Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್: ಅಶೋಕನಿಗೆ ಗೊತ್ತಾಯ್ತು ಸಿಹಿಯ ಆತ್ಮದ ಕಥೆ
ಸಿಹಿಯ ಅಸ್ಥಿ ತೆಗೆದುಕೊಂಡು ಹೋಗುವ ವೇಳೆ ಆ ಅಸ್ಥಿಯನ್ನು ವಿಸರ್ಜನೆ ಮಾಡಿದರೆ, ತಮಗೆ ಮೋಕ್ಷ ಸಿಗುತ್ತದೆ, ತಾನಿನ್ನು ಯಾರಿಗೂ ಕಾಣಿಸಿಕೊಳ್ಳುವುದಿಲ್ಲ ಎಂದು ಅರಿತ ಸಿಹಿ ಅದನ್ನು ಅಲ್ಲಿಂದ ಎತ್ತಿಕೊಂಡು ಅಡಗಿಸಿ ಇಡುತ್ತಿದ್ದಾಳೆ. ಇದನ್ನು ನೋಡಿದ ಅಶೋಕ್ಗೆ ಏನಾಗುತ್ತಿದೆ ಎನ್ನುವುದೇ ತಿಳಿಯುವುದಿಲ್ಲ. ಇದಕ್ಕೂ ಮುನ್ನ ಸಿಹಿಯ ಅಸ್ತಿಯು ಸುಬ್ಬಿಯ ಮನೆಯಲ್ಲಿ ಅಶೋಕ್ಗೆ ಸಿಕ್ಕಿರುತ್ತದೆ.

Seetha rama Serial

ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ ಧಾರಾವಾಹಿ (Seetha Rama serial) ಅದ್ಭುತವಾಗಿ ಮೂಡಿ ಬರುತ್ತಿದೆ. ಪ್ರಸಾರದ ಸಮಯದಲ್ಲಿ ಬದಾವಣೆ ಆಗಿದ್ದರೂ ಸೀತಾ ರಾಮ ಸೀರಿಯಲ್ಗೆ ಯಾವುದೇ ಹೊಡೆತ ಬಿದ್ದಿಲ್ಲ. ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವ ಸೀತಾ ರಾಮ ಧಾರಾವಾಹಿಯ ಮುಂದಿನ ಏಪಿಸೋಡ್‌ಗಳು ಹೇಗಿರಬಹುದು ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗ ಸೀತಾ ರಾಮ ಧಾರಾವಾಹಿಯಲ್ಲಿ ಭಾರ್ಗವಿಯ ಪಿತೂರಿ ಜಗಜ್ಜಾಹೀರಾಗುವ ಎಲ್ಲ ಲಕ್ಷಣ ಕಾಣುತ್ತಿದೆ. ಧಾರಾವಾಹಿಯಲ್ಲಿ ದೊಡ್ಡ ತಿರುವು ಎಂಬಂತೆ ಅಶೋಕನಿಗೆ ಸಿಹಿಯ ಆತ್ಮ ಇರುವುದು ಗೊತ್ತಾಗಿದೆ.
ಸಿಹಿಯ ಅಸ್ಥಿ ತೆಗೆದುಕೊಂಡು ಹೋಗುವ ವೇಳೆ ಆ ಅಸ್ಥಿಯನ್ನು ವಿಸರ್ಜನೆ ಮಾಡಿದರೆ, ತಮಗೆ ಮೋಕ್ಷ ಸಿಗುತ್ತದೆ, ತಾನಿನ್ನು ಯಾರಿಗೂ ಕಾಣಿಸಿಕೊಳ್ಳುವುದಿಲ್ಲ ಎಂದು ಅರಿತ ಸಿಹಿ ಅದನ್ನು ಅಲ್ಲಿಂದ ಎತ್ತಿಕೊಂಡು ಅಡಗಿಸಿ ಇಡುತ್ತಿದ್ದಾಳೆ. ಇದನ್ನು ನೋಡಿದ ಅಶೋಕ್ಗೆ ಏನಾಗುತ್ತಿದೆ ಎನ್ನುವುದೇ ತಿಳಿಯುವುದಿಲ್ಲ. ಇದಕ್ಕೂ ಮುನ್ನ ಸಿಹಿಯ ಅಸ್ತಿಯು ಸುಬ್ಬಿಯ ಮನೆಯಲ್ಲಿ ಅಶೋಕ್ಗೆ ಸಿಕ್ಕಿರುತ್ತದೆ. ಇದನ್ನು ತೆಗೆದುಕೊಂಡು ಪವಿತ್ರ ಸ್ಥಳದ ನದಿಯಲ್ಲಿ ಬಿಡಲು ಆತನು ಆಲೋಚಿಸಿದ್ದಾರೆ. ಆದರೆ, ಏನೇ ಮಾಡಿದರೂ ಅಸ್ತಿ ಬಿಡಲು ಹೋಗಲು ಸಾಧ್ಯವಾಗಲೇ ಇಲ್ಲ. ಡೇಜಾವೂ ಸ್ಥಿತಿ ಅಶೋಕನದ್ದು. ಹೋದ ಸ್ಥಳದಲ್ಲೇ ಹೋಗುತ್ತಿದ್ದಾನೆ.
