Saturday, 23rd November 2024

ಅಧಿಕಾರದ ಮುಂದೆ ಸಿದ್ಧಾಂತವೆಲ್ಲ ಮೂಲೆಗುಂಪು

ರಂಜಿತ್ ಎಚ್. ಅಶ್ವತ್ಥ

ಇಂಟ್ರೋೋ: ಅಧಿಕಾರ ದಾವಂತದಲ್ಲಿರುವ ನಾಯಕರಿಗೆ, ಯಾವುದೇ ಸೈದ್ಧಾಾಂತಿಕ ವಿರೋಧ, ವಾಕ್ಸಮರಗಳು ನೆನಪಿಗೆ ಬರುವುದಿಲ್ಲ. ಆದರೆ, ಯಾವುದೇ ಅಧಿಕಾರದ ಆಸೆಗಳಿಲ್ಲದೆ, ಪಕ್ಷಕ್ಕಾಾಗಿ ದುಡಿಯುವ ಕಾರ್ಯಕರ್ತರಿಗೆ ಉಸಿರು ಗಟ್ಟುವ ಪರಿಸ್ಥಿಿತಿ ನಿರ್ಮಾಣವಾಗುವುದು ಸಹಜ.

ರಾಜಕೀಯ ನಿಂತ ನೀರಲ್ಲ.. ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರು ಅಥವಾ ಮಿತ್ರರಿಲ್ಲ… ಶತ್ರುವಿನ ಶತ್ರು ಮಿತ್ರ.. ಹೀಗೆ ರಾಜಕೀಯ ವಿಚಾರ ಬಂದಾಗಲೆಲ್ಲ, ವಿಶ್ಲೇಷಕರು ಸಾಲು ಸಾಲು ಮಾತುಗಳನ್ನು ಹೇಳಬಹುದು. ಆದರೆ, ಇದೇ ರೀತಿಯ ಮನಸ್ಥಿಿತಿ ಬದಲಿಸಿಕೊಳ್ಳುವುದಕ್ಕೆೆ ಸಾಧ್ಯವೇ ಎನ್ನುವುದಕ್ಕೆೆ ಅನೇಕರಲ್ಲಿ
2018ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಬಳಿಕ ಸೃಷ್ಟಿಿಯಾದ ಅತಂತ್ರ ವಿಧಾನಸಭೆಯ ರೀತಿಯೇ ಇದೀಗ ಮಹಾರಾಷ್ಟ್ರದಲ್ಲಿ ಸೃಷ್ಟಿಿಯಾಗಿತ್ತು. ಬಿಜೆಪಿ-ಶಿವಸೇನೆಗೆ ಬಹುಮತವಿದ್ದರೂ, ಮುಖ್ಯಮಂತ್ರಿಿ ಸ್ಥಾಾನ ಹಂಚಿಕೆ ವಿಚಾರದಲ್ಲಿನ ಗೊಂದಲ ಇಷ್ಟೆೆಲ್ಲ ಗದ್ದಲಕ್ಕೆೆ ನಾಂದಿ ಹಾಡಿತ್ತು. ಈ ರೀತಿಯಾಗುತ್ತಿಿದ್ದಂತೆ ಸರಕಾರ ರಚನೆ ಪ್ರಕ್ರಿಿಯೆಯಿಂದ ಹಿಂದೆ ಸರಿದಿದ್ದ ಬಿಜೆಪಿ, ಏಕ್‌ಧಮ್ ಎನ್‌ಸಿಪಿ ಜತೆ ಕೈಜೋಡಿಸಿ ಅಧಿಕಾರ ಸ್ವೀಕರಿಸಿದೆ.

