Pahalgam Terror Attack: ಉಗ್ರ ಹಣೆ ಮೇಲೆ ಬಂದೂಕು ಇಟ್ಟಾಗ ಕಲಿಮಾ ಪಠಿಸಿ ಪಾರಾದ ಪ್ರೊಫೆಸರ್
ಬಂದೂಕುಧಾರಿಯಾಗಿ ಉಗ್ರ (Terrorist) ಎದುರು ಬಂದು ನಿಂತಾಗ ಎಂತವರ ಗುಂಡಿಗೆಯು ಒಮ್ಮೆ ನಿಂತು ಹೋಗುತ್ತದೆ. ಆದರೆ ಅಸ್ಸಾಂ ಪ್ರೊಫೆಸರ್ ಮಾತ್ರ ಉಗ್ರನೆದುರು ಕಲ್ಮಾ ಪಠಣ ಮಾಡಿ ತನ್ನ ಮತ್ತು ಪತ್ನಿಯ ಜೀವ ಉಳಿಸಿಕೊಂಡಿದ್ದಾರೆ. ಈ ಘಟನೆ ಮಂಗಳವಾರ ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) ನಡೆದಿದೆ.


ಅಸ್ಸಾಂ: ದಕ್ಷಿಣ ಕಾಶ್ಮೀರದ (southern kashmir) ಪಹಲ್ಗಾಮ್‌ನಲ್ಲಿ (Pahalgam) ಮಂಗಳವಾರ ಉಗ್ರರು ದಾಳಿ ( terrorist attack) ನಡೆಸಿದಾಗ ಅಸ್ಸಾಂ ವಿಶ್ವವಿದ್ಯಾಲಯದ (Assam University) ಬಂಗಾಳಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ದೇಬಾಶಿಶ್ ಭಟ್ಟಾಚಾರ್ಯ ಅವರು ಕೂಡ ಉಗ್ರನೊಬ್ಬನ ಎದುರು ಸಿಕ್ಕಿಬಿದ್ದಿದ್ದಾರೆ. ಆದರೆ ಬುದ್ಧಿವಂತಿಕೆಯ ಪ್ರದರ್ಶನ ಮಾಡಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ ಭಯಾನಕ ಕ್ಷಣಗಳ ಬಗ್ಗೆ ಅವರು ಹೇಳಿರುವುದು ಹೀಗೆ... ಉಗ್ರನೊಬ್ಬ ಬಂದೂಕು ಹಿಡಿದು ನಿಂತಿದ್ದ ನನ್ನಲ್ಲಿ ಕಲ್ಮಾ ಪಠಣ ಮಾಡಲು ಹೇಳಿದ. ನಾನು ಕಲ್ಮಾ ಪಠಿಸುತ್ತಿದ್ದಂತೆ ಆತ ಯಾವುದೋ ಕಾರಣಕ್ಕೆ ಬೇರೆಡೆಗೆ ತಿರುಗಿದ. ಈ ಅವಕಾಶವನ್ನು ಬಳಸಿಕೊಂಡು ತಪ್ಪಿಕೊಂಡೆ ಎನ್ನುತ್ತಾರೆ ಪ್ರೊಫೆಸರ್ ದೇಬಾಶಿಶ್.
ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಬಳಿ ಮಂಗಳವಾರ ನಡೆದ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಇದರಲ್ಲಿ ಬದುಕುಳಿದವರಲ್ಲಿ ಅಸ್ಸಾಂ ವಿಶ್ವವಿದ್ಯಾಲಯದ ಬಂಗಾಳಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ದೇಬಾಶಿಶ್ ಭಟ್ಟಾಚಾರ್ಯ ಕೂಡ ಒಬ್ಬರು. ಅವರು ತಾವು ಬದುಕಿ ಬಂದ ರೋಚಕ ಕಥೆಯನ್ನು ಹಂಚಿಕೊಂಡಿದ್ದಾರೆ.
