Harish Kera Column: ಹಿಂಸೆ, ರಕ್ತ, ಭಯ ಮತ್ತು ಉತ್ತರ
ಹೆಚ್ಚಿನ ಭಯೋತ್ಪಾದಕ ದಾಳಿಗಳು ಬೆರಳೆಣಿಕೆಯಷ್ಟು ಜನರನ್ನು ಮಾತ್ರ ಕೊಲ್ಲುತ್ತವೆ. 2002ರಲ್ಲಿ ಪ್ಯಾಲೆಸ್ತೀನಿ ಭಯೋತ್ಪಾದಕರಿಂದ ಇಸ್ರೇಲ್‌ನಲ್ಲಿ ಆದ ಸಾವು ನೋವು 451. ಅದೇ ವರ್ಷ ಕಾರು ಅಪಘಾತಗಳಲ್ಲಿ 542 ಇಸ್ರೇಲಿಗಳು ಸಾವನ್ನಪ್ಪಿದ್ದರು. ಅಮೆರಿಕದ ಮೇಲೆ ಆದ 9/11 ದಾಳಿಯಲ್ಲಿ ಸುಮಾರು 3000 ಜನ ಸತ್ತರು. ಆದರೂ ಇದು ಸಾಂಪ್ರದಾಯಿಕ ಯುದ್ಧಕ್ಕೆ ಸಮವಲ್ಲ.


ಕಾಡುದಾರಿ
ಜಮ್ಮು ಕಾಶ್ಮೀರದ ಪಹಲ್ಗಾಮ್ ಕಣಿವೆಯಲ್ಲಿ ಭಯೋತ್ಪಾದಕರ ಬಂದೂಕುಗಳು ಮತ್ತೊಮ್ಮೆ ಗರ್ಜಿಸಿವೆ. ಹಲವು ಕಾಲದಿಂದ ಮೌನವಾಗಿದ್ದ ಕಾಶ್ಮೀರ ಕಣಿವೆ ರಕ್ತಸಿಕ್ತವಾಗಿದೆ. ಇದೊಂದು ಪೈಶಾ ಚಿಕ ಕೃತ್ಯ. ಹಮಾಸ್ ಉಗ್ರರು ಇಸ್ರೇಲ್‌ನೊಳಗೆ ನುಗ್ಗಿ ಇಸ್ರೇಲಿಗರನ್ನು ಸಾಯಿಸಿದಂತೆ ಇಲ್ಲೂ ಮಾಡಲಾಗಿದೆ. ಆದರೆ ಯಾರನ್ನೂ ಒತ್ತೆಯಾಗಿ ಒಯ್ದಿಲ್ಲ ಅಷ್ಟೆ. ಟ್ರಂಪ್ ಸೇರಿದಂತೆ ಜಾಗತಿಕ ನಾಯಕರೆಲ್ಲ ಈ ಹೀನ ಕೃತ್ಯವನ್ನು ಖಂಡಿಸಿದ್ದಾರೆ.
ಜಾಗತಿಕ ಚಿಂತಕರೆಲ್ಲ ಈ ಭಯೋತ್ಪಾದನೆಯ ಸ್ವರೂಪ, ಇದನ್ನು ತಡೆಗಟ್ಟುವುದು ಹೇಗೆ ಎಂಬೆಲ್ಲ ದರ ಕುರಿತು ದಶಕಗಳಿಂದ ತಲೆ ಕೆಡಿಸಿಕೊಂಡಿದ್ದಾರೆ. ಇಸ್ಲಾಮಿಕ್ ಭಯೋತ್ಪಾದನೆ ಜಗತ್ತಿಗೆ ತಂದೊ ಡ್ಡಿರುವ ಆತಂಕ ದೊಡ್ಡದು. ಇತರ ಯಾವುದೇ ಉಗ್ರ ಸಂಘಟನೆಗಳು ಜಾಗತಿಕ ಮಟ್ಟದ ಸಂಘಟನೆ- ದುಷ್ಪರಿಣಾಮ ಹೊಂದಿಲ್ಲ ಎಂಬುದನ್ನು ಗಮನಿಸಬೇಕು.
