Saturday, 27th July 2024

ಬೇಬಿ ಸಿಟ್ಟರ್‌: ಶಿಶು-ಪಾಲ

ತುಂಟರಗಾಳಿ

ಸಿನಿಗನ್ನಡ

ಕರ್ನಾಟಕದಲ್ಲಿ ಚಿತ್ರಮಂದಿರಗಳು ಮುಚ್ಚೋದು ಹೊಸ ಸುದ್ದಿ ಏನಲ್ಲ. ಆದರೆ ಈಗ ಈ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತಿದೆ. ಇದು ಕೇವಲ ಕರ್ನಾ
ಟಕದ ಸಮಸ್ಯೆ ಅಲ್ಲ, ಸಿನಿಮಾ ಕ್ರೇಜ್ ಸಿಕ್ಕಾಪಟ್ಟೆ ಇರೋ ತಮಿಳುನಾಡಿನಲ್ಲೂ ೧೫೦ಕ್ಕೂ ಹೆಚ್ಚು ಚಿತ್ರಮಂದಿರಗಳು ಮುಚ್ಚುತ್ತಿವೆಯಂತೆ.

ನಮ್ಮಲ್ಲಿ ಕೂಡ ಇನ್ನೇನು ಹಲವು ಚಿತ್ರಮಂದಿರಗಳು ಕೌಂಟರ್ ಕ್ಲೋಸ್ ಮಾಡುವ ಮಾತನ್ನಾಡು ತ್ತಿವೆ. ಸ್ಟಾರ್ ಸಿನಿಮಾಗಳೂ ಕಾಸು ಮಾಡದೆ, ಗಲ್ಲಾ
ಪೆಟ್ಟಿಗೆ ತುಂಬುತ್ತಿಲ್ಲ ಎಂದು ಮೊದಲೇ ಸಂಕಷ್ಟದಲ್ಲಿದ್ದ ಈ ಚಿತ್ರ ಮಂದಿರಗಳು ಈಗ, ಗಲ್ಲದ ಮೇಲೆ ಕೈ ಇಟ್ಟು ಕೂತಿವೆ. ಅಂದ ಹಾಗೆ, ಇವೆಲ್ಲ ಕೇವಲ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳ ಸಮಸ್ಯೆ. ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ ಗಳು ಹೇಗೋ ಬಚಾವಾಗಲು ಹಲವು ಇನ್ನೋ ವೇಟಿವ್ ದಾರಿ ಗಳನ್ನು ಹುಡುಕಿ ಕೊಳ್ಳುತ್ತವೆ.

ಆದ್ರೆ ಸಿಂಗಲ್ ಸ್ಕ್ರೀನ್‌ಗಳ ಕತೆ ಹಾಗಿಲ್ಲ. ಹಾಗಾಗಿ ಜನ ಚಿತ್ರಮಂದಿರಗಳಲ್ಲಿ ಮಿಂಗಲ್ ಆಗ್ತಾ ಇಲ್ಲ ಎನ್ನುವಂಥ ಟೈಮಲ್ಲಿ ಸಿಂಗಲ್ ಥಿಯೇಟರ್‌ಗಳು ವಿರಹ ವೇದನೆ ಯಿಂದ ನರಳುವ ಸಿಂಗಲ್‌ಗಳಂತೆ ಆಗಿವೆ. ಸದ್ಯಕ್ಕೆ ಹಲವು ಚಿತ್ರಮಂದಿರಗಳ ಮಾಲೀಕರು ತಮ್ಮ ಲೈಸೆನ್ಸ್ ರಿನ್ಯೂ ಮಾಡೋಕೆ ಅರ್ಜಿಯನ್ನೂ ಹಾಕಿಲ್ಲವಂತೆ. ಇಷ್ಟು ದಿನ ತಮ್ಮ ಮರ್ಜಿ ಎನ್ನುವಂತೆ ಟಿಕೆಟ್ ದರವನ್ನು ಹೆಚ್ಚಿಸುತ್ತಿದ್ದ ಚಿತ್ರಮಂದಿರಗಳ ಮಾಲೀಕರು ಸರಕಾರದ ‘ಫಿಫ್ಟಿ ಫಿಫ್ಟಿ’ ನೀತಿಯಿಂದಾಗಿ ಕರೋನಾ ಲಾಕ್ ಡೌನ್‌ನಲ್ಲೇ ಒಂದಿಷ್ಟು ಕಂಗೆಟ್ಟಿದ್ದರು.

