Viral Video: ಸರ್ಜಿಕಲ್ ಸೂಜಿ ಮತ್ತು ದಾರ ಬಳಸಿ ಚಪ್ಪಲಿ ಹೊಲಿದ ಭೂಪ! ನೆಟ್ಟಿಗರು ಹೇಳಿದ್ದೇನು?
ಕರ್ತವ್ಯದಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಹರಿದ ಚಪ್ಪಲಿಯನ್ನು ಹೊಲಿಯಲು ಶಸ್ತ್ರಚಿಕಿತ್ಸೆಗೆ ಬಳಸುವ ಸರ್ಜಿಕಲ್ ಸೂಜಿ ಮತ್ತು ದಾರವನ್ನು ಬಳಸಿದ್ದಾನೆ. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.ನೆಟ್ಟಿಗರು ಕೂಡ ಇದನ್ನು ನೋಡಿ ತಮಾಷೆ ಮಾಡಿದ್ದಾರೆ.


ಸರ್ಜಿಕಲ್ ಸೂಜಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲ್ಲವಾದರೆ ಅದರಿಂದ ರೋಗಿಗಳಿಗೆ ಇನ್‍ಫೆಕ್ಷನ್ ಆಗಿ ಜೀವಕ್ಕೆ ಅಪಾಯವಾಗುವ ಸಂಭವವಿರುತ್ತದೆ. ಅಂತಹದರಲ್ಲಿ ಕರ್ತವ್ಯದಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಹರಿದ ಚಪ್ಪಲಿಯನ್ನು ಹೊಲಿಯಲು ಶಸ್ತ್ರಚಿಕಿತ್ಸೆಗೆ ಬಳಸುವ ಸರ್ಜಿಕಲ್ ಸೂಜಿ ಮತ್ತು ದಾರವನ್ನು ಬಳಸಿದ್ದಾನೆ. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral video)ಆಗಿದೆ. ಆದರೆ ಈ ಬಗ್ಗೆ ನೆಟ್ಟಿಗರು ಕಳವಳವನ್ನು ವ್ಯಕ್ತಪಡಿಸುವ ಬದಲು ತಮಾಷೆ ಮಾಡಿದ್ದಾರೆ.ಆಸ್ಪತ್ರೆಯ ಬಟ್ಟೆಗಳನ್ನು ಧರಿಸಿದ್ದ ವಿದ್ಯಾರ್ಥಿಯು ಶಸ್ತ್ರಚಿಕಿತ್ಸೆಯ ಸೂಜಿ ಮತ್ತು ದಾರದಿಂದ ಚಪ್ಪಲಿಯನ್ನು ಹೊಲಿಯುವುದು
ವಿಡಿಯೊದಲ್ಲಿ ಸೆರೆಯಾಗಿದೆ.
ವ್ಯಕ್ತಿಯು ರೋಗಿಯು ಮಲಗಿದ್ದ ಹಾಸಿಗೆಯ ಪಕ್ಕದ ಮೇಜಿನ ಮೇಲೆ ತನ್ನ ಕಾಲನ್ನು ಇರಿಸಿ ತನ್ನ ಮುರಿದ ಪಾದರಕ್ಷೆಗಳ ಪಟ್ಟಿಯನ್ನು ಎಚ್ಚರಿಕೆಯಿಂದ ಹೊಲಿದಿದ್ದಾನೆ. ಸಣ್ಣ ಶಸ್ತ್ರಚಿಕಿತ್ಸೆ ಮಾಡುತ್ತಿರುವಂತೆ ಲೂಪ್‍ಗಳನ್ನು ಬಿಡಿಸಿ, ಹರಿದ ಪಟ್ಟಿಗಳನ್ನು ಸರಿಪಡಿಸಲು ದಾರವನ್ನು ಬಳಸಿದ್ದಾನೆ. ತನ್ನ ಫೇಸ್ ಮಾಸ್ಕ್ ಮತ್ತು ಸರ್ಜಿಕಲ್ ಹೆಡ್ ಕವರ್‌ನೊಂದಿಗೆ, ಅವನು ವೈದ್ಯಕೀಯ ಉಪಕರಣಗಳನ್ನು ಬಳಸಿಕೊಂಡು ಚಪ್ಪಲಿಯನ್ನು ಹೊಲಿದಿದ್ದಾನೆ. ಆದರೆ ಈ ಘಟನೆ ನಡೆದ ಆಸ್ಪತ್ರೆಯ ನಿಖರವಾದ ಸ್ಥಳ ತಿಳಿದಿಲ್ಲ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಇದನ್ನು ಕಂಡು ಕೆಲವರು ಕಳವಳವನ್ನು ವ್ಯಕ್ತಪಡಿಸುವ ಬದಲು ತಮಾಷೆ ಮಾಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಜನರು ನಗೆ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಅದೇ ಶಸ್ತ್ರಚಿಕಿತ್ಸೆಯ ಸೂಜಿ ಮತ್ತು ದಾರವನ್ನು ನಂತರ ಮಾನವ ದೇಹದ ಮೇಲೆ ಬಳಸಿದರೆ ಏನು ಅಪಾಯ ಸಂಭವಿಸುತ್ತದೆ ಎಂಬ ಬಗ್ಗೆ ಯಾರು ಕೂಡ ಪ್ರಶ್ನೆ ಮಾಡದೇ ಇರುವುದು ವಿಪರ್ಯಾಸ!
