Saturday, 27th July 2024

ವಿಕಲಚೇತನರಿಗೆ ಅನುಕಂಪ ಬೇಡ, ಅವಕಾಶ ನೀಡಿ

ತನ್ನಿಮಿತ್ತ

ಬಸವರಾಜ್ ಎಂ.ಯರಗುಪ್ಪಿ

ಅಂಗವೈಕಲ್ಯ ಶಾಪವಲ್ಲ;ಅವರು ಸಮಸ್ಯೆಗಳಿಗೆ ಸವಾಲೊಡ್ಡಿ ಜಯ ಸಾಧಿಸುವ ಛಲಗಾರರು. ಡಿಸೆಂಬರ್ ೦೩-ವಿಶ್ವ ಅಂಗವಿಕಲರ ದಿನವನ್ನಾಗಿ ಆಚರಿಸಲಾಗು ತ್ತಿದೆ; ಅಂಗವಿಕಲರಿಗೂ ಸಮಾಜದ ಇತರ ವ್ಯಕ್ತಿಗಳಂತೆ ಸಮಾನವಾದ ಅವಕಾಶಗಳು ಸಿಗಬೇಕು. ಅವರಿಗೆ ಯೋಗ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದೇ ಈ ದಿನಾಚರಣೆಯ ಮುಖ್ಯ ಉದ್ದೇಶ ವಾಗಿದೆ.ತನ್ನಿಮಿತ್ತ ವಿಶೇಷ ಲೇಖನ.

ನನ್ನ ಕೈ ಹಿಡಿದು ನನ್ನ ಜೊತೆ ನಡೆ. ನಾವು ಸಾಮಾಜಿಕ ಅಸಮಾನತೆಯ ಪಿಡುಗುಗಳ ಬೆನ್ನು ಮುರಿಯಬೇಕು;ಎಲ್ಲರನ್ನೂ ಒಳಗೊಳ್ಳುವ ಸಮಾಜದಲ್ಲಿ ಘನತೆ ಯಿಂದ ಬದುಕಲು ಅಂಗವೈಕಲ್ಯ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ನಾವು ಸಬಲೀಕರಣಗೊಳಿಸಬೇಕು’ ಹಾಗೆಂದು ವಿಲಿಯಂ ಲೈಟ್ಬೋರ್ನ್ ಹೇಳಿದ್ದು ಅಕ್ಷರಶಃ ಸತ್ಯ. ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶ ಕೊಟ್ಟು ಅವರಿಗೆ ಮೂಲಭೂತ ಸೌಕರ್ಯ ಒದಗಿಸುವ ಮೂಲಕ ಅವರ ಭವಿಷ್ಯಕ್ಕೆ ಬೆಳಕಾ ಗಬೇಕು.

ಆ ಮೂಲಕ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷ ಣಿಕ, ಮಾಹಿತಿ ತಂತ್ರeನ ಮತ್ತು ಮನರಂಜನೆ ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಗುರುತಿಸುವಂತಾಗ
ಬೇಕು. ಈ ಉದ್ದೇಶದಿಂದಲೇ ಪ್ರತಿ ವರ್ಷ ಜಗತ್ತಿನೆಡೆ ಡಿಸೆಂಬರ್ ೦೩ ರಂದು ವಿಶ್ವ ವಿಕಲಚೇತನರ ದಿನವನ್ನಾಗಿ ಆಚರಿಸಲಾಗುತ್ತದೆ.