ಬಿಜೆಪಿ-ಎನ್‌ಸಿಪಿ ಒಪ್ಪಂದವಾಗುತ್ತಲ್ಲೇ, ರಾಜಕೀಯ ಪಕ್ಷಗಳ ಸೈದ್ಧಾಾಂತಿಕ ವಿಚಾರದ ವಿಷಯ ಮುನ್ನಲೆಗೆ ಬಂದಿತ್ತು. ಪ್ರಮುಖವಾಗಿ ವಿಧಾನಸಭಾ ಚುನಾವಣಾ ಶುರುವಾಗುವ ಮೊದಲೇ, ಎನ್‌ಸಿಪಿ-ಬಿಜೆಪಿ ವಾಕ್ಸಮರ ನಡೆಸಿದ್ದವು. ಇದರೊಂದಿಗೆ ಎರಡು ಪಕ್ಷಗಳ ಪ್ರಣಾಳಿಕೆಗಳು ವಿರುದ್ಧ ದಿಕ್ಕಿಿನಲ್ಲಿದ್ದವು. ಮೈತ್ರಿಿ ಪ್ರಹಸನ ಶುರುವಾಗುತ್ತಿಿದ್ದಂತೆ, ಶಿವಸೇನೆ, ಎನ್‌ಸಿಪಿ ಜತೆ ಹೋಗುತ್ತಿಿರುವುದು ತಿಳಿಯುತ್ತಿಿದ್ದಂತೆ ಬಿಜೆಪಿ ನಾಯಕರು ಸಾಲು ಸಾಲಾಗಿ ಟೀಕಾಪ್ರಹಾರ ನಡೆಸಿದ್ದರು. ಆದರೆ, ಸರಕಾರ ರಚಿಸಲು ಎನ್‌ಸಿಪಿ ಬಿಜೆಪಿ ಜತೆ ಬರಲು ಒಪ್ಪುುತ್ತಿಿದ್ದಂತೆ, ನೈತಿಕ ಪಾಠವೇ ಮರೆತರೇ ಎನ್ನುವ ಪ್ರಶ್ನೆೆ ಇದೀಗ ಶುರುವಾಗಿದೆ.

ರಾಷ್ಟ್ರಪತಿ ಆಳ್ವಿಿಕೆ ಹೇರಿ ಇದಾದ ಬಳಿಕ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲೇಬೇಕು ಒಂದೇ ಒಂದು ಉದ್ದೇಶದಿಂದ ಬದ್ಧವೈರಿಗಳಾಗಿದ್ದ ಶಿನಸೇನೆ-ಕಾಂಗ್ರೆೆಸ್-ಎನ್‌ಸಿಪಿ ಮೈತ್ರಿಿಗೆ ಸಜ್ಜಾಾಗಿ, ಉದ್ಧವ್ ಠಾಕ್ರೆೆ ಮುಂದಿನ ಮುಖ್ತಮಂತ್ರಿಿ ಎಂದು ಅಂತಿಮ ಗೊಳಿಸಲಾಗಿತ್ತು. ಶಿವಸೇನೆಯ ಸಾಮ್ನಾಾ ಪತ್ರಿಿಕೆ ಸೇರಿದಂತೆ ಎಲ್ಲ ಪತ್ರಿಿಕೆಗಳು ಇದೇ ಅರ್ಥದಲ್ಲಿ ಲೀಡ್ ಸ್ಟೋೋರಿಗಳನ್ನು ಮಾಡಿ, ಮುಂದಿನ ಸಿಎಂ ಠಾಕ್ರೆೆ ಎಂದೇ ಬರೆದಿದ್ದವು. ಆದರೆ, ಪತ್ರಿಿಕೆ ಓದುವರ ಕೈಸೇರುವ ಮೊದಲೇ, ಬಿಜೆಪಿ-ಎನ್‌ಸಿಪಿ ಒಂದಾಗಿ ಸರಕಾರ ರಚಿಸುವ ಪಕ್ರಿಿಯೆ ಹೋಗಲಿ, ಪ್ರಮಾಣ ವಚನವನ್ನೇ ಸ್ವೀಕಾರ ಸಮಾರಂಭವನ್ನೇ ಮುಗಿಸಿದ್ದವು.

