Saturday, 9th November 2024

ಕ್ಷಯರೋಗದ ಶೀಘ್ರ ಪತ್ತೆಗೆ ಹೊಸ ಮಾದರಿಯ ಪರೀಕ್ಷೆ

ಲೇಖಕ: ಡಾ. ಕಿರಣ್ ವಿ. ಎಸ್. ವೈದ್ಯರು

ವಿಶ್ವ ಆರೋಗ್ಯ ಸಂಸ್ಥೆೆ 2035 ಇಸವಿಯೊಳಗೆ ಕ್ಷಯರೋಗವನ್ನು ಶೇ.90 ರಷ್ಟು ಕಡಿಮೆ ಮಾಡಬೇಕೆಂದು ಯೋಜನೆ ಹಾಕಿದೆ. ಇದಕ್ಕಾಗಿ ಸರಳ ರೋಗಪತ್ತೆ ವಿಧಾನಗಳನ್ನು ಅಭಿವೃದ್ಧಿ ಪಡಿಸುವುದು ಬಹಳ ಮುಖ್ಯ. ಪ್ರಸ್ತುತ ಸಂಶೋಧನೆಗಳು ಇದನ್ನೇ ಮುಖ್ಯ ಧ್ಯೇಯವಾಗಿ ಇಟ್ಟುಕೊಂಡು ಕೆಲಸ ಮಾಡುತ್ತಿವೆ.

ಪ್ರಪಂಚವನ್ನು ತಲ್ಲಣಗೊಳಿಸಿರುವ ರೋಗಗಳ ಪೈಕಿ ಕ್ಷಯರೋಗದ ಪಾತ್ರ ತುಂಬಾ ದೊಡ್ಡದು. ರೋಗಗಳ ರಾಜ ಎಂದೇ ಒಂದು ಕಾಲದಲ್ಲಿ ಕರೆಸಿಕೊಂಡ ವ್ಯಾಾಧಿ ಇದು. ಮೂಲತಃ ಶ್ವಾಾಸಕೋಶಗಳ ಕಾಯಿಲೆಯಾದರೂ, ಶರೀರದ ಯಾವುದೇ ಅಂಗಕ್ಕಾಾದರೂ ವ್ಯಾಾಪಿಸಿ ಇಡೀ ದೇಹವನ್ನೇ ಕಂಗೆಡಿಸಿಬಿಡುವ ಸಾಮರ್ಥ್ಯವಿರುವ ರೋಗ. ಮೆದುಳಿನ ಪೊರೆ, ಜೀರ್ಣಾಂಗಗಳು, ದುಗ್ಧ ಗ್ರಂಥಿ, ಬೆನ್ನು ಮೂಳೆಯಿಂದ ಹಿಡಿದು ಇತರ ಎಲುಬುಗಳು, ಸಂಧಿಗಳು, ಮೂತ್ರಪಿಂಡ, ಚರ್ಮ – ಹೀಗೆ ಕ್ಷಯರೋಗ ವ್ಯಾಾಪಿಸದ ಅಂಗಗಳೇ ಇಲ್ಲ ಎನ್ನಬಹುದು. ಸಾಮಾನ್ಯ ಔಷಧಗಳಿಗೆ ಬಗ್ಗದ ಈ ರೋಗದ ಪತ್ತೆೆಯೂ ಕಷ್ಟ; ಚಿಕಿತ್ಸೆೆಯೂ ದೀರ್ಘ!