ಹಿನ್ನೆಲೆ: ಮೊದಲು ಈ ದಿನವನ್ನು ೧೯೯೨ರಲ್ಲಿ ವಿಶ್ವ ಸಂಸ್ಥೆಯು ಆರಂಭಿಸಿತು. ಈ ದಿನದಂದು ಜಗತ್ತಿನಲ್ಲಿರುವ ಅನೇಕ ಅಂಗವಿಕಲ ಯಶೋಗಾಥೆಗಳನ್ನು ಸ್ಮರಿ
ಸಲಾಗುತ್ತದೆ. ಜತೆಗೆ ಅವರ ಸ್ವಾವಲಂಬನೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಕಾರ್ಯಕ್ರಮಗಳು ಈ ದಿನ ನಡೆಯುತ್ತವೆ. ಅವರನ್ನು ಮುಖ್ಯವಾಹಿನಿಗೆ
ಸೇರಿಸುವ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಅಷ್ಟಕ್ಕೂ ಅಂಗವೈಕಲ್ಯ ಎಂದರೆ ಏನು? ದೀರ್ಘಾವಧಿಯ ದೈಹಿಕ, ಮಾನಸಿಕ, ಬೌದ್ಧಿಕ ಅಥವಾ ಸಂವೇ
ದನಾದ ದೌರ್ಬಲ್ಯಗಳು, ನಾನಾ ಅಡೆತಡೆಗಳೊಂದಿಗಿನ ಪರಸ್ಪರ ಕ್ರಿಯೆಯಲ್ಲಿ ಇತರರೊಂದಿಗೆ ಸಮಾನ ಆಧಾರದ ಮೇಲೆ ಸಮಾಜ ದಲ್ಲಿ ಪೂರ್ಣ ಮತ್ತು ಪರಿಣಾಮಕಾರಿ ಭಾಗವಹಿಸು ವಿಕೆಗೆ ಅಡ್ಡಿ ಯಾಗುವ ಸ್ಥಿತಿಯನ್ನು ಅಂಗವೈಕಲ್ಯ ಎಂದು ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ವಿಶ್ವಸಂಸ್ಥೆಯ ಸಮಾವೇಶವು ವ್ಯಾಖ್ಯಾನಿಸಿದೆ.

ಅಂಕವಿಕಲರ ದಿನದ ಥೀಮ್: ಪ್ರತಿ ವರ್ಷ ಈ ದಿನವನ್ನು ವಿವಿಧ ಥೀಮ್‌ಗಳಡಿಯಲ್ಲಿ ಆಚರಿಸಲಾಗುತ್ತದೆ. ಹಾಗಾಗಿ ಈ ಬಾರಿ ಅಂಗವಿಕಲ ವ್ಯಕ್ತಿಗಳ
ಜತೆಗೆ ಮತ್ತು ಅವರ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ರಕ್ಷಿಸಲು ಮತ್ತು ಸಾಽಸಲು ಕೂಡಿ ಕ್ರಮ ಕೈಗೊಳ್ಳುವ ವಿಷಯದ ಮೇಲೆ ಪ್ರಸ್ತುತ ವರ್ಷ
ಹಲ ಕಾರ‍್ಯಕ್ರಮಗಳು ನಡೆಯಲಿವೆ. ಅಂಗವೈಕಲ್ಯವು ಮನಸ್ಸಿನ ಸ್ಥಿತಿಯೂ ಹೌದು. ಅನೇಕರು ತಮ್ಮ ವಿಕಲತೆಯನ್ನು ಮೆಟ್ಟಿ ನಿಂತು ಅನೇಕ ಸಾಧನೆಗಳನ್ನು
ಮಾಡಿ ತಾವೆನೆಂಬುದನ್ನು ಸಾಬೀತುಪಡಿಸಿದ್ದಾರೆ.