ಈ ಭಯೋತ್ಪಾದನೆಯ ಸಂತ್ರಸ್ತರು ಮತ್ತು ಅದರೆದುರು ಶತಾಯಗತಾಯ ಹೋರಾಡುತ್ತಿರುವವರು ಇಸ್ರೇಲಿಗರು. ಇದೇ ಇಸ್ರೇಲ್‌ನ ಯಹೂದಿ ಸಮುದಾಯದ ದೊಡ್ಡ ಬರಹಗಾರ ಯುವಾಲ್ ನೋವಾ ಹರಾರಿ, ಮಾನವಕುಲದ ಕುರಿತ ತನ್ನ ವಿಸ್ತೃತ ಚಿಂತನೆಯಿಂದ ಇಂದು ಮುಖ್ಯನೆನಿಸಿ ದ್ದಾನೆ.
ಇದನ್ನೂ ಓದಿ: Harish Kera Column: ದೈವ ಭೂತಗಳೂ ಯಕ್ಷ ಗಂಧರ್ವರೂ
ಈತ ಸುಮಾರು ಹತ್ತು ವರ್ಷಗಳ ಹಿಂದೆಯೇ ಭಯೋತ್ಪಾದನೆಯ ಬಗ್ಗೆ ನಾವೆಲ್ಲ ಚಿಂತಿಸಬೇಕಾದ ಮಹತ್ವದ ವಿಷಯಗಳ ಬಗ್ಗೆ ಬರೆದಿದ್ದಾನೆ. ಆತನ ಬರಹ ಸಕಾಲಿಕವಾದುದರಿಂದ, ಅದರ ಸಾರವನ್ನು ಇಲ್ಲಿ ಕೊಡುವ ಪ್ರಯತ್ನ ಮಾಡಿದ್ದೇನೆ. ಭಯೋತ್ಪಾದನೆ ಎಂಬ ಪದವೇ ಹೇಳುವಂತೆ, ಅದೊಂದು ಮಿಲಿಟರಿ ತಂತ್ರ. ನೇರವಾಗಿ ಎದುರಿಸಿ ಭೌತಿಕ ಹಾನಿ ಉಂಟುಮಾಡುವ ಬದಲು ಭಯವನ್ನು ಹರಡುವ ಮೂಲಕ ರಾಜಕೀಯ ಪರಿಸ್ಥಿತಿಯನ್ನು ಬದಲಾಯಿಸುವ ಉದ್ದೇಶ ಅದರದ್ದು. ಈ ತಂತ್ರವನ್ನು ಅಳವಡಿಸಿಕೊಳ್ಳುವವರು ದುರ್ಬಲರು, ಕೀಳರಿಮೆ ಇರುವವರು. ಮಿಲಿಟರಿ ದಾಳಿಯೂ ಭಯವನ್ನು ಹರಡುತ್ತದೆ ನಿಜ.
ಆದರೆ ಅಲ್ಲಿ ನೇರ ಹಾನಿ ಹಾಗೂ ವಶಪಡಿಸಿಕೊಳ್ಳುವಿಕೆಯೇ ಹಾನಿಯೇ ಮುಖ್ಯ. ಭಯೋತ್ಪಾದನೆ ಯಲ್ಲಿ, ಭಯವೇ ಅದರ ಜೀವಾಳ. ಹಾಗಂತ ಹಿಂಸಾಚಾರದ ಮೂಲಕ ರಾಜಕೀಯ ಪರಿಸ್ಥಿತಿಯನ್ನು ಬದಲಾಯಿಸುವುದು ಸುಲಭವಲ್ಲ. ಹೆಚ್ಚಿನ ಭಯೋತ್ಪಾದಕ ದಾಳಿಗಳು ಬೆರಳೆಣಿಕೆ ಯಷ್ಟು ಜನರನ್ನು ಮಾತ್ರ ಕೊಲ್ಲುತ್ತವೆ.