Mycobacterium Tuberculosis ವಿಶಿಷ್ಟ ಬಗೆಯ ಬ್ಯಾಾಕ್ಟೀರಿಯಾದಿಂದ ಬರುವ ಈ ಕ್ಷಯರೋಗ ಮಾನವಕುಲವನ್ನು ಶತಮಾನಗಳ ಕಾಲದಿಂದ ಕಾಡಿರುವ ವ್ಯಾಾಧಿ. ಒಂದು ಕಾಲದಲ್ಲಿ ಇಡೀ ಜಗತ್ತನ್ನೇ ವ್ಯಾಾಪಿಸಿದ್ದ ಈ ರೋಗ, ಕಾಲಾಂತರದಲ್ಲಿ ಅಭಿವೃದ್ಧಿಿ ಹೊಂದಿದ ದೇಶಗಳ ಜೀವನ ಮಟ್ಟದಲ್ಲಿ ಸುಧಾರಣೆ ಆಗುತ್ತಿಿದ್ದಂತೆ ಅಲ್ಲಿ ಕಡಿಮೆ ಆಯಿತು. ಆದರೆ, ಬಡ ರಾಷ್ಟ್ರಗಳೇ ತುಂಬಿರುವ ತೃತೀಯ ವಿಶ್ವದಲ್ಲಿ ಕ್ಷಯರೋಗ ಇಂದಿಗೂ ಆರೋಗ್ಯ ವ್ಯವಸ್ಥೆೆಯ ಅತೀ ದೊಡ್ಡ ಕಂಟಕಗಳಲ್ಲಿ, ಸವಾಲುಗಳಲ್ಲಿ ಒಂದು.

ವೈದ್ಯಕೀಯ ಸಂಶೋಧನೆ ಎನ್ನುವುದು ಬಹುಮಟ್ಟಿಿಗೆ ಶ್ರೀಮಂತ ದೇಶಗಳು ಮಾಡುವ ಕೆಲಸ. ಆ ಸಂಶೋಧನೆಯ ಫಲಗಳನ್ನು ಸ್ವಲ್ಪ ಕಾಲದ ನಂತರ ಬಡದೇಶಗಳು ಪಡೆದುಕೊಳ್ಳುತ್ತವೆ. ಕ್ಷಯರೋಗ ಈ ಶ್ರೀಮಂತ ದೇಶಗಳಲ್ಲಿ ಕಣ್ಮರೆ ಆದ ನಂತರ ಆ ಬಗೆಗಿನ ಸಂಶೋಧನೆ ಕೂಡ ಸ್ಥಗಿತವಾಯಿತು. ಫಲವಾಗಿ ಬಡ ದೇಶಗಳು ಅದೇ ಹಳೆಯ ರೋಗಪತ್ತೆೆ ವಿಧಾನಗಳನ್ನು, ಬೆರಳೆಣಿಕೆಯ ಹಳೆಯ ಔಷಧಗಳನ್ನೇ ನೆಚ್ಚಿಿಕೊಂಡು ಹೆಣಗುತ್ತಿಿದ್ದವು. ರೋಗಿಯ ಕಫವನ್ನು ಆಮ್ಲೀಯ ರಾಸಾಯನಿಕದಿಂದ ಸಂಸ್ಕರಿಸಿ ಅದರಲ್ಲಿ ಇರಬಹುದಾದ ಕ್ಷಯರೋಗಕಾರಕ ಬ್ಯಾಾಕ್ಟೀರಿಯಾಗಳನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ನೋಡಬೇಕಿತ್ತು. ಇದು ಹೇಳಿಕೊಳ್ಳುವಷ್ಟು ನಿಖರ ಫಲಿತಾಂಶ ನೀಡುವ ಪ್ರಕ್ರಿಿಯೆಯಲ್ಲ. ರೋಗಿಯ ಶರೀರದಲ್ಲಿನ ಕ್ಷಯರೋಗಕಾರಕ ಬ್ಯಾಾಕ್ಟೀರಿಯಾಗಳನ್ನು ಪ್ರಯೋಗಾಲಯದಲ್ಲಿ ಬೆಳೆಸಿ ಪರೀಕ್ಷಿಸುವ ವಿಧಾನ ನಿಖರವಾದರೂ, ತೀರಾ ನಿಧಾನದ, ಬಹಳ ತಾಳ್ಮೆೆ ಬೇಡುವ, ಅತ್ಯಂತ ಕಡಿಮೆ ಪ್ರಮಾಣದ ಫಲಿತಾಂಶ ನೀಡುವ ಪ್ರಕ್ರಿಿಯೆ!

