ವಿದ್ಯಮಾನ
ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ
ಮೋದಿಯವರ ಹೃದಯದಲ್ಲಿ ಸಂವೇದನೆ, ಶಕ್ತಿ ಮತ್ತು ಸ್ಪಷ್ಟತೆ ಇದೆ, ದೇಶದ ಜನರು ತಮ್ಮ ನಾಯಕನಾಗಿ ನೋಡಬಯಸುವ ವ್ಯಕ್ತಿಯನ್ನು ಪ್ರಧಾನಿ ಮೋದಿ ಯವರು ಜನರ ಮುಂದೆ ಸದಾ ಪ್ರಸ್ತುತಪಡಿಸುತ್ತಾರೆ ಹಾಗಾಗಿ ಅವರ ’ಬ್ರ್ಯಾಂಡ್’ ಭಾರತದಲ್ಲಿ ದೀರ್ಘಕಾಲ ಚಲಾವಣೆಯಲ್ಲಿ ಉಳಿದಿದೆ. ದೇಶದಲ್ಲಿ ಚುನಾವಣೆ ಗಳು ಇನ್ನೇನು ಮುಗಿಯುವ ಹಂತದಲ್ಲಿದ್ದು, ಬಿಜೆಪಿ ಈ ಬಾರಿ ‘ಚಾರ್ ಸೌ ಪಾರ್’ ಆಗುವುದು ಸ್ವಲ್ಪ ಕಷ್ಟವಾದರೂ ‘ಫಿರ್ ಏಕ್ಬಾರ್ ಮೋದಿ ಸರ್ಕಾರ್’ ನಿಸ್ಚಿತ ವಾದಂತೆ ಕಾಣುತ್ತಿದೆ ಮತ್ತು ಮೈ ನರೇಂದ್ರ ದಾಮೋದರ್ ದಾಸ್ ಮೋದಿ ಈಶ್ವರ ಕೀ ಶಪಥ್ ಲೇತಾಹೂಂ…ಕಿ ಎಂದು ದಾಖಲೆಯ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸುವುದನ್ನು ಜನ ನೋಡುವುದು ಮಾತ್ರ ಬಾಕಿ ಇದ್ದಹಾಗೆ ಕಾಣಿಸುತ್ತಿದೆ.
ಇನ್ನೂ ಎರಡು ಹಂತದ ಮತದಾನ ಬಾಕಿ ಇರುವಾಗಲೇ ನಾವು ಬಹುಮತದ ಗೆರೆಯನ್ನು ಆಗಲೇ ದಾಟಿ ಆಗಿದೆ, ಇನ್ನೇನಿದ್ದರೂ ನಾನೂರಕ್ಕಾಗಿ ನಮ್ಮ
ಹೋರಾಟ ಎಂದು ಸ್ವತಃ ಮೋದಿಯವರೇ ಆಂಗ್ಲ ಪತ್ರಿಕೆಯೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅವರಂದುಕೊಂಡಂತೆ ಆದರೆ, ಈ ಗೆಲುವನ್ನೂ ಬಿಜೆಪಿ ಪಕ್ಷದ ಗೆಲುವು ಎನ್ನುವುದಕ್ಕಿಂತ ಹೆಚ್ಚಾಗಿ ‘ಬ್ರ್ಯಾಂಡ್ ಮೋದಿಯ’ ಗೆಲುವು ಎಂದೇ ಪರಿಗಣಿಸಬೇಕಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಜಗತ್ತನ್ನೇ ವ್ಯಾಪಿಸಿರುವ ವಿಶ್ವಾಸಾರ್ಹ ‘ಮೋದಿ ಬ್ರ್ಯಾಂಡ್’, ಹತ್ತು ವರ್ಷಗಳ ನಂತರವೂ ದೇಶದಲ್ಲಿ ಇನ್ನೂ ಜೀವಂತವಾಗಿದೆ ಮತ್ತು ಬೆಳೆಯುತ್ತಿದೆ
ಎನ್ನುವುದು ಚುನಾವಣಾ ಫಲಿತಾಂಶದಿಂದ ನಿರ್ವಿವಾದ ಆಗಲಿದೆ. ಮೊನ್ನೆ ಮೊನ್ನೆ ಖಾಸಗಿ ವಾಹಿನಿಯೊಂದರಲ್ಲಿ ಲೇಖಕ ಸಂತೋಷ್ ದೇಸಾಯಿಯವರು, ಮೋದಿಯವರ ಹೃದಯದಲ್ಲಿ ಸಂವೇದನೆ, ಶಕ್ತಿ ಮತ್ತು ಸ್ಪಷ್ಟತೆ ಇದೆ, ದೇಶದ ಜನರು ತಮ್ಮ ನಾಯಕನಾಗಿ ನೋಡಬಯಸುವ ವ್ಯಕ್ತಿ ಯನ್ನು ಮೋದಿಯವರು ಅವರ ಮುಂದೆ ಪ್ರಸ್ತುತಪಡಿಸುತ್ತಾರೆ ಹಾಗಾಗಿ ಅವರ ‘ಬ್ರ್ಯಾಂಡ್’ ಭಾರತದಲ್ಲಿ ದೀರ್ಘಕಾಲ ಚಲಾವಣೆಯಲ್ಲಿ ಉಳಿದಿದೆ ಎಂದಿರುವುದು ವಿರೋಧಿಗಳೂ ಒಪ್ಪಬೇಕಾದ ಮಾತಾಗಿದೆ.
