Sunday, 8th September 2024

ರಾಮಮಂದಿರ ಯಾಕೆ ನಿರ್ಮಾಣ ಆಗಬೇಕು

ಪ್ರಚಲಿತ

ಶಿವಾನಂದ ಸೈದಾಪೂರ, ಹವ್ಯಾಾಸಿ ಬರಹಗಾರರು 

ಮಂದಿರದ ವಿಚಾರದಲ್ಲಿ ಹಿಂದೂ-ಮುಸ್ಲಿಿಂ ಕೋಮು ಘರ್ಷಣೆ ಕಾರಣವೆಂದು ಎಲ್ಲಿಯವರೆಗೆ ಅದನ್ನು ಹತ್ತಿಿಕ್ಕುವ ಪ್ರಯತ್ನ ಮಾಡಲಾಗುತ್ತದೆಯೋ ಅಲ್ಲಿಯವರೆಗೆ ಮಹಾಪುರುಷ ರಾಮನ ಉದಾತ್ತ ಆದರ್ಶ ಚಿಂತನೆಗಳು ಜನಮಾನಸದಲ್ಲಿ ಹೋಗಲು ಸಾಧ್ಯವಿಲ್ಲ.

ಅಯೋಧ್ಯೆೆ ರಾಮ ಮಂದಿರ ವಿಚಾರದಲ್ಲಿ ಒಂದು ವೇಳೆ ಅದನ್ನು ಮತೀಯವಾದದ ಭಿನ್ನತೆಯನ್ನಿಿಟ್ಟುಕೊಂಡು ವಿರೋಧಿಸಿದ್ದೆ ಆದರೆ, ಹಿಂದೂ ಮುಸ್ಲಿಿಂ ಯಾವತ್ತಿಿಗೂ ಒಂದಾಗಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಕಾಂಗ್ರೆೆಸ್ ಅಂತು ರಾಜಕಾರಣ ಮಾಡುತ್ತಲೇ ಬಂದಿದೆ. ಪ್ರತಿ ಸಾರಿ ಅಯೋಧ್ಯೆೆ ಮಂದಿರ ನಿರ್ಮಾಣಕ್ಕೆೆ ಅಡ್ಡಗಾಲು ಹಾಕಿದಲ್ಲದೆ ಅದನ್ನು ವಿರೋಧಿಸುತ್ತ ಬಂದಿದೆ. ಇನ್ನೂ ಕೂಡ ಅದೇ ಮುಂದುವರಿದರೆ ಇವರನ್ನು ಪೋಷಿಸುವ ತಾತ ಮುತ್ತಾಾತನ ಹೆಸರು ಹೇಳಿಕೊಂಡು ಅಸ್ತಿಿತ್ವಕ್ಕೆೆ ಹೆಣಗಾಡುತ್ತಿಿರುವ ಪಕ್ಷ ಕಣ್ಮರೆಯಾಗುವುದಂತು ಸುಳ್ಳಲ್ಲ.