ಬಡ ದೇಶಗಳು ಕ್ಷಯರೋಗವನ್ನು ನಿಯಂತ್ರಿಿಸಲಾಗದೆ ಕಂಗಾಲಾಗುತ್ತಿಿದ್ದ ಕಾಲದಲ್ಲಿ ಇದರ ಸಮೀಕರಣವನ್ನು ಬದಲಾಯಿಸಿದ್ದು ಏ್ಸ್ ಎಂಬ ಮಹಾಮಾರಿ! ಅಭಿವೃದ್ಧಿಿ ಹೊಂದಿದ ದೇಶಗಳಲ್ಲಿ ಏ್ಸ್ ರೋಗಿಗಳು ಹೆಚ್ಚಾಾಗುತ್ತಿಿದ್ದಂತೆ ಆ ರೋಗಿಗಳ ಕ್ಷೀಣ ರೋಗನಿರೋಧಕ ಶಕ್ತಿಿಯ ಕಾರಣದಿಂದ ಅವರಲ್ಲಿ ಕ್ಷಯರೋಗ ಮತ್ತೆೆ ಕಾಣಿಸತೊಡಗಿತು. ಇದರಿಂದ ಶ್ರೀಮಂತ ದೇಶಗಳು ಕ್ಷಯರೋಗದ ಬಗ್ಗೆೆ ಮತ್ತೆೆ ಆಸಕ್ತಿಿ ತೋರಿ, ಹೊಸ ಹೊಸ ರೋಗಪತ್ತೆೆ ವಿಧಾನಗಳನ್ನು ಅಭಿವೃದ್ಧಿಿ ಪಡಿಸಿದರು. ಇದರ ಫಲವಾಗಿ ಇಂತಹ ಪರೀಕ್ಷೆಗಳು ತೃತೀಯ ವಿಶ್ವಕ್ಕೂ ಲಭಿಸಿತಾದರೂ ಇವು ತೀರಾ ದುಬಾರಿ. ಬಡ ದೇಶಗಳ ಆವಶ್ಯಕತೆ ಎಂದರೆ-ರೋಗ ಪತ್ತೆೆ ಮಾಡುವ ವಿಧಾನ ನಿಖರವಾಗಿರಬೇಕು; ಸೋವಿಯಾಗಿರಬೇಕು; ಶೀಘ್ರವಾಗಿ ಆಗಬೇಕು. ಆದರೆ, ಇಂತಹ ವಿಧಾನಗಳನ್ನು ಸಾಧಿಸುವುದು ಸುಲಭವಲ್ಲ. ಒಂದು ವೇಳೆ ಇಂತಹ ರೋಗಪತ್ತೆೆ ವಿಧಾನಗಳನ್ನು ಸಾಧಿಸಿದರೆ, ಅದರಿಂದ ರೋಗ ಪತ್ತೆೆ ಕಾರ್ಯ ಶೀಘ್ರವಾಗಿ ಆಗಿ, ರೋಗಿಗೆ ಸೂಕ್ತವಾದ ಔಷಧಗಳನ್ನು ನೀಡಿ ರೋಗದ ಉಲ್ಬಣವನ್ನು ಹತ್ತಿಿಕ್ಕಿಿ, ಜೀವ ಉಳಿಸಬಹುದು. ವಿಶ್ವ ಆರೋಗ್ಯ ಸಂಸ್ಥೆೆ 2035 ಇಸವಿಯೊಳಗೆ ಕ್ಷಯರೋಗವನ್ನು ಶೇ.90 ರಷ್ಟು ಕಡಿಮೆ ಮಾಡಬೇಕೆಂದು ಯೋಜನೆ ಹಾಕಿದೆ. ಇದಕ್ಕಾಾಗಿ ಸರಳ ರೋಗಪತ್ತೆೆ ವಿಧಾನಗಳನ್ನು ಅಭಿವೃದ್ಧಿಿ ಪಡಿಸುವುದು ಬಹಳ ಮುಖ್ಯ. ಪ್ರಸ್ತುತ ಸಂಶೋಧನೆಗಳು ಇದನ್ನೇ ಮುಖ್ಯ ಧ್ಯೇಯವಾಗಿ ಇಟ್ಟುಕೊಂಡು ಕೆಲಸ ಮಾಡುತ್ತಿಿವೆ.

