Saturday, 27th July 2024

ಮೈಸೂರಿನಲ್ಲಿ ಮೋದಿ…

ಕೆ.ಜೆ.ಲೋಕೇಶ್ ಬಾಬು ಮೈಸೂರು

ಕರ್ನಾಟಕದ ವಿವಿಧ ನಗರಗಳಿಗೆ ಪ್ರಧಾನಿ ಮೋದಿಯವರು ಹಲವು ಸಂದರ್ಭಗಳಲ್ಲಿ ಬಂದಿದ್ದುಂಟು. ಚುನಾವಣಾ ಪ್ರಚಾರದ ಭರಾಟೆಯಲ್ಲಿ ಬಂದ ಛಾಪು ಒಂದೆಡೆಯಾದರೆ, ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಹಿರಿಮೆ ಇನ್ನೊಂದೆಡೆ. ನಮ್ಮ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಮೋದಿಯವರು ಹಲವು ಬಾರಿ ಬಂದಿದ್ದರು. ಮೈಸೂರಿನ ಐತಿಹಾಸಿಕ ಹಿರಿಮೆ ಯನ್ನು, ಮೈಸೂರು ಅರಸರ ದಕ್ಷ ಆಡಳಿತವನ್ನು ಬಹಳವಾಗಿ ಮೆಚ್ಚಿದ ಮೋದಿ ಯವರು, ಆ ನಗರದೊಂದಿಗೆ ವಿಶೇಷ ಒಡನಾಟ ಹೊಂದಿದ್ದಾರೆ. ಮೋದಿಯವರ ಮೈಸೂರಿನ ಭೇಟಿಯ ಸಂಕ್ಷಿಪ್ತ ವಿವರಗಳು ಇಲ್ಲಿವೆ.

ಗರದ ಸೌಂದರ್ಯ, ಐತಿಹಾಸಿಕ ಹಿನ್ನೆೆಲೆ, ರಾಜಮನೆತನ, ನದಿ, ತೊರೆ, ಅಣೆಕಟ್ಟೆಗಳು, ಅರಮನೆ, ಮೃಗಾಲಯ, ಸಾಧು-ಸಂತರ
ನೆಲೆ, ಮಠ-ಮಾನ್ಯಗಳು, ಚಾಮುಂಡಿಬೆಟ್ಟ, ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಹಲವು ಹತ್ತು ಮಜಲುಗಳನ್ನು ತನ್ನೊಡ ಲಲ್ಲಿ ತುಂಬಿಕೊಂಡಿರುವ ಮೈಸೂರು ಈ ದೇಶದ ಪ್ರಧಾನಿಯನ್ನೂ ತನ್ನತ್ತ ಆಕರ್ಷಿಸಿರುವುದು ಸುಳ್ಳಲ್ಲ. ಆ ಕಾರಣ ಗಳಿಗಾಗಿಯೇ ಪ್ರಧಾನಿ ಮೋದಿ ಅವರು ಹಲವು ಬಾರಿ ಮೈಸೂರಿಗೆ ಭೇಟಿ ನೀಡಿದ್ದಾರೆ.

