Sunday, 10th November 2024

ಸಂವಿಧಾನದಲ್ಲಿರುವ ಜಾತ್ಯತೀತತೆ ಕೇವಲ ಮುಸಲ್ಮಾನರ ರಕ್ಷಣೆಯೇ ?

ವೀಕೆಂಡ್ ವಿಥ್ ಮೋಹನ್
ಮೋಹನ್ ವಿಶ್ವ

1947ರಲ್ಲಿ ಅಖಂಡ ಭಾರತವು ವಿಭಜನೆಯಾದಾಗ ಮುಸಲ್ಮಾನರಿಗೆಂದೇ ಪೂರ್ವ ಪಾಕಿಸ್ತಾನ ಹಾಗು ಪಶ್ಚಿಮ ಪಾಕಿಸ್ತಾನ ದೇಶ ಗಳು ಹುಟ್ಟಿಕೊಂಡವು,  ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡಿದಾಗ ಬಹುತೇಕ ಮುಸಲ್ಮಾನರು ಭಾರತ ವನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ ವಿಷಯ ಹೊಸತೇನಲ್ಲ.

ಧರ್ಮದ ಆಧಾರದ ಮೇಲೆ ಮುಸಲ್ಮಾನರಿಗೆಂದೇ ಪ್ರತ್ಯೇಕ ದೇಶವನ್ನು ನೀಡಿದ ಮೇಲೆ ಭಾರತವು ಹಿಂದೂ ರಾಷ್ಟ್ರವಾಗಿ ಘಂಟಾ
ಘೋಷವಾಗಿ ಜಗತ್ತಿನ ಮುಂದೆ ಅಂದೇ ನಿಲ್ಲಬಹುದಿತ್ತು, ಆದರೆ ಕಾಲಕ್ರಮೇಣ ಭಾರತದಲ್ಲಿ ಅಳಿದುಳಿದಿದ್ದ ಮುಸಲ್ಮಾನರ ಓಲೈಕೆಯ ರಾಜಕೀಯದ ಪರಿಣಾಮವಾಗಿ ಭಾರತವು ಜಾತ್ಯತೀತರಾಷ್ಟ್ರವಾಯಿತು. ಇದಕ್ಕೆ ಪುಷ್ಟಿ ನೀಡುವಂತೆ ಭಾರತದ ಸಂವಿಧಾನದಲ್ಲಿ ಜಾತ್ಯತೀತವೆಂಬ ಪದವನ್ನೂ ಸಹ ಸೇರಿಸಲಾಯಿತು. ಅಲ್ಲಿಯವರೆಗೂ ಈ ಜಾತ್ಯತೀತವೆಂಬ ಪದಕ್ಕೆ ಅಷ್ಟೊಂದು ಪ್ರಾಮುಖ್ಯತೆಯಿರಲಿಲ್ಲ, ಕೇವಲ ಹಳ್ಳಿಗಳಲ್ಲಿ ಜಾತಿಯೆಂಬ ಹೆಸರಿನಲ್ಲಿ ಹೆಚ್ಚಿನ ದೌರ್ಜನ್ಯಗಳು ನಡೆಯುತ್ತಿದ್ದವು.
ನಗರ ಪ್ರದೇಶ ದಲ್ಲಿನ ದೌರ್ಜನ್ಯಗಳ ಪ್ರಮಾಣವು ಕ್ರಮೇಣ ಕಡಿಮೆಯಾಗಿತ್ತು. ಆದರೆ ಯಾವಾಗ ಕಾಂಗ್ರೆಸ್ಸಿನ ನಾಯಕರು ಸಂವಿಧಾನದಲ್ಲಿ ಜಾತ್ಯಾತೀತವೆಂಬ ಪದವನ್ನು ಸೇರಿಸಿ ದರೋ ಹಲವರಿಗೆ ಕೇವಲ ಮುಸಲ್ಮಾನರ ಮೇಲೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಹರಿಯಿತು. ಈ ಪ್ರೀತಿಯನ್ನು ಅರಿತ ಕಮ್ಯುನಿಸ್ಟ್‌ ದೇಶ ರಷ್ಯಾ ಭಾರತದೊಳಗಿನ ಆಂತರಿಕ ಶತ್ರುಗಳಿಗೆ ದೊಡ್ಡ ದೊಡ್ಡ ಸೂಟ್‌ಕೇಸ್‌ಗಳ ಮೂಲಕ ಹಣವನ್ನು ವರ್ಗಾಯಿಸಿ ರಾಷ್ಟ್ರ ಮಟ್ಟದಲ್ಲಿ, ಈ ಜಾತ್ಯತೀತವೆಂಬ ಪದವನ್ನು ಹೆಚ್ಚಾಗಿ ಮುಸಲ್ಮಾನರ ಹಣೆಯ ಮೇಲೆ ಅಂಟಿಸುವಲ್ಲಿ ಯಶಸ್ವಿಯಾಯಿತು.