ಅಮೆರಿಕದ ಹಾರ್ವಡ್ ನ ವೈಸ್ ಸಂಶೋಧನಾ ಕೇಂದ್ರದ ತಜ್ಞರು ಕ್ಷಯರೋಗಿಗಳ ರಕ್ತದಲ್ಲಿ ಮಾತ್ರ ಕಾಣುವ ವಿಶಿಷ್ಟ ಪ್ರೋೋಟೀನ್‌ಗಳ ಮೂಲಕ ಕ್ಷಯರೋಗವನ್ನು ಪತ್ತೆೆ ಮಾಡಬಲ್ಲ ಸರಳ ವಿಧಾನವನ್ನು ಅಭಿವೃದ್ಧಿಿ ಪಡಿಸಿದ್ದಾರೆ. ತಾಂಜಾನಿಯಾ ಮತ್ತು ಫಿಲಿಪ್ಸ್‌ೀ ದೇಶಗಳ 387 ಕ್ಷಯರೋಗಿಗಳ ರಕ್ತವನ್ನು ಸಂಗ್ರಹಿಸಿ ಅದರಲ್ಲಿ 47 ಬಗೆಯ ವಿಶಿಷ್ಟ ಪ್ರೋೋಟೀನ್‌ಗಳನ್ನು ಪತ್ತೆೆ ಮಾಡಿದರು. ಇದರಲ್ಲಿ ನಾಲ್ಕು ಬಗೆಯ ವಿಶಿಷ್ಟ ಪ್ರೋೋಟೀನ್‌ಗಳು ರೋಗಪತ್ತೆೆ ಯಂತ್ರಗಳ ಮೂಲಕ ಸುಲಭವಾಗಿ ಪತ್ತೆೆ ಮಾಡಬಲ್ಲ ಅಧಿಕ ಪ್ರಮಾಣದಲ್ಲಿ ಇದ್ದವು. ರೋಗಿಯ ಬೆರಳ ತುದಿಯಿಂದ ಪಡೆದ ಒಂದು ತೊಟ್ಟು ರಕ್ತವನ್ನು ಈ ತಂತ್ರದ ಮೂಲಕ ಪರೀಕ್ಷಿಸಿದಾಗ ಶೇ.86 ರಷ್ಟು ರೋಗಿಗಳ ಕ್ಷಯರೋಗವನ್ನು ಪತ್ತೆೆ ಮಾಡಲು ಸಾಧ್ಯವಾಯಿತು. ಈ ಪರೀಕ್ಷೆಯ ನಿಖರತೆ ಶೇ.65 ರಷ್ಟು ಇತ್ತು. ಏ್ಸ್ ರೋಗಿಗಳ ಕ್ಷಯರೋಗ ಪತ್ತೆೆಯಲ್ಲಿ ಈ ವಿಧಾನ ಶೇ.100 ರಷ್ಟು ನಿಖರವಾಗಿತ್ತು. ಕ್ಷಯ ರೋಗಕ್ಕೆೆ 6 ತಿಂಗಳ ಕಾಲ ಚಿಕಿತ್ಸೆೆ ಪಡೆದ ರೋಗಿಗಳ ರಕ್ತವನ್ನು ಈ ಮೂಲಕ ಪರೀಕ್ಷಿಸಿದಾಗ 84 ಪ್ರತಿಶತ ರೋಗಿಗಳಲ್ಲಿ ಈ ಪ್ರೋೋಟೀನ್‌ಗಳು ಕಾಣಲಿಲ್ಲ. ಅಂದರೆ, ಕಡಿಮೆ ಸಮಯದಲ್ಲಿ ಮಾಡಬಲ್ಲ ಈ ಪರೀಕ್ಷೆ ಸುಲಭವೂ, ಸೋವಿಯೂ, ತಕ್ಕ ಮಟ್ಟಿಿಗೆ ನಿಖರವೂ ಆಗಿದೆ ಎಂದಂತಾಯ್ತು!