ಬಂದೂಕುಧಾರಿಯೊಬ್ಬ ನನ್ನ ಕಡೆಗೆ ತಿರುಗಿದ. ನನ್ನತ್ತ ನೇರವಾಗಿ ನೋಡಿ, ನೀನು ಏನು ಮಾಡುತ್ತಿದ್ದಿ ಎಂದು ಪ್ರಶ್ನಿಸಿದ. ನಾನು ಜೋರಾಗಿ ಕಲ್ಮಾ ಪಠಣ ಮಾಡಲು ಪ್ರಾರಂಭಿಸಿದೆ. ನಾನು ಯಾಕೆ ಹೀಗೆ ಮಾಡಿದೆ ಎಂದು ಗೊತ್ತಿಲ್ಲ. ಆದರೆ ನಾನು ಕಲ್ಮಾ ಪಠಣ ಮಾಡುತ್ತಿದ್ದಂತೆ ಆತ ಯಾವುದೋ ಕಾರಣಕ್ಕಾಗಿ ತಿರುಗಿ ಹೋದನು.
ಬದುಕಲು ಇದೊಂದು ಒಳ್ಳೆಯ ಅವಕಾಶ ಎಂದರಿತು ಸದ್ದಿಲ್ಲದೆ ಹೆಂಡತಿ ಮತ್ತು ಮಗನೊಂದಿಗೆ ಎದ್ದು ಬೇಲಿಯ ಕಡೆಗೆ ವೇಗವಾಗಿ ನಡೆಯಲು ಪ್ರಾರಂಭಿಸಿದೆ. ಬೇಲಿಯನ್ನು ಹತ್ತಿ ದಾಟಿ ಸುಮಾರು ಎರಡು ಗಂಟೆಗಳ ಕಾಲ ನಡೆಯುತ್ತಾ ಸಾಗಿದೆವು. ಅದು ಯಾವ ಊರು ಎಂಬುದು ಗೊತ್ತಾಗಿಲ್ಲ. ನಾವು ದಾರಿ ತಪ್ಪಿದ್ದೆವು. ಆದರೆ ನಾವು ಕುದುರೆಗಳ ಗೊರಸುಗಳ ಗುರುತುಗಳನ್ನು ಅನುಸರಿಸಿ ಕೊನೆಗೆ ಕುದುರೆ ಸವಾರನೊಬ್ಬನ ಬಳಿ ತೆರಳಿದೆವು. ಅವನ ಸಹಾಯದಿಂದ ಮರಳಿ ಹೊಟೇಲ್ ತಲುಪಿದೆವು. ಆದರೆ ತುಂಬಾ ಹೆದರಿದ್ದೆವು ಎಂದು ಹೇಳಿದ್ದಾರೆ ಪ್ರೊಫೆಸರ್ ದೇಬಾಶಿಶ್.
ಇದನ್ನೂ ಓದಿ: Pahalgam Terror Attack: ಪಾಕಿಸ್ತಾನಿ ಸೇನಾ ಮುಖ್ಯಸ್ಥರಿಂದಲೇ ಪಹಲ್ಗಾಮ್ ದಾಳಿಗೆ ಪ್ರಚೋದನೆ ?
ಪಹಲ್ಗಾಮ್‌ನಲ್ಲಿ ನಾಗರಿಕರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಸುಮಾರು 27 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಗುಂಪು ರೆಸಿಸ್ಟೆನ್ಸ್ ಫ್ರಂಟ್‌ನ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಮೂವರು ಭಯೋತ್ಪಾದಕರು ಮೃತದೇಹಗಳನ್ನು ಒಂದೇ ಸ್ಥಳದಲ್ಲಿ ಇರಿಸಿ ಅನಂತರ ಅವರ ಗುರುತನ್ನು ದೃಢಪಡಿಸಿದರು. ಪುರುಷರು ಮತ್ತು ಮಹಿಳೆಯರ ಶವಗಳನ್ನು ಗುರುತಿಸುವ ಮೊದಲು ಬೇರ್ಪಡಿಸಿದರು. ದಾಳಿಗೊಳಗಾದ ಕೆಲವು ಗಾಯಾಳುಗಳು ದೂರದಿಂದ ತಮ್ಮ ಮೇಲೆ ಗುಂಡು ಹಾರಿಸಲಾಗಿದೆ ಎಂದು ಹೇಳಿದ್ದಾರೆ.