2002ರಲ್ಲಿ ಪ್ಯಾಲೆಸ್ತೀನಿ ಭಯೋತ್ಪಾದಕರಿಂದ ಇಸ್ರೇಲ್‌ನಲ್ಲಿ ಆದ ಸಾವುನೋವು 451. ಅದೇ ವರ್ಷ ಕಾರು ಅಪಘಾತಗಳಲ್ಲಿ 542 ಇಸ್ರೇಲಿಗಳು ಸಾವನ್ನಪ್ಪಿದ್ದರು. ಅಮೆರಿಕದ ಮೇಲೆ ಆದ 9/11 ದಾಳಿಯಲ್ಲಿ ಸುಮಾರು 3000 ಜನ ಸತ್ತರು. ಆದರೂ ಇದು ಸಾಂಪ್ರದಾಯಿಕ ಯುದ್ಧಕ್ಕೆ ಸಮವಲ್ಲ. ಉದಾಹರಣೆಗೆ ಮೂರನೇ ಐಸ್ನೆ ಯುದ್ಧದಲ್ಲಿ 2.50 ಲಕ್ಷ ಜನ, ಅಥವಾ 10ನೇ ಐಸೊಂಜೊ ಯುದ್ಧ ದಲ್ಲಿ 2.25 ಲಕ್ಷ ಜನ ಸತ್ತರು.
ಉಗ್ರರು ಎಷ್ಟೇ ದಾಳಿ ಮಾಡಿದರೂ ದೊಡ್ಡ ದೇಶಗಳ ಸೇನಾ ನೆಲೆಗಳನ್ನು, ರಸ್ತೆಗಳು, ರೈಲುಗಳು, ಕಾರ್ಖಾನೆಗಳು, ಬಂದರುಗಳನ್ನು ಅಸ್ತವ್ಯಸ್ತಗೊಳಿಸಲು ಆಗುವುದಿಲ್ಲ. ಹಾಗಾದರೂ ಭಯೋತ್ಪಾ ದಕರು ತಾವು ಏನನ್ನೋ ಕಡಿದು ಕಟ್ಟೆ ಹಾಕುತ್ತೇವೆ ಎಂದು ಭಾವಿಸುವುದು ಹೇಗೆ? ಅವರ ಲೆಕ್ಕಾಚಾರವೇ ಬೇರೆ. ಉಗ್ರರು, ಶತ್ರುದೇಶ ತನ್ನ ಬೃಹತ್ ಶಕ್ತಿಯನ್ನು ತಮ್ಮ ವಿರುದ್ಧ ಬಳಸಿದಾಗ ಉಂಟಾಗುವ ಹಿಂಸಾತ್ಮಕ ಮಿಲಿಟರಿ ಮತ್ತು ರಾಜಕೀಯ ಬಿರುಗಾಳಿಯನ್ನು ನಿರೀಕ್ಷಿಸುತ್ತಾರೆ.
ಇದಕ್ಕಾಗಿಯೇ ಪ್ರಭುತ್ವವನ್ನು ಅವರು ರೊಚ್ಚಿಗೆಬ್ಬಿಸಲು ಯತ್ನಿಸುತ್ತಾರೆ. ಒಂದು ಚಂಡಮಾರುತ ಎದ್ದಾಗ ಅಲ್ಲಿ ಅನೇಕ ಅನಿರೀಕ್ಷಿತ ವಿಷಯಗಳು ಸಂಭವಿಸುತ್ತವೆ. ತಪ್ಪುಗಳು ನಡೆಯುತ್ತವೆ, ದೌರ್ಜನ್ಯಗಳು ಆಗುತ್ತವೆ. ಸಾರ್ವಜನಿಕ ಅಭಿಪ್ರಾಯ ಚಂಚಲವಾಗುತ್ತದೆ. ಪ್ರಶ್ನೆಗಳು ಏಳುತ್ತವೆ. ತಟಸ್ಥರು ತಮ್ಮ ನಿಲುವನ್ನು ಬದಲಾಯಿಸುತ್ತಾರೆ. ಅಧಿಕಾರದ ಸಮತೋಲನ ಅಲುಗಾಡುತ್ತದೆ. ಪರಿಣಾಮ ಏನಾಗುತ್ತದೆ ಎಂದು ಭಯೋತ್ಪಾದಕರೂ ಊಹಿಸಲು ಸಾಧ್ಯವಿಲ್ಲ.