?ಪಂಚಾಕ್ಷರ ಗವಾಯಿಗಳು: ಗದಗಿನಲ್ಲಿರುವ ಪ್ರಸಿದ್ಧ ಸಂಗೀತ ಆಶ್ರಮವಾದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಸ್ಥಾಪಕರು. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ, ಫೆಬ್ರುವರಿ  ೦೨, ೧೮೯೨ರಂದು ಜನಿಸಿದರು. ತಾಯಿ ನೀಲಮ್ಮ ಹಾಗು ತಂದೆ ಗುರುಪಾದಯ್ಯ ಚರಂತಿಮಠ. ಗದಿಗೆಯ್ಯ ಇವರ ಹುಟ್ಟು ಹೆಸರು. ಗದಿಗೆಯ್ಯ ಹಾಗೂ ಇವರ ಅಣ್ಣ ಗುರುಬಸಯ್ಯ ಇಬ್ಬರೂ ಹುಟ್ಟುಕುರುಡರು. ಸ್ಥಳೀಯವಾಗಿ ಸಾಧ್ಯವಿದ್ದ ಸಂಗೀತ ಶಿಕ್ಷಣವನ್ನು ಪಡೆದಿದ್ದರು. ಒಮ್ಮೆ ಶ್ರೀಹಕ್ಕಲ ಬಸವೇಶ್ವರ ಜಾತ್ರೆಯಲ್ಲಿ ಹಾಡುತ್ತಿದ್ದ ಈ ಕುರುಡು ಬಾಲಕರ ಹಾಡು ಕೇಳಿದ ಪೂಜ್ಯ ಹಾನಗಲ್ ಕುಮಾರ ಸ್ವಾಮಿಯವರು ಈ ಎಳೆಯರನ್ನು ತಮ್ಮ ಉಡಿಯಲ್ಲಿ ಹಾಕಿಕೊಂಡರು. ಸಂಗೀತಶಾಲೆಗಳ ಖರ್ಚು ತೂಗಿಸಲು ನಾಟಕ ಕಂಪನಿ ಪ್ರಾರಂಭಿಸಿ ಕೈಸುಟ್ಟುಕೊಂಡದ್ದೂ ಆಯಿತು. ಇದೇ ಸಮಯದಲ್ಲಿ ಬರಗಾಲ ಬಿದ್ದದ್ದರಿಂದ ಪಂಚಾಕ್ಷರಿ ಗವಾಯಿಗಳು ತಮ್ಮ ಶಿಷ್ಯರಿಗಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಆಗ ಮುಂದೆ ಬಂದು ನೆರವು ನೀಡಿದವರು ಬಸರಿಗಿಡದ ವೀರಪ್ಪನವರು.

?ಪುಟ್ಟರಾಜ ಗವಾಯಿಗಳು: ಪಂಚಾಕ್ಷರಿ ಗವಾಯಿಗಳ ಪರಮ ಶಿಷ್ಯರಾಗಿದ್ದರು.ರೇವಣಯ್ಯ ಮತ್ತು ಸಿದ್ದಮ್ಮಳಿಗೆ ಮಾರ್ಚ್ ೦೩, ೧೯೧೪ರ ಮಂಗಳವಾರ
ಪುಟ್ಟಯ್ಯನೆಂಬ ಗಂಡು ಮಗು ಜನಿಸಿದನು. ಗವಾಯಿಗಳ ವರ ಹೆಸರು-ಸಾಹಿತ್ಯ-ಸಂಗೀತ ಕ್ಷೇತ್ರದಲ್ಲಿ ತಾಯಿಮನೆಯವರು ಕರೆದ ಪುಟ್ಟಯ್ಯ, ಪುಟ್ಟಯ್ಯಸ್ವಾಮಿ, ಪುಟ್ಟಯ್ಯ ಗವಾಯಿ, ಪುಟ್ಟರಾಜ ಗವಾಯಿಗಳು ಎಂದೇ ಪ್ರಚಾರ ಮತ್ತು ಪ್ರಸಿದ್ಧಿ ಪಡೆಯಿತು. ಸಾಧು ಕಪ್ಪು ವರ್ಣದ, ಕಿರುಗಾತ್ರ ದೇಹದ ಮಗು ಮಿಂಚಿನಂತೆ ಬೆಳಕಿನ ಕಣ್ಣುಗಳ ಮೂಲಕ ಮಗು ಮುದ್ದಾದ ನಗೆಯೊಂದಿಗೆ ತನ್ನತ್ತ ಎಲ್ಲರನ್ನು ಆಕರ್ಷಿಸುತ್ತಿತ್ತು. ಅವನಿಗೆ ಆರು ತಿಂಗಳ ಆಗುವ ವೇಳೆಗೆ ಕಣ್ಣಿನ ಬೇನೆಯಿಂದ ಕಣ್ಣನ್ನು ಕಳೆದುಕೊಂಡು ಅಂಧನಾಗುತ್ತಾನೆ.