ಈ ವಿಧಾನವನ್ನು ವಿಯೆಟ್ನಾಾಂ, ಪೆರು ಮತ್ತು ದಕ್ಷಿಣ ಆಫ್ರಿಿಕಾ ದೇಶಗಳ ನೂರಾರು ರೋಗಿಗಳಲ್ಲಿ ಪರೀಕ್ಷಿಸಿದಾಗ ಉತ್ತಮ ಫಲಿತಾಂಶಗಳು ಲಭ್ಯವಾದವು. ಜತೆಗೆ, ಈ ನಾಲ್ಕು ಪ್ರೋೋಟೀನ್‌ಗಳ ಜತೆಗೆ ಇನ್ನು ಒಂದೆರಡು ಪ್ರೋೋಟೀನ್‌ಗಳನ್ನೂ ಸೇರಿಸಿದಾಗ ಇನ್ನು ಉತ್ತಮ ಫಲಿತಾಂಶ ದೊರೆಯುತ್ತದೆ ಎನ್ನುವುದನ್ನೂ ಪತ್ತೆೆ ಮಾಡಲಾಯಿತು. ಇದನ್ನು ಹೀಗೆಯೇ ಅಭಿವೃದ್ಧಿಿಗೊಳಿಸುತ್ತಾಾ ಹೋದಂತೆ ಫಲಿತಾಂಶದ ನಿಖರತೆ, ಸಾಧ್ಯತೆ ಹೆಚ್ಚುತ್ತಾಾ ಹೋಗುತ್ತದೆ ಎಂಬುದು ಸಂಶೋಧಕರ ಅಭಿಮತ.

ಮೊದಲ ಹೆಜ್ಜೆೆಯಲ್ಲಿ ಈ ಪರೀಕ್ಷೆಯನ್ನು ಏಕಾಏಕಿ ಅಂತಿಮ ಪರೀಕ್ಷೆಯಾಗಿ ಬಳಸುವ ಆಲೋಚನೆ ಇದರ ಸಂಶೋಧಕರಿಗೆ ಇಲ್ಲ. ಇದನ್ನು ಮೊದಲ ಹಂತದ ಪರೀಕ್ಷೆಯಾಗಿ ಬಳಸುವ ಯೋಜನೆ ಮಾಡಲಾಗಿದೆ. ಅಂದರೆ, ಕ್ಷಯರೋಗ ಇರಬಹುದು ಎಂಬ ಅನುಮಾನ ಇರುವ ವ್ಯಕ್ತಿಿಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ. ಯಾರಲ್ಲಿ ಈ ಪರೀಕ್ಷೆ *ಟಜಿಠಿಜಿಛಿಆಗುತ್ತದೋ, ಅಂತಹವರಿಗೆ ಕ್ಷಯ ರೋಗ ಇರುವ ಸಾಧ್ಯತೆ ಹೆಚ್ಚು. ಕೇವಲ ಅಂತಹವರಲ್ಲಿ ಮಾತ್ರ ಮುಂದಿನ ಹಂತದ ದುಬಾರಿ ಪರೀಕ್ಷೆ ಮಾಡಬಹುದು. ಇದರ ಫಲಿತಾಂಶ ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ ಲಭ್ಯವಾಗುವುದರಿಂದ, ಮುಂದಿನ ಹಂತದ ಪರೀಕ್ಷೆ ಯಾರಿಗೆ ಮಾಡಬೇಕು ಎನ್ನುವ ನಿರ್ಧಾರಕ್ಕೆೆ ಪೂರಕವಾಗಿ ಈ ಪರೀಕ್ಷೆಯ ಫಲಿತಾಂಶವನ್ನು ಬಳಸಲಾಗುತ್ತದೆ. ಇದರಿಂದ ಹಲವಾರು ವ್ಯಕ್ತಿಿಗಳನ್ನು ಅನಾವಶ್ಯಕವಾಗಿ ದುಬಾರಿ ಪರೀಕ್ಷೆಗಳಿಂದ ಮುಕ್ತಗೊಳಿಸಿದಂತಾಗುತ್ತದೆ. ಆರೋಗ್ಯ ವ್ಯವಸ್ಥೆೆಯ ದೃಷ್ಟಿಿಯಿಂದ ಇದು ಬಹಳ ಉತ್ತಮ ವಿಧಾನ. ಬಡ ದೇಶಗಳಲ್ಲಿ ಅತೀ ಹೆಚ್ಚು ಆವಶ್ಯಕತೆ ಇರುವ ರೋಗಿಗಳಿಗೆ ಮಾತ್ರ ದೊಡ್ಡ ಪರೀಕ್ಷೆಗಳನ್ನು ನಡೆಸಲು ಈ ವಿಧಾನ ಸಹಕಾರಿ. ಇದರಿಂದ ಹಣದ, ಪರಿಕರಗಳ, ಸಮಯದ, ಸಂಪನ್ಮೂಲಗಳ ಉಳಿತಾಯ ಆಗುತ್ತದೆ. ಬಹಳ ಹೆಚ್ಚಿಿನ ಸಂಖ್ಯೆೆಯ ರೋಗಿಗಳು ತುಂಬಿರುವ ದೇಶಗಳಲ್ಲಿ ಇಂತಹ ತಂತ್ರಜ್ಞಾನಗಳ ಬಳಕೆ ಸಮುದಾಯ ವೈದ್ಯದ ದೃಷ್ಟಿಿಯಿಂದ ಬಹಳ ಉಪಯುಕ್ತ.