ಮೋದಿಯವರು ಗುಜರಾತಿನ ಮುಖ್ಯಮಂತ್ರಿಗಳಾಗಿದ್ದಾಗಲೇ ತಮ್ಮ ಕ್ರಾಂತಿಕಾರಿ ಆಡಳಿತದಿಂದಾಗಿ ಗುಜರಾತಿನಿಂದ ಆಚೆಗೂ ಪರಿಚಿತರಾಗಿದ್ದರೂ ಗುಜರಾತ್
ನಿಂದ ಭಾರತಕ್ಕೆ ಮೋದಿ ಬ್ರ್ಯಾಂಡ್ ಅನ್ನು ಪಕ್ಷ ವಿಸ್ತರಿಸಲು ಹೊರಟಾಗ ಈ ಮಟ್ಟದ ಫಲಿತಾಂಶಗಳನ್ನು ಬಿಜೆಪಿಯನ್ನೂ ಸೇರಿ ಯಾವ ರಾಜಕೀಯ ಪಕ್ಷಗಳೂ ನಿರೀಕ್ಷಿಸಿರಲಿಕ್ಕಿಲ್ಲ. ಮೂರು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮತ್ತು ೨೦೦೨ ರ ಮುಸ್ಲಿಂ ವಿರೋಧಿ ಧಂಗೆಗಳ ಕಳಂಕವನ್ನು ಹೊತ್ತಿದ್ದ. ೬೩ ವರ್ಷ ವಯಸ್ಸಿನ ಮೋದಿಯವರು ರಾಷ್ಟ್ರೀಯ ಬ್ರಾಂಡ್ ಆಗಲು ಪ್ರಯತ್ನಿಸುತ್ತಾ ೧೪೦ ಕೋಟಿ ಜನರನ್ನು ತಲುಪುವುದು ಸುಲಭದ ಮಾತಾಗಿರಲಿಲ್ಲ. ಆದರೆ, ಕಳೆದ ಹತ್ತು ವರ್ಷದಲ್ಲಿ ಮೋದಿಯವರು ತಾನು ಕೇವಲ ಪ್ರಾದೇಶಿಕ, ಬಲಪಂಥೀಯ ರಾಜಕಾರಣಿ ಎನ್ನುವ ಹಣೆಪಟ್ಟಿ ಕಳಚಿಕೊಂಡು, ಸ್ಪಷ್ಟ ಅಭಿವೃದ್ಧಿ ಕಾರ್ಯಸೂಚಿ ಯೊಂದಿಗೆ ಎಲ್ಲರೂ ಒಪ್ಪುವ ಜಾಗತಿಕ ನಾಯಕರಾಗಿ ಪರಿವರ್ತನೆ ಹೊಂದಿದ್ದು ಸೊಜಿಗವೇ ಸರಿ. ಆ ಕಾಲಕ್ಕೆ ಎಲ್ಲಾ ಅಪರೂಪಕ್ಕೆ ಮಾತ್ರ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದ ಮೋದಿ ಶೀಘ್ರವಾಗಿ ಜಗತ್ತಿನ ಜೊತೆಗೆ ಸಂವಹನಿಸುವ ಕಲೆಯನ್ನು ರೂಢಿ ಮಾಡಿಕೊಂಡುಬಿಟ್ಟಿದ್ದರು.
ಪ್ರಾದೇಶಿಕವಾಗಿ ಸೀಮಿತವಾಗಿದ್ದ ರಾಜಕಾರಣಿಯೊಬ್ಬ ರಾಷ್ಟ್ರಮಟ್ಟಕ್ಕೆ ಹೋಗುವ ಧೈರ್ಯಮಾಡುವುದು ಅಪರೂಪ. ಆದರೆ, ಮೋದಿ ಆ ಧೈರ್ಯ ಮಾಡಿ
ತೋರಿಸಿದರು. ದೇಶದಲ್ಲಷ್ಟೇ ಅಲ್ಲ, ಬೃಹತ್ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಳೆದು ನಿಂತು ಮೋಡಿ ಮಾಡಿದರು. ಪ್ರಧಾನಿ ಹುzಗೆ ಬಿಜೆಪಿಯ ಆಯ್ಕೆ ಎಂದು ಹೆಸರಿಸುವ ಆರು ತಿಂಗಳ ಮೊದಲೇ ಮೋದಿ ಅವರು ತಯಾರಿ ಶುರಿಮಾಡಿಕೊಂಡಿದ್ದರು. ದೇಶದ ಉದ್ದಗಲ ೫,೦೦೦ ಕ್ಕೂ ಹೆಚ್ಚು ಕಾರ್ಯ ಕ್ರಮಗಳು ಮತ್ತು ರಾಜಕೀಯ ರ್ಯಾಲಿಗಳನ್ನು ನಡೆಸಿದರು.ಹೋದ ಗುಜರಾತ್ನ ಯಶಸ್ವಿ ಅಭಿವೃದ್ಧಿ ಮಾದರಿಯ ಬಗ್ಗೆ ಮಾತನಾಡಿದರು.