ಅಂದಿನಿಂದ ಇಲ್ಲಿಯ ವರೆಗೂ ಜಾತ್ಯತೀತವೆಂದರೆ ಇವರಿಗೆ ನೆನಪಾಗುವುದು ಕೇವಲ ಮುಸಲ್ಮಾನರು, ಮುಸಲ್ಮಾನರ ವಿಚಾರ ಬಂತೆಂದರೆ ಸಾಕು ಜಾತ್ಯತೀತವೆಂಬ ಪದಬಳಕೆಯು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ರಂಜಾನ್ ಹಬ್ಬ ಬಂತೆಂದರೆ ಜಾತ್ಯ ತೀತತೆ, ಬಕ್ರೀದ್ ಬಂತೆಂದರೆ ಜಾತ್ಯತೀತತೆ, ಮುಸಲ್ಮಾನರು ಪೊಲೀಸ್ ಠಾಣೆಯನ್ನು ಧ್ವಂಸ ಮಾಡಿದರೂ ಸಹ ಜಾತ್ಯತೀತತೆ, ಒಟ್ಟಿನಲ್ಲಿ ಜಾತ್ಯತೀತತೆಯೆಂಬ ಪದಬಳಕೆಯಿರುವುದೇ ಮುಸಲ್ಮಾನರಿಗೆಂಬಂತೆ ಕಾಂಗ್ರೆಸ್ಸಿಗರು ಹಾಗೂ ಕಮ್ಯುನಿಷ್ಟರು ಬೀಗು ತ್ತಿರುತ್ತಾರೆ. ಮುಸಲ್ಮಾನರ ಮತ ಬ್ಯಾಂಕಿನ ರಾಜಕೀಯದ ನೆರಳಿನಲ್ಲಿ ಜಾತ್ಯತೀತವೆಂಬ ಪದದ ನಿಜವಾದ ಅರ್ಥವೇ ಹಾಳಾಗಿ ಹೋಗಿದೆ.

ಜಾತಿಯನ್ನು ಮೀರಿ ನಾಯಕನಾಗಬೇಕಿರುವ ನಾಯಕರು ಮಾಡಿದ್ದು ಮಾತ್ರ ಜಾತ್ಯತೀತವೆಂಬ ರಾಜಕೀಯ. ದಿನಕಳೆದಂತೆ ಜಾತ್ಯತೀತತೆಯ ಜತೆಗೆ ಅಂಟಿಕೊಂಡಂಥ ಮತ್ತೊಂದು ಪದ ಅಲ್ಪಸಂಖ್ಯಾತರು. ಮೊಟ್ಟ ಮೊದಲ ಬಾರಿಗೆ ಸಂವಿಧಾನದ ಕರುಡು ಪ್ರತಿಯು ಚರ್ಚೆಗೆ ಬಂದಾಗ ಜಾತ್ಯತೀತವೆಂಬ ಪದವನ್ನು ಸೇರಿಸಬೇಕೋ ಬೇಡವೋ ಎಂಬ ಹತ್ತಾರು ಚರ್ಚೆಗಳು
ನಡೆದವು, ಹಲವು ಜನರು ಧರ್ಮದ ಆಧಾರದ ಮೇಲೆ ವಿಭಜನೆಯಾದ ಭಾರತದಂಥ ರಾಷ್ಟ್ರದ ಸಂವಿಧಾನದಲ್ಲಿಜಾತ್ಯತೀತ ವೆಂಬ ಪದವನ್ನು ಸೇರಿಸುವುದು ಅಷ್ಟು ಸೂಕ್ತವಲ್ಲವೆಂಬ ನಿರ್ಧಾರಕ್ಕೆ ಬಂದಿದ್ದರು. ಭಾರತ ದೇಶವು ಜಾತ್ಯತೀತತೆಯ ತತ್ತ್ವಗಳಿಗೆ ಬದ್ಧವಾಗಿ ಆಡಳಿತ ನಡೆಸಬೇಕೇ ಹೊರತು, ಅದನ್ನು ಸಂವಿಧಾನದಲ್ಲಿ ತರುವ ಅವಶ್ಯಕತೆ ಯಿಲ್ಲವೆಂಬ ಅಂಶವು ಎಲ್ಲರಿಗೂ ಚೆನ್ನಾಗಿ ತಿಳಿದಿತ್ತು.

ಬ್ರಿಟಿಷರ ವಿರುದ್ದದ ಹೋರಾಟದಲ್ಲಿ ಭಾರತದ ಹೋರಾಟಗಾರರು ಎಂದೂ ಸಹ ಜಾತ್ಯತೀತತೆಯ ಆಧಾರದ ಮೇಲೆ ಹೋರಾಟ ಮಾಡಲಿಲ್ಲ, ಎಲ್ಲರಿಗೂ ರಾಷ್ಟ್ರೀಯವಾದವೇ ಅಂತಿಮವಾಗಿತ್ತು, ಎಂದೂ ಸಹ ಜಾತ್ಯತೀತತೆಯ ಆಧಾರದ ಮೇಲೆ ಕೇವಲ ಕೆಲವು ವರ್ಗದ ಜನರು ಮಾತ್ರ ಹೋರಾಟ ಮಾಡಬೇಕೆಂಬ ತಾರತಮ್ಯ ವಿರಲಿಲ್ಲ, ಹೋರಾಟಗಾರರಲ್ಲಿ ಇದ್ದ ಒಂದೇ ಒಂದು
ಅಂಶವೆಂದರೆ ರಾಷ್ಟ್ರೀಯತೆ, ನಮ್ಮ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಏನು ಬೇಕಾದರೂ ಮಾಡ ಬಯಸುವಂಥ ಮನೋಭಾವನೆ
ಯಿತ್ತು. ಈ ರೀತಿಯ ಇತಿಹಾಸವಿರುವ ಭಾರತ ದೇಶದ ಸಂವಿಧಾನದಲ್ಲಿ 1975ರಲ್ಲಿ ಇಂದಿರಾ ಗಾಂಧಿ ಭಾರತದ ಸಂವಿಧಾನದಲ್ಲಿ ಜಾತ್ಯತೀತವೆಂಬ ಪದವನ್ನು ಸಂವಿಧಾನದ ಮುನ್ನುಡಿಯಲ್ಲಿ ಸೇರಿಸುವ ಮೂಲಕ, ಸಂವಿಧಾನದ ಜನಕರು ವಿರೋಧಿಸಿದ್ದ ಕೆಲಸವನ್ನು ಮಾಡಿದ್ದರು. ಇಂದಿರಾ ಗಾಂಧಿ ಈ ಪದವನ್ನು ಸೇರಿಸಿದ್ದೆ ತಡ ಕಾಂಗ್ರೆಸ್ಸಿನ ನಾಯಕರುಗಳಿಗೆ ಮುಸಲ್ಮಾನರನ್ನು ಓಲೈಸಲು ಒಳ್ಳೆಯ ಅಸ್ತ್ರವೊಂದು ಸಿಕ್ಕಂತಾಯಿತು, ಅಂದಿನಿಂದ ಇಂದಿನವರೆಗೂ ಮುಸಲ್ಮಾನರೆಂದರೆ ಸಾಕು ಇವರಿಗೆ ಜಾತ್ಯತೀ ತತೆಯು ನೆನಪಾಗುತ್ತದೆ.

ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯನ್ನು ಮುಸಲ್ಮಾನರ ಹಣೆಗೆ ಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಶುರು ಮಾಡಿದ್ದರು. ನಿಜವಾದ ಜಾತ್ಯತೀತತೆಯೆಂದರೆ ಜಾತಿ ಮತಗಳನ್ನು ಬಿಟ್ಟು ಎಲ್ಲರನ್ನೂ ಸಮನಾಗಿ ಕಾಣಬೇಕು, ಆದರೆ ನಮ್ಮ ದೇಶದಲ್ಲಾಗು ತ್ತಿರುವುದೇನು? ಮುಸಲ್ಮಾನರೆಂದರೆ ಏನೂ ತಿಳಿಯದ ಅಮಾಯಕರ ರೀತಿಯಲ್ಲಿ ಕಾಂಗ್ರೆಸ್ಸಿನ ಹಾಗೂ ಕಮ್ಯುನಿಸ್ಟಿನ ನಾಯಕರು
ನೋಡುತ್ತಾರೆ, ಅವರಿಗೂ ಗೊತ್ತು ಯಾರು ಸಹ ಅಮಾಯಕರಲ್ಲ. ಆದರೆ ಇವರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಸಲ್ಮಾನರನ್ನು ಜಾತ್ಯತೀತರೆಂಬ ಸೋಗಿನಲ್ಲಿ ನೋಡುತ್ತಾರೆ.

ಜಾತ್ಯತೀತತೆಯ ನೌಟಂಕಿ ಮಾಡುವ ನಾಯಕರ ತವರುಮನೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವೆಂದರೆ ತಪ್ಪಿಲ್ಲ, ಇಲ್ಲಿಂದ ಹೊರಬರುವ ಬಹುತೇಕರು ನಕಲಿ ಜಾತ್ಯತೀತತೆಯ ಹೆಸರಿನಲ್ಲಿ ದೇಶದಾದ್ಯಂತ ರಾಜಕೀಯ ಮಾಡುವವರೇ, ಅಲ್ಲಿ ಇಲ್ಲಿ ಒಬ್ಬಿಬ್ಬರು ಮಾತ್ರ ನಿಜವಾದ ಜಾತ್ಯತೀತತೆಯ ಪರಿಕಲ್ಪನೆಯನ್ನು ಕಲಿತು ಹೊರಬರುತ್ತಾರೆ. ಕಾಶ್ಮೀರದಲ್ಲಿ ಪಂಡಿತರ ಕಗ್ಗೊಲೆಗಳಾದಾಗ ಇವರ್ಯಾಾರಿಗೂ ಜಾತ್ಯತೀತತೆಯ ಅರಿವಾಗುವುದಿಲ್ಲ, ಯಾಕೆಂದರೆ ಇವರ ಪ್ರಕಾರ ಜಾತ್ಯತೀತರೆಂದರೆ ಕೇವಲ ಮುಸಲ್ಮಾನರು, ಸಂವಿಧಾನದಲ್ಲಿ ಜಾತ್ಯತೀತತೆಯೆಂಬ ಪದವನ್ನು ಕೇವಲ ಮುಸಲ್ಮಾನರಿಗೋಸ್ಕರವೇ ಸೇರಿಸಲಾಯಿ
ತೆಂಬಂತೆ ಆಡುತ್ತಾರೆ. ನಾನು ಇತ್ತೀಚಿಗೆ ಸುವರ್ಣ ವಾಹಿನಿಯ ಚರ್ಚೆಯೊಂದರಲ್ಲಿ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿಯ ಗಲಾಟೆಯ ವಿಚಾರವಾಗಿ ಮಾತನಾಡುತ್ತಿರುವಾಗ ಮುಸಲ್ಮಾನ್ ನಾಯಕರೊಬ್ಬರು, ತಮಗೆ ಸಂವಿಧಾನಕ್ಕಿಂತಲೂ ಧರ್ಮವೇ ದೊಡ್ಡದೆಂದು ಹೇಳಿದರು, ಅಲ್ಲಿ ಕುಳಿತಿದ್ದ ನಮಗೆಲ್ಲರಿಗೂ ಒಂದು ಕ್ಷಣ ಈ ಮನುಷ್ಯ ಏನು ಹೇಳುತ್ತಿದ್ದನೆಂದು ಅರ್ಥವಾಗ ಲಿಲ್ಲ. ನಂತರ ಮತ್ತೇ ಅದನ್ನೇ ಹೇಳಿದ, ಮುಸಲ್ಮಾನರು ಭಾರತದ ಸಂವಿಧಾನವನ್ನೇ ಗೌರವಿಸದೆ, ತಮ್ಮ ಧರ್ಮವನ್ನು ಹೆಚ್ಚು ಗೌರವಿಸುತ್ತಾರೆಂದರೆ ಅವರಿಗ್ಯಾಕೆ ಜಾತ್ಯತೀತವೆಂಬ ಆಶ್ರಯ.