ಇದಾದ ಕೂಡಲೇ ಎನ್‌ಸಿಪಿಯಿಂದ ಪವಾರ್‌ರನ್ನು ಉಚ್ಚಾಾಟಿಸುವುದಾಗಿ ಶರದ್ ಪವಾರ್ ಹೇಳಿದ್ದರೂ, ಅವರ ಗಮನಕ್ಕೆೆ ಬಾರದೇ ಎನ್‌ಸಿಪಿಯಲ್ಲಿ ಈ ಮಟ್ಟದ ನಿರ್ಧಾರ ತಗೆದುಕೊಳ್ಳಲು ಸಾಧ್ಯವೇ ಎನ್ನುವುದು ಯಕ್ಷಪ್ರಶ್ನೆೆ. ರಾಜ್ಯದಲ್ಲಿ ರಾಜಕೀಯ ಅಸ್ಥಿಿರತೆ ಶುರುವಾಗಿ, ಸೇನಾ-ಕಾಂಗ್ರೆೆಸ್-ಎನ್‌ಸಿಪಿ ನಡುವೆ ಸರಕಾರ ರಚನೆಗೆ ಸಜ್ಜಾಾಗುವುದರೊಂದಿಗೆ, ಈ ಸರಕಾರಕ್ಕೆೆ ಇರುವ ಆಯುಷ್ಯದ ಬಗ್ಗೆೆ ಯೋಚಿಸಿ, ಬಿಜೆಪಿಗೆ ಬೆಂಬಲ ನೀಡುವ ಬಗ್ಗೆೆ ಚಿಂತನೆ ನಡೆಸಿದ್ದರೂ ನಡೆಸಿರಬಹುದು. ಎನ್‌ಸಿಪಿ ನಡೆಯನ್ನು ಗಮನಿಸಿದರೆ, ಈ ಹಿಂದೆ ರಾಜ್ಯದಲ್ಲಿ 20-20 ಸರಕಾರ ಅಧಿಕಾರಕ್ಕೆೆ ಬಂದಾಗ, ದೇವೇಗೌಡರು ಅವರನ್ನು ಮನೆ-ಮನದಿಂದ ಆಚೆ ಇಡುವುದಾಗಿ ಹೇಳಿದ್ದಂತಾಗಿದೆ.

ಈ ರೀತಿ ರಾತ್ರೋೋರಾತ್ರಿಿ ಒಂದು ಪಕ್ಷದಿಂದ ಮತ್ತೊೊಂದು ಪಕ್ಷಕ್ಕೆೆ ಜಾರುವುದು, ಬೆಂಬಲ ನೀಡುವುದು ಇತ್ತೀಚಿನ ರಾಜಕೀಯದಲ್ಲಿ ಹೊಸತೇನಲ್ಲ. ಕರ್ನಾಟಕದಲ್ಲಿದ್ದ ಜೆಡಿಎಸ್-ಕಾಂಗ್ರೆೆಸ್ ಸರಕಾರ ಬೀಳುವ ತನಕ, ಬಿಜೆಪಿಯನ್ನು ಕಂಡರೆ ಕೆಂಡಾಮಂಡಲರಾಗುತ್ತಿಿದ್ದ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಾಮಿ ಉಪಚುನಾವಣೆ ಘೋಷಣೆಯಾಗುತ್ತಿಿದ್ದಂತೆ, ಸರಕಾರವನ್ನು ಬೀಳಿಸಲು ಬಿಡುವುದಿಲ್ಲ ಎನ್ನುವ ಜತೆಜತೆ ಬಿಜೆಪಿ ಬಗ್ಗೆೆ ಎಲ್ಲೇ ಮಾತನಾಡಿದರೂ ಕೂಲ್ ಮಾತುಗಳೇ ಕೇಳಿಬಂದಿವೆ. ಇನ್ನು ಇಡೀ ರಾಜ್ಯವನ್ನು ಕುಮಾರಸ್ವಾಾಮಿ ನೇತೃತ್ವದ ಸರಕಾರ ಹೊಡೆದಿದೆ ಎನ್ನುತ್ತಿಿದ್ದ ಮುಖ್ಯಮಂತ್ರಿಿ ಯಡಿಯೂರಪ್ಪ ಸಹ, ಇತ್ತೀಚಿಗೆ ಎಲ್ಲೇ ಕುಮಾರಸ್ವಾಾಮಿ ಬಗ್ಗೆೆ ಕೇಳಿದರೂ, ಅವರ ಬಗ್ಗೆೆ ಮಾತನಾಡುವುದು ಬೇಡ. ನಮಗೆ ಕಾಂಗ್ರೆೆಸ್ ಮಾತ್ರ ವೈರಿ ಎನ್ನುವ ಅಚ್ಚರಿ ಹೇಳಿಕೆಗಳನ್ನು ನೀಡುತ್ತಿಿದ್ದಾರೆ.

ಈ ರೀತಿ ಅಚ್ಚರಿಯ ಬದಲಾವಣೆಗೆ ಕಾರಣಗಳು ಏನೇ ಇರಲಿ, ಅಧಿಕಾರ ಉಳಿಸಿಕೊಳ್ಳಬೇಕು ಅಥವಾ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಕೂರಬೇಕು ಎನ್ನುವ ಒಂದೇ ಒಂದು ಉದ್ದೇಶಕ್ಕೆೆ ರಾಜಕೀಯ ಪಕ್ಷಗಳು ಹಾಗೂ ನಾಯಕರು ತಮ್ಮ ಸೈದ್ಧಾಾಂತಿಕ ಸಿದ್ಧಾಾಂತಗಳನ್ನೇ ರಾತ್ರೋೋರಾತ್ರಿಿ ಪಕ್ಕಕ್ಕೆೆ ಎನ್ನುವುದು ಸ್ಪಷ್ಟವಾಗುತ್ತದೆ. ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆೆಸ್ ಮೈತ್ರಿಿ ಇಂದಿನ ಅಧಿಕಾರಶಾಹಿ ರಾಜಕೀಯಕ್ಕೆೆ ಹಿಡಿದ ಕೈಗನ್ನಡಿಯಾಗಿದೆ. ಅದರಲ್ಲಿಯೂ ಶಿವಸೇನೆ-ಕಾಂಗ್ರೆೆಸ್ ಚುನಾವಣಾ ಸಮಯದಲ್ಲಿ ಒಬ್ಬರ ಮೇಲೊಬ್ಬರು ಮಾಡಿಕೊಂಡ ಆರೋಪ, ಅದಕ್ಕೆೆ ಪ್ರತ್ಯಾಾರೋಪಗಳು, ಎರಡು ಪಕ್ಷದ ಸಿದ್ಧಾಾಂತ, ಚುನಾವಣಾ ಪ್ರಣಾಳಿಕೆ ಸೇರಿ ಪ್ರತಿಯೊಂದನ್ನು ಗಮನಿಸಿ, ಯಾವುದೇ ಒಂದು ಒಂದು ಅಂಶವೂ ಹೊಂದಾಣಿಕೆಯಾಗುವುದಿಲ್ಲ. ಅದೇ ರೀತಿ ಇದೀಗ ಬಿಜೆಪಿಯ ಸಖ್ಯ ಬೆಳೆಸಲು ಮುಂದಾಗುತ್ತಿಿರುವ ಎನ್‌ಸಿಪಿಗೂ ಬಿಜೆಪಿಯ ಸಿದ್ಧಾಾಂತಗಳಿಗೂ ತಾಳೆ ಆಗುವುದಿಲ್ಲ. ಅದರಲ್ಲಿಯೂ ಬಾರಿಯ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಹಾಗೂ ಎನ್‌ಸಿಪಿ-ಕಾಂಗ್ರೆೆಸ್ ನಡುವೆ ಮಾಡಿಕೊಂಡಿದ್ದರು. ವಿಪಯಾರ್ಸವೆಂದರೆ ಚುನಾವಣಾ ಪೂರ್ವ ಮೈತ್ರಿಿಯನ್ನು ಪಕ್ಕಕ್ಕೆೆ ಇಟ್ಟು ಈ ನಾಲ್ಕು ಪಕ್ಷಗಳು ತಮ್ಮ ಮಿತ್ರರನ್ನು ಬದಲಾಯಿಸಿಕೊಂಡು ಸರಕಾರ ರಚಿಸಲು ಸನ್ನದವಾಗಿವೆ. ಹಾಗಾದರೆ ಪೂರ್ವ ಮಾಡಿಕೊಂಡಿದ್ದ ಮೈತ್ರಿಿಯ ಪಾವಿತ್ರತೆ ಎಲ್ಲಿ ಹೋಯಿತು? ರಾಜಕೀಯ ಪಕ್ಷಗಳು ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳಲು, ಈ ರೀತಿಯ ಯಾವುದೇ ನಿರ್ಧಾರಗಳನ್ನು ಬೇಕಾದರೂ ತಗೆದುಕೊಳ್ಳಬಹುದೇ? ಎನ್ನುವ ಪ್ರಶ್ನೆೆಗಳಿಗೆ ಉತ್ತರ ಹುಡುಕುವ ಕೆಲಸವಾಗಬೇಕಿದೆ.