ಕರ್ನಾಟಕವೆಂದರೆ ಮೋದಿಯವರಿಗೆ ಮೊದಲಿನಿಂದಲೂ ವಿಶೇಷ ಆಸ್ಥೆ.  ಅದರಲ್ಲೂ ಒಡೆಯರ್ ಅರಸರು ಕಟ್ಟಿದ ಮೈಸೂರು, ತನ್ನ ನಗರ ಸೌಂದರ್ಯದಿಂದ ಹೆಸರಾಗಿದ್ದುದ್ದರ ಜತೆಯಲ್ಲೇ, ಒಡೆಯರು ಜನಪರ ಕಾರ್ಯಗಳನ್ನು ಕೈಗೊಂಡು, ಜನಸ್ನೇಹಿ ರಾಜ್ಯವನ್ನು ರೂಪಿಸಿದ್ದರು. ಕಳೆದ ನೂರು ವರ್ಷಗಳಿಂದ ಮೈಸೂರು ರಾಜ್ಯವೆಂದರೆ ಸುಭಿಕ್ಷದ ನಾಡು, ನ್ಯಾಯ ನೀತಿ ಚಾಲ್ತಿ ಯಲ್ಲಿರುವ ನಾಡು. ಇದನ್ನು ಮೊದಲಿನಿಂದಲೇ ಅರಿತಿದ್ದ ಮೋದಿಯವರು, ಮೈಸೂರಿನ ಕುರಿತು ವಿಶೇಷ ಪ್ರೀತಿ ಮತ್ತು ಕುತೂ ಹಲ ಬೆಳೆಸಿಕೊಂಡಿದ್ದರಲ್ಲಿ ವಿಶೇಷವಿಲ್ಲ.

2008ರಲ್ಲಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ಥಿತ್ವಕ್ಕೆ ಬಂದ ವೇಳೆ ತನ್ನ ಸಂಪುಟದೊಳಗೆ ಸೇರುವ ಮಂತ್ರಿಗಳು ದಕ್ಷತೆ ಯಿಂದ ಕೂಡಿರಬೇಕು ಎಂಬ ಕಾರಣಕ್ಕಾಗಿ ಮೈಸೂರಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ನೂತನ ಮಂತ್ರಿಳಿಗಾಗಿ ಅಭ್ಯಾಸ ವರ್ಗ ಕಾರ್ಯಕ್ರಮ ರೂಪಿಸಲಾಯಿತು. ಅದರ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದ್ದು ಅಂದು ಗುಜರಾತಿನ ಮುಖ್ಯಮಂತ್ರಿ ಗಳಾಗಿದ್ದ ನರೇಂದ್ರ ಮೋದಿ ಅವರು. ಮೂರು ದಿನಗಳ ಕಾಲ ನಡೆದ ಅಭ್ಯಾಸ ವರ್ಗ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಾದಿಯಾಗಿ ಇಡೀ ಸಚಿವ ಸಂಪುಟದ 32 ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಹಿಂದಿನ ದಿನವೇ
ಮೈಸೂರಿಗೆ ಆಗಮಿಸಿದ್ದ ಮೋದಿ ಅವರು ಮೈಸೂರಿನ ಪ್ರತಿಷ್ಠಿತ ಲಲಿತ ಮಹಲ್ ಹೋಟೆಲಿನಲ್ಲಿ ವಾಸ್ತವ್ಯ ಹೂಡಿದ್ದರು. ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಇಡೀ ಹೋಟೆಲನ್ನು ಎರಡು ದಿನಗಳ ಕಾಲ ಎಸ್‌ಪಿಜಿ ವಶಕ್ಕೆ ನೀಡಲಾಗಿತ್ತು.

ಅಭ್ಯಾಸ ವರ್ಗದ ಅಭ್ಯರ್ಥಿಗಳನ್ನು ಉದ್ದೇಶಿಸಿ ಮೋದಿಯವರು ಆಡಿದ ಮಾತುಗಳು, ಎಲ್ಲಾ ಹಿರಿಯ ರಾಜಕಾರಣಿಗಳಿಗೆ ಮಾರ್ಗದರ್ಶನವನ್ನು ನೀಡುವ ರೀತಿಯಲ್ಲಿತ್ತು. ಅಂದು ಮೋದಿಯವರ ಮಾತುಗಳನ್ನು ಕೇಳಿ ತಾನು ಹಲವು ವಿಷಯಗಳಲ್ಲಿ ಅವುಗಳ ತಿರುನ್ನು ಅಳವಡಿಸಿಕೊಂಡಿದ್ದೇನೆ ಎಂದು ಅಂದು ಶಿಬಿರದಲ್ಲಿ ಭಾಗವಹಿಸಿದ್ದ ಸಂಪುಟ ಸದಸ್ಯರು ಅಲ್ಲಲ್ಲಿ ಹೇಳಿ ಕೊಂಡಿದ್ದುಂಟು.

