Saturday, 7th September 2024

ಪ್ರಚೋದನಕಾರಿ ಭಾಷಣ; ಎಂದಿಗೂ ಅಪಾಯಕಾರಿ

ಅಭಿಮತ

ಎಸ್.ಪ್ರಕಾಶ್ ಶೇಷರಾಘವಾಚಾರ್‌

ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತೊಡಗಿದ್ದಾಗ ಅವರ ಮೇಲೆ
ಹತ್ಯೆ ಯತ್ನ ನಡೆದು ಕೂದಲೆಳೆಯ ಅಂತರದಲ್ಲಿ ಅವರು ಪಾರಾಗುತ್ತಾರೆ. ಟ್ರಂಪ್ ಅಮೆರಿಕದ ಮಾಜಿ ಅಧ್ಯಕ್ಷರು ಅವರಿಗೆ ಸಿಕ್ರೇಟ್ ಸರ್ವಿಸ್ ಏಜೆಂಟರ ಭದ್ರತೆ ಇದ್ದರೂ ಕೂಡಾ ಗಂಭೀರ ಭದ್ರತಾ ವೈಫಲ್ಯವಾಗುತ್ತದೆ.

ಬಲಪಂಥೀಯ ವಿಚಾರಧಾರೆಯನ್ನು ಬೆಂಬಲಿಸುವ ಟ್ರಂಪ್ ತಮ್ಮ ನಿಷ್ಠುರ ಅಥವಾ ಅತಿರೇಕದ ಹೇಳಿಕೆಗಳಿಗೆ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಹಲವಾರು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಭಾರತದ ಬಗ್ಗೆ ಹೇಳಬೇಕೆಂದರೆ ಟ್ರಂಪ್ ಮತ್ತು ಮೋದಿಯರ ಜತೆಗಿನ ಆತ್ಮೀಯ
ಸಂಬಂಧ ಮೋದಿ ವಿರೋಧಿಗಳಿಗೆ ಮತ್ತು ಕಾಂಗ್ರೆಸ್ ಪಾರ್ಟಿಯ ನಾಯಕರಿಗೆ ಅರಗಿಸಿಕೊಳ್ಳಲಾಗದೆ ಅವರನ್ನು ಅನಗತ್ಯವಾಗಿ ಟೀಕಿಸುವುದು ಸಾಮಾನ್ಯ ವಾಗಿತ್ತು.

ಭಾರತಕ್ಕೆ ಟ್ರಂಪ್ ಭೇಟಿ ನೀಡಿದ ಸಂದರ್ಭದಲ್ಲಿ ದೆಹಲಿಯಲ್ಲಿ ಭೀಕರ ಕೋಮು ಗಲಭೆಯನ್ನು ನಡೆಯುತ್ತದೆ. ಗಲಭೆಯಲ್ಲಿ ೫೪ ಹೆಚ್ಚು ಜನರ ಪ್ರಾಣ ಹೋಗಿ ದೆಹಲಿಯು ಹತ್ತಿ ಉರಿಯುತ್ತದೆ. ರಾಜಕೀಯ ಪ್ರೇರಿತ ಮತ್ತು ಭಾರತದ ಗೌರವಕ್ಕೆ ಮಸಿ ಬಳೆಯುವ ದುರುದ್ದೇಶದಿಂದ ಈ ಗಲಭೆ ಮಾಡಿಸ ಲಾಗುತ್ತದೆ. ಜನಸಂಖ್ಯೆಗಿಂತ ಬಂದೂಕಗಳೇ ಹೆಚ್ಚಿರುವ ಅಮೆರಿಕದಲ್ಲಿ ಅತ್ಯಾಧುನಿಕ ಆಯುಧ ಹೊಂದುವುದು ಸುಲಭವು. ಸೂಕ್ತ ಸುರಕ್ಷತಾ ಕ್ರಮಗಳು ಕೈಗೊಳ್ಳುವುದರಲ್ಲಿಯೂ ವಿಫಲವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅನೇಕ ಬಾರಿ ಶೂಟ್ ಔಟ್ ನಡೆದು ಹತ್ತಾರು ಪ್ರಾಣಗಳು ಬಲಿಯಾಗಿದೆ. ತನ್ನ ನಾಗರಿಕರ ಸುರಕ್ಷತೆಯ ಜವಾಬ್ದಾರಿಯು ಅಮೆರಿಕಗೆ ಸೇರಿದ ಹೊಣೆ ಹೀಗಾಗಿ ನಾವು ಅದರ ಬಗ್ಗೆ ಟೀಕೆ ಟಿಪ್ಪಣಿ ಮಾಡುವುದರಲ್ಲಿ ಅರ್ಥವಿಲ್ಲ.