ಒಟ್ಟಿಿನಲ್ಲಿ ಹೊಸ ತಂತ್ರಜ್ಞಾನಗಳು ಜನ ಸ್ನೇಹಿ ಆದಂತೆಲ್ಲಾ ಸಮುದಾಯದ ಒಟ್ಟಾಾರೆ ಆರೋಗ್ಯ ಬೆಳೆಯುತ್ತದೆ. ವಿಶ್ವ ಆರೋಗ್ಯ ಸಂಸ್ಥೆೆಯ ‘ಎಲ್ಲರಿಗೂ ಆರೋಗ್ಯ’ ಎಂಬ ಧ್ಯೇಯಕ್ಕೆೆ ವಿಜ್ಞಾನ ಇಂಬು ನೀಡಲೇ ಬೇಕಲ್ಲವೇ? ಇಂತಹ ಸರಳ ತಂತ್ರಜ್ಞಾನಗಳು ಒಂದು ಕಾಯಿಲೆಯ ವಿಷಯದಲ್ಲಿ ಯಶಸ್ಸು ಪಡೆದರೆ ಅದೇ ತತ್ತ್ವವನ್ನು ಬಳಸಿಕೊಂಡು ಹಲವಾರು ಕಾಯಿಲೆಗಳ ಪತ್ತೆೆಗೆ ನೀಲಿನಕ್ಷೆ ಸಿದ್ಧಪಡಿಸಬಹುದು. ಈ ಕಾರಣದಿಂದಲೇ ಇಂತಹ ಸುಲಭ ಗ್ರಾಾಹ್ಯ ತಂತ್ರಜ್ಞಾನ ಯಶಸ್ಸು ಕಾಣುವುದು ತುಂಬಾ ಮುಖ್ಯ. ಜೀವನಕ್ಕೆೆ ಪೂರಕವಾಗುವ ವಿಜ್ಞಾನ ಎಲ್ಲಾ ವಿಜ್ಞಾನಿಗಳ, ತತ್ತ್ವ ಜ್ಞಾನಿಗಳ ಚಿರಂತನ ಕನಸು!