ಸರಕಾರಗಳು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವೇಗದ ಅಗತ್ಯತೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಚುರುಕುಗೊಳಿಸಲು ಯುವಕರ ಕೌಶಲ್ಯವನ್ನು
ಬಳಸಕೊಳ್ಳುವ ಅಗತ್ಯತೆಯ ಬಗ್ಗೆ ಅವರು ಮಾತನಾಡಿದರು. ಆ ಮಾತುಗಳು ಅವರಿಗೆ ಅನೇಕ ಯುವ ಅಭಿಮಾನಿಗಳನ್ನು ಗಳಿಸಿಕೊಟ್ಟಿತು. ಯುವಕರು ಮೋದಿಯವರನ್ನು ರಾಷ್ಟ್ರವನ್ನು ಸಮಗ್ರವಾಗಿ ಮುಂದಕ್ಕೆ ಕೊಂಡೊಯ್ಯಬಲ್ಲ ಒಬ್ಬ ದಾರ್ಶನಿಕನಾಗಿ ನೋಡಲು ಶುರುಮಾಡಿದರು. ಒಬ್ಬ ನಾಯಕನಾದವನಿಗೆ ಅಲ್ಪಕಾಲವೂ ತನಗಿರುವ ಜನಪ್ರಿಯತೆಯನ್ನು ಊಳಿಸಿಕೊಳ್ಳುವುದೇ ಕಷ್ತವಾದ ಈ ಕಾಲಘಟ್ಟದಲ್ಲಿ ಮೂರು ಬಾರಿ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ೧೦ ವರ್ಷ ದೇಶದ ಪ್ರಧಾನಿಯಾಗಿ ಆಡಳಿತ ವಿರೋಧಿ ಭಾವನೆಗೆ ಅವಕಾಶವನ್ನೇ ಕೊಡದೇ ತನ್ನ ವರ್ಚಸ್ಸನ್ನು ಬೆಳೆಸಿಕೊಳ್ಳುತ್ತಾ ಸಾಗುವುದು ಅಂದರೆ ಅದು
ಮೋದಿಯವರಿಗೆ ಮಾತ್ರ ಸಾಧ್ಯ ಎಂದು ಹೇಳಬಹುದು.
ವಿವಿಧ ಮಾಧ್ಯಮಗಳ ಮೂಲಕ ಜನರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ತಮ್ಮ ವಿಶ್ವಾಸಾರ್ಹ ವ್ಯಕ್ತಿತ್ವವನ್ನು ಅವರ ಮನಸ್ಸಿನಲ್ಲಿ ಘಟ್ಟಿಯಾಗಿ ನಿಲ್ಲಿಸುವ ಮತ್ತು ತನಗೆ ಬೇಕಾದ ರೀತಿಯಲ್ಲಿ ಪರಿಸ್ಥಿತಿಯನ್ನು ಹೊಂದಿಸಿ ಗುರಿಯನ್ನು ಸಾಧಿಸುವ ಅಸಾಧಾರಣ ಸಾಮರ್ಥ್ಯವನ್ನು ಮೋದಿಯವರಿಗಿದೆ. ಹಾಗಾಗಿಯೇ, ಸಾಂಪ್ರದಾಯಿಕವಾಗಿ ಬಿಜೆಪಿಗೆ ಆದ್ಯತೆ ನೀಡದ ರಾಜ್ಯಗಳಲ್ಲಿಯೂ ಮೋದಿ ಅವರ ಬ್ರ್ಯಾಂಡ್ ಇಮೇಜ್ ಇನ್ನೂ ಜನಪ್ರಿಯವಾಗಿದೆ. ವಿಧಾನಸಭೆಗಳಿಗೆ ತಮಗೆ ಬೇಕಾದ ಪಕ್ಷಗಳನ್ನು ಆಯ್ಕೆ ಮಾಡಿಕೊಳ್ಳುವ ಜನರು, ಲೋಕಸಭೆಯಲ್ಲಿ ಮಾತ್ರ ಮೋದಿಯವರಿಗೆ ಮತ ಹಾಕುವುದನ್ನು ನಾವು ಕಾಣಬಹುದು. ಕಾರಣಗಳು ಸರಳ! ಜನ ಮನದಲ್ಲಿ ಮೂಡಿರುವ ನರೇಂದ್ರ ಮೋದಿಯವರ ಚಿತ್ರ ಮತ್ತು ಅವರ ಬದಲಾಗದ ಚಾರಿತ್ರ್ಯ ಅಷ್ಟೇ.