ಟ್ರಂಪ್ ಮೇಲೆ ನಡೆದ ಹತ್ಯಾ ಪ್ರಯತ್ನವು ನಮ್ಮ ದೇಶದಲ್ಲಿಯೂ ನಡೆದಿರುವ ರಾಜಕೀಯ ಹತ್ಯೆಗಳ ಕಾರಣಗಳ ಬಗ್ಗೆ ಮತ್ತು ಅದರ ಹಿಂದಿನ ಉದ್ದೇಶ ಗಳ ವಿಶ್ಲೇಷಣೆ ಅಗತ್ಯವಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಅಂಶಗಳು ಮತ್ತು ಭಾರತದಲ್ಲಿ ನಡೆದ ಚುನಾವಣಾ ಪ್ರಚಾರದ ವಿಷಯ ಹೋಲಿಕೆ ಮಾಡಿದರೆ ಅನೇಕ ಸಾಮ್ಯಗಳನ್ನು ಕಾಣಬಹುದು. ಜೋ ಬೈಡೆನ್ ಈ ಬಾರಿ ಸೋಲುವ ಪ್ರಬಲ ಮುನ್ಸೂಚನೆಯಿರುವುದರಿಂದ ಟ್ರಂಪ್ ಪುನರಾಯ್ಕೆಯಾದರೆ ಪ್ರಜಾ ಪ್ರಭುತ್ವ ಅಪಾಯದಲ್ಲಿರುತ್ತದೆ ಎಂದು ಬೈಡನ್ ಆರೋಪಿಸುತ್ತಿದ್ದಾರೆ.

ಇದೇ ವರಸೆಯನ್ನು ಎಲ್ಲೋ ಕೇಳಿರುವ ಹಾಗಿದೆಯಲ್ಲವಾ? ಹೌದು ಭಾರತದಲ್ಲಿ ಮೋದಿಯವರು ಪುನರಾಯ್ಕೆಯಾದರೆ ಪ್ರಜಾಪ್ರಭುತ್ವ ಅಪಾಯ ದಲ್ಲಿರುವುದು ಎಂಬುದೂ ಕಾಂಗ್ರೆಸ್ ಪಾರ್ಟಿಯ ಪ್ರಮುಖ ಅಸ್ತ್ರವಾಗಿತ್ತು. ಬೈಡನ್ ತಮ್ಮ ಭಾಷಣದಲ್ಲಿ ಡೋನಾಲ್ಡ ಟ್ರಂಪ್ ಒಬ್ಬ ಸರ್ವಾಧಿಕಾರಿ ಯೆಂದು ಆರೋಪಿಸುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟವು ಇದೇ ಆರೋಪವನ್ನು ಮೋದಿಯವರ ವಿರುದ್ಧ ಮಾಡುತ್ತಲೇ ಇದ್ದಾರೆ.
ಟ್ರಂಪ್ ಗೆದ್ದರೆ ಮುಂದೆ ಚುನಾವಣೆ ಇರುವುದಿಲ್ಲ ಮತ್ತು ಸಂವಿಧಾನ ರದ್ದು ಮಾಡುತ್ತಾರೆ ಎಂದು ಬೈಡನ್ ಆರೋಪಿಸುತ್ತಿದ್ದಾರೆ.