ಈ ರೀತಿ ಬೇಕಾದ ರೀತಿಯಲ್ಲಿ ಮಿತ್ರಪಕ್ಷಗಳನ್ನು ಆರಿಸಿಕೊಳ್ಳುವಾಗ ಪಕ್ಷದ ನಾಯಕರು ಫೈವ್ ಸ್ಟಾಾರ್ ಹೋಟೆಲ್‌ನಲ್ಲೋ ಅಥವಾ ಅಜ್ಞಾತ ಸ್ಥಳದಲ್ಲಿಯೋ ಕುಳಿತು ‘ವ್ಯವಹಾರ ಕುದುರಿಸುವ ಜ್ಞಾನ’, ಪಕ್ಷದ ತಳಮಟ್ಟದ ಕಾರ್ಯಕರ್ತರಿಗೆ ಇರುವುದಿಲ್ಲ. ದೊಡ್ಡ ಮಟ್ಟದಲ್ಲಿ ಆಗುವಷ್ಟು ಸುಲಭವಾಗಿ ರಾಜಿ ಸಂಧಾನ ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯಲ್ಲಿ ಆಗುವುದಿಲ್ಲ. ಆದರೆ, ಇದ್ಯಾಾವುದನ್ನು ಗಮನಿಸದೇ, ಅಧಿಕಾರ ಹಿಡಿಯಲು ಮುಂದಾದರೆ, ಮುಂದಿನ ದಿನದಲ್ಲಿ ರಾಜಕೀಯ ನೈತಿಕತೆಗೆ ಬೆಲೆ ಎಲ್ಲಿ ಉಳಿಯುತ್ತದೆ? ಈ ರೀತಿ ದಿನಕ್ಕೊೊಂದು ಪಕ್ಷದೊಂದಿಗೆ ಮೈತ್ರಿಿ (ಹೊಂದಾಣಿಕೆ) ಹೋಗುವ ಪಕ್ಷದ ಸಿದ್ಧಾಾಂತ ಹಾಗೂ ನಾಯಕರ ಮಾತುಗಳನ್ನು ನಂಬುವುದಾದರೂ ಹೇಗೆ ಎನ್ನುವ ಪ್ರಶ್ನೆೆಗಳು ಅನೇಕರ ತಲೆಯಲ್ಲಿ ಗಿರಿಕ್ಕಿಿ ಹೊಡೆಯುತ್ತಲೇ ಇದೆ.