ಪಂಚಾಕ್ಷರಿ ಗವಾಯಿಗಳ ಶಿಷ್ಯರಲ್ಲಿ ಇವರು ಉತ್ತರಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತಗಳಲ್ಲಿ ಅಲ್ಲದೆ, ಪುಟ್ಟ
ರಾಜರು ತಬಲಾ, ಹಾರ್ಮೋನಿಯಮ, ಪಿಟೀಲು, ಸಾರಂಗಿ, ಶಹನಾಯಿ ಮೊದಲಾದ ವಾದ್ಯಗಳನ್ನು ನುಡಿಸುವದರಲ್ಲೂ ಸಹ ಪರಿಣತರಾದರು.

?ಇರಾ ಸಿಂಘಾಲ: ಸ್ಕೋಲಿಯೋಸಿಸ್ ಅಂಗವೈಕಲ್ಯದ ಸ್ವರೂಪ ಹೊಂದಿದ್ದರೂ ಅವರು ೨೦೧೪ರಲ್ಲಿ UPSC ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಐಎಎಸ್
ಅಧಿಕಾರಿ. ಇರಾ ೩೧ ಆಗಸ್ಟ್ ೧೯೮೩ ರಂದು ಮೀರತ್ ನಲ್ಲಿ ಜನಿಸಿದರು. ಅವರು ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದರು ಮತ್ತು ದೆಹಲಿ ವಿವಿಯ ಮ್ಯಾನೇ
ಜ್ಮೆಂಟ್ ಸ್ಟಡೀಸ್ ಫ್ಯಾಕಲ್ಟಿಯಿಂದ ಮಾರ್ಕೆ ಟಿಂಗ್, ಫೈನಾನ್ಸ್‌ನಲ್ಲಿ ಡ್ಯುಯಲ್ ಎಂಬಿಎ ಮಾಡಿದರು.

?ಜ್ಯೋತಿ ಅಮ್ಗೆ: ಕುಬ್ಜತೆ ಇವರ ಅಂಗವೈಕಲ್ಯದ ಸ್ವರೂಪ. ಜ್ಯೋತಿ ಅವರು ವಿಶ್ವದ ಅತ್ಯಂತ ಚಿಕ್ಕ ಜೀವಂತ ಮಹಿಳೆ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು
ಹೊಂದಿದ್ದಾರೆ. ಅವರು ಅನೇಕ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯ ನಿರ್ಬಂಧಿತ ಎತ್ತರವು ಅಕೋಂಡ್ರೊಪ್ಲಾಸಿಯಾ ಎಂಬ ಆನುವಂಶಿಕ ಅಸ್ವಸ್ಥತೆಯ ಕಾರಣದಿಂದಾಗಿರುತ್ತದೆ.