ಈಗ ಫಿಫ್ಟಿ ಫಿಫ್ಟಿ ಇರಲಿ, ಚಿತ್ರಮಂದಿರಗಳಲ್ಲಿ ‘ಶೋ’ಗಳೇ ಇಲ್ಲದೆ ಅವರ ಪರಿಸ್ಥಿತಿ ಇನ್ನಷ್ಟು ‘ಶೋ’ಚನೀಯವಾಗಿದೆ. ಅಡ್ವಾನ್ಸ್ ಬುಕಿಂಗ್ ಮಾಡಿ ಕೊಂಡು ಸೀಟುಗಳನ್ನ ಬ್ಲಾಕ್ ಮಾಡಿಕೊಳ್ಳುತ್ತಿದ್ದ, ದೊಡ್ಡ ಸಿನಿಮಾಗಳು ಬಿಡುಗಡೆ ಯಾದಾಗ ಬ್ಲ್ಯಾಕ್ ಟಿಕೆಟ್ ಮಾರುತ್ತಿದ್ದ ಚಿತ್ರಮಂದಿರಗಳೇ ಈಗ ಬ್ಲಾಕ್ ಆಗುವ ಭಯದಲ್ಲಿವೆ. ಈ ಚಿತ್ರಮಂದಿರಗಳ ಸಿಟ್ ಔಟ್‌ನಲ್ಲೇ ಕೂತು, ‘ಕಮ್ ಆನ್ ಇನ್’ ಅಂದ್ರೂ ಯಾರೂ ಬರ್ತಾ ಇಲ್ಲ. ಹಾಗಾಗಿ ‘ಚಿತ್ರಮಂದಿರ ತುಂಬಿದೆ’ ಎಂಬ ಬೋರ್ಡ್ ನೋಡಬೇಕಾ ಗಿದ್ದ ಹಲವು ಕಡೆ ಇನ್ನುಮುಂದೆ ‘ಚಿತ್ರಮಂದಿರ ಮುಚ್ಚಿದೆ’ ಎಂಬ ಬೋರ್ಡ್ ತಗಲಾಕಿದರೆ ಅಚ್ಚರಿಯಿಲ್ಲ.

ಲೂಸ್ ಟಾಕ್: ಅಪ್ಪ ಮಗನ ಮಾತುಕತೆ

ಅಪ್ಪ: ನಿಂಗೆ ಅಪ್ಪಂದಿರ ದಿನ ಗೊತ್ತಾ?

ಅವೆಲ್ಲ ಎಲ್ಲಿ ಗೊತ್ತಿರುತ್ತೆ, ಏನ್ ಮಕ್ಕಳು ಅಂತ ಹುಟ್ಟಿಬಿಟ್ಟಿರೋ?  – ಮಗ: ಹಲೋ, ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ನಿಮಗೆ ಅದನ್ನ ಜ್ಞಾಪಿಸೋದೇ ನಾವು ಮಕ್ಕಳು ಗೊತ್ತಾ?

ಅಪ್ಪ: ಫೇಸ್‌ಬುಕ್ಕಲ್ಲೇನು ಯಾರ್ ಬೇಕಾದ್ರೂ ಅಪ್ಪನ ಬಗ್ಗೆ ಪೋಸ್ಟ್ ಹಾಕ್ತಾರೆ. ನಾನೂ ಬೇಕಿದ್ರೆ ಅದರಪ್ಪನಂಥ ಪೋಸ್ಟ್ ಹಾಕ್ತೀನಿ.
– ಮಗ: ಹಂಗೇನಿಲ್ಲ, ಗಾಡಿ ಕೊಡಿಸಿದ್ರೆ ಅದರ ಮೇಲೂ ಡ್ಯಾಡ್ಸ್ ಗಿಫ್ಟ್ ಅಂತ ಹಾಕ್ತೀವಿ.