ವಿಶ್ವವಿದ್ಯಾಲಯ ಆವರಣದಲ್ಲಿ: 2015ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಬಯಲುಮಂದಿರಲ್ಲಿ ಆಯೋಜಿಸಲಾಗಿದ್ದ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಾವೇಶ ಹಾಗೂ ಸುತ್ತೂರು ಕ್ಷೇತ್ರದ ವತಿಯಿಂದ ಆಯೋಜಿಸಲಾಗಿದ್ದ ಹಿರಿಯ ಶ್ರೀಗಳಾದ ಡಾ.ಶಿವರಾತ್ರಿ ರಾಜೇಂದ್ರ  ಸ್ವಾಮೀಜಿಯ ವರ ಶತಮಾನೋತ್ಸವ ಕಾರ‌್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಶ್ರೀಗಳ ಶತಮಾನೋತ್ಸವ ಕಾರ‌್ಯಕ್ರಮ ವೇಳೆ ಲಿಂಗೈಕ್ಯ ಜಗದ್ಗುರು, ಶತಾಯುಷಿ ತುಮಕೂರಿನ ಸಿದ್ಧ ಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿ, ಮೈಸೂರಿನ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರೀ ದೇಶೀಕೇಂದ್ರ ಸ್ವಾಮೀಜಿ, ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

ಇದೇ ವೇಳೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮೈಸೂರು ನಗರಕ್ಕೆ ಆಗಮಿಸುವ ಮಾರ್ಗದಲ್ಲೇ ಇರುವ ಅವದೂತ ದತ್ತಪೀಠಕ್ಕೆ ಭೇಟಿ ನೀಡಿ ಶ್ರೀ ಗಣಪತಿ ಸಚ್ಚಿದಾನಂದ ಶ್ರೀಗಳೊಂದಿಗೆ ಉಭಯಕು ಶಲೋಪರಿ ವಿಚಾರಿಸಿದರು. ಈ ವೇಳೆ
ಶ್ರೀಗಳು ಮೋದಿ ಅವರಿಗೆ ಶ್ರೀಗಂಧ ಮರದ ಕೆತ್ತನೆಯುಳ್ಳ ದತ್ತಾತ್ರೇಯಸ್ವಾಮಿ ವಿಗ್ರಹವನ್ನು ಉಡುಗೊರೆಯಾಗಿ ನೀಡಿ
ಆಶೀರ್ವದಿಸಿದರು. 2014 ಹಾಗೂ 2019ರಲ್ಲಿ ನಡೆದ ಚುನಾವಣಾ ಪ್ರಚಾರ ಕಾರ‌್ಯ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿದ್ದ ಮೋದಿ ಅವರು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಪರಿವರ್ತನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಆ ಸಂದರ್ಭದಲ್ಲಿ ಮೋದಿಯವರ ಮಾತುಗಳನ್ನು ಆಲಿಸುವ ಉದ್ದೇಶದಿಂದ ಸಹಸ್ರ ಸಹಸ್ರ ಜನರು ಮೈಸೂರು ಸುತ್ತಲಿನ ಹಲವು ಊರುಗಳಿಂದ ಬಂದು ನೆರೆದಿದ್ದು ವಿಶೇಷ.

