Viral News: ಅಪ್ಪ-ಅಮ್ಮನನ್ನು ಧಿಕ್ಕರಿಸಿ ಪ್ರೀತಿಸಿದವನನ್ನು ಮದ್ವೆ ಆದ ಯುವತಿ; ಆಮೇಲೆ ನಡೆದಿದ್ದು ಯಾರೂ ಊಹಿಸದ ಸಂಗತಿ!
ಮನೆಯವರಿಗೆ ಇಷ್ಟವಿಲ್ಲದೆ ಲವ್ ಮ್ಯಾರೇಜ್ ಮಾಡಿಕೊಂಡ ಕಾರಣ ಯುವತಿಯನ್ನು ಆಕೆಯ ಕುಟುಂಬ ಸದಸ್ಯರು ಬಲವಂತವಾಗಿ ಗಂಡನ ಮನೆಯಿಂದ ಕರೆದೊಯ್ದಿದ್ದಾರೆ. ಇಡೀ ಘಟನೆ ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral News) ಆಗಿದೆ.


ನವದೆಹಲಿ: ಪ್ರೀತಿ-ಪ್ರೇಮಕ್ಕೆ ಮನೆಯವರ ವಿರೋಧ ಸರ್ವೇ ಸಾಮಾನ್ಯ. ಸಮಾಜ ಎಷ್ಟೇ ಸುಧಾರಿಸಿದೇ ಅಂದ್ರು ಇನ್ನು ಕೆಲವು ಕಡೆ ಇದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಹೆಣ್ಣು/ಗಂಡಿನ ಮನೆಯವರಿಗೆ ಇರಲ್ಲ. ಇತ್ತೀಚೆಗೆ ಉಜ್ಜಯಿನಿಯಲ್ಲಿ ಇಂಥದ್ದೊಂದು ಆಘಾತಕಾರಿ ಘಟನೆ ನಡೆದಿದೆ. ಲವ್ ಮ್ಯಾರೇಜ್ ಆದ ಹುಡುಗಿಯೊಬ್ಬಳನ್ನು ಆಕೆಯ ಕುಟುಂಬ ಸದಸ್ಯರು ಬಲವಂತವಾಗಿ ಗಂಡನ ಮನೆಯಿಂದ ಕರೆದೊಯ್ದಿದ್ದಾರೆ. ಮನೆಯವರಿಗೆ ಇಷ್ಟವಿಲ್ಲದೆ ಪ್ರಿಯಕರನೊಂದಿಗೆ ಮದುವೆ ಮಾಡಿಕೊಂಡಿದ್ದಕ್ಕೆ ಕೋಪಗೊಂಡ ಯುವತಿಯ ಕುಟುಂಬವು ಅವಳ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಇಡೀ ಮನೆಯನ್ನು ಧ್ವಂಸಗೊಳಿಸಿ ನಂತರ ಅಲ್ಲಿಂದ ಆಕೆಯನ್ನು ಎಳೆದೊಯ್ದಿದ್ದಾರೆ. ಇಡೀ ಘಟನೆ ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳು ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral News) ಆಗಿದೆ.
ಉಜ್ಜಯಿನಿಯ ಚಿಮನ್‍ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಗಿರಿರಾಜ್ ರತನ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಕಾಲೋನಿ ನಿವಾಸಿ ಶುಭಂ ಮಾಳವೀಯ ಎಂಬಾತ ಏಪ್ರಿಲ್ 11 ರಂದು ಶಾಜಾಪುರದ ಕುಂಕುಮ್ ಪಾಟಿದಾರ್ ಅವಳನ್ನು ದೇವಾಲಯದಲ್ಲಿ ವಿವಾಹವಾಗಿದ್ದನು. ದಂಪತಿ ಏಪ್ರಿಲ್ 14 ರಂದು ಪೊಲೀಸ್ ಠಾಣೆಯಲ್ಲಿ ತಮ್ಮ ಹೇಳಿಕೆಗಳನ್ನು ನೀಡಿ ಮತ್ತು ಸಂತೋಷದಿಂದ ಮನೆಗೆ ಮರಳಿದ್ದರಂತೆ.