ಇದು ಕೇವಲ ಮಹಾರಾಷ್ಟ್ರ ರಾಜಕೀಯಕ್ಕೆೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕದಲ್ಲಿ ನಡೆಯುತ್ತಿಿರುವ ಉಪಚುನಾವಣೆಗೂ ಸಂಬಂಧಿಸಿದೆ. ಕೇವಲ ಒಂದುವರೆ ವರ್ಷದ ಹಿಂದೆ ಉಪಚುನಾವಣೆ ನಡೆಯುತ್ತಿಿರುವ ಕ್ಷೇತ್ರದಲ್ಲಿ ಕಾರ್ಯಕರ್ತರು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು, ವಿರೋಧಿ ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡಿದ್ದರು. ಆದರೀಗ ಪಕ್ಷಕ್ಕಾಾಗಿ ಹೊಡೆದಾಟಿಕೊಂಡಿದ್ದ ಕಾರ್ಯಕರ್ತರು ಒಂದೇ ಅಭ್ಯರ್ಥಿಗಾಗಿ ಪ್ರಚಾರ ಬಿಜೆಪಿಯ ಕಾರ್ಯಕರ್ತರು, ಆ ಅಭ್ಯರ್ಥಿ ಸರಿಯಿಲ್ಲ ಎಂದು ತಿಂಗಳುಗಟ್ಟಲೇ ಪ್ರಚಾರ ನಡೆಸಿದ್ದವರು ಇದೀಗ ಕ್ಷೇತ್ರದ ಅಭಿವೃದ್ಧಿಿಯಾಗಬೇಕೆಂದರೆ ಇವರೇ ಗೆಲ್ಲಬೇಕು ಎಂದು ಹೇಳಿಕೊಂಡು ತಿರುಗಾಡಬೇಕಾದ ಪರಿಸ್ಥಿಿತಿ ನಿರ್ಮಾಣವಾಗಿದೆ.

ಉಪಚುನಾವಣಾ ಹೊಸ್ತಿಿಲಲ್ಲಿ ನಾಯಕರು ಹಾಗೂ ಕಾರ್ಯಕರ್ತರು ಬಹಿರಂಗವಾಗಿ ಇದೇ ರೀತಿಯಲ್ಲಿ ಪ್ರಚಾರ ನಡೆಸುತ್ತಿಿದ್ದರೂ, ಆಫ್ ದಿ ರೆಕಾರ್ಡ್ ಕೇಳಿದಾಗ, ವರ್ಷಗಟ್ಟಲೆ ಬಡಿದಾಡಿಕೊಂಡಿದ್ದವರು ಈಗ ಒಂದಾಗಬೇಕಾದ ಕರ್ಮ. ಏನು ಮಾಡೋದು ಪಕ್ಷಕ್ಕಾಾಗಿ ಇದೆಲ್ಲ ಸಹಿಸಿಕೊಳ್ಳಬೇಕು ಎನ್ನುವ ಅಸಹಾಯಕ ಮಾತುಗಳನ್ನು ಆಡುವುದರೊಂದಿಗೆ, ಇದೇ ರೀತಿ ರಾಜಕೀಯಕ್ಕೆೆ ಯಾರು ಬರೋಲ್ಲ ಎನ್ನುವ ಮಾತನ್ನು ಹಂಚಿಕೊಳ್ಳುತ್ತಿಿದ್ದಾರೆ.