ಅಪ್ಪ: ಓ, ಈವಾಗ ಗಾಡಿ ಕೊಡ್ಸು ಅಂತ ಕೇಳೋಕ್ ಬಂದ್ಯಾ? ನಿಮ್ಗೆಲ್ಲ ಅಪ್ಪ ನೆನಪಾಗೋದು ಅಫಿಶಿಯಲ್ ಕೆಲಸಕ್ಕೆ ಅಪ್ಲಿಕೇಶನ್ ಫಿಲ್ ಮಾಡುವಾಗ, ಇಲ್ಲಾಂದ್ರೆ ಏನಾದ್ರೂ ಬೇಕು ಅಂತ ನಮ್ಮತ್ರ ಅಪ್ಲಿಕೇಶನ್ ಹಾಕೋವಾಗ ಅಷ್ಟೇ.

– ಮಗ: ಜಾಸ್ತಿ ಸ್ಕೋಪ್ ತಗೋಬೇಡಿ, ನಾನ್ ಹುಟ್ಟಿದ ಮೇಲೇನೇ ನೀವು ಅಪ್ಪ ಆಗಿದ್ದು. ಗೊತ್ತಾ?

ಅಪ್ಪ: ತೆಗೆದ್, ಬಿಟ್ಟಾ ಅಂದ್ರೆ.. ನನ್ನತ್ರನೇ ಓವರ್‌ಸ್ಮಾರ್ಟ್ ಡೈಲಾಗ್ ಹೊಡಿಬೇಡ. ನೀನ್ ನನ್ನ ಎರಡನೇ ಮಗ. ನೀನ್ ಹುಟ್ಟೋಕ್ ಮುಂಚೆನೇ ನಾನ್ ಅಪ್ಪ ಆಗಿದ್ದೆ.

– ಮಗ: ಓ ಸಾರಿ ಡ್ಯಾಡ್, ಗೊತ್ತಿಲ್ದೆ – ಅಲ್ಲಿ ಬಂದ್ ಬಿಡ್ತು…

ಅಪ್ಪ: ಒಂದ್ ಮಗು ಸಾಕು ಅಂತ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡ್ತಿದ್ವಿ, ಗೊತ್ತಿಲ್ದೆ – ಅಲ್ಲಿ ಬಂದಿದ್ದು ನೀನು. ಎಲ್ಲ ನನ್ ಕರ್ಮ

– ಮಗ: ನೋಡಿದ್ರಾ, ಸರ್‌ಪ್ರೈಸ್ ಕೊಡೋದು ನನ್ನ ಹುಟ್ಟುಗುಣ. ಹೋಗ್ಲಿ ಬಿಡಿ, ಈ ಸಲ ‘ಫಾದರ್ಸ್ ಡೇ’ಗೆ ಮರೆಯದೇ ವಿಶ್ ಮಾಡ್ತೀನಿ ಡ್ಯೂಡ್, ಸಾರಿ,
ಡ್ಯಾಡ್.

(ಕಾಲ್ಪನಿಕ ಸಂದರ್ಶನ)

*

ನೆಟ್ ಪಿಕ್ಸ್
ಖೇಮು ಒಂದು ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಮಾಡೋಕೆ ಸೇರಿಕೊಂಡ. ಅಲ್ಲಿಗೆ ಬರುವ ಕಸ್ಟಮರ್‌ಗಳಿಗೆ ಏನು ಬೇಕು ಅಂತ ಕೇಳಿ, ಅವರಿಗೆ ಗೈಡ್ ಮಾಡೋ ಕೆಲಸ ಅವನದ್ದು. ಮೊದಲ ದಿನ ಖೇಮು ಕೆಲಸಕ್ಕೆ ಹೋದ, ಎಲ್ಲರ ಬಳಿಯೂ ನಗುಮೊಗದಿಂದ ವರ್ತಿಸುತ್ತಿದ್ದ. ಅಷ್ಟರಲ್ಲಿ ಅಲ್ಲಿಗೆ ಒಬ್ಬ
ಹೆಂಗಸು ಬಂದಳು. ಅವಳ ಜತೆ ಎರಡು ಪುಟ್ಟ ಮಕ್ಕಳಿದ್ದವು. ಬಂದ ಕೂಡಲೇ ಆಕೆ ಎಲ್ಲರ ಜತೆಯೂ ಕಿರಿಕಿರಿ ಮಾಡೋಕೆ ಶುರುಮಾಡಿದಳು.