ಹಾಗಾದರೆ ಅಧಿಕಾರ-ವಿರೋಧಿ ಸಂವೇದನೆಯಿಂದ ನರೇಂದ್ರ ಮೋದಿಯವರನ್ನು (oeಟ್ಚh ಛಿoಜಿoಠಿZಛಿ) ಆಘಾತ ನಿರೋಧಕವಾಗಿಸುವುದು ಯಾವುದು ಎಂದರೆ ಅದು ಅಭಿವೃದ್ಧಿ ಆಧಾರಿತ ಧನಾತ್ಮಕ ರಾಜಕಾರಣ ಎನ್ನುತ್ತಾರೆ ವಿಶ್ಲೇಷಕರು. ಕಳೆದ ೧೦ ವರ್ಷಗಳಲ್ಲಿ, ಮೋದಿ ಸರಕಾರವು ಬಹುತೇಕ ಎಲ್ಲಾ ವರ್ಗದ ಮತದಾರರಿಗಾಗಿ ಅಂದರೆ ಯುವಕರು, ರೈತರು, ಬಡವರು ಮತ್ತು ಹಿರಿಯರು ಇವರುಗಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ತನ್ನ ಸೈದ್ಧಾಂತಿಕ ಮತ್ತು ಮೂಲ ಭರವಸೆಗಳಾದ ರಾಮ ಮಂದಿರ ನಿರ್ಮಾಣ, ಸಂವಿಧಾನದ ೩೭೦ ನೇ ವಿದಿಯ ರದ್ಧತಿ, ‘ತ್ರಿಪಲ್ ತಲಾಕ್’
ವಿರುದ್ಧದ ಕಾನೂನು, ಏಕರೂಪ ನಾಗರೀಕ ಸಂಹಿತೆ ಮತ್ತು ಮಹಿಳಾ ಮೀಸಲಾತಿ ಮುಂತಾದವುಗಳನ್ನು ಹೇಳಿದ ಸಮಯಕ್ಕೆ ಪೂರೈಸಿ ಮುಗಿಸಿದೆ.
ರಚನಾತ್ಮಕ ಆರ್ಥಿಕ ಸುಧಾರಣೆಗಳ ಮೂಲಕ ಉತ್ತಮ ಆರ್ಥಿಕ ವ್ಯವಹಾರ ವಹಿವಾಟಿಗೆ ಅನುಕೂಲಕರ ವಾತಾವರಣವನ್ನು ದೇಶದಲ್ಲಿ ಒದಗಿಸಿದೆ. ಹಾಗಾಗಿ ಬಿಜೆಪಿಗೆ ಹೆಚ್ಚುವರಿ ಮತಗಳನ್ನು ತಂದುಕೊಡುವುದು ಬ್ರ್ಯಾಂಡ್ ಮೋದಿಗೆ ಸಾಧ್ಯವಾಗಿದೆ ಎನ್ನುತ್ತಾರೆ ವಿಶ್ಲೇಶಕರುಗಳು. ಎಲ್ಲಾ ಹಂತಗಳಲ್ಲಿ ಮತದಾರರ ಕ್ರೋಢೀಕರಣ, ವಾಕ್ಚಾತುರ್ಯ, ದೂರಗಾಮಿ ನೀತಿಗಳು, ವಯಕ್ತಿಕ ವರ್ಚಸ್ಸು, ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುವ ರೀತಿ, ಈ ಕಾಲಘಟ್ಟದಲ್ಲಿ ಭಾರತದ ಜಾಗತಿಕವಾಗಿ ಗಳಿಸಿದ ಸ್ಥಾನಮಾನಗಳು ಇವುಗಳೇ೨೦೨೪ ರ ಚುನಾವಣೆಯಲ್ಲಿಯೂ ಜನರಲ್ಲಿ ಮೋದಿಯವರ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಘೆಈಅ ಮತ್ತು ಐ ಘೆ ಈ ಐ ಅ ಒಕ್ಕೂಟಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ, ‘ಬ್ರ್ಯಾಂಡ್ ಮೋದಿ’ ಎಂದು ಯಾರಾದರೂ ಕಣ್ಮುಚ್ಚಿ ಹೇಳಬಹುದಾಗಿದೆ.