ಭಾರತದಲ್ಲಿ ಅಕ್ಷರ ಪದ ವ್ಯತ್ಯಾಸವಿಲ್ಲದೆ. ಮೋದಿ ಗೆದ್ದರೆ ಇದೇ ಕಡೆಯ ಚುನಾವಣೆ ಮತ್ತು ಸಂವಿಧಾನ ರದ್ದು ಪಡಿಸುತ್ತಾರೆ ಎಂಬುದೆ ರಾಹುಲ್ ಗಾಂಧಿಯವರ ಚುನಾವಣಾ ಪ್ರಚಾರದ ಪ್ರಮುಖ ಅಂಶವಾಗಿತ್ತು. ಅಮೆರಿಕದಲ್ಲಿ ವರ್ಣಭೇಧ ನೀತಿಯ ಬಗ್ಗೆ ಡೆಮಾಕ್ರಟಿಕ್ ಪಕ್ಷವು ಟ್ರಂಪ್ ವಿರುದ್ದ ಪ್ರಮುಖ ಅಸ್ತ್ರವಾಗಿಸಿದೆ. ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುತ್ತಾರೆ ಎಂಬ ಸುಳ್ಳಿನ ಪ್ರಚಾರ ಕೈಗೊಂಡು ದಲಿತ ಸಮಾಜದವರಲ್ಲಿ ಭಯ ಭಿತ್ತಿಸುವ ಪ್ರಯತ್ನ ನಡೆಯಿತು. ಪ್ರತಿಸ್ಪರ್ಧಿಯ ಬಗ್ಗೆ ಜನರಲ್ಲಿ ಭೀತಿ ಹುಟ್ಟು ಹಾಕಿದ್ದರ ಫಲ ಟ್ರಂಪ್‌ರವರನ್ನು ಹತ್ಯೆ
ಮಾಡುವ ಅತಿರೇಕ ತಲುಪುತ್ತದೆ.

೨೦೧೩ ರಲ್ಲಿ ಮೋದಿಯವರು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಘೋಷಣೆಯಾದ ತರುವಾಯ ಅವರ ಜನಪ್ರಿಯತೆಗೆ ಭಯ ಬಿದ್ದು ಮೋದಿಯವರು ಪಟ್ನಾದಲ್ಲಿ ಉದ್ದೇಶಿಸಲಿದ್ದ ಸಭೆಗೆ ಮುನ್ನ ಬಾಂಬ್ ಸ್ಪೋಟವಾಗುತ್ತದೆ ಮತ್ತು ವೇದಿಕೆಯ ಕೆಳಗೆ ಸ್ಪೋಟಗೊಳ್ಳದ ಬಾಂಬ್ ಪತ್ತೆಯಾಗುತ್ತದೆ. ಒಬ್ಬ ವ್ಯಕ್ತಿಯ ಬಗ್ಗೆ ಇಲ್ಲದ ಸಲ್ಲದ ಕೈಗೊಳ್ಳುವ ಅಪ ಪ್ರಚಾರದಿಂದ ಇಂತಹ ದುರ್ಘಟನೆಗಳಿಗೆ ಕಾರಣವಾಗುತ್ತದೆ. ೨೦೨೪ ರಲ್ಲಿ ವಾರಣಾಸಿಯ ರೋಡ್ ಶೋದಲ್ಲಿ ಮೋದಿಯವರ ಕಾರಿನ ಮೇಲೆ ಮೊಬೈಲ್ ಎಸೆಯಲಾಗುತ್ತದೆ. ಈ ದುರಾದೃಷ್ಟಕರ ಘಟನೆಯು ಸರ್ವತ್ರ ಖಂಡನೆಗೆ ಅರ್ಹವಾಗಿತ್ತು. ದುರ್ದೈವ ರಾಹುಲ್ ಗಾಂಧಿಯವರು ಅಪರೋಕ್ಷವಾಗಿ ಮೋದಿಯವರ ಜನಪ್ರಿಯತೆ ಕುಗ್ಗಿದೆ ಎಂದು ವಾಖ್ಯಾನಿಸಲು ಉದಾಹರಿಸಿ ಈ ದುರಾದೃಷ್ಟಕರ
ಸಂಗತಿಗೆ ಸಮರ್ಥನೆ ಕೊಡುತ್ತಾರೆ.