?ಸುರೇಶ್ ಎಚ್. ಆಡ್ವಾಣಿ: ಪೋಲಿಯೊ (ಗಾಲಿ ಕುರ್ಚಿ ಬಳಕೆದಾರರಿಂದ ಕಾಲುಗಳು ಬಾಧಿತವಾಗಿವೆ) ಇವರ ಅಂಗವೈಕಲ್ಯದ ಸ್ವರೂಪ. ಅವರು ಹೆಸರಾಂತ ಆಂಕೊಲಾಜಿಸ್ಟ್ ಆಗಿದ್ದು, ಭಾರತದಲ್ಲಿ ಹೆಮಟೊಪಯಟಿಕ್ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟೇ ಶನ್‌ನ ಪ್ರವರ್ತಕರಾಗಿzರೆ. ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ಆಡ್ವಾಣಿ ೮ ವರ್ಷ ವಯಸ್ಸಿನಲ್ಲಿ ಪೋಲಿಯೋ ಪೀಡಿತರಾದರು. ಅವರು ಮುಂಬೈನ ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಯನ ಮಾಡಲು ಹೋದರು, ಅಲ್ಲಿ ಅವರು ಎಮ್ ಬಿಬಿಸ್ ಮತ್ತು ಎಮ್ ಡಿ ಪದವಿಗಳನ್ನು ಪಡೆದರು.

?ಭರತ್ ಕುಮಾರ್: ಹುಟ್ಟಿನಿಂದ ಎಡಗೈ ಇಲ್ಲದೆ ಜನಿಸಿದ್ದು ಇವರ ಅಂಗವೈಕಲ್ಯದ ಸ್ವರೂಪ. ಭರತ್ ಅವರು ಪ್ಯಾರಾ-ಈಜುಗಾರ. ಅವರು ದಿನಗೂಲಿ ಮಾಡುವ ಮಗನಾಗಿದ್ದು, ಬಡತನ ಮತ್ತು ಅಂಗವೈಕಲ್ಯದಿಂದ ಸವಾಲು ಎದುರಿಸುತ್ತಿದ್ದರೂ, ಅವರು ೨ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು ೫೦ ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ.

? ಎಚ್.ಬೋನಿಫೇಸ್ ಪ್ರಭು: ಪ್ರಭು ಅವರು ಕ್ವಾಡ್ರಿಪ್ಲೆಜಿಕ್ ಅಂಗವೈಕಲ್ಯದ ಸ್ವರೂಪ ಹೊಂದಿರುವ ಇವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭಾರತದಿಂದ
ವ್ಹೀಲ್‌ಚೇರ್ ಟೆನಿಸ್ ಆಟಗಾರರಾಗಿದ್ದಾರೆ. ಅವರು ೧೪ ಮೇ ೧೯೭೨ ರಂದು ಬೆಂಗಳೂರಿನಲ್ಲಿ ಜನಿಸಿದರು. ನಾಲ್ಕನೇ ವಯಸ್ಸಿನಲ್ಲಿ, ಸೊಂಟದ ಗಡ್ಡೆಯು
ಅವನನ್ನು ಕ್ವಾಡ್ರೈಪ್ಲೆಜಿಕ್ ಆಗಿ ಮಾಡಿತು. ಅವರು ತಮ್ಮ ಕ್ರೀಡಾ ವೃತ್ತಿಜೀವನವನ್ನು ಶಾಟ್ ಪುಟ್ ಮತ್ತು ಜಾವೆಲಿನ್ ಎಸೆತದೊಂದಿಗೆ ಪ್ರಾರಂಭಿಸಿದರು.
ಅಂತಾ ರಾಷ್ಟ್ರೀಯ ಪ್ಯಾರಾಲಿಂಪಿಕ್ ಕ್ರೀಡಾಕೂಟ ದಲ್ಲಿ ಪದಕ ಗೆದ್ದ ಮೊದಲ ಭಾರತೀಯ.