ಕಾಂಗ್ರೆಸ್ ಹಾಗೂ ಇತರ ವಿರೋಧಪಕ್ಷಗಳ ನಾಯಕತ್ವದ ದೌರ್ಬಲ್ಯವೂ ಮೋದಿಯವರ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಲು ಸಹಾಯ ಮಾಡಿತು ಎಂದೂ ಹೇಳುವವರಿದ್ದಾರೆ. ಶುದ್ಧ ಚಾರಿತ್ರ್ಯದ ಮತ್ತು ಮತದಾರರ ಮೇಲೇ ವಿಶಿಷ್ಟವಾದ ಪ್ರಭಾವ ಬೀರಬಲ್ಲ ಒಬ್ಬ ನಾಯಕನನ್ನು ಆಯ್ಕೆ ಮಾಡಿ ಅವನ ಮೇಲೆ ಚೈತನ್ಯಾರೋಪಣೆ (mಛ್ಟಿoಟ್ಞಜ್ಛಿಜ್ಚಿZಠಿಜಿಟ್ಞ) ಮಾಡಿ ಮತದಾರರ ಮುಂದೆ ತಂದು ನಿಲ್ಲಿಸಿ ಜನ ಬೆಂಬಲವನ್ನು ಬಯಸುವುದು ಯಾವ ಪಕ್ಷಕ್ಕೂ ಹೊಸ ರಾಜಕೀಯ ತಂತ್ರವೇನೂ ಅಲ್ಲ. ಎಲ್ಲಾ ಪಕ್ಷಗಳಿಗೂ ಚುನಾವಣೆ ಗೆಲ್ಲಲು ಜನರಿಗೆ ತೋರಿಸಬಹುದಾದ ಒಂದು ಪ್ರಭಾವ ಶಾಲಿ ಮುಖ ಬೇಕೇ ಬೇಕು ಎನ್ನುವ ಅರಿವು ಇದೆ. ೧೯೭೦ ರ ದಶಕದಲ್ಲಿ ‘ಇಂದಿರಾ ಲಾವೋ ದೇಶ್ ಬಚಾವೋ’ ಟ್ಯಾಗ್‌ಲೈನ್‌ನೊಂದಿಗೆ ಶ್ರೀಮತಿ ಇಂದಿರಾ ಗಾಂಧಿಯವರನ್ನು ದೇಶದ ಅತಿ
ಎತ್ತರದ ನಾಯಕಿ, ದೇಶವನ್ನ ಅವರು ಬಿಟ್ಟರೆ ಇನ್ನಾರೂ ಆಳಲು ಅಸಾಧ್ಯ ಎಂದು ಕಾಂಗ್ರೆಸ್ ಪಕ್ಷವು ಜನರಮುಂದೆ ಪ್ರಚಾರ ಮಾಡಿರುವುದನ್ನು ನಾವು ನೋಡಿದ್ದೇವೆ.
ನಂತರ ರಾಜೀವ್ ಗಾಂಧಿಯವರಿಗೂ ‘ಬ್ರ್ಯಾಂಡ್ ಇಮೇಜ್’ ಕಟ್ಟುವಲ್ಲಿ ಕಾಂಗ್ರೆಸ್ ಬಹುಮಟ್ಟಿಗೆ ಯಶಸ್ವಿಯೂ ಆಗಿತ್ತು ಮತ್ತು ಈಗ ರಾಹುಲ್ ಗಾಂಧಿಯವರ ಬ್ರಾಂಡಿಂಗ್ ಕುರಿತೂ ಕಾಂಗ್ರೆಸ್ ಸತತವಾಗಿ ಪ್ರಯತ್ನಿಸುತ್ತಿದೆ. ಹಾಗೆಯೇ, ಭಾರತೀಯ ಜನತಾ ಪಕ್ಷವು ಈ ಹಿಂದೆ ಎಲ್.ಕೆ.ಅಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರುಗಳನ್ನು ದೇಶದ ನಾಯಕರಾಗಿ ಬಿಂಬಿಸಿತ್ತು. ೧೯೯೬ ರ ‘ಅಬ್ ಕಿ ಬಾರಿ ಅಟಲ್ ಬಿಹಾರಿ’ ಘೋಷಣೆ ನೆನಪಿದೆ ತಾನೆ ? ಮುಂದೆ ವಿ.ಪಿ.ಸಿಂಗ್ ಅವರನ್ನು ಭ್ರಷ್ಟಾಚಾರ ವಿರೋಧಿಯೆಂದು ಮತ್ತು ಹಿಂದುಳಿದ ವರ್ಗದ ಉದ್ಧಾರಕ ಎಂದು ಬಿಂಬಿಸಿ ಜನತಾ ಪರಿವಾರ ಚುನಾವಣೆಯನ್ನು ಗೆದ್ದು ಕೆಲಕಾಲ ಸರಕಾರವನ್ನೂ ನಡೆಸಿತು. ಆದರೆ ಹಿಂದಿನ ಎಲ್ಲ ಉದಾಹರಣೆಗಳಿಗಿಂತ ‘ಮೋದಿ ಬ್ರ್ಯಾಂಡ್’ ಜನರ ಮೇಲೆ ಹೆಚ್ಚುಕಾಲ ಪ್ರಭಾವ ಬೀರಿದಂತೆ ಕಾಣುತ್ತಿದೆ.