ಬಹು ಹಿಂದಿನಿಂದಲೂ ತಮ್ಮ ಪಕ್ಷಕ್ಕಾಗಿ ದುಡಿದವರನ್ನು ಸ್ಮರಿಸುವ ಸಲುವಾಗಿ ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿಯ ಹಿರಿಯ ಕಾರ‌್ಯಕರ್ತ ಎನ್.ಆರ್.ಚಂದ್ರಶೇಖರ್ ಅವರಿಗೆ ದೂರವಾಣಿ ಕರೆ ಮಾಡಿ ಕುಶ ಲೋಪರಿ ವಿಚಾರಿಸುವ ಮೂಲಕ ಕಾರ‌್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಿದ್ದರು. ಇವೆಲ್ಲವುಗಳಿಗೂ ಮುನ್ನ 2000ನೇ ಇಸವಿಯಲ್ಲಿ ಮೋದಿ ಅವರು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿದ್ದ ವೇಳೆ ತಮ್ಮ ಖಾಸಗಿ ಕಾರ‌್ಯಕ್ರಮ ನಿಮಿತ್ತ ಒಮ್ಮೆ ಮೈಸೂರಿಗೆ ಭೇಟಿ ನೀಡಿ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ, ಐತಿಹಾಸಿಕ ಮತ್ತು
ಸಾಂಸ್ಕೃತಿಕ ನಗರಿ ಮೈಸೂರನ್ನು ಮೋದಿಯವರು ಬಹುವಾಗಿ ಇಷ್ಟಪಡುತ್ತಿದ್ದರು ಎಂದು ಹೇಳಬಹುದು.

ಕರ್ನಾಟಕ ಭೇಟಿ – 2020
ಪ್ರಧಾನಿ ಮೋದಿಯವರು 2020ರ ಜನವರಿ ಮೊದಲನೆಯ ವಾರ ಬೆಂಗಳೂರು ಮತ್ತು ತುಮಕೂರಿಗೆ ಭೇಟಿ ನೀಡಿದ ಸಂದರ್ಭ ದಲ್ಲಿ ನಡೆಸಿದ ಕೆಲವು ಚಟುವಟಿಕೆಗಳು:
*ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆದ 107ನೆಯ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಉದ್ಘಾಟನೆಯನ್ನು ನೆರವೇರಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷ ವರ್ಧನ ಅವರು ಜತೆಯಲ್ಲಿದ್ದರು. ಈ ಸಮ್ಮೇಳನದಲ್ಲಿ ವಿಜ್ಞಾನ,
ತಂತ್ರಜ್ಞಾನ ಮತ್ತು ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿತ್ತು.

*ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ಸ್ಮಾರಕ ವಸ್ತುಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ಮಾಡಿದರು. ಅದೇ ಸಂದರ್ಭದಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆಯ ದರ್ಶನ ಪಡೆದು, ಗೌರವ ಸಲ್ಲಿಸಿದರು.

*ಬೆಂಗಳೂರಿನಲ್ಲಿ ಡಿಆರ್‌ಡಿಒ ಯುವ ವಿಜ್ಞಾನಿಗಳ ಐದು ಪ್ರಯೋಗಾಲಯಗಳಿಗೆ ಚಾಲನೆ ನೀಡಿದರು.

*ತುಮಕೂರಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಕೃಷಿ ಪ್ರಶಸ್ತಿಗಳನ್ನು ಅರ್ಹ ರೈತರಿಗೆ ವಿತರಿಸಿದರು.

*ಪಿಎಂ ಕಿಸಾನ್ ಯೋಜನೆಯ ವ್ಯಾಪ್ತಿಯಲ್ಲಿ ದೇಶದ ಎಲ್ಲಾ ರೈತರಿಗೆ ವಿಸ್ತೃತ ಸೌಲಭ್ಯ ಎನಿಸಿರುವ ರು.6,000 ವಿತರಣಾ ಯೋಜನೆಗೆ ಚಾಲನೆ ನೀಡಿ, ಸಾಂಕೇತಿಕವಾಗಿ ಕೆಲವು ರೈತರಿಗೆ ತಾವೇ ವಿತರಿಸಿದರು.

Leave a Reply

Your email address will not be published. Required fields are marked *

error: Content is protected !!