?ಸುಧಾ ಚಂದ್ರನ್: ಬಲಗಾಲಿನ ಅಂಗಚ್ಛೇದನ ಅಂಗವೈಕಲ್ಯದ ಸ್ವರೂಪ ಹೊಂದಿರುವ ಸುಧಾ ಒಬ್ಬ ಭಾರತೀಯ ಚಲನಚಿತ್ರ, ದೂರದರ್ಶನ ನಟಿ ಮತ್ತು
ಒಬ್ಬ ನಿಪುಣ ಭರತನಾಟ್ಯ ನೃತ್ಯಗಾರ್ತಿ. ಸುಧಾ ಚಂದ್ರನ್ ಅವರು ೨೭ ಸೆಪ್ಟೆಂಬರ್ ೧೯೬೫ ರಂದು ಜನಿಸಿದರು. ೧೬ ನೇ ವಯಸ್ಸಿನಲ್ಲಿ ಅವರು ಮೇ
೧೯೮೧ರಲ್ಲಿ ಕಾರು ಅಪಘಾತಕ್ಕೀಡಾದರು. ಇದರ ಪರಿಣಾಮವಾಗಿ, ಅವರ ಬಲಗಾಲನ್ನು ಕತ್ತರಿಸಬೇಕಾಯಿತು. ಅವರು ತಮ್ಮ ಸ್ವಂತ ಜೀವನವನ್ನು ಆಧರಿ
ಸಿದ ತೆಲುಗು ಚಲನಚಿತ್ರ ‘ಮಯೂರಿ’ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನ ಪ್ರಾರಂಭಿಸಿದರು.

?ಅರುಣಿಮಾ ಸಿನ್ಹಾ: ಎಡಗಾಲಿನ ಮೊಣಕಾಲಿನ ಕೆಳಗೆ ಅಂಗಚ್ಛೇದನದ ಅಂಗವೈಕಲ್ಯದ ಸ್ವರೂಪ ಹೊಂದಿರುವ ಅರುಣಿಮಾ ಸಿನ್ಹಾ ಅವರು ಮೌಂಟ್
ಎವರೆಸ್ಟ್ ಏರಿದ ಮೊದಲ ಅಂಗವಿಕಲ ಮಹಿಳೆ. ಅವರು ೨೦ ಜುಲೈ ೧೯೮೮ ರಂದು ಜನಿಸಿದರು. ಅವರು ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು ಮತ್ತು
ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರರಾದರು. ೧೨ ಏಪ್ರಿಲ್ ೨೦೧೧ ರಂದು, ಅರುಣಿಮಾ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಆದರೆ, ಆಕೆಯ ಬ್ಯಾಗ್
ಮತ್ತು ಚಿನ್ನದ ಸರವನ್ನು ಕಸಿದುಕೊಳ್ಳಲು ದರೋಡೆ ಕೋರರು ಆಕೆಯನ್ನು ರೈಲಿನ ಜನರಲ್ ಕೋಚ್ ನಿಂದ ಹೊರಗೆ ತಳ್ಳಿದ್ದಾರೆ. ಪರಿಣಾಮವಾಗಿ ಆಕೆಯ ಎಡಗಾಲನ್ನು ಮೊಣಕಾಲಿನ ಕೆಳಗೆ ಕತ್ತರಿಸಬೇಕಾಯಿತು. ಆದಾಗ್ಯೂ ಕೂಡ ಅರುಣಿಮಾ ಅವರು ೨೧ ಮೇ ೨೦೧೩ ರಂದು ೧೦:೫೫ಕ್ಕೆ ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದರು.

?ರವೀಂದ್ರ ಜೈನ್: ಹುಟ್ಟಿನಿಂದಲೇ ಕುರುಡ ಅಂಗವೈಕಲ್ಯದ ಸ್ವಭಾವ ಹೊಂದಿರುವ ರವೀಂದ್ರ ಜೈನ್ ಅವರು ಒಬ್ಬ ಹಿರಿಯ ಭಾರತೀಯ ಸಂಗೀತ
ಸಂಯೋಜಕ, ಗೀತರಚನೆಕಾರ ಮತ್ತು ಗಾಯಕ. ಅವರು ನೂರಾರು ಹಿಂದಿ ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳಿಗೆ ಸಂಗೀತ ನೀಡಿದ್ದಾರೆ.