ಮಂದಿರದ ವಿಚಾರದಲ್ಲಿ ಹಿಂದೂ ಮುಸ್ಲಿಿಂ ಕೋಮು ಘರ್ಷಣೆ ಕಾರಣವೆಂದು ಎಲ್ಲಿಯವರೆಗೆ ಅದನ್ನು ಹತ್ತಿಿಕ್ಕುವ ಪ್ರಯತ್ನ ಮಾಡಲಾಗುತ್ತದೆಯೋ ಅಲ್ಲಿಯವರೆಗೆ ಮಹಾಪುರುಷ ರಾಮನ ಉದಾತ್ತ ಆದರ್ಶ ಚಿಂತನೆಗಳು ಜನಮಾನಸದಲ್ಲಿ ಹೋಗಲು ಸಾಧ್ಯವಿಲ್ಲ. ಹಾಗೆಯೇ ಮುಸ್ಲಿಿಮರೆನಾದರೂ ರಾಮಮಂದಿರ ನಿರ್ಮಾಣಕ್ಕೆೆ ಸಹಕರಿಸಿದ್ದೆ ಆದರೆ, ಈ ದೇಶದಲ್ಲಿ ಹಿಂದೂ ಮತ್ತು ಮುಸ್ಲಿಿಮರ ಭಾವ್ಯಕ್ಯತೆಗೆ ನಿಜಕ್ಕೂ ಬಾಂಧವ್ಯದ ಸೇತುವೆಯಾಗುತ್ತದೆ.
ಇಷ್ಟಕ್ಕೂ ರಾಮಮಂದಿರ ಯಾಕೆ ನಿರ್ಮಾಣವಾಗಬೇಕು? ರಾಜ್ಯಾಾಧಿಕಾರದ ವಿಷಯದಲ್ಲಿ ಶುದ್ಧ ಹಸ್ತ, ಗುಣಶೀಲತೆ ಉತ್ತಮ ಚಾರಿತ್ರ್ಯದ ಪ್ರತಿ ರೂಪವೇ ಶ್ರೀರಾಮಚಂದ್ರನಾಗಿದ್ದನಲ್ಲ ಅದಕ್ಕೆೆ! ಕೊಟ್ಟ ಮಾತಿನಂತೆ ನಡೆದು ವನವಾಸ ಅನುಭವಿಸಿ ಅಧಿಕಾರದಿಂದ ದೂರವುಳಿದಿದ್ದನಲ್ಲ ಅದಕ್ಕೆೆ! ಭರತನ ತಾಯಿಯ ದುರಾದಾಸೆಗಾಗಿ ರಾಮ ತನ್ನತನವನ್ನು ತ್ಯಾಾಗ ಮಾಡಿ ಕಾಡಿಗೆ ಹೊದದ್ದು ಒಂದು ಕಡೆಯಾದರೆ; ಮತ್ತೊೊಂದೆಡೆ ಭರತ ನಂಬಿದ್ದೆ ಶ್ರೀರಾಮನ ಉನ್ನತ ಗುಣಸಂಪನ್ನತೆ! ಚಾರಿತ್ರ್ಯವೆಂದರೆ ಶ್ರೀರಾಮ; ಶ್ರೀರಾಮನೆಂದರೆ ಚಾರಿತ್ರ್ಯ! ಇವೊತ್ತಿಿಗೂ ರಾಜ್ಯಾಾಧಿಕಾರದ ವ್ಯವಸ್ಥೆೆಯಲ್ಲಿ ಉತ್ತಮ ಚಾರಿತ್ರ್ಯವೇ ಮಹತ್ವ ಪಡೆದಿದೆ. ಪವಿತ್ರತೆಯನ್ನು ಇವತ್ತಿಿಗೂ ಸಹ ಚಾರಿತ್ರ್ಯದ ವಿಷಯದಲ್ಲಿ ಪಾಲಿಸಲಾಗುತ್ತದೆ; ಅನುಸರಿಸಲಾಗುತ್ತಿಿದೆ. ಇವತ್ತಿಿಗೂ ರಾಜಕಾರಣದಲ್ಲಿ, ಸಮಾಜದಲ್ಲಿ ಮಹೊನ್ನತ ಸ್ಥಾಾನ ರಾಮನಿಗಿದೆ ಹೊರತು ರಾವಣನಿಗಲ್ಲ. ಪ್ರತಿಯೊಂದು ಹೆಣ್ಣು ಬಯಸುವುದು ರಾಮನಂತಹ ಗುಣಸಂಪನ್ನ ಗಂಡನನ್ನು ಹೊರತು ರಾವಣನಲ್ಲ.