ಸಂವಿಧಾನವನ್ನೇ ಗೌರವಿಸದೆ ತಮ್ಮ ಧರ್ಮವೇ ಮೇಲೆನ್ನುವವರಿಗೇಕೆ ಜಾತ್ಯತೀತದಡಿಯಲ್ಲಿ ವಿಶೇಷ ಸವಲತ್ತುಗಳನ್ನು ಯಾಕೆ ಕೊಡಬೇಕು? ಮುಖ್ಯವಾಹಿನಿಯ ಒಂದು ಚರ್ಚೆಯಲ್ಲಿ ಅಷ್ಟೊಂದು ರಾಜಾರೋಷವಾಗಿ ಹೇಳುತ್ತಾರೆಂದರೆ, ಅವರನ್ನು ಓಲೈಕೆ ಮಾಡುವ ರಾಜಕಾರಣಿಗಳಿಗೆ ನಾಚಿಕೆ ಯಾಗಬೇಕು. ಸಂವಿಧಾನಕ್ಕೆ ಬೆಲೆ ಕೊಡದ ಧರ್ಮಾನಂದ ರನ್ನು ರಕ್ಷಿಸುವ ಭರದಲ್ಲಿ ಇನ್ನೂ ಅದ್ಯಾವ ಯಡವಟ್ಟುಗಳನ್ನು ನೋಡಬೇಕೋ ತಿಳಿದಿಲ್ಲ.

ಹಲವು ನಾಯಕರು ತಮ್ಮನ್ನು ಜಾತ್ಯತೀತ ನಾಯಕನೆಂದು ಹೇಳಿಕೊಂಡು ಸಮಾಜದಲ್ಲಿ ಓಡಾಡುತ್ತಿರುತ್ತಾರೆ, ಇವರ್ಯಾರೂ ಸಹ ಹಿಂದೂ ಧರ್ಮದವರಿಗೇನಾದರೂ ಅನ್ಯಾಯವಾದರೆ ಸಹಾಯಕ್ಕೆ ಬರುವುದಿಲ್ಲ, ಮುಸಲ್ಮಾನರಿಗಾದರೆ ಸಾಕು ಎಲ್ಲರಿ ಗಿಂತಲೂ ಮುಂದೆ ನಿಂತಿರುತ್ತಾರೆ. ಜಾತ್ಯತೀತ ಜನತಾದಳವನ್ನು ಸ್ಥಾಪಿಸಿದ ದೇವೇಗೌಡರಿಗೆ ತಮ್ಮ ಪಕ್ಷದ ಹೆಸರಿನಲ್ಲಿ ಜಾತ್ಯತೀತವನ್ನು ಸೇರಿಸಿಕೊಂಡರೆ ಮುಸಲ್ಮಾಾನರು ತಮಗೆ ಮತ ಹಾಕುತ್ತಾರೆಂದು ತಿಳಿದಿತ್ತು,

ಆಗಲೇ ಜಮೀರ್ ಅಹ್ಮದ್ ಖಾನ್ ರಾಜಕೀಯ ಪ್ರವೇಶ ಮಾಡಿದ್ದು. ಜಮೀರಣ್ಣನ ಮತ ಬ್ಯಾಂಕನ್ನು ಗೌಡರು ಜಾತ್ಯತೀತವೆಂಬ ಪದದಿಂದ ಹಿಡಿದಾಗಿತ್ತು. ಕಾಂಗ್ರೆಸ್ಸನ್ನು ಬಿಟ್ಟು ಹೋಗದ ಮುಸಲ್ಮಾನರು ದೇವೇಗೌಡರ ಪಕ್ಷಕ್ಕೆ ಮೊದಲ ಬಾರಿಗೆ ವಾಲಿದ್ದು ಹೋದಲ್ಲೆಲ್ಲ ಬಂದಲ್ಲೆಲ್ಲ ದೇವೇಗೌಡರು ಹಾಗೂ ಕುಮಾರ ಸ್ವಾಮಿಯವರು ಈ ಪದವನ್ನು ಬಳಸಿ ಮುಸಲ್ಮಾನರನ್ನು ಒಲಿಸಿ ಕೊಳ್ಳುವುದರಲ್ಲಿ ಸಫಲರಾಗಿದ್ದರು. ಪ್ರಾದೇಶಿಕ ಪಕ್ಷವೊಂದಕ್ಕೆ ಕರ್ನಾಟಕದಲ್ಲಿ ಮುಸಲ್ಮಾನರು ಆ ಮಟ್ಟಿನ ಬೆಂಬಲ ನೀಡಿದ್ದು ಮೊದಲನೇ ಸಲ. ಯಾರು ಏನೇ ಹೇಳಲಿ ದೇವೇಗೌಡರು ಚಾಣಾಕ್ಷ ರಾಜಕಾರಣಿ, ತಮ್ಮ ಪಕ್ಷದ ಹೆಸರಿನಲ್ಲಿ ಮುಖ್ಯ ವಾದ ಪದವೊಂದನ್ನು ಸೇರಿಸುವ ಮೂಲಕ ನೇರವಾಗಿ ಮುಸಲ್ಮಾನರ ಮತ ಬ್ಯಾಂಕಿಗೆ ಲಗ್ಗೆ ಇಟ್ಟಿದ್ದರು.

