ಸರಕಾರಕ್ಕೆ ಲೀಲಾವತಿ ನೀಡಿದ ತಪ್ಪು ಮಾಹಿತಿ
ವಿಶ್ವವಾಣಿ ಕಾಳಜಿ- ನಾಡಗೀತೆ ನಲಿಯಲಿ
ವಿಶೇಷ ವರದಿ: ರಂಜಿತ್ ಎಚ್.ಅಶ್ವತ್ಥ ಬೆಂಗಳೂರು
ನಾಡಗೀತೆ ಅಂತಿಮ ವಿವಾದ ಇದೀಗ ಮತ್ತೊಂದು ಮಜಲಿಗೆ ಹೋಗಿದ್ದು, ಎಚ್.ಆರ್.ಲೀಲಾವತಿ ಅವರ ನೇತೃತ್ವದ ಸಮಿತಿ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಸರಕಾರಕ್ಕೆ ತಪ್ಪು ಮಾಹಿತಿ ಸಲ್ಲಿಕೆಯಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಆರಂಭದಿಂದಲೂ ಮೈಸೂರು ಅನಂತಸ್ವಾಮಿ ಅವರು ಸ್ವರ ಸಂಯೋಜನೆ ಮಾಡಿರುವ ಅಥವಾ ಸಿ.ಅಶ್ವತ್ಥ್ ಅವರು ಸಂಯೋ ಜಿಸಿರುವ ಧಾಟಿಯನ್ನು ಅಂತಿಮಗೊಳಿಸಬೇಕು ಎನ್ನುವ ಬಗ್ಗೆ ಎರಡೂ ಕಡೆಯವರು ಹಗ್ಗಜಗ್ಗಾಟ ಮಾಡುತ್ತಿದ್ದಾರೆ. ಆದರೆ ಮೈಸೂರು ಅನಂತಸ್ವಾಮಿ ಅವರು ನಾಡಗೀತೆ ಎಂದು ‘ಜಯ ಭಾರತ ಜನನೀಯ ತನುಜಾತೆ’ ಎನ್ನುವ ಸಾಹಿತ್ಯ ನಾಡಗೀತೆ ಎಂದು ಘೋಷಣೆ ಯಾಗುವ ಮೊದಲೇ, ಸ್ವರ ಸಂಯೋ ಜನೆ ಮಾಡಿದ್ದಾರೆ.
ಆದರೆ ಇಡೀ ಹಾಡಿಗೆ ಮಾಡಿಲ್ಲ. ಆದರೂ ಎಚ್. ಆರ್.ಲೀಲಾವತಿ ಅವರ ಸಮಿತಿ, ಅನಂತಸ್ವಾಮಿ ಅವರು ಇಡೀ ಗೀತೆಗೆ ಸಂಯೋಜನೆ ಮಾಡಿದ್ದಾರೆ ಎಂದು ವರದಿ ಹಾಗೂ ಸಿಡಿ ನೀಡುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರಕಾರ ವನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎನ್ನುವ ಅಸಮಾಧಾನವನ್ನು ಕೆಲ ಕಲಾವಿದರು ಹೊರಹಾಕಿದ್ದಾರೆ. ಲೀಲಾವತಿ ಅವರ ನೇತೃತ್ವ ದಲ್ಲಿ ರಚಿಸಿರುವ ಸಮಿತಿಯವರು, ಅನಂತಸ್ವಾಮಿ ಅವರು ಹಾಡಿರುವ ಎರಡು ಚರಣವನ್ನು ಉಳಿದ ಚರಣ ಗಳಿಗೂ ಮುಂದು ವರಿಸಿ, ಇದನ್ನು ಅನಂತಸ್ವಾಮಿ ಅವರೇ ರಚಿಸಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಇದಕ್ಕೆ ದಾಖಲೆಗಳು ಎಲ್ಲಿವೆ? ೧೯೯೩ರಲ್ಲಿ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ನಡೆದ ಸಭೆಯಲ್ಲಿ ಮೈಸೂರು ಅನಂತಸ್ವಾಮಿ ಹಾಗೂ ಅಶ್ವತ್ಥ್ ಅವರ ಸಮ್ಮುಖದಲ್ಲಿಯೇ ಈ ಬಗ್ಗೆ ಚರ್ಚೆಯಾಗಿದ್ದರೂ, ಪೂರ್ಣ ಹಾಡಿಗೆ ಅನಂತಸ್ವಾಮಿ ಅವರು ಸಂಗೀತ
ನೀಡಿದ್ದಾರೆ ಎಂದು ವರದಿ ನೀಡುವುದು ಎಷ್ಟು ಸರಿ ಎನ್ನುವುದು ಅಶ್ವತ್ಥ್ ಕಡೆಯವರ ವಾದವಾಗಿದೆ.