ಆದರೆ ನೀರು ಅಶಾಂತವಾಗಿರುವಾಗ ಅದರಲ್ಲಿ ಗಾಳ ಹಾಕಲು ಉಗ್ರರಿಗೆ ಹೆಚ್ಚಿನ ಅವಕಾಶ ವಿರುತ್ತದೆ. ಹೀಗಾಗಿಯೇ ಅವರು ಶಾಂತ ವಾತಾವರಣವನ್ನು ದ್ವೇಷಿಸುತ್ತಾರೆ. ತಾವು ಇವರ ವಿರುದ್ಧ ಯುದ್ಧ ಮಾಡಲು ಸಾಧ್ಯವಿಲ್ಲ ಎಂದು ತಿಳಿದಿರುವ ಕಾರಣವೇ ಗುಂಪುಗಳು ಭಯೋತ್ಪಾದನೆಯತ್ತ ತಿರುಗುತ್ತವೆ.
ಅವು ಸೃಷ್ಟಿಸುವ ಸನ್ನಿವೇಶ ಒಂದು ನಾಟಕೀಯ ಪ್ರದರ್ಶನ ಅಥವಾ ಥಿಯಟ್ರಿಕಲ್ ಆಗಿರುತ್ತದೆ. ಭಯೋತ್ಪಾದಕರು ಸೇನಾ ಜನರಲ್‌ಗಳಂತೆ ಯೋಚಿಸುವುದಿಲ್ಲ. ಬದಲಾಗಿ ರಂಗಭೂಮಿ ನಿರ್ಮಾಪಕರಂತೆ ಯೋಚಿಸುತ್ತಾರೆ. 9/11 ದಾಳಿಯ ಸಾರ್ವಜನಿಕ ನೆನಪು ಅದಕ್ಕೆ ಸಾಕ್ಷಿ. ಅಂದು ಏನಾಯಿತು ಎಂದು ನೀವು ಜನರನ್ನು ಕೇಳಿದರೆ, ಅಲ್-ಖೈದಾ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳನ್ನು ನಾಶಮಾಡಿತು ಎನ್ನುತ್ತಾರೆ.
ಆದರೂ ದಾಳಿ ನಡೆದದ್ದು ಕೇವಲ ಗೋಪುರಗಳ ಮೇಲಲ್ಲ. ಪೆಂಟಗನ್ ಮೇಲೂ ದಾಳಿಯಾಗಿತ್ತು. ಈ ದಾಳಿಯಲ್ಲಿ ಅಲ್-ಖೈದಾ ಶತ್ರುಗಳ ಪ್ರಧಾನ ಕಚೇರಿಯ ಒಂದು ಭಾಗವನ್ನೇ ನಾಶ ಮಾಡು ವಲ್ಲಿ ಯಶಸ್ವಿಯಾಯಿತು. ಕೆಲವು ಹಿರಿಯ ಕಮಾಂಡರ್‌ಗಳನ್ನೂ ಕೊಂದಿತು. ಆದರೆ ಕೆಲವೇ ಜನರು ಮಾತ್ರ ಇದನ್ನು ಗಮನಿಸುತ್ತಾರೆ. ಏಕೆ? ಏಕೆಂದರೆ ಅಔಳಿ ಗೋಪುರಗಳಿಗೆ ಹೋಲಿಸಿದರೆ ಪೆಂಟಗನ್ ಸಮತಟ್ಟಾದ ಮತ್ತು ಸರಳವಾದ ಕಟ್ಟಡ. ಆದರೆ ವಿಶ್ವ ವಾಣಿಜ್ಯ ಕೇಂದ್ರ ಎತ್ತರದ, ಗಮನ ಸೆಳೆಯುವ ರಚನೆ. ಅದರ ಕುಸಿತ ಅಪಾರವಾದ ಆಡಿಯೋ ವಿಶುವಲ್ ಪರಿಣಾಮವನ್ನು ಸೃಷ್ಟಿಸಿತು. ಅದರ ಕುಸಿತದ ಚಿತ್ರ- ವಿಡಿಯೊಗಳನ್ನು ನೋಡಿದವರು ಅದನ್ನು ಎಂದಿಗೂ ಮರೆಯುವುದಿಲ್ಲ. ಇದು ಭಯೋತ್ಪಾದನೆಯ ರಂಗಭೂಮಿ.
