿ ತೆಗೆದಿದ್ದಾರೆ. ಹಾಗೆಯೇ ಈಕೆ ಸಂಪೂರ್ಣ ಕುರುಡಿಯಾಗಿದ್ದಾಳೆ. ಈಕೆಯ ಈ
ಪರಿಸ್ಥಿತಿಗೆ ಕಾರಣ ಕಂಡು ಹಿಡಿಯಲು ವೈದ್ಯರಿಗೆ ಈವರೆಗೂ ಸಾಧ್ಯವಾಗಿಲ್ಲ.

11. ಚರ್ಮದಲ್ಲಿ ಉದ್ದದ ಜಂತುಗಳು: 1980ರಲ್ಲಿ ರಾಜಸ್ಥಾನದ ಹಲವೆಡೆ ಡ್ರಕಂಕುಲಿಯಾಸಿಸ್ ಎಂಬ ಜಂತುಹುಳು ಅಲ್ಲಿನ
ಜನರ ಚರ್ಮದಿಂದ ಉದ್ದುದ್ದವಾಗಿ ಹೊರಗೆ ಬರುತ್ತಿತ್ತು. ಚರ್ಮದಿಂದ ಹೊರಗೆ ಎಳೆದು ತೆಗೆಯಬಹುದಿತ್ತು.