ಎಂತಹ ವಿಪರ್ಯಾಸ ನೋಡಿ, ಜಾತಿಯನ್ನು ಮೀರಿದ ದೇಶವನ್ನು ಕಟ್ಟಲು ಬಳಕೆಯಾಗಬೇಕಿದ್ದ ಪದವು ಒಂದು ಪ್ರಾದೇಶಿಕ
ಪಕ್ಷದ ಉಗಮಕ್ಕೆ ಕಾರಣವಾಯಿತು. ದೇವೇಗೌಡರಷ್ಟೇ ಹೆಸರು ಮಾಡಿದ್ದು ರಾಮಕೃಷ್ಣ ಹೆಗ್ಡೆಯವರು, ಜನತಾ ದಳವು ಇಬ್ಭಾಗವಾದ ಮೇಲೆ ಅವರ ಅನುಯಾಯಿಗಳು ಕಟ್ಟಿದ ಪಕ್ಷ ಸಂಯುಕ್ತ ಜನತಾದಳ ಇಂದಿಗೂ ಮೇಲೇಳಲಾಗಲೇ ಇಲ್ಲ, ಕಾರಣ ಮತ್ತದೇ ದೇವೇಗೌಡರ ಜಾತ್ಯತೀತವೆಂಬ ರಾಜಕೀಯ. ಗೌಡರು ಮುಸಲ್ಮಾನರನ್ನು ಬಳಸಿಕೊಂಡ ರೀತಿಯಲ್ಲಿ ಹೆಗಡೆಯವರ ಉತ್ತರಾಧಿಕಾರಿಗಳು ಬಳಸಿಕೊಳ್ಳಲಿಲ್ಲ. ಪದಮಹಿಮೆಯೆಂದರೆ ಇದೆ ನೋಡಿ, ಇದೊಂದು ಪದವು ಪ್ರತಿನಿತ್ಯವೂ ದೇಶದಲ್ಲಿ
ಅದೆಷ್ಟು ವಿಚಾರಗಳನ್ನು ಚರ್ಚೆಗೆ ಬಿಡುತ್ತದೆಯೆಂದರೆ, ಪ್ರತಿನಿತ್ಯವೂ ಎಲ್ಲಾದರೊಂದು ಕಡೆ ಇದರ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ.

ಜಾತ್ಯತೀತದಡಿಯಲ್ಲಿ ಮುಸಲ್ಮಾನರನ್ನು ಓಲೈಸಿಕೊಳ್ಳಲು ಗೌಡರು ಅದ್ಯಾವ ಮಟ್ಟಕೆ ಇಳಿದ್ದಿದ್ದರೆಂದರೆ ತಾವು ಮುಸಲ್ಮಾನ ನಾಗಿ ಹುಟ್ಟಬೇಕೆಂಬ ಬಯಕೆಯಿದೆಯೆಂದೆಲ್ಲಾ ಹೇಳಿಬಿಟ್ಟಿದ್ದರು. ಆದರೆ ದಿನಕಳೆದಂತೆ ಅವರು ನಂಬಿಕೊಂಡಿದ್ದ ಮುಸಲ್ಮಾ ನರು ಕೈ ಕೊಟ್ಟರು, ಜಾತ್ಯತೀತ ಜನತಾದಳಕ್ಕೆ ಬರುತ್ತಿದ್ದ ಸಾಂಪ್ರದಾಯಿಕ ಮುಸಲ್ಮಾನ್ ಮತಗಳು ಮತ್ತೆ ಕಾಂಗ್ರೆಸ್ಸಿನ  ಪಾಲಾ ದವು.

ಬಹುತೇಕ ಮುಸಲ್ಮಾನರಿಗೆ ಜಾತ್ಯತೀತವೆಂದರೇನೆಂದು ಕೇಳಿದರೆ ದೇವರಾಣೆ ತಿಳಿದಿರುವುದಿಲ್ಲ, ಮುಸಲ್ಮಾನರಿಗೆ ಬಿಡಿ ಅವರ ರಾಜಕೀಯ ನಾಯಕರುಗಳಿಗೂ ತಿಳಿದಿರುವುದಿಲ್ಲ. ಅಪ್ಪ ಹಾಕಿದ ಆಲದ ಮರದ ರೀತಿಯಲ್ಲಿ ತಾವು ಹೇಳುವುದನ್ನು ಬಿಡುವು ದಿಲ್ಲ. ಜಾತ್ಯತೀತತೆಯ ಸೋಗಿನಲ್ಲಿ ಹಲವು ವರ್ಷಗಳ ಕಾಲ ಭಾರತದ ರಾಷ್ಟ್ರೀಯತೆಯು ಸೊರಗಿದ್ದಂತೂ ನಿಜ, ರಾಷ್ಟ್ರೀಯ ಸ್ವಯಂ ಸೇವಕ ಸಂಘವೇನಾದರೂ ರಾಷ್ಟ್ರದಲ್ಲಿ ಇಲ್ಲದ್ದಿದ್ದರೆ ಕಮ್ಯುನಿಷ್ಟರು ಹಾಗೂ ಕಾಂಗ್ರೆಸ್ಸಿನವರು ಜಾತ್ಯತೀತತೆಯೆಂಬ ಹೆಸರಿನಡಿ ದೇಶದಾದ್ಯಂತ ಅದೆಷ್ಟು ಅನಾಹುತಗಳನ್ನು ಸೃಷ್ಟಿಸುತ್ತಿದ್ದರೋ ದೇವರೇ ಬಲ್ಲ.