ಶ್ರೀರಾಮಚಂದ್ರ ಸೀತೆಯನ್ನು ಪರಿತ್ಯಾಾಗ ಮಾಡಿದ ನಂತರ ತನ್ನನ್ನು ತಾನು ಶಿಕ್ಷಿಸಿ ಉರಿಸಿಕೊಂಡವನು! ಸೀತೆಯನ್ನು ಕಾಡಿಗೆ ಕಳುಹಿಸಿದ ನಂತರ ರಾಮನ ಸ್ಥಿಿತಿಯನ್ನು ಬಹುಶಃ ಅತ್ಯಂತ ಹತ್ತಿಿರದಿಂದ ನೋಡಿದವನೆಂದರೆ ಅದು ಲಕ್ಷ್ಮಣನೆ; ಉತ್ತರಕಾಂಡದಲ್ಲಿ ಅವಿಸ್ಮರಣೀಯವಾಗಿ ವರ್ಣಿಸಲ್ಪಟ್ಟಿಿದೆ. ಸೀತೆಯ ಪ್ರತಿಮೆಯನ್ನು ತಯಾರಿಸಿ ರಾಮನು ಯಜ್ಞದೀಕ್ಷೆಯನ್ನು ಕೈಗೊಂಡನೆ ಹೊರತು ಸೀತೆಯ ಜಾಗಕ್ಕೆೆ ಮತ್ತೊೊಬ್ಬಳನ್ನು ಕರೆತಂದು ಪಕ್ಕದಲ್ಲಿ ಕುಳಿಸಿಕೊಳ್ಳಲಿಲ್ಲ. ಅದಕ್ಕಾಾಗಿಯೇ ಏನೋ ಶ್ರೀರಾಮಚಂದ್ರ ಸಾವಿರಾರು ವರ್ಷಗಳು ಕಳೆದರೂ ಮರ್ಯಾದಾ ಪುರುಷೋತ್ತಮನೆನಿಸಿಕೊಳುತ್ತಾಾನೆ. ಪ್ರತಿಯೊಬ್ಬ ಹೆಣ್ಣು ಸರ್ವಕಾಲಕ್ಕೂ ಶ್ರೀರಾಮಚಂದ್ರನಂತ ಅ ಗಂಡನನ್ನು ಬಯಸುತ್ತಾಾಳೆ. ರಾಜಕಾರಣದಲ್ಲಿ ರಾಮರಾಜ್ಯದ ಪ್ರಕ್ರಮಗಳು ಸಂವಿಧಾನದಲ್ಲಿ ಇರದೇ ಹೋದರೂ ಇವತ್ತಿಿಗೂ ಕೂಡ ಅಲಿಖಿತ ರೂಪದಲ್ಲಿ ಆಚರಣೆಯಲ್ಲಿವೆ. ಯಾವುದೇ ರಾಜಕಾರಣಿ ಇವತ್ತು ಕಳಂಕ ಸಹಿತ ರಾಜಕಾರಣದಲ್ಲಿ ಇರಲು ಸಾಧ್ಯವಿಲ್ಲ. ಜನಸಮುದಾಯ, ಸಮಾಜದ ಹಿತಕ್ಕೆೆ ಆಗ ಯಾವ ನಿಯಮಗಳನ್ನು ರಚಿಸಲಾಗುತಿತ್ತೊೊ ಈಗಲೂ ಆ ರಾಜ್ಯಸತ್ತೆೆಯ ನಿಯಮಗಳನ್ನು ಅಷ್ಟೇ ಎಚ್ಚರಿಕೆಯಿಂದ ಪಾಲಿಸುತ್ತಾಾ ಬರಲಾಗಿದೆ. ಯಾವ ಪ್ಲೇಟೋ ತನ್ನ ಗಣರಾಜ್ಯ ಕಲ್ಪನೆಯನ್ನು ವ್ಯಕ್ತಪಡಿಸಿದನೋ ಅದು ಸಾವಿರಾರು ವರ್ಷಗಳ ಹಿಂದೆಯೇ ರಾಮ ರಾಜ್ಯದಲ್ಲಿ ಆಚರಣೆಯಲ್ಲಿತ್ತು.