ಕರ್ನಾಟಕದ 15 ಕ್ಷೇತ್ರಗಳಲ್ಲಿ ನಡೆಯುತ್ತಿಿರುವ ಉಪಚುನಾವಣೆಯ ಕಣದಲ್ಲಿರುವ ಎಲ್ಲ ಬಿಜೆಪಿ ಅಭ್ಯರ್ಥಿಗಳು ಈ ಹಿಂದೆ ಬಿಜೆಪಿ ವಿರುದ್ಧ ಹಾರಾಡಿ, ಹೋರಾಟ ನಡೆಸಿಕೊಂಡು ಬಂದವರೇ. ಹುಣಸೂರಿನ ಎಚ್. ವಿಶ್ವನಾಥ, ಗೋಕಾಕ್ ರಮೇಶ್ ಜಾರಕಿಹೊಳಿ, ಹೊಸಕೋಟೆಯ ಎಂಟಿಬಿ ನಾಗಾರಾಜ್, ಬೆಂಗಳೂರಿನ ಎಸ್.ಟಿ ಸೋಮಶೇಖರ, ಮುನಿರತ್ನ, ಬೈರತಿ ಬಸವರಾಜ್ ಎಲ್ಲರೂ ಬಿಜೆಪಿ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಾಳಿ ನಡೆಸಿಕೊಂಡು ಬಂದವರೇ. ಇವರಿಗೆ ಪ್ರತ್ಯುತ್ತರದ ಬಿಜೆಪಿ ನಾಯಕರು (ಈಗ ಅವರ ಪರ ಪ್ರಚಾರ ನಡೆಸುತ್ತಿಿರುವವರು) ಅವರ ವಿರುದ್ಧ ವಾಗ್ದಾಾಳಿ ನಡೆಸಿದ್ದರು. ಆದರೆ, ಬಿಜೆಪಿಯನ್ನು ಅಧಿಕಾರಕ್ಕೆೆ ತರಬೇಕು ಎನ್ನುವ ಉದ್ದೇಶದಿಂದ ರಾಜೀನಾಮೆ ನೀಡಿ, ಅನರ್ಹಗೊಂಡು ಬಿಜೆಪಿಗೆ ಬರುತ್ತಿಿದ್ದಂತೆ, ಅವರಿಗೆ ರೆಡ್ ಕಾರ್ಪೆಟ್ ಹಾಕಿಸಿ ಸ್ವಾಾಗತಿಸುವುದರೊಂದಿಗೆ, ಅವರನ್ನು ಗೆಲ್ಲಿಸಿಕೊಂಡು ಬರಬೇಕಿದೆ.

ಈ ರೀತಿಯ ರಾಜಕೀಯ ಸ್ಥಿಿತ್ಯಂತರ, ಪಕ್ಷಗಳ ‘ಅರು ಕೊಟ್ಟರೆ ಅತ್ತೆೆ, ಒಂಬತ್ತು ಕೊಟ್ಟರೆ ಸೊಸೆ’ ಎನ್ನುವ ಮನಸ್ಥಿಿತಿ ರಾಜಕೀಯ ಮುಖಂಡರಿಗೆ ಅಧಿಕಾರ ಸಿಗುವ ಕಾರಣಕ್ಕೆೆ ಹೊಂದಾಣಿಕೆಯಾಗುವುದು. ಯಾವುದೇ ಅಧಿಕಾರ ಆಸೆ ಇಲ್ಲದೇ ಕೇವಲ ಒಂದು ಪಕ್ಷಕ್ಕೆೆ ನಿಷ್ಠೆೆಯಿಂದ ಕಾರ್ಯನಿರ್ವಹಿಸುವ ಸಾಮಾನ್ಯ ಕಾರ್ಯಕರ್ತನಿಗೆ ಉಸಿರು ಗಟ್ಟಿಿದಂತಾಗುವುದು ಸಹಜ. ತನ್ನ ಪಕ್ಷಕ್ಕಾಾಗಿ ವಿರೋಧಿ ನಾಯಕರ ವಿರೋಧ ಕಟ್ಟಿಿಕೊಂಡು ಕೆಲಸ ಮಾಡುವವರಿಗೆ, ಅವರನ್ನೇ ನಾಯಕನನ್ನಾಾಗಿ ಸ್ವೀಕರಿಸಬೇಕು ಎನ್ನುವ ಪರಿಸ್ಥಿಿತಿ ಎದುರಾದಾಗ ಅಸಮಾಧಾನ ಹೊತ್ತಿಿ ಉರಿಯುತ್ತದೆ.