ಯಾರೇ ಬಂದು ಮಾತನಾಡಿಸಲು ಹೋದರೂ ‘ನಿನ್ನ ಮುಖ ನೋಡ್ಕಂಡಿದೀಯ, ನಿನ್ನ ಮುಖಕ್ಕೆ ನೀನು ನಂಗೆ ಹೆಲ್ಪ್ ಮಾಡ್ತೀಯಾ?’ ಅಂತ ಎದುರಿಗಿದ್ದವರ ಮುಖದ ಬಗ್ಗೆಯೇ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಳು. ಅದನ್ನು ನೋಡಿದ ಸ್ಟೋರ್ ಮ್ಯಾನೇಜರ್‌ಗೆ ಕೋಪ ಬಂತು. ಆದ್ರೂ ಕಸ್ಟಮರ್ ಜತೆ ರೂಡ್ ಆಗಿ ಬಿಹೇವ್ ಮಾಡಬಾರದು ಅಂತ ಸುಮ್ಮನಿದ್ದ. ಆದರೆ ಆಕೆ ಮಿತಿ ಮೀರಿದಾಗ, ಖೇಮುವನ್ನು ಕರೆದು, ‘ನೋಡು, ಇದು ನಿನ್ನ ಕೆಲಸದ ಮೊದಲ ದಿನ, ನೀನು ಆಕೆಯನ್ನು ಇಲ್ಲಿಂದ ಹೋಗುವಂತೆ ಮಾಡಿದರೆ ನಿನಗೆ ಇವತ್ತೇ ಪ್ರಮೋಷನ್ ಕೊಡ್ತೀನಿ’ ಅಂತ ಹೇಳಿದ.

ಅದಕ್ಕೆ ಖೇಮು ‘ಸರಿ ಸರ್’ ಎಂದವನೇ ಆಕೆಯ ಬಳಿ ಹೋಗಿ ಮಾತನಾಡಲು ಯತ್ನಿಸಿದ. ಆಕೆ ಮಾಮೂಲಿಯಂತೆ ‘ನಿನ್ನ ಮಖಾ ಮುಚ್ಚಾ’ ಅಂತಲೇ ಶುರುಮಾಡಿದಳು. ಆಗ ಖೇಮು ಸಡನ್ನಾಗಿ, ಆಕೆಯ ಜತೆಗಿದ್ದ ಇಬ್ಬರು ಮಕ್ಕಳನ್ನು ನೋಡಿ, ‘ನಿಮ್ಮ ಅವಳಿ-ಜವಳಿ ಮಕ್ಕಳು ತುಂಬಾ ಮುದ್ದಾಗಿವೆ’ ಅಂದ. ಆಕೆಗೆ ಇನ್ನಷ್ಟು ಕೋಪ ಬಂತು. ‘ನಿನಗೇನು ತಲೆ ಕೆಟ್ಟಿದೆಯಾ, ಈ ಮಕ್ಕಳಲ್ಲಿ ಇಬ್ಬರಿಗೂ ಹೋಲಿಕೆನೇ ಇಲ್ಲ, ಅಲ್ಲದೆ ಅವನಿಗೆ ಆರು ವರ್ಷ. ಇವನಿಗೆ ೧೦ ವರ್ಷ. ಇವರನ್ನ ಅವಳಿ-ಜವಳಿ ಅಂತೀಯಾ, ಅಷ್ಟೂ ಗೊತ್ತಾಗಲ್ವಾ?’ ಅಂತ ಬಯ್ದಳು.

ಅದಕ್ಕೆ ಖೇಮು ಸೀರಿಯಸ್ಸಾಗಿ ಹೇಳಿದ ‘ಗೊತ್ತಾಗುತ್ತೆ, ಆದ್ರೂ ನಿಮ್ಮ ಮುಖ ನೋಡಿದ ಮೇಲೆ, ಯಾವ ಗಂಡಸೂ ಈ ಮುಖದ ಜತೆ ಎರಡೆರಡು ಸಲ
ಮಲಗುವಷ್ಟು ಬರಗೆಟ್ಟಿರಲ್ಲ ಅನ್ನಿಸಿತು, ಅದಕ್ಕೇ ಕೇಳ್ದೆ’. ಖೇಮುಗೆ ಪ್ರಮೋಷನ್ ಸಿಕ್ತು.

