Sunday, 23rd June 2024

ಪ್ರಥಮ್‌ಗೆ ಸಾಥ್ ನೀಡಿದ ಶ್ರೀಮನ್ನಾರಾಯಣ !

ಕನ್ನಡದ ಕಿರುತೆಯ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ನಟ ಪ್ರಥಮ್, ಒಳ್ಳೆೆಯ ಹುಡುಗ ಅಂತಲೇ ಜನಜನಿತವಾದವರು.‘ಬಿಗ್‌ಬಾಸ್’ನಲ್ಲಿ ಎಲ್ಲರ ಮನಗೆದ್ದರು. ವಿಜೇತರಾಗಿಯೂ ಹೊರಹೊಮ್ಮಿಿದರು. ಕನ್ನಡದ ಬಗ್ಗೆೆ ಅಪಾರ ಗೌರವ ಹೊಂದಿದ್ದ ಪ್ರಥಮ್‌ನನ್ನು ಕನ್ನಡ ಚಿತ್ರರಂಗ ಕೈಬೀಸಿ ಕರೆಯಿತು. ತನ್ನ ಚಾಕಚಕ್ಯತೆಯ ಮೂಲಕವೇ ಎಲ್ಲರನ್ನೂ ನಗಿಸಿದ್ದ ಪ್ರಥಮ್ ಚಿತ್ರರಂಗಕ್ಕೆೆ ಎಂಟ್ರಿಿಕೊಟ್ಟಿಿದ್ದು ಸಿನಿಪ್ರಿಿಯರಲ್ಲಿ ಸಂತಸವನ್ನು ತಂದಿತು. ತೆರೆಯ ಮೇಲೆ ‘ದೇವರಂಥ ಮನುಷ್ಯ’ನಾದ
ಒಳ್ಳೆೆ ಹುಡುಗ ಮೊದಲ ಚಿತ್ರದಲ್ಲಿಯೇ ಎಲ್ಲರನ್ನೂ ರಂಜಿಸಿದರು. ಈ ಚಿತ್ರ ಯಾವ ಮಟ್ಟಕ್ಕೆೆ ಹಿಟ್ ಆಯಿತು ಎಂದರೆ, ಇಂದಿಗೂ ಪ್ರಿಿಯರು ಈ ಚಿತ್ರದ ಹಾಡುಗಳನ್ನು ಗುನುಗನಿಸುತ್ತಾಾರೆ. ಪ್ರಥಮ್‌ಗೆ ನಾಡಿನ ಅಭಿವೃದ್ದಿಯ ಬಗ್ಗೆೆ ಯೂ ಚಿಂತನೆ ಇದೆ. ಅದೇ ದಾಟಿಯಲ್ಲಿ ಮೂಡಿಬಂದ ಚಿತ್ರವೇ, ‘ಎಂಎಲ್‌ಎ’. ಈ ಚಿತ್ರದಲ್ಲಿ ಒಬ್ಬ ಶಾಸಕನಾಗಿ ಬಣ್ಣಹಚ್ಚಿಿದರು.
ಈ ಎಲ್ಲಾಾ ಸಿನಿಮಾಗಳು ಅಷ್ಟಾಾಗಿ ಹೆಸರು ಮಾಡಿಲ್ಲವಾದರೂ ಪ್ರಥಮ್‌ನನ್ನು ಒಬ್ಬ ನಟನಾಗಿ ಗುರುತಿಸಿತು. ಸದ್ಯ ಭಯಂಕರ ನಟನಾಗಿ ‘ನಟ ಭಯಂಕರ’ ಚಿತ್ರದ ಮುಳಕ ಮತ್ತೆೆ ತೆರೆಗೆ ಬರಲು ಸಜ್ಜಾಾಗಿದ್ದಾಾರೆ. ಶೀರ್ಷಿಕೆ ಕೇಳಿದ್ಷಾಾಣ ನಮ್ಮನಗಲಿದ ಹಿರಿಯ ನಟ ವಜ್ರಮುನಿಯವರ ನಮ್ಮ ಮನದಲ್ಲಿ ಒಮ್ಮೆೆ ಹಾದು ಹೋಗುತ್ತದೆ. ಹಾಗಾದರೆ ಚಿತ್ರದಲ್ಲಿ ಅಂತಹ ವಿಶೇಷತೆ ಏನಿದೆ ಎಂಬುದು ಚಿತ್ರ ತೆರೆಗೆ ಬಂದ ಮೇಲೆ ತಿಳಿಯುತ್ತದೆ. ಒಟ್ಟಾಾರೆ ಚಿತ್ರದಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಪ್ರಥಮ್ ಅಭಿನಯದ ‘ನಟ ಭಯಂಕರ’ ಸದ್ಯ ಶೀರ್ಷಿಕೆಯ ಮೂಲಕವೇ ಸದ್ದು ಮಾಡುತ್ತಿಿದೆ. ಮುಂದೆ ಹಾಡಿನ ಮೂಲಕವೂ ರಿಂಗಣಿಸಲಿದೆ.