ಹಾಗಾಗಿಯೇ, ‘ಮತ್ತೊಮ್ಮೆ ಬಿಜೆಪಿ’ ಎನ್ನುವ ಬದಲಿಗೆ ಮತ್ತೊಮ್ಮೆ ಮೋದಿ; ಬಿಜೆಪಿ ಕಿ ಗ್ಯಾರಂಟಿ ಎನ್ನುವ ಬದಲಿಗೆ ಮೋದಿ ಕಿ ಗ್ಯಾರಂಟಿ ಎನ್ನುವ ೨೦೨೪ ರ ಬಿಜೆಪಿಯ ಚುನಾವಣಾ ಘೋಷಣೆಯನ್ನು ನೋಡಿದರೆ ಬಿಜೆಪಿ ಎನ್ನುವ ರಾಷ್ಟ್ರೀಯ ಪಕ್ಷಕ್ಕಿದ್ದ ವರ್ಛಸ್ಸನ್ನೂ ಮೀರಿ ಮೋದಿ ಬ್ರ್ಯಾಂಡ್ ಬೆಳೆದಿದೆ ಎಂದು ಹೇಳಬಹುದು. ಎಲ್ಲಿ ನೋಡಿದರೂ ಇಂದು ಬಿಜೆಪಿಯ ಹೆಸರು ಮತ್ತು ಚಿಹ್ನೆಗಿಂತಲೂ ಮೋದಿ ಬ್ರ್ಯಾಂಡಿಂಗ್ ಢಾಳಾಗಿ ಕಾಣುತ್ತಿದೆ.
ಕಾರಣ, ಆ ವ್ಯಕ್ತಿಗಿರುವ ವಿಶ್ವಾಸಾರ್ಹತೆ. ಬಿಜೆಪಿಯ ಮೂಲ ಸಂಘಟನೆಯಾಗಿದ್ದ ಜನಸಂಘ ಭಾರತದಲ್ಲಿ ಮೊದಲ ಲೋಕಸಭೆ ಚುನಾವಣೆಯಲ್ಲಿ ೩
ಸ್ಥಾನಗಳನ್ನು ಮಾತ್ರ ಗೆದ್ದಿತ್ತು ಮತ್ತು ಮುಂದೆ ೨೪ ವರ್ಷಗಳ ಕಾಲ ರಾಜಕೀಯ ಪಕ್ಷವಾಗಿ ಅಂತೂ ಇಂತೂ ಜೀವ ಉಳಿಸಿಕೊಂಡು ಮುಂದುವರೆದಿತ್ತು. ತರುವಾಯ, ೧೯೭೭ ರಲ್ಲಿ ಜನಸಂಘ ಜನತಾ ಪಕ್ಷದಲ್ಲಿ ವಿಲೀನಗೊಂಡು ಸರಕಾರವನ್ನು ರಚಿಸಿತು. ೧೯೭೯ರಲ್ಲಿ ಜನತಾ ಪಕ್ಷದ ನೇತ್ರತ್ವದ ಸಮ್ಮಿಶ್ರ ಸರಕಾರ ಪತನವಾದ ನಂತರ ಬಿಜೆಪಿ ಪಕ್ಷದ ರಚನೆಯಾಯಿತು. ಅಟಲ್ ಬಿಹಾರಿ ವಾಜಪೇಯಿ ಅವರು ಜನತಾ ಸರ್ಕಾರದ ಪತನದ ನಂತರ ಅವರು
೧೯೮೦ ರಲ್ಲಿ ಭಾರತೀಯ ಜನತಾ ಪಕ್ಷವಾಗಿ ಜನಸಂಘವನ್ನು ಮರುಸ್ಥಾಪಿಸಿದರು ಮತ್ತು ಅವರು ಬಿಜೆಪಿ ಪಕ್ಷದ ಮೊದಲ ಅಧ್ಯಕ್ಷರಾಗಿದ್ದರು.
ಸಮಾಜದ ಮೇಲೆ ಅತ್ಯಂತ ಸಕಾರಾತ್ಮಕವಾದ ಪ್ರಭಾವ ಬೀರಿದ ಕೆಲವೇ ಕೆಲವು ಭಾರತೀಯ ರಾಜಕಾರಣಿಗಳಲ್ಲಿ ವಾಜಪೇಯಿ ಒಬ್ಬರು ಎನ್ನುವುದನ್ನು ನಿರ್ವಿವಾದವಾಗಿ ಹೇಳಬಹುದು. ಅಡ್ವಾಣಿ ಅವರು ಹೊಸದಾಗಿ ಸ್ಥಾಪಿಸಲಾದ ಬಿಜೆಪಿ ಪಕ್ಷದಲ್ಲಿ ವಾಜಪೇಯಿಯವರ ನಂತರದ ಪ್ರಮುಖ ನಾಯಕರಾಗಿದ್ದರು ಮತ್ತು ರಾಮ ಮಂದಿರ ನಿರ್ಮಾಣದ ಉದ್ದೇಶ ಹೊಂದಿದ ರಥಯಾತ್ರೆಯ ಮೂಲಕ ಬಹುಸಂಖ್ಯಾತ ಹಿಂದುಗಳನ್ನು ಸಂಘಟಿಸಿ ಪಕ್ಷವನ್ನು ದೇಶಾದ್ಯಂತ ಬಲಿಷ್ಠಗೊಳಿಸಿ ಕೇಂದ್ರದಲ್ಲಿ ಸ್ವತಂತ್ರವಾಗಿ ಅಲ್ಲದಿದ್ದರೂ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ವಾಜಪೇಯಿಯವರು ಬಹಳ ಪಕ್ಷಗಳ ಜೊತೆಗೆ ಜೊತೆಗೂಡಿ ಸಮ್ಮಿಶ್ರ ಸರಕಾರ ರಚಿಸಿ ಅತ್ಯಂತ ಪಾರದರ್ಷಕವಾದ ಆಡಳಿತವನ್ನು ನೀಡಿ ಅಲ್ಪಕಾಲದ ಅಭಿವೃದ್ಧಿಯನ್ನೂ ಮಾಡಿ ತೋರಿಸಿದ್ದರು.
ದುರದೃಷ್ಟವಶಾತ್ ವಾಜಪೇಯಿಯವರು ಪುನಃ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ವಿಫಲವಾದರು. ಅವರ ಸರಕಾರ ಮಾಡಿದ ಒಳ್ಳೆಯ ಕೆಲಸಗಳ ವಿವರಗಳು
ಸರಿಯಾಗಿ ‘ಮಾರ್ಕೇಟಿಂಗ್’ ಅಗದಿರುವುದಕ್ಕೆ ಪಕ್ಷ ಸೋಲನುಭವಿಸಬೇಕಾಯಿತು ಎಂದು ಆಗ ವಿಷ್ಲೇಶಿಸಲಾಯಿತು. ತಮ್ಮ ಸಿದ್ಧಾಂತದಿಂದ ಪಕ್ಕಕ್ಕೆ
ಸರಿಯಲಾಗದ ಮನಸ್ಥಿತಿಯಿಂದ ಮತ್ತು ಅವರ ವಯಸ್ಸಿನ ಕಾರಣಗಳಿಂದಾಗಿ ವಾಜಪೇಯಿ ಮತ್ತು ಅಡ್ವಾಣಿಯವರಿಗೆ ತಮ್ಮ ಜನಪ್ರಿಯತೆಯನ್ನು ಮತವಾಗಿ
ಪರಿವರ್ತಿಸಿ ಮತ್ತೆ ಬಿಜೆಪಿಯನ್ನು ಅಽಕಾರಕ್ಕೆ ತರಲು ಆಗ ಸಾಧ್ಯವಾಗಿರಲಿಲ್ಲವೇನೋ!. ಆರ್‌ಎಸ್‌ಎಸ್ ಮತ್ತು ಹಿಂದಿನ ಭಾರತೀಯ ಜನಸಂಘದ ಆದರ್ಷಗಳನ್ನು ಮುಂದುವರೆಸುತ್ತಾ, ಬಿಜೆಪಿಯು ದೇಶದ ಏಕತೆ, ಸಮಗ್ರತೆ, ಅದರ ಅಂತರ್ಗತ ಅನನ್ಯತೆ, ಸಾಮಾಜಿಕ ಶಕ್ತಿ, ಮತ್ತು ಸಾಂಸ್ಕೃತಿಕ ಪ್ರತ್ಯೇಕತೆಗೆ ಹೋರಾಡುತ್ತಾ ರಾಜಕೀಯದಲ್ಲಿ ಉಳಿದುಕೊಂಡು ಬಂತು. ಸಂಘಟನೆ ಮತ್ತು ರಾಷ್ಟ್ರೀಯತೆಯ ತತ್ವಗಳೇ ಬಿಜೆಪಿಯ ಬೆಳವಣಿಗೆಯ ಈ ಕಾಲ ಘಟ್ಟದಲ್ಲಿ ಪಕ್ಷಕ್ಕೆ ಪ್ರಧಾನವಾಗಿತ್ತೇ ವಿನಃ ಅಽಕಾರ ಆಗಿರಲಿಲ್ಲ. ೨೦೧೪ ರ ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ದೇಶದೆಡೆ ಬಿಜೆಪಿಯ ಅದೃಷ್ಟ ರೇಖೆಯ ಮೇಲ್ಮುಖ ಪ್ರಯಾಣ ಪ್ರಾರಂಭವಾಯಿತು. ಗುಜರಾತ್ ರಾಜ್ಯದ ಬಹುಕಾಲದ ಮುಖ್ಯಮಂತ್ರಿನರೇಂದ್ರ ಮೋದಿ ಅವರು ಪಕ್ಷದ ಕೆಲವು ಹಿರಿಯರ ವಿರೋಧದ ನಡುವೆಯೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಗಿ ಆಯ್ಕೆ ಆದರು. ಪಕ್ಷದ ಈ ನಿರ್ಧಾರ ಬಿಜೆಪಿಗೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ತಂದುಕೊಟ್ಟಿತು.