ನಾವು ಅದನ್ನು ಭೌತಿಕ ಪ್ರಭಾವಕ್ಕಿಂತಲೂ ಅದರ ಭಾವನಾತ್ಮಕತೆಯಿಂದ ಹೆಚ್ಚು ನಿರ್ಣಯಿಸು ತ್ತೇವೆ. ಬಹುಶಃ ಒಸಾಮಾ ಬಿನ್ ಲಾಡೆನ್ ಪೆಂಟಗನ್ ಬದಲು ಲಿಬರ್ಟಿ ಸ್ಟ್ಯಾಚ್ಯೂಗೆ ವಿಮಾನ ಗುದ್ದಿಸಿದ್ದರೆ ಇನ್ನಷ್ಟು ಪ್ರಬಲವಾದ, ನಾಟಕೀಯ ಸಂಕೇತವಾಗಿರುತ್ತಿತ್ತು. ಅಂದರೇನು? ಉಗ್ರಗಾಮಿ ಗಳಂತೆ, ಭಯೋತ್ಪಾದನೆಯನ್ನು ಎದುರಿಸುವವರೂ ನಾಟಕೀಯವಾಗಿ ಯೋಚಿಸುವ ಅನಿವಾ ರ್ಯತೆಯನ್ನು ಅವರು ಸೃಷ್ಟಿಸುತ್ತಾರೆ.
ಭಯೋತ್ಪಾದನೆಯೆದುರು ಪರಿಣಾಮಕಾರಿಯಾಗಿ ಹೋರಾಡಲು ನಾವು ಬಯಸಿದರೆ, ಭಯೋ ತ್ಪಾದಕರು ಮಾಡುವ ಯಾವುದೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ನಾವು ಅರಿತು ಕೊಳ್ಳಬೇಕು. ಉಗ್ರ ಪ್ರಚೋದನೆಗಳಿಗೆ ನಾವು ದಾರಿ ತಪ್ಪಿದ ರೀತಿಯಲ್ಲಿ ಅತಿಯಾಗಿ ಪ್ರತಿಕ್ರಿಯಿಸಿದರೆ, ನಮ್ಮನ್ನೇ ನಾವು ಸೋಲಿಸಿಕೊಂಡಂತೆ. ಭಯೋತ್ಪಾದಕರದು ಅಸಾಧ್ಯವಾದ ಧ್ಯೇಯ- ಅವರಿಗೆ ಯಾವುದೇ ಮಿಲಿಟರಿ ಸಾಮರ್ಥ್ಯ ವಿಲ್ಲದಿದ್ದರೂ ರಾಜಕೀಯ ಅಧಿಕಾರದ ಸಮತೋಲನವನ್ನು ಬದಲಾಯಿಸುವುದು. ತಮ್ಮ ಗುರಿಯನ್ನು ಸಾಧಿಸಲು ಅವರು ಪ್ರಭುತ್ವಕ್ಕೆ ಒಂದು ಅಸಾಧ್ಯವಾದ ಸವಾಲು ಹಾಕುತ್ತಾರೆ. ಅದು ತನ್ನ ಎಲ್ಲಾ ನಾಗರಿಕರಿಗೂ ಎಲ್ಲಾ ಸಮಯದಲ್ಲಿಯೂ ರಾಜಕೀಯ ಹಿಂಸಾಚಾರದಿಂದ ರಕ್ಷಣೆ ಕೊಡುವುದು. ಆದರೆ ಇದು ಯಾವುದೇ ಅಡಳಿತದಿಂದಲೂ ಅಸಾಧ್ಯ. ಪ್ರಭುತ್ವವು ಈ ಅಸಾಧ್ಯವಾದ ಧ್ಯೇಯವನ್ನು ಪೂರೈಸಲು ಪ್ರಯತ್ನಿಸಿ ವಿಫಲಗೊಂಡಾಗ ಪ್ರಜೆಗಳಲ್ಲಿ ಅಸ್ಥಿರತೆ ಉಂಟಾಗುತ್ತದೆ.