೧೯೪೮ರಲ್ಲಿ ಭಾರತ ಸ್ವಾತಂತ್ರ ಪಡೆದು ಇನ್ನು ಜಗತ್ತಿನಲ್ಲಿ ಕಣ್ಣು ಬಿಡುತ್ತಿರುವ ವೇಳೆಯಲ್ಲಿ ದೇಶ ವಿಭಜನೆಯಿಂದ ಹಿಂದೂಗಳ ಮಾರಣ ಹೋಮ ನಡೆಯಿತು ಇದಕ್ಕೆ ಗಾಂಧಿಯವರೆ ಕಾರಣ ಎಂದು ನಾಥುರಾಮ್ ಗೋಡ್ಸೆ ದೆಹಲಿಯ ಬಿರ್ಲಾ ಭವನದಲ್ಲಿ ಗಾಂಧಿಯವರನ್ನು ಅಮಾನುಷವಾಗಿ ಗುಂಡಿಟ್ಟ ಕೊಲ್ಲುತ್ತಾನೆ. ದೇಶಕ್ಕೆ ಸ್ವಾತಂತ್ರ ಕೊಡಿಸಲು ತನ್ನ ಜೀವನವನ್ನೇ ಮುಡಿಪಾಗಿಟ್ಟದ್ದ ಗಾಂಧಿಯನ್ನು ಗೋಡ್ಸೆಯು ದೇಶ ವಿಭಜನೆಯನ್ನು
ನೆಪವಾಗಿಸಿಕೊಂಡು ಮಹಾಪರಾಧವನ್ನು ಎಸೆಗುತ್ತಾನೆ. ೧೯೬೮ರಲ್ಲಿ ಜನಸಂಘದ ಅಧ್ಯಕ್ಷರಾಗಿದ್ದ ದೀನದಯಾಳ್ ಉಪಾಧ್ಯಾಯರವರನ್ನು ಅವರು ಪ್ರಯಾಣಿಸುತ್ತಿದ್ದ ರೈಲು ಡಬ್ಬಿಯಲ್ಲಿ ಅಮಾನುಷವಾಗಿ ಕತ್ತರಿಸಿ ಕೊಲ್ಲಲಾಗುತ್ತದೆ.

ಇವರ ನೇತೃತ್ವದಲ್ಲಿ ದೇಶದೆಡೆ ಜನಸಂಘದ ಜನಪ್ರಿಯತೆಯು ಏರುಮುಖ ಕಾಣುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ದೀನದಯಾಳ ಉಪಾಧ್ಯಾಯ ರನ್ನು ಕ್ರೂರವಾಗಿ ಕೊಲ್ಲುತ್ತಾರೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಇವರ ಹತ್ಯೆಯ ತನಿಖೆಯ ಬಗ್ಗೆ ತೋರಿಸಿದ ಉದಾಸೀನತೆಯ ಕಾರಣ ದೀನದಯಾಳ್ ಹತ್ಯೆಯ ಅಪರಾಧಿಗಳು ಮತ್ತು ಈ ಸಂಚಿನ ಹಿಂದೆ ಇದ್ದ ರೂವಾರಿಗಳು ಪತ್ತೆಯೇ ಆಗುವುದಿಲ್ಲ. ಪಂಜಾಬ್‌ನ ಅಕಾಲಿ ದಳದ ಪ್ರಾಬಲ್ಯವನ್ನು ಕುಗ್ಗಿಸಲು ಕಾಂಗ್ರೆಸ್ ಭಿಂದ್ರನ್ ವಾಲೆಯೆಂಬ ಭೂತವನ್ನು ಸೃಷ್ಟಿಸುತ್ತಾರೆ.

ಕಾಂಗ್ರೆಸ್ ಬೆಂಬಲದಿಂದ ಬೆಳೆದ ಭಿಂದ್ರನ್ ವಾಲೆಯು ದಂದದಾನಿ ಖಾಸ್ಲ ಎಂಬ ಸಂಸ್ಥೆ ಹುಟ್ಟುಹಾಕುತ್ತಾನೆ. ಕಾಂಗ್ರೆಸ್ ಇವನ ಚಟುವಟಿಕೆಗೆ ಹಣ ಸಹಾಯ ಮಾಡುತ್ತಿತ್ತು ಎಂದು ಪ್ರಬಲ ಕಾಂಗ್ರೆಸ್ ಬೆಂಬಲಿಗ ಕ್ಯಾರವಾನ್ ಪಾಕ್ಷಿಕ ಪತ್ರಿಕೆ ಸಂಪಾದಕ ಹರತೋಶ್ ಸಿಂಗ್ ಬಾಲ್ ಅವರು ಭಿಂದ್ರನ್
ವಾಲೆಯು ಬೆಳೆದು ಭೂತವಾದ ಹೆಜ್ಜೆಯ ಬಗ್ಗೆ ಖeZಠಿಠಿಛ್ಟಿಛಿb bಛಿZಞo ಪುಸ್ತಕದಲ್ಲಿ ಬರೆಯುತ್ತಾರೆ. ೧೯೮೦ರ ಚುನಾವಣೆಯಲ್ಲಿ ಈತ ಇಂದಿರಾ ಗಾಂಧಿಯೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದ ಎಂಬ ಮಾಹಿತಿ ನೀಡುತ್ತಾರೆ.