ಅಯೋಧ್ಯೆೆ ವಿಚಾರದಲ್ಲಿ ಇನ್ನು ಮುಂದಾದರೂ ಹಿಂದೂಗಳ ಸಹನೆ ಕಟ್ಟೆೆ ಒಡೆಯುವ ಮುಂಚೆಯೇ ಪರಿಹಾರ ಕಂಡುಕೊಳ್ಳುವುದು ಒಳಿತು. ಈಗಲೂ ನಾವಿನ್ನೂ ತಾಳ್ಮೆೆ ಕಳೆದುಕೊಂಡಿಲ್ಲ. ಮಂದಿರದ ವಿಚಾರದಲ್ಲಿ ನ್ಯಾಾಯಾಲಯ ತೋರುತ್ತಿಿರುವ ನಿಧಾನಗತಿಯ ಪರಿಣಾಮ ಮತ್ತೊೊಮ್ಮೆೆ ಡಿಸೆಂಬರ್ 6, 1992ರಂದು ಪುನರಾವರ್ತನೆಗೆ ಅವಕಾಶ ಮಾಡಿಕೊಡದೇ ನ್ಯಾಾಯಾಲಯ ನ್ಯಾಾಯ ಒದಗಿಸಬೇಕೆನ್ನುವ ಆಶಾಭಾವನೆ ಸಮಸ್ತ ಹಿಂದೂಗಳಲ್ಲಿದೆ. ಜನಮಾನಸದಲ್ಲಿ ಇಂದು ರಾಮ ಭಕ್ತಿಿಯ ಶಕ್ತಿಿಯ ತರಂಗಗಳು ಪುಟಿದೇಳುತ್ತಿಿವೆ. ಆವತ್ತು ಮತಾಂದ ಸುಲ್ತಾಾನನ ಮಂತ್ರಿಿಯೊಬ್ಬನ ದೌರ್ಜನ್ಯಕ್ಕೆೆ ಶ್ರೀರಾಮಚಂದ್ರ ಮಂದಿರ ಬಲಿಯಾಯಿತು. ಹಿಂದೂ ಪರಂಪರೆಯನ್ನು ಸಾರಿ ಸಾರಿ ಹೇಳುತ್ತಿಿದ್ದ ಮಂದಿರವನ್ನು ಕೆಡವಿ ಮಸೀದಿಯನ್ನು ಕಟ್ಟಸಲಾಯಿತು. ಆವತ್ತು ಮಂದಿರವನ್ನು ದ್ವಂಸ ಮಾಡಿ ಮಸೀದಿ ಕಟ್ಟಿಿದ ಮೀರ್ ಬಾಕಿ ಸಂತತಿಯವರು ಈಗಲೂ ಮುಂದುವರೆದಿದ್ದಾರೆ. ರಾಮಮಂದಿರದ ವಿಚಾರದಲ್ಲಿ ನಿರಂತರವಾಗಿ ಕಂಟಕಪ್ರಾಾಯರಾಗಿದ್ದಾರೆ. ರಾಮ ಭಕ್ತರು ಮಂದಿರ ನಿರ್ಮಾಣಕ್ಕೆೆ ಶತಮಾನಗಳಿಂದ ಕಾಯ್ದು ಕಾಯ್ದು ಕುಳಿತಿದ್ದಾರೆ. ಹಿಂದೂ ಸಮಾಜದ ಭಾವನಾತ್ಮಕತೆಯ ಪ್ರತಿಕವಾದ ರಾಮಮಂದಿರ ನಿರ್ಮಾಣಕ್ಕೆೆ ಅಂತಾರಾಷ್ಟ್ರೀಯ ಮಟ್ಟದ ಅಡ್ಡಗಾಲು ಹಾಕುವ ತಡೆಯುವ ಪ್ರಯತ್ನ ನಡೆಯುತ್ತಲೇ ಬಂದಿದ್ದಂತು ಸುಳ್ಳೆೆನಲ್ಲ. ಈ ದೇಶದಲ್ಲಿ ಯಾವಾಗ ಬೇಕಾದರೂ ಮಿಷನರಿ ಮಸೀದಿಗಳು ಹುಟ್ಟಿಿಕೊಳ್ಳಲು ಅಡೆತಡೆ ಇಲ್ಲ. ಆದರೆ, ನೂರಾರು ಕೋಟಿ ಸಂಖ್ಯೆೆಯಲ್ಲಿರುವ ಹಿಂದೂಗಳಿಗೆ ಒಂದೇ ಒಂದು ರಾಮಮಂದಿರ ನಿರ್ಮಾಣಕ್ಕೆೆ ಎಲ್ಲಿಲ್ಲದ ಕಂಟಕಗಳು ಎದುರಾಗುತ್ತಿಿವೆಂದರೆ ಇದರ ಹಿಂದೆ ವಿದೇಶಿ ತಳಿಯ ‘ಕೈ’ಗಳು ಕೆಲಸ ಮಾಡುತ್ತಿಿವೆ ಅರ್ಥ!