ವಿಪರ್ಯಾಸವೆಂದರೆ ಜಾತ್ಯಾತೀತ ವೆಂಬ ಪದ ಬಳಕೆಯನ್ನು ಬೆಂಬಲಿಸುವವರೇ ಅತೀ ಹೆಚ್ಚಿನ ಮೀಸಲಾತಿಗಳನ್ನು ಜಾತಿ ಯಾದರಾದ ಮೇಲೆ ಕೇಳುತ್ತಾರೆ, ಸರಕಾರದ ಯಾವುದೇ ನೂತನ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಾದರೆ ವಿವಿಧ ಜಾತಿಯ ಬಗ್ಗೆ ಚರ್ಚೆಯಾಗಿಯೇ ಜನರನ್ನು ತಲುಪುತ್ತದೆ. ರಾಜಕೀಯದಲ್ಲಿನ ಪ್ರತಿಯೊಂದು ಹೆಜ್ಜೆಯೂ ಜಾತಿಯ ಆದರದ
ಮೇಲೆಯೇ ನಿಂತಿದೆ. ವೋಟು ಕೇಳುವವನು ಮೊದಲು ಲೆಕ್ಕಚಾರ ಹಾಕುವುದೇ ತನ್ನ ಜಾತಿಯ ಮತಬ್ಯಾಂಕ್.

ಮುಸಲ್ಮಾನರ ವಿಚಾರದಲ್ಲಿ ಅತೀ ಹೆಚ್ಚಿನ ರಾಜಕೀಯ ನಾಟಕ ಶುರುವಾಗುವುದೇ ಜಾತ್ಯತೀತತೆಯೆಂಬ ಹೆಸರಿನಡಿ, ಒಂದು ಮಾತಂತೂ ನಿಜ ಈ ಪದವು ಯಾರನ್ನು ಏನು ಮಾಡಿದೆಯೋ ತಿಳಿದಿಲ್ಲ, ಆದರೆ ಮುಸಲ್ಮಾನರ ಒಗ್ಗಟ್ಟನ್ನು ಹೆಚ್ಚು ಮಾಡಿದೆ. ಹಿಂದೂಗಳಲ್ಲಿಲ್ಲದ ಒಗ್ಗಟ್ಟು ಅವರಲ್ಲಿದೆ, ಇದಕ್ಕೆ ಹಲವು ಚುನಾವಣಾ ಫಲಿತಾಂಶಗಳೇ ಸಾಕ್ಷಿ, ತಮಗೆ ಬೇಕಿರುವ ಕೆಲಸಗಳನ್ನು ಮಾಡಿಸಿಕೊಳ್ಳಲು ತಮ್ಮ ಇಡೀ ಸಮುದಾಯದವರನ್ನು ಕರೆದುಕೊಂಡು ಬಂದು ಚುನಾವಣೆಯ ದಿನದಂದು ಮತ ಹಾಕುತ್ತಾರೆ, ತಮ್ಮಲ್ಲಿನ ಅಣ್ಣ ತಮ್ಮಂದಿರಿಗೆ ಆಗುವ ಅವಮಾನಗಳನ್ನು ಎಲ್ಲರೂ ಒಟ್ಟಾಗಿ ಎದುರಿಸಲು ಸಿದ್ಧರಾಗುತ್ತಾರೆ, ಒಂದು ಹಬ್ಬದ
ಆಚರಣೆಯನ್ನೂ ಎಲ್ಲರೂ ಸೇರಿ ಮಾಡುತ್ತಾರೆ. ಇವರ ಒಗ್ಗಟ್ಟೇ ರಾಜಕೀಯ ನಾಯಕರುಗಳಿಗಿರುವ ವರವೆಂದರೆ ತಪ್ಪಿಲ್ಲ.

ಒಮ್ಮೆ ಇವರ ನಾಯಕನ ಓಲೈಕೆಯನ್ನು ಮಾಡಿದರೆ ಮುಗಿಯಿತು, ಎಲ್ಲರೂ ಅವನು ಹೇಳಿದ ರೀತಿಯಲ್ಲಿ ಕೇಳುತ್ತಾರೆ. ಒಂದು ಸಮುದಾಯವನ್ನು ಜಾತ್ಯತೀತವೆಂಬ ಹೆಸರಿನಲ್ಲಿ ಯಾವರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ ನೋಡಿ. ದೇಶದಲ್ಲಿನ ಜಾತಿ ಹಾಗೂ ಧರ್ಮಗಳನ್ನು ಒಂದು ಗೂಡಿಸಬೇಕಾದ ಜಾತ್ಯತೀತತೆಯೆಂಬ ಅಂಶವು ಕಾಂಗ್ರೆಸ್ಸಿಗರ ಕೈಯಲ್ಲಿ ಸಿಕ್ಕು ದೇಶ ವಿಭಜನೆ ಯತ್ತ ಸಾಗುತ್ತಿದೆ. ಹಲವೆಡೆ ಧರ್ಮದ ಆಧಾರದ ಮೇಲೆ ವಿಭಜನೆಯಾಗಿ ಹೋಗಿದೆ. ಅಸಂಖ್ಯಾತ ಹಿಂದೂಗಳ ಮನದಲ್ಲಿ ಕಾಂಗ್ರೆಸ್ಸಿಗರ ಜಾತ್ಯತೀತ ರಾಜಕೀಯದ ಹಿಂದಿನ ರಹಸ್ಯ ಸ್ಪಷ್ಟವಾಗಿ ಬೇರೂರಿದೆ, ಕೇವಲ ಮುಸಲ್ಮಾನರನ್ನು ಓಲೈಸುವ ಸಲು ವಾಗಿ ಕಾಂಗ್ರೆಸ್ ಮಾಡುತ್ತಿರುವ ರಾಜಕೀಯವೂ ಸಹ ಆಳವಾಗಿ ಎಲ್ಲರ ಮನದಲ್ಲಿ ಹೊಕ್ಕಿಯಾಗಿದೆ.