ಖಾಲಿಸ್ಥಾನ ಸ್ಥಾಪನೆಯ ಪ್ರತಿಪಾದಕನಾಗಿ ಭಯೋತ್ಪಾದಕತೆ ಯನ್ನು ಪಂಜಾಬ್‌ನಲ್ಲಿ ಹರಡುತ್ತಾನೆ. ಅಂತಿಮವಾಗಿ ಅಕಾಲ್ ತPನಲ್ಲಿ ಅಡಗಿದ್ದ ಇವನನ್ನು ಬಗ್ಗು ಬಡಿಯಲು ಸುವರ್ಣ ಮಂದಿರದೊಳಗೆ ಸೇನೆಯನ್ನು ನುಗ್ಗಿಸಿ ಕೊಲ್ಲ ಬೇಕಾಗುತ್ತದೆ. ಇದರ ಪ್ರತೀಕಾರವಾಗಿ ಇಂದಿರಾ ಗಾಂಧಿಯವರು ತಮ್ಮ ಸಿಖ್ಖ್ ಅಂಗರಕ್ಷಕರ ಗುಂಡಿಗೆ ಬಲಿಯಾಗುತ್ತಾರೆ. ವಿಪರ್ಯಾಸವೆಂದರೆ ಮುಂದಾಲೋಚನೆಯಿಲ್ಲದೆ ಕ್ಷುಲ್ಲಕ ರಾಜಕೀಯ ಲಾಭಕ್ಕೆ ತಾವೇ ಸೃಷ್ಟಿಸಿದ ಭೂತವು ಅವರನ್ನು ಬಲಿ ಪಡೆಯುತ್ತದೆ.

೧೯೯೫ರಲ್ಲಿ ಪಂಜಾಬ್ ಮುಖ್ಯಮಂತ್ರಿ ಬೇಂತ್ ಸಿಂಗ್ ರವರನ್ನು ಸಿಖ್ಖ್ ಉಗ್ರಗಾಮಿಗಳು ಬಾಂಬ್ ಸ್ಪೋಟಿಸಿ ಹತ್ಯೆ ಮಾಡುತ್ತಾರೆ. ಚುನಾವಣೆಯಲ್ಲಿ ಗೆಲುವಿಗಾಗಿ ಪಂಜಾಬ್‌ನಲ್ಲಿ ನಡೆದಿರುವ ವಿಭಜಕ ರಾಜಕೀಯದ ಫಲ ಇಂದಿರಾ ಗಾಂಧಿಯವರನ್ನು ಹತ್ಯೆಗೈದ ಬೇಂತ್ ಸಿಂಗ್ ಪುತ್ರ ಸರ್ಬಜಿತ್
ಸಿಂಗ್ ಖಾಸ್ಲ ಲೋಕಸಭೆಗೆ ಚುನಾಯಿತನಾಗಿದ್ದಾನೆ. ಎಲ್‌ಟಿಟಿಇ ಭಯೋತ್ಪಾದಕರಿಂದ ರಾಜೀವ್ ಗಾಂಧಿಯವರು ಅಮಾನುಷವಾಗಿ ಹತ್ಯೆಯಾ ಗುತ್ತಾರೆ. ರಾಜೀವ್ ಗಾಂಧಿಯವರು ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ರವರನ್ನು ಬಲವಂತವಾಗಿ ಭಾರತಕ್ಕೆ ಕರಸಿ ಶ್ರೀಲಂಕಾ ಶಾಂತಿ ಒಪ್ಪಂದಕ್ಕೆ ಸಹಿ ಮಾಡಿಸುತ್ತಾರೆ. ಶಾಂತಿ ಒಪ್ಪಂದವು ಸೂಸುತ್ರವಾಗಿ ಜಾರಿಗೆ ತರಲು ಭಾರತೀಯ ಸೈನ್ಯವನ್ನು ಜಾಫ್ನಾದಲ್ಲಿ ನಿಯೋಜನೆಯಾಗುತ್ತದೆ.