ಪಕ್ಷವು ಪವಾಡ ಸದೃಶವಾಗಿ ೨೮೨ ಸ್ಥಾನಗಳನ್ನು ಗೆದ್ದು ಮೋದಿ ಅವರು ಮೊದಲ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮತ್ತೆ ೨೦೧೯ ರಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಿಂದ ಜಯಗಳಿಸುವುದರ ಮೂಲಕ ಹೊಸ ಇತಿಹಾಸ ರಚಿಸಿದರು. ಮೋದಿಯವರ ಬಲಗೈ ಬಂಟ ಅಮಿತ್ ಶಾ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮೋದಿಯವರ ಮುಖವನ್ನು ಮುಂದಿಟ್ಟುಕೊಂಡು ದೇಶದಾದ್ಯಂತ ಒಂದಾದ ಮೇಲೆ ಒಂದರಂತೆ ಚುನಾವಣೆಗಳನ್ನು ಗೆಲ್ಲುತ್ತಾ ದಾಖಲೆ ನಿರ್ಮಿಸಿ ಚುನಾವಣಾ ಚಾಣಕ್ಯ ಎಂದು ಹೆಸರುವಾಸಿಯಾದರು.
ಜನಸಂಘದ ಕಾಲದಿಂದ ದೇಶದ ಜನತಗೆ ನೀಡುತ್ತಾ ಬಂದಿದ್ದ ರಾಮ ಮಂದಿರ, ಸಂವಿಧಾನದ ೩೭೦ ನೇ ವಿಧಿಯ ರದ್ದತಿ ಮತ್ತು ಸಾಮಾನ ನಾಗರಿಕ ಸಂಹಿತೆ
ಮುಂತಾದ ಬಹುತೇಕ ಎ ಭರವಸೆಗಳನ್ನು ಕೇವಲ ಹತ್ತು ವರ್ಷಗಳಲ್ಲಿ ಛಲಬಿಡದ ತ್ರಿವಿಕ್ರಮನಂತೆ ಒಂದೊಂದಾಗಿ ನರೇಂದ್ರ ಭಾಯಿ ಮೋದಿ ಈಡೆರಿಸಿ
ಮುಗಿಸಿದರು. ಈ ಕಾರಣಕ್ಕಾಗಿ ಮೋದಿ ಸರಕಾರದ ಈ ಕಾಲ ಘಟ್ಟವನ್ನು ಬಿಜೆಪಿಗೆ ಹಾಗೂ ದೇಶಕ್ಕೆ ಸುವರ್ಣಯುಗವೆಂತಲೇ ಕರೆಯಬಹುದು. ಹಾಗಾಗಿ,
ಈಗ ಕುತೂಹಲ ಇರುವುದು ಈ ಬಾರಿ ಮತ್ತೆ ಮೋದಿ ಗೆಲ್ಲುತ್ತಾರೋ ಇಲ್ಲವೋ ಎನ್ನುವುದು ಅಲ್ಲವೇ ಅಲ್ಲ, ನಾಲ್ಕು ನೂರು ದಾಟುತ್ತಾರೋ ಇಲ್ಲವೋ ಎನ್ನುವು ದಷ್ಟೇ ಆಗಿದೆ. ಈ ಕುತೂಹಲಕ್ಕಂತೂ ಉತ್ತರ ಜೂನ್ ನಾಲ್ಕಕ್ಕೆ ಸಿಗಲಿದೆ. ಆದರೆ, ದೇಶದ ಜನತೆಗೆ ಗಂಭೀರವಾದ ಮಿಲಿಯನ್ ಡಾಲರ್ ಪ್ರಶ್ನೆ ಇನ್ನೊಂದಿದೆ. ಅದು, ಭಾರತಕ್ಕೆ ಮೋದಿಯವರ ನಂತರ ಯಾರು? ಎನ್ನುವುದು. ಈ ಪ್ರಶ್ನೆಗೆ ಕಾಲ ಮಾತ್ರ ಉತ್ತರ ಹೇಳಬಲ್ಲದೇನೋ.