2004 ಹಾಗೂ 2009ರ ಚುನಾವಣೆಯನ್ನು ಕಾಂಗ್ರೆಸ್ ಪಕ್ಷವು ಜಾತ್ಯತೀತತೆಯ ಆದರದ ಮೇಲೆಯೇ ಗೆದ್ದದ್ದು, ದೇಶದಾದ್ಯಂತ  ಜಾತಿ ಜಾತಿಗಳ ನಡುವೆ ವಿಭಜನೆಯನ್ನು ಮಾಡಿ ಮುಸಲ್ಮಾನರನ್ನು ಒಂದೆಡೆ ಸೇರಿಸಿ ತಮ್ಮ ಮತಬ್ಯಾಂಕನ್ನು ಗಟ್ಟಿ ಮಾಡಿ ಕೊಂಡಿದ್ದರು, ಆಗ ಹಿಂದುವಿಗೆ ತನ್ನ ಧರ್ಮದ ಮೇಲಾಗುತ್ತಿರುವ ಅನ್ಯಾಯದ ಅರಿವಿರಲಿಲ್ಲ. ಯಾವಾಗ ಕಾಂಗ್ರೆಸ್ಸಿನ ಜಾತ್ಯ ತೀತವು ಕೇವಲ ಮುಸಲ್ಮಾನರ ಓಲೈಕೆಯೆಂಬ ಅಂಶದ ಅರಿವಾಯಿತೋ ಆಗ ಹಿಂದೂ ಎಚ್ಚೆತ್ತುಕೊಂಡ. ಜಾತ್ಯತೀತತೆಯ ಸೋಗಿನಲ್ಲಿ ಮುಸಲ್ಮಾನರಿಗೆ ನೀಡುತ್ತಿದ್ದ ಪ್ರಯೋಜನೆಗಳ ಅರಿವು ದೇಶದ ಅಸಂಖ್ಯಾತ ಹಿಂದುಗಳಿಗಾಯಿತು.

ಇದರ ಜೊತೆಗೆ ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯಡಿಯಲ್ಲಿ ಮುಸಲ್ಮಾನರು ಅನುಭವಿಸುತ್ತಿರುವ ಪ್ರಯೋಜನೆಗಳ ಅರಿವಾ ಯಿತು, ಸ್ವಾತಂತ್ರ್ಯಾನಂತರ ಬಹುಸಂಖ್ಯಾತ ಹಿಂದೂ ರಾಷ್ಟ್ರವಾಗಿದ್ದ ಭಾರತದಲ್ಲಿ ಹಿಂದೂಗಳ ಒಗ್ಗಟ್ಟು ಒಡೆದಿರುವುದೆಷ್ಟು ಅಪಾಯಕಾರಿಯೆಂಬ ವಿಷಯವು ಮನವರಿಕೆಯಾಯಿತು. ಕಮ್ಯುನಿಸ್ಟರ ಮುಸಲ್ಮಾನ್ ಓಲೈಕೆಯ ಹಿಂದಿನ ಷಡ್ಯಂತ್ರವೂ ಸಹ ಬಯಲಾಯಿತು, ಬಹಿರಂಗವಾಗಿ ಕಮ್ಯುನಿಷ್ಟರು ಮುಸಲ್ಮಾನರು ಮಾಡಿದೆಲ್ಲ ಸರಿ ಎನ್ನುತ್ತಿದ್ದರು. ಓದುವ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳ ತಲೆಗೆ ಕಮ್ಯುನಿಷ್ಟರು ತುಂಬುತ್ತಿದ್ದ ನಕಲಿ ಜಾತ್ಯತೀತತೆಯ ಸಾರವು ಜಗಜ್ಜಾಹೀರವಾಯಿತು, ಅದರ ಫಲವಾ ಗಿಯೇ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿನ ಹಲವು ವಿದ್ಯಾರ್ಥಿಗಳು ದೇಶದಲ್ಲಿ ಎಲ್ಲಾದರೂ ಮುಸಲ್ಮಾನರಿಗೆ ಅಲ್ಪ,ಸ್ವಲ್ಪ ತೊಂದರೆಯಾದರೆ ಸಾಕು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು.

ಹಲವು ಸುಳ್ಳುಗಳನ್ನು ನಿಜವೆಂದು ಸಾಬೀತುಪಡಿಸುವ ಹುನ್ನಾರಗಳು ನಡೆದವು, ದೇಶದಾದ್ಯಂತ ನಡೆದ ಪೌರತ್ವ ತಿದ್ದುಪಡಿ
ಕಾಯ್ದಯ ಪ್ರತಿಭಟನೆಯಲ್ಲಿ ಮತ್ತದೇ ಜಾತ್ಯತೀತವೆಂಬ ಅಂಶವನ್ನಿಟ್ಟುಕೊಂಡು ಸುಳ್ಳುಗಳನ್ನು ಹೇಳಲಾಯಿತು. ವಿದ್ಯಾರ್ಥಿ ದಿಸೆಯಲ್ಲಿಯೇ ಮಕ್ಕಳ ತಲೆಯಲ್ಲಿ ಜಾತ್ಯತೀತವೆಂದರೆ ಕೇವಲ ಮುಸಲ್ಮಾನರ ರಕ್ಷಣೆಯೆಂಬ ಸುಳ್ಳು ವಿಚಾರವನ್ನು ತುಂಬಲಾ ಯಿತು.