*

ಲೈನ್ ಮ್ಯಾನ್
ಎಷ್ಟು ಪಾತ್ರೆ ತೊಳೆದರೂ ಖಾಲಿಯೇ ಆಗದ ಸಿಂಕ್ ಅನ್ನು ಏನಂತಾರೆ?
‘ಅಕ್ಷಯ ಪಾತ್ರೆ’

ಮುಳುಗುತ್ತಿರುವ ದೋಣಿಯನ್ನು ಕಷ್ಟಪಟ್ಟು ದಡ ಸೇರಿಸುವ ಅಂಬಿಗ
‘ಹುಟ್ಟು’ ಹೋರಾಟಗಾರ

ಅಸಿಡಿಟಿ ಬರಬಾರದು ಅಂದ್ರೆ ಏನ್ ಮಾಡಬೇಕು?

‘ತೇಗ’ದ ಮರವನ್ನು ಒಲೆಗೆ ಇಟ್ಟು ಅಡುಗೆ ಮಾಡಬೇಕು

 ಆಪತ್ ಬಂದು ‘ಚಾಪೆ’ ‘ಸುತ್ಕೊಂಡೋಗ’ ಅನ್ನೋದನ್ನು ಇಂಗ್ಲಿಷ್‌ನಲ್ಲಿ ಹೆಂಗೆ ಹೇಳೋದು
‘ಮ್ಯಾಟ್’ ‘ಫಿನಿಷ್’

ಕೂದಲಿಗೆ ಒಳ್ಳೆ ಟ್ರೀಟ್‌ಮೆಂಟ್ ಕೊಡುವವಳು
‘ಹೇರ್’ ಹೋಸ್ಟೆಸ್

ಸೊಳ್ಳೆ ಪರದೆ ಮಾರಾಟ

‘ಹೋಲ್’ ಸೇಲ್

ಸೊಳ್ಳೆ ಪರದೆ ಡಿಸ್ಕೌಂಟ್ ಕೊಡುವಾಗ ಇರಬೇಕಾದ ಎಚ್ಚರ
೫೦% ‘ಕಡಿತ’ ಅಂತ ಹಾಕಬಾರದು.

ಮೆನಿಕ್ಯೂರ್ ಪೆಡಿಕ್ಯೂರ್ ಮಾಡಿಸಲ್ಲ ಅನ್ನೋದನ್ನು ಹೇಳೋದು ಹೇಗೆ
ಹಲ್ಲಲ್ಲಿ ಹೋಗೋ ಉಗುರಿಗೆ ಅಷ್ಟೊಂದು ದುಡ್ಡು ಯಾಕೆ ‘ಕೊಡಲಿ’?

ಸ್ಟಾರ್ ನಟರ ಲೈಫು
ಎಲ್ಲಾ ಚೆನ್ನಾಗಿದ್ದಾಗ- ಲಕ್ಸುರಿ ಕ್ಯಾರವಾನ್
ವಯಸ್ಸಾಗಿ ಅವಕಾಶಗಳೇ ಇಲ್ಲದಾಗ- ಯಾದೋಂ ಕಿ ಕಾರ್ ವಾನ್

ಸ್ಮಶಾನದಲ್ಲಿ ಆಡೋ ಆಟ
ಲ‘ಗೋರಿ’

ತಮಿಳುನಾಡಿನಲ್ಲಿರುವ ಪರಿಸರ ಪ್ರೇಮಿ
‘ಸಸಿ’ಕುಮಾರ

ಬೇಬಿ ಸಿಟ್ಟರ್‌ನ ಕನ್ನಡದಲ್ಲಿ ಏನಂತಾರೆ?
ಶಿಶು-ಪಾಲ

Leave a Reply

Your email address will not be published. Required fields are marked *

error: Content is protected !!