ಮೂರು ವರದಿಯಿದ್ದರೂ ನಾಲ್ಕನೇ ವರದಿ ಏಕೆ?
‘ವಿಶ್ವವಾಣಿ’ಯೊಂದಿಗೆ ಮಾತನಾಡಿದ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಅವರು, ಮೈಸೂರು ಅನಂತ ಸ್ವಾಮಿ ಅವರ ಸ್ವರ ಸಂಯೋಜನೆಯ ನಾಡಗೀತೆಯನ್ನು ಅಂತಿಮಗೊಳಿಸಬಾರದು ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಸರಕಾರ ಪೂರ್ಣ ಸಾಹಿತ್ಯವನ್ನು ನಾಡಗೀತೆಯಲ್ಲಿ ಅಂತಿಮಗೊಳಿಸಬೇಕು ಎನ್ನುವ ಯೋಚನೆಯಲ್ಲಿದೆ. ಆದರೆ ಅನಂತಸ್ವಾಮಿ
ಅವರು ಪೂರ್ಣ ಸಾಹಿತ್ಯಕ್ಕೆ ಸಂಗೀತ ರಚನೆ ಮಾಡಿಲ್ಲವೆಂದ ಮೇಲೆ, ಅವರ ಧಾಟಿಯನ್ನು ಅಂತಿಮಗೊಳಿಸಲು ಹೇಗೆ ಸಾಧ್ಯ? ಒಂದು ವೇಳೆ ಈ ರೀತಿ ಮಾಡಿ ಅಧಿಕೃತ ಘೋಷಣೆ ಮಾಡಿದಾಗ, ಯಾರಾದರೂ ನ್ಯಾಯಾಲಯದ ಮೊರೆ ಹೋದರೆ ನಾಡಗೀತೆ, ಸರಕಾರ ಹಾಗೂ ಇಬ್ಬರು ಮಹಾನ್ ಸಂಗೀತ ಪ್ರತಿಭೆಗೆ ಅವಮಾನ ಮಾಡಿದಂತಾ ಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಆದ್ದರಿಂದ ಸರಕಾರ ಮೈಸೂರು ಅನಂತಸ್ವಾಮಿ ಅಥವಾ ಸಿ.ಅಶ್ವತ್ಥ್ ಇಬ್ಬರಲ್ಲಿ ಯಾರ ಧಾಟಿಯನ್ನಾದರೂ ಅಂತಿಮಗೊಳಿಸಲಿ. ಆದರೆ ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಿ. ಅನಂತಸ್ವಾಮಿ ಅವರ ಧಾಟಿ ಅಂತಿಮವಾದರೆ, ಅವರು ರಚಿಸಿರುವಷ್ಟೇ ಹಾಡನ್ನು ಉಳಿಸಿಕೊಳ್ಳಬೇಕು. ಅದರ ಹೊರತಾಗಿ, ಅವರ ಹೆಸರಲ್ಲಿ ಬೇರೆಯವರು ಬಾಕಿ ೨.೩೦ ನಿಮಿಷಕ್ಕೆ ನಿಗದಿಪಡಿಸಲಾಗಿದೆ
ನಾಡಗೀತೆಯ ಕಾಲಮಿತಿ ೨.೩೦ ನಿಮಿಷವಿರಬೇಕು ಎನ್ನುವ ಸೂಚನೆಯನ್ನು ಸರಕಾರ ನೀಡಿದ ಬಳಿಕ, ಅಶ್ವತ್ಥ್ ಅವರ
ಧಾಟಿಯ ಸ್ವರ ಸಂಯೋಜನೆ ಯನ್ನು ೩.೧೮ ನಿಮಿಷದಿಂದ ೨.೨೭ ಸೆಕೆಂಡ್ಗೆ ಇಳಿಸಿ ನೀಡಲಾಗಿದೆ. ಆದರೆ ಸಾಹಿತ್ಯಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಮೈಸೂರು ಅನಂತಸ್ವಾಮಿ ಅವರು ರಚಿಸಿರುವ ಧಾಟಿಯೇ ಅಂತಿಮವಾಗಬೇಕು ಎಂದರೆ, ಒಂದು ನಿಮಿಷದೊಳಗೆ ಮುಗಿಯಲಿದೆ. ಆದರೆ ಯಾವುದಾದರೂ ಒಂದನ್ನು ಅಂತಿಮಗೊಳಿಸಿ ಎನ್ನುವ ಆಗ್ರಹವನ್ನು ಕಿಕ್ಕೇರಿ ಕೃಷ್ಣ ಮೂರ್ತಿ ಮಂಡಿಸಿದ್ದಾರೆ.
ಸಾಹಿತ್ಯಕ್ಕೆ ಸ್ವರಸಂಯೋಜನೆ ಮಾಡಿದರೆ ಅದಕ್ಕೆ ಅರ್ಥವಿರುವುದಿಲ್ಲ ಎಂದಿದ್ದಾರೆ. ಇನ್ನು ಸುನೀಲ್ಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗುವ ಮೊದಲು ಮೂರು ಸಮಿತಿಗಳು ಇದೇ ವಿಷಯಕ್ಕೆ ರಚನೆಯಾಗಿದ್ದವು. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ, ಚನ್ನವೀರ ಕಣವಿ ಅವರಂತ ಶ್ರೇಷ್ಠರು ಈಗಾಗಲೇ ತಮ್ಮ ವರದಿಯನ್ನು ನೀಡಿರುವಾಗ ಅದನ್ನು ಬಿಟ್ಟು ಇದೀಗ ಎಚ್.ಆರ್.ಲೀಲಾವತಿ ಅವರ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಿ, ಅದರಿಂದ ವರದಿ ತರಿಸಿಕೊಳ್ಳುವ ಅನಿವಾರ್ಯತೆ ಏನಿತ್ತು ಎಂದಿದ್ದಾರೆ.
***
ನಾನು ಎಂದಿಗೂ ಮೈಸೂರು ಅನಂತಸ್ವಾಮಿ ಅವರ ಧಾಟಿಗೆ ವಿರೋಧಿಸಿಲ್ಲ. ಆದರೆ ಅವರು ಪೂರ್ಣ ಗೀತೆಗೆ ರಚನೆ ಮಾಡಿಲ್ಲ.
ಆದ್ದರಿಂದ ಅನಂತಸ್ವಾಮಿ ಅವರ ಧಾಟಿಯನ್ನು ಅಂತಿಮಗೊಳಿಸಿದರೆ, ಒಂದು ಪಲ್ಲವಿ ಹಾಗೂ ಎರಡು ಚರಣವನ್ನು ಅಧಿಕೃತ ಗೊಳಿಸಿಲ್ಲ. ಪೂರ್ಣ ನಾಡಗೀತೆಯನ್ನು ಹಾಡಬೇಕು ಎಂದರೆ, ಸಿ.ಅಶ್ವತ್ಥ್ ಅವರ ಧಾಟಿಯನ್ನು ಅಂತಿಮಗೊಳಿಸಿ.
– ಕಿಕ್ಕೇರಿ ಕೃಷ್ಣಮೂರ್ತಿ ಅಧ್ಯಕ್ಷರು, ಸುಗಮ
ಸಂಗೀತ ಪರಿಷತ್