ಅಶೋಕನಿಗೆ ಏನು ಮಾಡಬೇಕೆಂದು ತಿಳಿಯದೆ ಕಾರಿನಲ್ಲಿ ಅಳುತ್ತ ಕೂತಿರುವಾಗ, ಸಿಹಿ ಕಾರಿನ ಮೇಲಿರುವ ಧೂಳಿನಿಂದ ಐ ಆ್ಯಮ್ ಸಿಹಿ (ನಾನು ಸಿಹಿ) ಎಂದು ಬರೆಯುತ್ತಾಳೆ. ಇದನ್ನು ನೋಡುತ್ತಿದ್ದಂತೆಯೇ ಅಶೋಕ್ಗೆ ಶಾಕ್ ಆಗುತ್ತದೆ. ಸಿಹಿ ಅಲ್ಲಿಯೇ ಇರುವ ವಿಷಯ ಆತನಿಗೆ ತಿಳಿಯುತ್ತದೆ. ಸಿಹಿಯ ಆತ್ಮ ಇರೋದು ಆತನಿಗೆ ಗೊತ್ತಾಗಿದೆ. ಕೊನೆಗೆ ಸುಬ್ಬಿಯೇ ಅಶೋಕ್ಗೆ ಎಲ್ಲಾ ವಿಷಯ ಹೇಳುತ್ತಾಳೆ. ಸಿಹಿ ತನಗೆ ಕಾಣಿಸುವ ವಿಷಯ ಕೂಡ ಹೇಳುತ್ತಾಳೆ.
ಸಿಹಿ ಎಲ್ಲಿದ್ದಾಳೆ ಎಂದು ಕೇಳಿದಾಗ ಅಲ್ಲೇ ಕುಳಿತಿರುವುದಾಗಿ ಹೇಳುತ್ತಾಳೆ ಸುಬ್ಬಿ. ಸುಬ್ಬಿ ಸೂಚಿಸಿರುವ ಕಡೆ ಅಶೋಕ್ ಹೋದಾಗ, ಸುಬ್ಬಿ ಆತನನ್ನು ಅಪ್ಪಿಕೊಳ್ಳುವಂತೆ ಸಿಹಿಗೆ ಹೇಳುತ್ತಾಳೆ. ಸಿಹಿ ಅಶೋಕನನ್ನು ಅಪ್ಪಿಕೊಳ್ಳುತ್ತಾಳೆ. ಸಿಹಿ ಕಾಣದಿದ್ದರೂ ಆ ಪ್ರೀತಿಯ ಅಪ್ಪುಗೆಯ ಕ್ಷಣಗಳನ್ನು ಆತ ಅನುಭವಿಸಲು ಸಾಧ್ಯವಾಗುತ್ತದೆ. ಈ ಮೂಲಕ ಧಾರಾವಾಹಿ ದೊಡ್ಡ ತಿರುವು ಪಡೆದುಕೊಂಡಿದ್ದು, ಭಾರ್ಗವಿಗೆ ಬುದ್ದಿ ಕಲಿಸಲು ಎಲ್ಲರೂ ತಯಾರಾಗಿ ನಿಂತಿದ್ದಾರೆ.
Bigg Boss Voice: ಅಲ್ಲಿ ಬರುವ ವಾಯ್ಸ್ ನನ್ನದಲ್ಲ: ಬಿಗ್ ಬಾಸ್ನ ಸತ್ಯ ಬಿಚ್ಚಿಟ್ಟ ಪ್ರದೀಪ್ ಬಡೆಕ್ಕಿಲ