ಇದನ್ನೇ ಭಯೋತ್ಪಾದಕರು ಆಶಿಸುತ್ತಾರೆ. ಕೆಲವೊಮ್ಮೆ ಪ್ರಭುತ್ವವು ತನ್ನ ನಾಗರಿಕರನ್ನು ರಾಜಕೀಯ ಹಿಂಸಾಚಾರದಿಂದ ರಕ್ಷಿಸುವ ಸವಾಲನ್ನು ಪಟ್ಟು ಹಿಡಿದು ಸಾಧಿಸಿದಾಗ ಅದು ಭಯೋತ್ಪಾದಕರನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾದದ್ದು ಉಂಟು. ಕಳೆದ ಹಲವು ದಶಕಗಳಲ್ಲಿ ವಿವಿಧ ಕಡೆ ನೂರಾರು ಭಯೋತ್ಪಾದಕ ಸಂಘಟನೆಗಳು ನಾಶವಾಗಿವೆ. ಇಸ್ರೇಲ್ ಕಠಿಣ ಬಲಪ್ರಯೋಗದಿಂದ ಹಾಗೆ ಮಾಡಿದೆ. ಅಂತಹ ಮುಖಾಮು ಖಿಯಲ್ಲಿ ತಾವು ಉಳಿಯುವುದಿಲ್ಲ ಎಂದು ಭಯೋತ್ಪಾದಕರಿಗೆ ಚೆನ್ನಾಗಿ ತಿಳಿದಿದೆ. ಆದರೆ ಅದರಿಂದ ಅವರು ಕಳೆದುಕೊಳ್ಳಲು ಏನೂ ಇಲ್ಲ.
ಪ್ರಭುತ್ವಗಳು ಕೋಪ ಉಕ್ಕೇರಿ ತುಂಬಾ ಬಲವಾಗಿ ಮತ್ತು ಸಾರ್ವಜನಿಕವಾಗಿ ಪ್ರತಿಕ್ರಿಯಿಸುತ್ತವೆ. ಭಯೋತ್ಪಾದಕರಿಗೆ ಇದೇ ಬೇಕು. ಉಗ್ರ ಪ್ರಚೋದನೆಗಳಿಗೆ ಆಡಳಿತಗಳು ತುಂಬಾ ಸಂವೇದನಶೀಲ ವಾಗಿ ಪ್ರತಿಕ್ರಿಯಿಸುವುದು ತಾವು ಜನರಿಗೆ ನೀಡಿರುವ ಸುರಕ್ಷತೆಯ ಭರವಸೆ ಹುಸಿ ಹೋದುದರಿಂದ. ಪ್ರಭುತ್ವ ಭಯಾನಕ ವಿಪತ್ತುಗಳನ್ನು ತಡೆದುಕೊಳ್ಳಬಹುದು ಮತ್ತು ಅವುಗಳನ್ನು ನಿರ್ಲಕ್ಷಿಸ ಬಹುದು.
