Viral News: 10 ವರ್ಷ ಸೇವಿಂಗ್ ಮಾಡಿ ಕಾರು ಖರೀದಿಸಿದವನಿಗೆ ಬಿಗ್ ಶಾಕ್; ಬೆಚ್ಚಿಬೀಳಿಸುವ ವಿಡಿಯೊ ವೈರಲ್
33 ವರ್ಷದ ಸಂಗೀತ ನಿರ್ಮಾಪಕ ಹೊಂಕಾನ್ ಫೆರಾರಿ 458 ಸ್ಪೈಡರ್ ಐಷಾರಾಮಿ ಕಾರನ್ನು ಖರೀದಿಸಲು 10 ವರ್ಷಗಳ ಕಾಲ ಹಣ ಉಳಿಸಿದ್ದಾನೆ. ದುರದೃಷ್ಟವಶಾತ್, ಅದನ್ನು ಖರೀದಿಸಿದ ಒಂದು ಗಂಟೆಯ ನಂತರ ಅದರ ಎಂಜಿನ್‍ಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಈ ವಿಚಾರವನ್ನು ಆತ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ನಲ್ಲಿ ಹಂಚಿಕೊಂಡಿದ್ದು, ಇದು ವೈರಲ್(Viral News) ಆಗಿದೆ.


ಟೊಕಿಯೊ: ತಮಗೆ ಇಷ್ಟವಾದ ವಸ್ತುವೊಂದನ್ನು ಖರೀದಿಸಲು ಕೆಲವರು ಸ್ವಲ್ಪ ಸ್ವಲ್ಪ ಹಣ ಕೂಡಿಟ್ಟು ಕೊನೆಗೆ ತಮ್ಮ ಕನಸಿನ ವಸ್ತುವನ್ನು ಖರೀದಿ ಮಾಡುತ್ತಾರೆ.ಹಾಗೇ ಕಷ್ಟಪಟ್ಟು ಖರೀದಿ ಮಾಡಿದ ವಸ್ತು ಹಾಳಾದ್ರೆ ಆ ವ್ಯಕ್ತಿಯ ಪರಿಸ್ಥಿತಿ ಹೇಗಿರಬೇಡ ಹೇಳಿ...?ಇಲ್ಲೊಂದು ಕೂಡ ಅಂಥದ್ದೇ ಘಟನೆ ನಡೆದಿದೆ. ಜಪಾನಿನ ವ್ಯಕ್ತಿಯೊಬ್ಬ ಫೆರಾರಿ ಕಾರು ಖರೀದಿಸುವ ಕನಸು ಕಟ್ಟಿಕೊಂಡು ಅದಕ್ಕಾಗಿ 10 ವರ್ಷಗಳಿಂದ ತನ್ನ ಸಂಪಾದನೆಯಲ್ಲಿ ಸ್ವಲ್ಪ ಭಾಗ ಹಣವನ್ನು ಉಳಿತಾಯ ಮಾಡಿಕೊಂಡು ಬಂದಿದ್ದಾನಂತೆ. ಕೊನೆಗೆ ಅವನಿಷ್ಟದ ಕಾರು ಕೈ ಸೇರಿದ ಸ್ವಲ್ಪ ಹೊತ್ತಿನಲ್ಲಿಯೇ ಅದು ಕೈತಪ್ಪಿ ಹೋಗಿದೆಯಂತೆ. ಹೌದು, ಆತನ ಹೊಚ್ಚ ಹೊಸ ಫೆರಾರಿ ಕಾರನ್ನು ಡೆಲಿವರಿ ಮಾಡಿದ ಒಂದು ಗಂಟೆಯ ನಂತರ ಅದಕ್ಕೆ ಬೆಂಕಿ ತಗುಲಿ ಸುಟ್ಟು ಕರಕಲಾಗಿ ಹೋಗಿದೆ. ಇದರಿಂದ ಆತ ಶಾಕ್ ಆಗಿದ್ದಾನಂತೆ. ಇದಕ್ಕೆ ಸಂಬಂಧಪಟ್ಟ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.
ವರದಿ ಪ್ರಕಾರ, 33 ವರ್ಷದ ಸಂಗೀತ ನಿರ್ಮಾಪಕ ಹೊಂಕಾನ್ ಫೆರಾರಿ 458 ಸ್ಪೈಡರ್ ಐಷಾರಾಮಿ ಕಾರನ್ನು ಖರೀದಿಸಲು 10 ವರ್ಷಗಳ ಕಾಲ ಹಣ ಉಳಿಸಿದ್ದಾನೆ. ದುರದೃಷ್ಟವಶಾತ್, ಅದನ್ನು ಖರೀದಿಸಿದ ಒಂದು ಗಂಟೆಯ ನಂತರ ಅದರ ಎಂಜಿನ್‍ಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಈ ವಿಚಾರವನ್ನು ಆತ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ನಲ್ಲಿ ಹಂಚಿಕೊಂಡಿದ್ದಾನೆ. ಜಪಾನ್‍ನಲ್ಲಿ ಈ ರೀತಿಯ ತೊಂದರೆಯನ್ನು ಅನುಭವಿಸುತ್ತಿರುವ ಏಕೈಕ ವ್ಯಕ್ತಿ ತಾನು ಎಂಬುದಾಗಿ ಬೇಸರ ವ್ಯಕ್ತಪಡಿಸಿದ್ದಾನೆ. ಫೆರಾರಿ 458 ಸ್ಪೈಡರ್ ಕಾರಿನ ಬೆಲೆ ಜಪಾನ್‍ನಲ್ಲಿ ಸುಮಾರು 43 ಮಿಲಿಯನ್ ಯೆನ್ (ಅಂದಾಜು ರೂ.2.6 ಕೋಟಿ). ಎನ್ನಲಾಗಿದೆ.