ಬ್ರಿಟಿಷರು ಹೇಗೆ ನಮ್ಮಲ್ಲಿ ಜಾತಿ ಹಾಗೂ ಧರ್ಮಗಳ ಆಧಾರದ ಮೇಲೆ ದೇಶವನ್ನು ವಿಭಜನೆಯನ್ನು ಮಾಡಿ ನೂರಾರು ವರ್ಷಗಳ ಕಾಲ ಆಡಳಿತ ನಡೆಸಿದರೋ, ಸ್ವಾತಂತ್ರ್ಯಾನಂತರ ಭಾರತದಲ್ಲಿ ಜಾತ್ಯತೀತತೆಯ ಸೋಗಿನಡಿ ಮುಸಲ್ಮಾನರನ್ನು ರಕ್ಷಿಸಲಾ ಯಿತು. ಮುಸಲ್ಮಾನರನ್ನು ರಕ್ಷಿಸುವ ಸಲುವಾಗಿಯೇ ಕಾಂಗ್ರೆಸ್ ಪಕ್ಷವು ಹುಟ್ಟಿಕೊಂಡಂತೆ ಈಗಲೂ ಕಾಂಗ್ರೆಸ್ಸಿನ ನಾಯಕರು ಮಾತನಾಡುತ್ತಾರೆ.

ಮುಸಲ್ಮಾನರು ಏನು ತಪ್ಪು ಮಾಡಿದರೂ ಸಹ ಅದೆಲ್ಲವೂ ಸರಿಯೆಂದು ಜಾತ್ಯತೀತತೆಯ ಸೋಗಿನಡಿ ರಕ್ಷಿಸಲಾಗುತ್ತಿದೆ.
ದೇಶದಲ್ಲಿ ಇಪ್ಪತ್ತು ಕೋಟಿ ಜನಸಂಖ್ಯೆಯಿರುವ ಮುಸಲ್ಮಾನರು ಯಾವ ದಿಕ್ಕಿನಿಂದಲೂ ಅಲ್ಪಸಂಖ್ಯಾತರಂತೆ ಕಾಣಿಸುವುದಿಲ್ಲ, ಅವರ ಉದ್ದೇಶವೇ ತಮ್ಮ ಜನ ಸಂಖ್ಯೆಯನ್ನು ಹೆಚ್ಚಿಸಿ ಬಹುಸಂಖ್ಯಾತರಾಗಬೇಕೆಂದಿರುವಾಗ ಯಾಕೆ ಜಾತ್ಯತೀತತೆಯಡಿಯಲ್ಲಿ ಅವರಿಗೆ ಅಷ್ಟೊಂದು ರಕ್ಷಣೆ ಕೊಡಬೇಕು? ಕಟ್ಟಾ ಧರ್ಮ ಪಾಲಕರಾಗಿರುವ ಮುಸಲ್ಮಾನರು ತಮ್ಮ ಧರ್ಮದ ಹೆಸರಿನಲ್ಲಿ ಮಾಡುವ ಎಲ್ಲಾ ಆಚರಣೆಗಳೂ ಸರಿಯಾಗಿದೆಯೆಂದೇ ಕಮ್ಯುನಿಷ್ಟರು ಹಾಗೂ ಕಾಂಗ್ರೆಸ್ಸಿಗರು ಹೇಳುತ್ತಾರೆ, ಆದರೆ ಹಿಂದೂ ಧರ್ಮದ ಆಚರಣೆಗಳು ಮಾತ್ರ ಇವರ ಕಣ್ಣು ಕುಕ್ಕುತ್ತಿರುತ್ತದೆ.

ಮುಸಲ್ಮಾನರನ್ನು ಬೆಂಬಲಿಸುವ ಹಲವು ಮಾಧ್ಯಮಗಳ ಕಥೆಯೂ ಇಷ್ಟೇ, ಬಹಿರಂಗವಾಗಿ ತಾವು ಮಾಡುತ್ತಿರುವುದು ತಪ್ಪೆಂದು
ತಿಳಿದ್ದಿದ್ದರೂ ಸಹ ಮುಸಲ್ಮಾನರ ಪರವಾಗಿ ನಿಲ್ಲುತ್ತವೆ. ಯಾವ ಸರಕಾರವು ಅಧಿಕಾರಕ್ಕೆ ಬಂದರೂ ಸಹ, ಸರಕಾರದ
ಯೋಜನೆಗಳ ಅತೀ ಹೆಚ್ಚು ಫಲಾನುಭವಿಗಳು ಮುಸಲ್ಮಾನರು. ಸರಕಾರದ ಪ್ರತಿಯೊಂದು ಯೋಜನೆಗಳನ್ನು ಚಾಚೂ ತಪ್ಪದೆ ಅನುಭವಿಸುತ್ತಾರೆ. ಜಾತ್ಯತೀತವೆಂಬ ಅಂಶದಡಿಯಲ್ಲಿ ಕೇವಲ ಮುಸಲ್ಮಾನರ ಓಲೈಕೆ ಮಾಡುತ್ತಿರುವುದು ನಮ್ಮ ದೇಶದ ದುರದೃಷ್ಟಕರ ಸಂಗತಿ, ಸಂವಿಧಾನದಡಿಯಲ್ಲಿ ಕೇವಲ ಮುಸಲ್ಮಾನರ ಓಲೈಕೆಗಾಗಿಯೇ ಈ ಪದವನ್ನು ಸೇರಿಸಲಾಯಿತೇ?
ಗೊತ್ತಿಲ್ಲ, ಆದರೆ ಕಳೆದ ಕೆಲವು ದಶಕಗಳ ರಾಜಕೀಯವನ್ನು ನೋಡಿದಾಗ ಅನುಮಾನ ಬರುವುದಂತೂ ನಿಜ. ಜಾತಿ, ಧರ್ಮಗಳ ಎಲ್ಲೆಯನ್ನು ಮೀರಿ ರಚಿಸಿದಂಥ ಸಂವಿಧಾನ ವನ್ನು ಕೇವಲ ಒಂದು ಧರ್ಮದ ಓಲೈಕೆಗಾಗಿ ಬಳಸಲಾಗುತ್ತಿರುವುದು ಮಾತ್ರ
ನಿಜವೆಂದೆನಿಸುತ್ತಿದೆ.