14ನೇ ಶತಮಾನದಲ್ಲಿ ಪ್ಲೇಗ್ ಯುರೋಪಿಯನ್ ಜನಸಂಖ್ಯೆಯ ಕಾಲು ಮತ್ತು ಅರ್ಧದಷ್ಟನ್ನು ನಾಶ ಮಾಡಿತು. ಆದರೆ ಯಾವುದೇ ರಾಜ ತನ್ನ ಸಿಂಹಾಸನವನ್ನು ಕಳೆದುಕೊಳ್ಳಲಿಲ್ಲ. ಪ್ಲೇಗ್ ತಡೆಗಟ್ಟುವುದು ರಾಜನ ಕೆಲಸದ ಭಾಗ ಎಂದು ಆಗ ಯಾರೂ ಭಾವಿಸಿರಲಿಲ್ಲ. ಆದರೆ, ತಮ್ಮ ಆಳ್ವಿಕೆಯಲ್ಲಿ ಧರ್ಮದ್ರೋಹ ಹರಡಲು ಅವಕಾಶ ನೀಡಿದ ಆಡಳಿತಗಾರರು ತಮ್ಮ ಕಿರೀಟ ವನ್ನು ಮತ್ತು ತಲೆಯನ್ನು ಸಹ ಕಳೆದುಕೊಂಡದ್ದುಂಟು.
ಆದರೆ ಬರಬರುತ್ತಾ ಹೆಚ್ಚಿನ ಎಲ್ಲ ಆಧುನಿಕ ದೇಶಗಳಲ್ಲಿ ರಾಜಕೀಯ ಹಿಂಸೆ ಎಂಬುದು ಇಲ್ಲವಾಗಿದೆ. ಆಧುನಿಕ ಪ್ರಜಾಪ್ರಭುತ್ವವನ್ನು ಅನುಭವಿಸುತ್ತಿರುವ ಜನತೆಗೆ ರಾಜಕೀಯ ಹಿಂಸೆಯ ಅನುಭವವೇ ಇಲ್ಲ. ಮಧ್ಯಯುಗದಲ್ಲಿ ಇದು ಸಾಮಾನ್ಯವಾಗಿತ್ತು. ಹೀಗಾಗಿ ಅದಕ್ಕೆ ಆಗ ಯಾರೂ ಗಮನ ಕೊಡುತ್ತಿರಲಿಲ್ಲ. ಈಗ ಇಂಥ ಹಿಂಸೆ ಕಂಡುಬಂದ ಕೂಡಲೇ ಪ್ರಭುತ್ವ ಹಾಗೂ ಜನತೆ ಪ್ರತಿಕ್ರಿಯಿಸುತ್ತದೆ.
ಈ ಭಯವನ್ನು ಶಮನಗೊಳಿಸಲು ಆಡಳಿತ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಭಯೋ ತ್ಪಾದನೆಗೆ ಅತ್ಯಂತ ಪರಿಣಾಮಕಾರಿ ಉತ್ತರೆಂದರೆ ಉತ್ತಮ ಗುಪ್ತಚರ ಜಾಲ, ಭಯೋತ್ಪಾ ದನೆಯನ್ನು ಪೋಷಿಸುವ ಹಣದ ಜಾಲಗಳ ವಿರುದ್ಧ ಕ್ರಮ. ಆದರೆ ದು ಜನರಿಗೆ ಮೀಡಿಯಾದಲ್ಲಿ ತೋರಿಸಿ ರಂಜಿಸಬಹುದಾದ ವಿಷಯವಲ್ಲ. ಅವಳಿ ಗೋಪುರಗಳು ಕುಸಿಯುವುದನ್ನು ನೋಡಿದ ನಾಗರಿಕರು, ಪ್ರಭುತ್ವ ಅದಕ್ಕೆ ಉತ್ತರವಾಗಿ ಇನ್ನೂ ಹೆಚ್ಚಿನ ಬೆಂಕಿ ಮತ್ತು ಹೊಗೆ ಸೃಷ್ಟಿಸಲಿ, ಅಷ್ಟೇಅದ್ಭುತವಾದ ಪ್ರತಿನಾಟಕವನ್ನು ಪ್ರದರ್ಶಿಸಲಿ ಎಂದು ಒತ್ತಾಯಿಸುವುದು ಸಹಜ.
ಆದ್ದರಿಂದ, ಸದ್ದಿಲ್ಲದೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ಬದಲು, ಸರಕಾರ ಬಿರುಗಾಳಿ ಯಂತೆ ಪ್ರತಿಕ್ರಿಯಿಸಬೇಕಾಗುತ್ತದೆ. ಇದೇ ಭಯೋತ್ಪಾದಕರ ಕನಸು ಕೂಡ. ಇನ್ನು ಅಣ್ವಸ್ತ್ರ ಭಯೋತ್ಪಾದನೆ ಅಥವಾ ಜೈವಿಕ ಭಯೋತ್ಪಾದನೆಯ ಕತೆ ಏನು? ಭಯೋತ್ಪಾದಕ ಸಂಘಟನೆಗಳು ಸಾಮೂಹಿಕ ವಿನಾಶದ ವಶ ಮಾಡಿ ಕೊಂಡರೆ ಅದು ಸಾಂಪ್ರದಾಯಿಕ ಯುದ್ಧದಂತೆಯೇ ವ್ಯಾಪಕ ವಾದ ಹಾನಿಯನ್ನು ಉಂಟುಮಾಡಬಹುದು.
ಆದರೆ ಇದು ಸಂಭವಿಸುವ ಹೊತ್ತಿಗೆ ಪ್ರಭುತ್ವ ಎಂಬುದರ ಅರ್ಥವೇ ಬದಲಾಗಿರುತ್ತದೆ. ಈಗಿರುವ ಭಯೋತ್ಪಾದನೆಯ ಸ್ವರೂಪವೇ ಆಗಲೂ ಇರುವುದಿಲ್ಲ. ಬೆರಳೆಣಿಕೆಯಷ್ಟು ಮತಾಂಧರ ಗುಂಪು, ಇಡೀ ನಗರಗಳನ್ನು ನಾಶ ಮಾಡಲು ಮತ್ತು ಲಕ್ಷಾಂತರ ಜನರನ್ನು ಕೊಲ್ಲಲು ಸಾಧ್ಯವಾದರೆ, ರಾಜಕೀಯ ಹಿಂಸಾಚಾರದಿಂದ ಮುಕ್ತವಾದ ಸಾರ್ವಜನಿಕ ವಲಯವೇ ಆಗ ಇರುವುದಿಲ್ಲ. ಆಗ ರಾಜಕೀಯ ಮತ್ತು ಸಮಾಜ ಆಮೂಲಾಗ್ರ ರೂಪಾಂತರಗಳಿಗೆ ಒಳಗಾಗಿರುತ್ತದೆ.
ಆಗ ರಾಜಕೀಯ ಹೋರಾಟಗಳು ಹೇಗೆ ನಡೆಯುತ್ತವೆ ಊಹಿಸುವುದು ಈಗ ಕಷ್ಟ. ಆದರೆ ಅದು ಖಂಡಿತವಾಗಿಯೂ 21ನೇ ಶತಮಾನದ ಆರಂಭದ ಭಯೋತ್ಪಾದನೆ ಮತ್ತು ಭಯೋತ್ಪಾದನಾ ನಿಗ್ರಹ ಅಭಿಯಾನಗಳಿಗಿಂತ ಬಹಳ ಭಿನ್ನವಾಗಿರುತ್ತದೆ. 2050ರಲ್ಲಿ ಜಗತ್ತು ಪರಮಾಣು ಮತ್ತು ಜೈವಿಕ ಭಯೋತ್ಪಾದಕರಿಂದ ತುಂಬಿದ್ದರೆ, ಅವರ ಬಲಿಪಶುಗಳು ಇಂದಿನ ಜಗತ್ತನ್ನು ವಿಸ್ಮಯ, ಅಪನಂಬಿಕೆಯಿಂದ ನೋಡಬಹುದು.