ಇತಿಹಾಸ ಎಲ್ಲರಿಗೂ ಗೊತ್ತು. ಡಿಸೆಂಬರ್ 6, 1992ರಂದು ಕರಸೇವಕರು ಕೆಡವಿದ್ದು, ನಿಜಕ್ಕೂ ಮಸೀದಿ ರೂಪದ ಕಟ್ಟಡವಾಗಿತ್ತು. ಡಿಸೆಂಬರ್ 6ರಂದು ಮಧ್ಯಾಾಹ್ನದ ಹೊತ್ತಿಿಗೆ ಸಾವಿರಾರು ಕರಸೇವಕರು ಕೆಡವಿದ್ದು, ಮಸೀದಿಯೇ ಎಂಬುದಕ್ಕೆೆ ಅಲ್ಲ ಸಾಕಷ್ಟು ಸಾಕ್ಷಾಧಾರಗಳು ಸಿಕ್ಕಿಿವೆ. ಬಾಬರಿ ಮಸೀದಿ ಎನ್ನಲಾದ ಕಟ್ಟಡ ಮಸೀದಿ ಹೋಲುವ ರೀತಿಯಲ್ಲಿ ರಚನೆಯಂತು ಇದ್ದಿರಲೇ ಇಲ್ಲ. ಅದರಲ್ಲಿ ಮಿನಾರುಗಳು ಇಲ್ಲ; ಮುಖ್ಯವಾಗಿ ಅದು ಮೆಕ್ಕಾಾದ ಕಡೆ ಮುಖವೂ ಮಾಡಿರಲಿಲ್ಲ. ಅಸಲಿಗೆ ಅದು ಬಾಬರಿ ಸ್ಮಾಾರಕವು ಅಲ್ಲ. 2003ರಲ್ಲಿ ಲಕ್ನೋೋ ನ್ಯಾಾಯಪೀಠದ ಸಮ್ಮುಖದಲ್ಲಿ ‘ಕೆನಡಾದ ವೈಜ್ಞಾನಿಕ ಸಂಶೋಧನಾ ಸಂಸ್ಥೆೆಯಿಂದ ಜಿಪಿಆರ್‌ಸಿ’ ಪರೀಕ್ಷಿಸಲಾಗಿತ್ತು. ಸಂಶೋಧನೆ ಕೈಗೊಂಡಾಗಲೂ ಮಸೀದಿಗೆ ಸಂಬಂಧಪಟ್ಟ ಯಾವುದೇ ದಾಖಲೆಗಳು ಕೂಡ ದೊರಕಲಿಲ್ಲ. ‘ಭಾರತೀಯ ಪುರಾತತ್ವ ಸಮೀಕ್ಷಣೆ ಸಂಸ್ಥೆೆ’ ಪರೀಕ್ಷೆಯ ಕೂಡ ಮಾಡಲಾಗಿತ್ತು. ಆಗಲು ಸಿಕ್ಕಿಿದ್ದು ಕೂಡ ಹಿಂದೂ ಮಂದಿರದ ಭಗ್ನಾಾವಶೇಷಗಳು.