ಆದರೆ ಕುಂಕುಮ್ ಅವಳ ಕುಟುಂಬಕ್ಕೆ ಈ ಮದುವೆ ಇಷ್ಟವಿರಲಿಲ್ಲವಂತೆ. ಹಾಗಾಗಿ ಏಪ್ರಿಲ್ 14 ರಿಂದ ಕುಟುಂಬವು ಫೋನ್ ಮಾಡಿ ಶುಭಂಗೆ ಬೆದರಿಕೆ ಹಾಕಿದೆ. ನಂತರ ಸೋಮವಾರ (ಏಪ್ರಿಲ್ 21)ಸಂಜೆ ಮಹಿಳೆಯ ಕುಟುಂಬದವರು ಶುಭಂ ಮನೆಗೆ ಬಂದು ವಾಗ್ವಾದ ನಡೆಸಿ ಶುಭಂ ಕುಟುಂಬ ಸದಸ್ಯರನ್ನು ಕೋಲುಗಳಿಂದ ಥಳಿಸಿದ್ದಾರಂತೆ.ಅದೂ ಅಲ್ಲದೇ ನವವಿವಾಹಿತೆಯನ್ನು ಮನೆಯಿಂದ ಗಂಡನಮನೆಯಿಂದ ಎಳೆದುಕೊಂಡು ಹೋಗಿದ್ದಾರಂತೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದೆ. ವಿಡಿಯೊ ಬಿಡುಗಡೆಯಾದ ನಂತರ, ಚಿಮನ್‍ಗಂಜ್ ಮಂಡಿ ಪೊಲೀಸ್ ಠಾಣೆಯ ಪೊಲೀಸರು ಮಹಿಳೆಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಯನ್ನು ಶುರುಮಾಡಿದೆ. ಈ ಘಟನೆಯಿಂದ ಆಘಾತಗೊಂಡ ಶುಭಂ ತನ್ನ ಮತ್ತು ತನ್ನ ಹೆಂಡತಿಯ ಸುರಕ್ಷತೆಯ ಬಗ್ಗೆ ಭಯವನ್ನು ವ್ಯಕ್ತಪಡಿಸಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ಆಟೋದಲ್ಲಿ ಹೋಗುತ್ತಿದ್ದ ಮಹಿಳೆಗೆ ಬಟ್ಟೆ ಬಿಚ್ಚಿ ಕಿರುಕುಳ; ಶಾಕಿಂಗ್ ವಿಡಿಯೊ ಇಲ್ಲಿದೆ
ಉಜ್ಜಯಿನಿಯಲ್ಲಿ ಈ ಹಿಂದೆ ಕೂಡ ಲವ್ ಮ್ಯಾರೇಜ್‍ಗೆ ಸಂಬಂಧಿಸಿದ ಪ್ರಕರಣಗಳು ವರದಿಯಾಗಿದ್ದವು. ಉಜ್ಜಯಿನಿಯ ಇಂದಿರಾ ನಗರದಲ್ಲಿ ವಾಸಿಸುವ 22 ವರ್ಷದ ಮಹಿಳೆ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು . ಹರ್ಷಿತಾ 2019 ರಲ್ಲಿ ಇಂದಿರಾ ನಗರದ ನಿವಾಸಿ ಶೈಲೇಂದ್ರ ಎಂಬಾತನನ್ನು ಪ್ರೀತಿಸುತ್ತಿದ್ದಳಂತೆ. ನಂತರ ಯುವಕನೊಂದಿಗೆ ಪ್ರೇಮ ವಿವಾಹವಾಗಿದ್ದಳು. ಆದರೆ ಅವಳ ಗಂಡನ ಮನೆಯವರು ಅವಳನ್ನು ಕೊಂದಿದ್ದಾರೆ ಎಂದು ಆಕೆಯ ಕುಟುಂಬ ಸದಸ್ಯರು ಆರೋಪಿಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಚಿಮನ್‍ಗಂಜ್ ಮಂಡಿ ಪೊಲೀಸರು ತನಿಖೆ ಮಾಡಿದ್ದರು.
ವರದಿ ಪ್ರಕಾರ, ಇಂದಿರಾ ನಗರದ ನಿವಾಸಿ ಶೈಲೇಂದ್ರ (25) ಅವನ ಪತ್ನಿ ಹರ್ಷಿತಾ ರಾತ್ರಿ ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವರ ಸ್ಥಿತಿ ಹದಗೆಟ್ಟಾಗ, ಕುಟುಂಬವು ಅವಳನ್ನು ಆಸ್ಪತ್ರೆಗೆ ಕರೆದೊಯ್ದಿತು, ಅಲ್ಲಿ ಅವಳು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಳು. ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು.