ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shankarnayarana Bhat Column: ಹೇಯ ಕೃತ್ಯದ ಹಿಂದಿನ ಶಕ್ತಿಗಳನ್ನು ಶಿಕ್ಷಿಸಬೇಕು

ಇಂದು ನಮ್ಮ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗ್ರಹಿಸಿದರೆ ಇದು ಅರ್ಥವಾಗು ವಂತಿದೆ. ದೇಶದಲ್ಲಿ ಶಾಂತಿ, ನೆಮ್ಮದಿ, ಪ್ರಗತಿ, ಇದ್ದರೆ ಕೆಲವರಿಗೆ ಆತಂಕ ಅಥವಾ ಭಯ. ಹೀಗಾಗಿ ಭಯೋತ್ಪಾದ ಕರಿಗೇ ಕುಮ್ಮಕ್ಕು ಕೊಡುತ್ತಿರುವುದು. ಇಲ್ಲವೆಂದರೆ, ಕಳೆದೆರಡು ವರ್ಷಗಳಿಗಿಂತ ಹೆಚ್ಚು ಕಾಲ, ಅತ್ಯಂತ ಶಾಂತವಾಗಿದ್ದು, ಕಾಶ್ಮೀರಿಗಳು ನೆಮ್ಮದಿಯ ಉಸಿರಾಡುತ್ತಿರುವಾಗ, ಒಮ್ಮಿಂ ದೊಮ್ಮೆಲೇ ದಾಳಿಗೆ ಮುಂದಾ ಗುತ್ತಿರುವ ಉಗ್ರರು ತಮ್ಮ ಇರುವಿಕೆಯ ಗುರುತು ಹಚ್ಚಿಸುತ್ತಿರು ವುದರ ಹಿಂದಿನ ಉದ್ದೇಶವೂ ಸ್ಪಷ್ಟ

ಹೇಯ ಕೃತ್ಯದ ಹಿಂದಿನ ಶಕ್ತಿಗಳನ್ನು ಶಿಕ್ಷಿಸಬೇಕು

Profile Ashok Nayak Apr 24, 2025 11:59 AM

ಅಭಿಮತ

ಶಂಕರನಾರಾಯಣ ಭಟ್

ಜಮ್ಮು -ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸದಲ್ಲಿ ಪತಿಯನ್ನು ಕಳೆದುಕೊಂಡ ಶಿವಮೊಗ್ಗದ ಪಲ್ಲವಿ ರಾವ್ ಅವರ ಮಾತನ್ನು ಕೇಳಿಸಿಕೊಂಡರೆ ನಾಡಿಮಿಡಿತವೇ ನಿಂತಂತಾಯಿತು !

ಕಾಶ್ಮೀರದ ಪಹಲ್ಗಾಮ್‌ನ ಅತಿ ರಮಣೀಯ ಸ್ಥಳ ಬೈಸಾರನ್ ಕಣಿವೆಗೆ ಭೇಟಿ ನೀಡಿದಾಗ, ತಮ್ಮ ಬಳಿ ಬಂದ ಉಗ್ರರು ‘ನಿಮ್ಮದು ಯಾವ ಧರ್ಮ?’ ಎಂದು ಕೇಳುತ್ತ, ಏಕಾಏಕಿ ತನ್ನ ಪತಿಯ ತಲೆಗೇ ಗುರಿ ಇಟ್ಟು ಗುಂಡಿನ ದಾಳಿ ನಡೆಸಿಯೇ ಬಿಟ್ಟರು’ ಎಂಬುದನ್ನು ನೋಡುತ್ತ ತಮ್ಮನ್ನೂ ಕೊಂದು ಬಿಡಿ ಎಂದಾಗ ಅವರಾಡಿದ ಮಾತು ಇನ್ನೂ ಆಘಾತಕಾರಿ. ‘ನಿಮ್ಮನ್ನು ಕೊಲ್ಲಲ್ಲ, ಹೋಗಿ ನಿಮ್ಮ ಮೋದಿ ಗೆ ಹೇಳಿ’ ಎಂದಿರುವುದು ಅವರ ಉದ್ದೇಶವೂ ಸ್ಪಷ್ಟವಾದಂತಿದೆ. ಇದೇ ರೀತಿ ಇನ್ನೊಬ್ಬ ಹಾವೇರಿ ಮೂಲದ ಭರತ್ ಭೂಷಣ್. ಅಷ್ಟೇ ಅಲ್ಲ.ಕೊಚ್ಚಿಯಲ್ಲಿ ನೌಕಾಪಡೆ ಅಧಿಕಾರಿಯಾಗಿದ್ದ ವಿನಯ್ ಮತ್ತು ದಂಪತಿ , ಎಪ್ರಿಲ್ 16 ರಂದು ವಿವಾಹವಾಗಿದ್ದು, ಹನಿಮೂನಿಗೆ ಹೋಗಿದ್ದವರಲ್ಲಿ ಪತಿ ಯನ್ನೇ ಕೊಂದು ಪತ್ನಿಯನ್ನು ಹಾಗೇ ಬಿಟ್ಟಿರುವುದು ಏನನ್ನು ಸೂಚಿಸುತ್ತದೆ ? ಇಷ್ಟರ ಮಧ್ಯೆ, ವಿದೇಶಿ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ, ತಮ್ಮ ಪ್ರವಾಸ ಮೊಟಕುಗೊಳಿಸಿ ವಾಪಸ್ಸಾಗಿ ‘ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ’ ಅಂದಿದ್ದಾರೆ.

ಇದನ್ನೂ ಓದಿ: Roopa Gururaj Column: ಶತಪದಿ ಹುಳದ ನೂರು ಕಾಲುಗಳ ಲೆಕ್ಕ

ಇಷ್ಟು ಹೇಳಿ ಸುಮ್ಮನಾಗದ ಪ್ರಧಾನಿ ’ ಉಗ್ರರನ್ನು ಸಂಹರಿಸುವ ಶಪಥ’ ಮಾಡಿರುವುದು, ಸಮಸ್ಯೆ ಯ ಅತಿರೇಕದ ಸಾಕ್ಷಿ. ಇದು ಈ ರೀತಿ ಆಗುತ್ತಿರಲು ಮುಖ್ಯ ಕಾರಣ ನಮ್ಮ ದೇಶದ ಕೆಲ ಬೇಜವಾಬ್ದಾರಿಗಳಿಂದ ಎಂಬುದೂ ನಿಜ. ತಮ್ಮನ್ನು ರಕ್ಷಿಸುವವರೂ ಭಾರತದ ಇದ್ದಾರೆ ಎಂಬ ಸ್ಪಷ್ಟ ಕಲ್ಪನೆ ಈ ಉಗ್ರವಾದಿಗಳಲ್ಲೂ ಇದ್ದಿರಲೇ ಬೇಕು.

ಇಂದು ನಮ್ಮ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗ್ರಹಿಸಿದರೆ ಇದು ಅರ್ಥವಾಗು ವಂತಿದೆ. ದೇಶದಲ್ಲಿ ಶಾಂತಿ, ನೆಮ್ಮದಿ, ಪ್ರಗತಿ, ಇದ್ದರೆ ಕೆಲವರಿಗೆ ಆತಂಕ ಅಥವಾ ಭಯ. ಹೀಗಾಗಿ ಭಯೋತ್ಪಾದಕರಿಗೇ ಕುಮ್ಮಕ್ಕು ಕೊಡುತ್ತಿರುವುದು. ಇಲ್ಲವೆಂದರೆ, ಕಳೆದೆರಡು ವರ್ಷಗಳಿಗಿಂತ ಹೆಚ್ಚು ಕಾಲ, ಅತ್ಯಂತ ಶಾಂತವಾಗಿದ್ದು, ಕಾಶ್ಮೀರಿಗಳು ನೆಮ್ಮದಿಯ ಉಸಿರಾಡುತ್ತಿರುವಾಗ, ಒಮ್ಮಿಂ ದೊಮ್ಮೆಲೇ ದಾಳಿಗೆ ಮುಂದಾ ಗುತ್ತಿರುವ ಉಗ್ರರು ತಮ್ಮ ಇರುವಿಕೆಯ ಗುರುತು ಹಚ್ಚಿಸುತ್ತಿರು ವುದರ ಹಿಂದಿನ ಉದ್ದೇಶವೂ ಸ್ಪಷ್ಟ.

ನಮ್ಮ ದೇಶದಲ್ಲಿ ಒಂದಲ್ಲ ಒಂದು ರೀತಿಯ ಗಲಭೆ, ದಂಗೆ, ಹತ್ಯೆ, ದರೋಡೆ, ಕಳುವು ನಡೆಯು ತ್ತಿದ್ದರೇನೇ ಕೆಲವರಿಗೆ ಶಾಂತಿ -ನೆಮ್ಮದಿ !? ಕಾಶ್ಮೀರದಲ್ಲಿ ನಡೆದ ಹೇಯ ಕೃತ್ಯದ ಹಿಂದಿರುವವರನ್ನು ಕೇವಲ ನ್ಯಾಯಾಲಯದ ಕಟಕಟೆಗೆ ತಂದರೆ ಸಾಲದು. ಅವರಿಗೆಲ್ಲ ಅವರು ಮಾಡಿದ ಕೃತ್ಯದ ಪರಿ ಚಯ ಮಾಡಿಸಿದಾಗಲೇ ಇಂತಹ ಹೀನ ಕೃತ್ಯಕ್ಕೆ ಕಡಿವಾಣ ಬಿದ್ದೀತು. ಒಮ್ಮೆ ನ್ಯಾಯಾಲಯ ತಲುಪುವ ಪ್ರಕರಣಗಳ ಇತ್ಯರ್ಥ ಎಂದಾದೀತು ಎಂಬುದೂ ತಿಳಿಯದೇ ಇರುವಾಗ, ಅಲ್ಲಿಯ ತನಕ ಕಾಯುವುದರಲ್ಲಿ ಏನಾದರೂ ಅರ್ಥವಿದೆಯೇ ? ಪಲ್ಲವಿ ರಾವ್ ಮತ್ತು ವಿನಯ ಅವರ ಪತ್ನಿಯರೇ ಜೀವಂತವಾಗಿದ್ದು, ಅವರೇ ಜೀವಂತ ಸಾಕ್ಷಿ ಎಂಬಲ್ಲಿ ಇನ್ನೂ ಬೇರೆ ಸಾಕ್ಷಿ ಬೇಕೆ ? ಇಂತಹ ಪ್ರಕರಣಗಳಲ್ಲಿ, ಸಾಕ್ಷಿ, ಪುರಾವೆಗಳ ನೆಪ ಹೇಳುವ ಅವಶ್ಯಕತೆಯೂ ಇರದು.

ಎಸಗಿದ ಕೃತ್ಯ ಅತ್ಯಂತ ಅಮಾನವೀಯ ಎಂಬಲ್ಲಿ, ಉಗ್ರರಿಗೂ ಅದೇ ರೀತಿ ಟ್ರೀಟ್ಮೆಂಟ್ ಸಿಗಬೇಕ ಲ್ಲವೇ ? ಪೈಶಾಚಿಕ ಕೃತ್ಯಕ್ಕೆ ಇನ್ನೂ ಬೇರೆ ದಾರಿ ಹುಡುಕುತ್ತ ಸಮಯ ವ್ಯರ್ಥವಾಗಲೇಬಾರದು. ಎಲ್ಲಿಯ ತನಕ ಉಗ್ರರನ್ನು ಮಟ್ಟ ಹಾಕಲು ಸಾಧ್ಯವಿಲ್ಲವೋ, ಅಲ್ಲಿಯ ತನಕ ಭಾರತೀಯರಿಗೆ ನೆಮ್ಮದಿ ಸಿಗದು. ಅಷ್ಟೇ ಅಲ್ಲ, ಭಾರತವು ಭಾರತವಾಗಿ ಅಥವಾ ಹಿಂದುಸ್ಥಾನವಾಗಿ ಉಳಿಯ ಲಾಗದು.

ಇನ್ನು ಕೆಲ ದಿನ ಇದೇ ಉಗ್ರರು, ತಮ್ಮಷ್ಟಕ್ಕೇ ತಾವು ಇದ್ದು, ಪ್ರಕರಣವನ್ನೇ ಮರೆಸುವ ಪ್ರಯತ್ನ ಮಾಡಲೂ ಬಹುದು. ಅದಕ್ಕೂ ಅವಕಾಶ ಸಿಗದಂತೆ ಆಗಬೇಕು. ಕಬ್ಬಿಣ ಸಾಕಷ್ಟು ಕಾದು ಕೆಂಪಾಗಿದೆ, ಈಗ ಬಡಿಯದಿದ್ದರೆ ಮುಂದೆ ತಂಪಾದ ಮೇಲೆ ಬಡಿಯಲೂ ಬಾರದು, ನಮಗೆ ಹೇಗೆ ಬೇಕೋ ಹಾಗೆ ರೂಪಿಸಿಕೊಳ್ಳಲೂ ಆಗದು. ಸಮಯ ವ್ಯರ್ಥಮಾಡದೇ, ನಮ್ಮ ಆಳುಗರು ಇಚ್ಛಾಶಕ್ತಿಯೊಂದಿಗೆ, ಒಂದು ಅಂತಿಮ ನಿರ್ಧಾರ ಕೈಗೊಳ್ಳಲೂ ಸಮಯ ಪಕ್ವವಾದಂತಿದೆ. ಉಗ್ರ ರನ್ನು ಸದೆಬಡಿದು, ಅವರ ನಾಮಾವಾಶೇಷ ಮಾಡಬೇಕಿದೆ.