ರಾಮ್ ತೇರಿ ಗಂಗಾ ಮೈಲಿ, ಚಿಚ್ಚೋರ್, ಆಂಖಿಯೋಂ ಕೆ ಜಾರೋಖೋನ್ ಸೆ, ಹೆನ್ನಾ, ಗೀತ್ ಗತಾ ಚಲ್ ಮುಂತಾದ ಚಲನಚಿತ್ರಗಳಿಗೆ ಹಾಗೂ ರಾಮಾಯಣ ದಂತಹ ಟಿವಿ ಧಾರಾವಾಹಿಗಳಿಗೆ ಅವರ ಸಂಗೀತ ಜನರ ಮನಸ್ಸಿನಲ್ಲಿ ಈಗಲೂ ಇದೆ.

?ಸಾಧನಾ ಧಂಡ್: ಧಂಡ್ ೧೨ನೇ ವಯಸ್ಸಿನಲ್ಲಿ ತನ್ನ ಶ್ರವಣವನ್ನು ಕಳೆದುಕೊಂಡಳು ಮತ್ತು ದುರ್ಬಲ ಮೂಳೆ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಆದರೆ
ಅಂಗವೈಕಲ್ಯವು ಚಿತ್ರಕಲೆಯಲ್ಲಿ ತನ್ನ ಉತ್ಸಾಹವನ್ನು ಮುಂದುವರಿಸುವುದನ್ನು ತಡೆಯಲಿಲ್ಲ. ಅದಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾಳೆ.

?ಮಾಲತಿ ಹೊಳ್ಳ: ಬೆಂಗಳೂರಿನ ಈ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್. ಒಂದು ವರ್ಷದ ಸಂಪೂರ್ಣ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಆಕೆಯ ಮೇಲಿನ ದೇಹದ ಬಲಕ್ಕೆ ಹೋಲಿಸಿದರೆ ಸೊಂಟದ ಕೆಳಗಿನ ದೇಹವು ದುರ್ಬಲವಾಗಿದೆ. ಅವಳು ಅನೇಕ ಕ್ರೀಡೆಗಳನ್ನು ಆಡಿದಳು ಮತ್ತು ತನ್ನ ಅಂಗವೈಕಲ್ಯವನ್ನು ಸವಾಲು ಮಾಡುವ ಅನೇಕ ಕಾಲೇಜು ಆಟದ ಚಟುವಟಿಕೆಗಳಲ್ಲಿ ಭಾಗವಹಿಸಿ ದಳು ಮತ್ತು ಅನೇಕ ಪ್ರಶಸ್ತಿಗಳನ್ನು ಗೆದ್ದಳು. ಅವರು ೧೯೮೯ ರಲ್ಲಿ ಡೆನ್ಮಾರ್ಕ್ ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಗೇಮ್ಸ್‌ನಲ್ಲಿ ೨೦೦ ಮೀ, ಶಾಟ್‌ಪುಟ್ ಮತ್ತು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಒಟ್ಟಾರೆಯಾಗಿ ನಮ್ಮ ಸಮಾಜದಲ್ಲಿ ಇಂದಿಗೂ ಅಂಗವಿಕಲರ ವಿರುದ್ಧ ತಾರತಮ್ಯ, ಅನುಕಂಪ, ಅಪಹಾಸ್ಯ ಮಾಡುತ್ತಿರುವುದು ದುರದೃಷ್ಟಕರ. ಆದರೆ, ಅವರೂ ನಮ್ಮ ಸಮಾಜದ ಭಾಗವಾಗಿದ್ದಾರೆ. ಅವರನ್ನು ಸಮಾನವಾಗಿ ಪರಿಗಣಿಸಬೇಕು ಎಂಬುದನ್ನು ನಾವು ಸಾಮಾನ್ಯವಾಗಿ ಒಪ್ಪಿಕೊಳ್ಳಲು ವಿಫಲರಾಗುತ್ತೇವೆ.

Leave a Reply

Your email address will not be published. Required fields are marked *

error: Content is protected !!