フェラーリ納車して1時間後に燃え果てました。
— ほんこん (@Niatan_2525) April 16, 2025
こんなトラブル体験するの日本中で俺一人だと思う。 https://t.co/USsOVQHsyW pic.twitter.com/zlKeQwIEpM
ಮಾಹಿತಿ ಪ್ರಕಾರ, ಟೋಕಿಯೊದಲ್ಲಿ ಕಾರನ್ನು ಚಾಲನೆ ಮಾಡುತ್ತಿದ್ದಾಗ ಕಾರಿನಿಂದ ಹೊಗೆ ಬರುತ್ತಿರುವುದನ್ನು ಹೂಂಕನ್ ಗಮನಿಸಿದ್ದಾನೆ. ಡೆಲಿವರಿ ಮಾಡಿದ ಸ್ವಲ್ಪ ಸಮಯದ ನಂತರ ಕಾರಿನ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಬೆಂಕಿಗೆ ಕಾರಣವೇನು ಎಂಬ ಬಗ್ಗೆ ಯಾವುದೇ ವರದಿಗಳಿಲ್ಲ. ಆದರೆ ಹೊಗೆಯನ್ನು ಗಮನಿಸಿದ ಹೊಂಕಾನ್ ಫೆರಾರಿಯನ್ನು ನಿಲ್ಲಿಸಿ ಹೊರಬಂದಿದ್ದಾನೆ. ಕೊನೆಗೆ ಅವನ ಕಾರು ಬೆಂಕಿಗಾಹುತಿ ಆಗಿದೆಯಂತೆ. ಟೋಕಿಯೊದ ಮಿನಾಟೊ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಆತನಿಗೆ ಯಾವುದೇ ಗಾಯಗಳಾಗಿಲ್ಲ ಹಾಗೂ ಬೇರೆ ಯಾರೂ ಗಾಯಗೊಂಡಿಲ್ಲ. ಟೋಕಿಯೊ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ಘಟನೆಯ ಬಗ್ಗೆ ತನಿಖೆ ಶುರುಮಾಡಿದೆ.
ಈ ಸುದ್ದಿಯನ್ನೂ ಓದಿ:Viral Video: ಬರೋಬ್ಬರಿ 7 ವರ್ಷಗಳ ನಂತರ ಹಳೆಯ ದೋಸ್ತ್‌ಗಳ ಭೇಟಿ? ಹೃದಯಸ್ಪರ್ಶಿ ವಿಡಿಯೊ ಫುಲ್ ವೈರಲ್
ಆಮ್‌ಸ್ಟರ್‌ಡ್ಯಾಮ್ ಸ್ಕ್ವೇರ್‌ನಲ್ಲಿ ಇತ್ತೀಚೆಗೆ ಕಾರೊಂದು ಸ್ಫೋಟಗೊಂಡು ಹೊತ್ತಿ ಉರಿದ ಘಟನೆ ನಡೆದಿತ್ತು. ಈ ಘಟನೆಯ ದೃಶ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಲಾಗಿದ್ದು, ಇದು ವೈರಲ್ ಆಗಿತ್ತು. ವಿಡಿಯೊದಲ್ಲಿ ಸ್ಕ್ವೇರ್‌ನ ಆಗ್ನೇಯ ಮೂಲೆಯಲ್ಲಿರುವ ರಾಷ್ಟ್ರೀಯ ಸ್ಮಾರಕದ ಬಳಿ ಇರುವ ಕೆಂಪು ಕಾರೊಂದು ಹೊತ್ತಿ ಉರಿಯುವುದು ಸೆರೆಯಾಗಿದೆ. ಈ ಭಯಾನಕ ದೃಶ್ಯ ಕಂಡು ನೆಟ್ಟಿಗರು ಕೂಡ ಶಾಕ್ ಆಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕಾರಿನ ಡ್ರೈವರ್ ಉದ್ದೇಶಪೂರ್ವಕವಾಗಿ ಕಾರಿಗೆ ಬೆಂಕಿಯನ್ನು ಹಚ್ಚಿದ್ದಾನೆ ಎಂಬ ಅನುಮಾನ ಪೊಲೀಸರಲ್ಲಿ ಮೂಡಿತ್ತು.