ಇದೊಂದು ಆತ್ಮಘಾತುಕ ನಿರ್ಧಾರವಾಗುತ್ತದೆ. ಶಾಂತಿ ಸ್ಥಾಪಿಸಲು ಹೋಗಿದ್ದ ಐಪಿಕೆಎಫ್ ಪಡೆಯು ತಮಿಳು ಏಲಂನವರೊಂದಿಗೆ ಯುದ್ಧ ಮಾಡ ಬೇಕಾದ ಭೀಕರ ಸನ್ನಿವೇಶದಲ್ಲಿ ಸಿಲುಕಿಕೊಳ್ಳುತ್ತಾರೆ. ಭಾರತೀಯ ಸೇನೆಯು ಜಾಫ್ನಾದಿಂದ ಹೊರ ಬರುವುದರಲ್ಲಿ ೧,೮೦೦ ಸೈನಿಕರು ಹುತಾತ್ಮರಾಗಿರು ತ್ತಾರೆ. ೧೯೯೧ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ರಾಜೀವ್ ಗಾಂಧಿಯವರು ಪುನರಾಯ್ಕೆಯಾಗುವ ಸಾಧ್ಯತೆಯು ದಟ್ಟವಾದಾಗ ಶ್ರೀಲಂಕಾಕ್ಕೆ ಸೈನಿಕರನ್ನು ಕಳುಹಿಸಿ ತಮ್ಮ ಹೋರಾಟಗಾರರನ್ನು ಕೊಲ್ಲುಲು ರಾಜೀವ್ ಗಾಂಧಿ ಕಾರಣ ಎಂದು ಎಲ್‌ಟಿಟಿಇ ಅವರನ್ನು ಮಾನವ ಬಾಂಬ್ ಬಳಸಿ ಶ್ರೀಪೆರಂಬದೂರಿನಲ್ಲಿ ಹತ್ಯೆ ಮಾಡುತ್ತದೆ.

ಇಂದಿರಾ ಗಾಂಧಿಯವರು ಮತ್ತು ರಾಜೀವ್ ಗಾಂಧಿಯವರು ಅಂದಿನ ಪರಿಸ್ಥಿತಿಯಲ್ಲಿ ಕೈಗೊಂಡ ನಿರ್ಧಾರಗಳು ಅವರ ಜೀವಕ್ಕೆ ಕುತ್ತು ತಂದಿತು ಯಾವುದೇ ಹತ್ಯೆಯನ್ನು ಸಮರ್ಥಿಸುವುದು ನಾಗರಿಕ ಸಮಾಜದ ಲಕ್ಷಣವಾಗುವುದಿಲ್ಲ. ಅಸಮಾಧಾನಕ್ಕೆ ನೂರು ಕಾರಣಗಳಿದ್ದರು ಅದಕ್ಕೆ ಉತ್ತರ
ಹತ್ಯೆಯಲ್ಲ. ಕರ್ನಾಟಕದಲ್ಲಿ ಭಟ್ಕಳದ ಸಜ್ಜನ ಶಾಸಕ ಡಾ. ಯು. ಚಿತ್ತರಂಜನ್ ರವರನ್ನು ೧೯೯೬ ರಲ್ಲಿ ಮೂಲಭೂತವಾದಿಗಳು ಗುಂಡಿಟ್ಟು ಹತ್ಯೆ ಮಾಡುತ್ತಾರೆ. ಅವರ ಕೊಲೆಯಾಗಿ ೨೮ ವರ್ಷ ಕಳೆದರು ಅಪರಾಽಗಳು ಪತ್ತೆಯಾಗಿಲ್ಲ. ಅವರನ್ನು ಜನರು ಮರೆತಿದ್ದಾರೆ ಬಿಜೆಪಿಯು ಮರೆತು ಮುಂದೆ ಹೋಗಿದೆ.

ಸಾಮಾಜಿಕ ತಾಣದಲ್ಲಿ ದಿನನಿತ್ಯ ವಿಷ ಕಾರುವ ಮತ್ತು ಸುಳ್ಳು ಸಂಗತಿಗಳನ್ನು ಹಂಚಿಕೊಳ್ಳುವ ಪರಿಣಾಮ ಇಂದು ವ್ಯಕ್ತಿಗಳ ಪ್ರಾಣಕ್ಕೆ ಕುತ್ತಾಗುತ್ತಿದೆ. ನೂಪುರ್ ಶರ್ಮಾ ವಿವಾದಿತ್ಮಕ ಹೇಳಿಕೆಯನ್ನು ಹೇಳಿದರು ಎಂದು ಆಕೆಯನ್ನು ಮೂಲಭೂತವಾದಿಗಳು ಗುರಿಯಾಗಿಸಿದ್ದಾರೆ . ಫೇಸ್‌ಬುಕ್ ನಲ್ಲಿ ಆಕೆಯನ್ನು ಸಮರ್ಥಿಸಿಕೊಂಡ ಜೈಪುರದ ಕನ್ಹಯ್ಯಲಾಲ್  ಸರ್ ತನ್ ಪೇ ಜುದಾ ಎಂದು ಆತನ ತಲೆಯನ್ನು ಕತ್ತರಿಸಿ ಕೊಲ್ಲಲಾಗುತ್ತದೆ.

ಸಾಮಾಜಿಕ ಜಾಲ ತಾಣದಲ್ಲಿ ಪ್ರಚೋದನಕಾರಿ ಬರಹ ಮತ್ತು ಹಂಚಿಕೊಳ್ಳುವ ವಿಷಯ ಸಂಬಂಧಿಸಿದ ವ್ಯಕ್ತಿಗಳ ಜೀವಕ್ಕೆ ಅಪಾಯವೊಡ್ಡುವ ಸಂಭವ ದಟ್ಟವಾಗಿರುವುದು. ರಾಜಕೀಯ ನಾಯಕರಾಗಲಿ ಅಥವಾ ಸಕ್ರಿಯ ಜಾಲತಾಣ ಕಾರ್ಯಕರ್ತರು ಅತ್ಯಂತ ಜವಾಬ್ದಾರಿಯಿಂದ ವಿಷಯವನ್ನು
ಹಂಚಿಕೊಳ್ಳಬೇಕು ಎಂಬುದನ್ನು ಅರಿತುಕೊಳ್ಳಬೇಕು. ಬೇಜವಾಬ್ದಾರಿ ಬರಹಗಳು ಮತ್ತೊಬ್ಬರ ಬದುಕಿಗೆ ಕೊಳ್ಳಿ ಇಡುತ್ತದೆ.

ರಾಜಕೀಯ ನಾಯಕರು ತಮ್ಮ ಸ್ವಾರ್ಥಕ್ಕೆ ತಮ್ಮ ಪ್ರತಿಸ್ಪರ್ಧಿಯನ್ನು ನ್ಯಾಯ ಮಾರ್ಗದಲ್ಲಿ ಸೋಲಿಸಲು ಸಾಧ್ಯವಿಲ್ಲದೆ ಜಾತಿ, ವೃತ್ತಿ, ಧರ್ಮ ಮತ್ತು ಭಾಷೆಯ ಹೆಸರಲ್ಲಿ ಪ್ರಚೋದಿಸಿ ಬೇಳೆ ಬೇಯಿಸಿಕೊಳ್ಳುವ ಹತಾಶೆತನದ ರಾಜಕೀಯದಿಂದ ಹತ್ಯೆಗಳಿಗೆ ಕಾರಣವಾಗುವುದು. ರಾಜಕೀಯ ನಾಯಕರು ಪ್ರಚೋದನಕಾರಿ ಅಜೆಂಡಾವನ್ನು ತೊರೆದು ಜವಾಬ್ದಾರಿಯುತವಾಗಿ ವರ್ತಿಸುವುದು ಅತ್ಯಗತ್ಯವಾಗಿದೆ.

(ಲೇಖಕರು: ಬಿಜೆಪಿ ವಕ್ತಾರರು)

Leave a Reply

Your email address will not be published. Required fields are marked *

error: Content is protected !!