"ವೈದ್ಯರು ಚಮ್ಮಾರರಾಗಿದ್ದಾರೆ” ಎಂದು ಕಾಮೆಂಟ್‍ನಲ್ಲಿ ಬರೆಯಲಾಗಿದೆ. "ಅವರು ಈಗಷ್ಟೇ ಅಭ್ಯಾಸ ಮಾಡುತ್ತಿದ್ದಾರೆ" ಎಂದು ಇನ್ನೊಬ್ಬರು ಹೇಳಿದ್ದಾರೆ. ನೆಟ್ಟಿಗರೊಬ್ಬರು, “ವಿದ್ಯಾರ್ಥಿ ಸರ್ಜರಿ ಮಾಡಿ ಹೊಲಿಗೆ ಹಾಕುವುದನ್ನು ಚಪ್ಪಲಿ ಬಳಸಿ ಕಲಿಯುತ್ತಿದ್ದಾರೆ” ಎಂದು ತಮಾಷೆ ಮಾಡಿದ್ದಾರೆ.
ಆಸ್ಪತ್ರೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಇದೆ ಮೊದಲಲ್ಲ. ಈ ಹಿಂದೆ ಅಲ್ವಾರ್‌ನ ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಯ ಗುತ್ತಿಗೆ ವಾರ್ಡ್ ಬಾಯ್ ತನ್ನ ಸೋಶಿಯಲ್ ಮೀಡಿಯಾ ರೀಲ್‍ಗಳಿಗಾಗಿ ರೋಗಿಗಳಿಗೆ ಚುಚ್ಚುಮದ್ದನ್ನು ನೀಡುವುದು ಮತ್ತು ಐವಿ ಡ್ರಿಪ್‍ಗಳನ್ನು ಹಾಕಿದ್ದ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಘಟನೆಯನ ನಂತರ ಆತನನ್ನು ತಕ್ಷಣ ಕೆಲಸದಿಂದ ವಜಾಗೊಳಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ನಮಗೇನೂ ಮಾಡಬೇಡಿ.. ಸೈನಿಕರನ್ನು ಉಗ್ರರೆಂದು ಭಾವಿಸಿ ಪ್ರಾಣ ಭಿಕ್ಷೆ ಬೇಡಿದ ಮಹಿಳೆ
ವರದಿಯ ಪ್ರಕಾರ, ಯುವಕನನ್ನು ಆಸ್ಪತ್ರೆಯ ತುರ್ತು ಆಘಾತ ಘಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿತ್ತು. ಆದರೆ ಆತ ಆಸ್ಪತ್ರೆಯಲ್ಲಿ ತನ್ನ ಕೆಲಸ ಮಾಡುವುದನ್ನು ಬಿಟ್ಟು ರೀಲ್ಸ್ ಮಾಡುವುದರಲ್ಲೇ ನಿರತನಾಗಿದ್ದನು. ಈ ವಿಡಿಯೊ ವೈರಲ್ ಆದ ಕೂಡಲೇ, ಆಸ್ಪತ್ರೆಯ ಆಡಳಿತವು ತಕ್ಷಣ ಕ್ರಮ ಕೈಗೊಂಡು ಅವನನ್ನು ಕೆಲಸದಿಂದ ತೆಗೆದುಹಾಕಿದೆ.