ಬಾಬರಿ ಮಸೀದಿ ಎನ್ನಲಾದ ಕಟ್ಟಡ ಡಿಸೆಂಬರ್ 5, 1992ರಂದು ನೆಲಕ್ಕುರುಳಿದ ಮರುದಿನ ತಪಾಸಣೆ ಮಾಡಿದಾಗ ಅಲ್ಲಿ ಸಿಕ್ಕಿಿದ್ದು ಕೂಡ ಹಿಂದೂ ಮಂದಿರದ ಅವಶೇಷಗಳೇ ಆಗಿದ್ದವು! ನೆಲಕ್ಕುರುಳಿದ ಕಂಬಗಳ ಕೆತ್ತನೆಗಳು ಹಿಂದೂ ಮಂದಿರದವೇ ಆಗಿದ್ದವು. ಕಟ್ಟಡ ಉರುಳಿದ ಜಾಗದಲ್ಲಿ ದೊರೆತ ಅವಶೇಷಗಳು, ಶಾಸನಗಳು ಆ ಜಾಗದಲ್ಲಿ ದೇವಸ್ಥಾಾನವಿದದ್ದುನ್ನು ಸಾರಿ ಸಾರಿ ಹೇಳುತ್ತಿಿದ್ದವು. ಅದು ಹಿಂದೂ ದೇವಾಲಯವೆಂಬುದು ಎಲ್ಲರಿಗೂ ಗೊತ್ತು. ಆ ಕಟ್ಟಡದ ಸುತ್ತಮುತ್ತ 200 ಗಜದವರೆಗೆ ಮುಸ್ಲಿಿಮರುಯ ಸುರಳಿಯುವಂತಿಲ್ಲ ಎಂದು 1951ರಲ್ಲಿ ಫೈಜಾಬಾದಿನ ನ್ಯಾಾಯಾಲಯವೇ ಆದೇಶ ಹೊರಡಿಸಿತ್ತು.

ಹಿಂದೂ ಧರ್ಮದಲ್ಲಿ ಹುಟ್ಟಿಿ ಹಿಂದೂ ಎಂದು ಕರೆದುಕೊಳ್ಳಲು ಹೆದರುವ ಪುಕ್ಕಲು ಸಾಹಿತಿಗಳಿಗೆ ಮತ್ತು ರಾಜಕಾರಣಿಗಳಿಗೆ ರಾಮ ಮಂದಿರ ನಿರ್ಮಾಣಕ್ಕೆೆ ಎಲ್ಲಿಂದ ಬಂದಿತ್ತು ಧೈರ್ಯ? ನಮ್ಮನ್ನಾಾಳುವ ರಾಜಕಾರಣಿಗಳಲ್ಲಿ ಧೈರ್ಯ ಇದ್ದಿದ್ದರೆ ರಾಮಮಂದಿರ ನಿರ್ಮಾಣ ಯಾವಾಗಲೋ ಆಗಿರುತ್ತಿಿತ್ತು. ಕೇವಲ ಮುಸ್ಲಿಿಮರ ವೋಟಿಗಾಗಿ ನವರಂಗಿ ಆಟ ಆಡುತ್ತಿಿರುವ ರಾಜಕಾರಣಿಗಳು ಹಿಂದೂ ರಕ್ತದಿಂದ ಬಸಿದು ಬಂದ ತಾಯಿ ಎದೆಹಾಲಿಗೆ ಇವತ್ತು ನಿಯತ್ತನ್ನು ತೋರುತ್ತಿಿಲ್ಲ. ಅಲ್ಪಸಂಖ್ಯಾಾತರ ವೋಟಿಗಾಗಿ ತನಗೆ ಧರ್ಮದ ಮಹಾ ಆದರ್ಶ ಪುರುಷನಾದ ರಾಮಮಂದಿರವನ್ನು ವಿರೋಧಿಸಿ ಓಲೈಕೆ ರಾಜಕಾರಣವನ್ನು ಮಾಡಿ ತಾಯಿ ಧರ್ಮದ ಕತ್ತು ಸಿಳುತ್ತಿಿದ್ದಾರೆ. ಜಾತ್ಯತೀತ ಹೆಸರಿನಲ್ಲಿ ರಾಮಮಂದಿರವನ್ನು ವಿರೋಧಿಸುವುದು, ನಾಸ್ತಿಿಕತೆಯನ್ನು ವ್ಯಕ್ತಪಡಿಸುತ್ತಿಿರುವ ಸ್ವಯಂ ಘೋಷಿತ ಬುದ್ಧಿಿಜೀವಿಗಳು ಬೌದ್ಧಿಿಕವಾಗಿಯೂ ಭಯೋತ್ಪಾಾದನೆ ಮಾಡುತ್ತ ಬಂದಿದ್ದಾರೆ. ವೈಚಾರಿಕತೆ ಹೆಸರಿನಲ್ಲಿ ಮನಸ್ಸಿಿಗೆ ತೋಚಿದಂತೆ ಲೇಖನಗಳನ್ನು ಗಿಚ್ಚುವುದು, ವೇದಿಕೆಗಳು ಸಿಕ್ಕಾಾಗ ಹುಚ್ಚರಂತೆ ಮಾತಾಡುವ ಮತಿಗೇಡಿಗಳಿದ್ದಾರೆ. ಅವರೆಲ್ಲ ಸಂಸ್ಕಾಾರವಿಲ್ಲದ ಮನೆಗಳಲ್ಲಿ ಹುಟ್ಟಿಿ ಮಿಷನರಿಯ ಮಾರ್ಕ್‌ಸ್‌ ವಾದಿಗಳ ಕೈಗಳಲ್ಲಿ ಕಲಿತು ರಾಮನ ಬಗ್ಗೆೆ ತುಚ್ಚವಾಗಿ ಮಾತನಾಡುವವರು ಸಾಕಷ್ಟಿಿದ್ದಾರೆ. ಇಂತಹ ವಿಕೃತ ದೃಷ್ಟಿಿಕೋನವನ್ನು ಪ್ರತಿಯೊಂದು ಆಯಾಮದಲ್ಲಿ ಕಾಣುತ್ತಿಿದ್ದೇವೆ. ಕೊಳಕುತನ ಸಮಾಜದ ಪ್ರತಿಯೊಂದು ಅಂಗಾಂಗದಲ್ಲಿ ತುಂಬಿಕೊಂಡಿರುವುದನ್ನು ನೋಡುತ್ತಿಿದ್ದೇವೆ. ಬಡತನ ನಿರುದ್ಯೋೋಗ ಅಸ್ಪಶ್ಯತೆ ಆಚರಣೆ ಕಡಿಮೆಯಾಗಿದ್ದರೂ ಅದನ್ನು ಇನ್ನೂ ಜೀವಂತವಾಗಿರುವಂತೆ ಪ್ರಚಾರಿಸಲಾಗುತ್ತಿಿದೆ. ದುಃಖ ನಿರಾಸಕ್ತಿಿ ಎಲ್ಲವನ್ನೂ ನೋಡಿ ಸಮಾಜವೇ ಹೀಗೆ ಎಂದು ಉದಾಸೀನತೆಯನ್ನು ತೋರುವಂತೆ ಮಾಡಲಾಗುತ್ತಿಿದೆ. ಇನ್ನಾಾದರೂ ಬದಲಾಗಿ ರಾಮನ ನಾಡಿನಲ್ಲಿ ಬಾಳಲಿ.

Leave a Reply

Your email address will not be published. Required fields are marked *

error: Content is protected !!