ಪ್ರಥಮ್‌ನ ಮತ್ತೊೊಂದು ವಿಶೇಷತೆ ಎಂತದೆ ಕಷ್ಟಪಟ್ಟು ಮಾಡಿರುವ ಸಿನಿಮಾವನ್ನು ಜನರಿಗೆ ತಲುಪಿಸಬೇಕು ಎನ್ನುವುದು ಅದಕ್ಕಾಾಗಿ ಎಂತಹ ಸಾಹಸಕ್ಕೆೆ ಬೇಕಾದರೂ ಹಾಕ್ತಾಾರೆ. ಈ ಹಿಂದೆ ತಮ್ಮ ಚಿತ್ರಕ್ಕೆೆ ಮಾಜಿ ಪ್ರಧಾನಿ ದೇವೇಗೌಡರಿಂದ ಆರ್ಶೀವಾದ ಪಡೆದಿದ್ದರು. ಅಡ್ವಾಾಣಿ ಅವರಿಂದ ಸಿನಿಮಾ ಲಾಂಚ್ ಮಾಡಿಸಿದ್ದರು. ಅದರ ಜತೆಗೆ ಜನಪ್ರಿಿಯತೆಯ ಉತ್ತುಂಗದಲ್ಲಿರುವ, ಸದಾ ಬ್ಯುಸಿಯಾಗಿರುವ ಕೈಗೆ ಸಿಗದ ಸ್ಟಾಾರ್ ನಟರಿಂದಲೂ ಸಿನಿಮಾ ಪ್ರಚಾರ ಮಾಡಿಸುತ್ತಾಾರೆ. ಈಗ, ಪ್ರಥಮ್ ನಟಿಸಿ, ನಿರ್ದೇಶಿಸಿರುವ ನಟಭಯಂಕರ ಚಿತ್ರಕ್ಕೆೆ ಸಿಂಪಲ್ ಸ್ಟಾಾರ್ ’ಅವನೇ ಶ್ರೀಮನ್ನಾಾರಾಯಣ’ ರಕ್ಷಿತ್ ಶೆಟ್ಟಿಿ ಜತೆಯಾಗಿದ್ದಾರೆ. ನಟಭಯಂಕರ ಸಿನಿಮಾದ ’ಗೀತಾ ಗೀತಾ ಗಾಂಚಲಿ ಗೀತಾ…..’ ಮೆಲೋಡಿ ಹಾಡನ್ನು ಶೆಟ್ಟಿಿ ಬಿಡುಗಡೆ ಮಾಡಲಿದ್ದಾರೆ. ಈ ವಿಚಾರದಲ್ಲಿ ’ದಬಾಂಗ್ 3’ನ್ನು ನಟಭಯಂಕರ ಮೀರಿಸಲಿದೆ ಸದ್ಯ ನಟ ರಕ್ಷಿತ್ ಶೆಟ್ಟಿಿ ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಿಲ್ಲ. ತಮ್ಮ ಸಿನಿಮಾವಾಯಿತು. ತಾವಾಯಿತು. ಎಂದು ಬ್ಯುಸಿ ಆಗಿದ್ದಾರೆ. ’ಅವನೇ ಶ್ರೀಮನ್ನಾಾರಾಯಣ’ ಎಂಬ ಪ್ಯಾಾನ್ ಇಂಡಿಯಾ ಸಿನಿಮಾ ಜತೆ ’ಚಾರ್ಲಿ 777’ ಚಿತ್ರದಲ್ಲಿಯೂ ನಟಿಸುತ್ತಿಿದ್ದಾಾರೆ. ಇಂತಹ ಸಂದರ್ಭದಲ್ಲಿ ಪ್ರಥಮ್, ರಕ್ಷಿತ್ ಶೆಟ್ಟಿಿ ಅವರನ್ನ ಭೇಟಿ ಮಾಡಿ, ಅವರಿಂದ ಆಡಿಯೋ ರಿಲೀಸ್ ಮಾಡಿಸಲು ತಯಾರಾಗಿದ್ದಾರೆ. ನಟ ಭಯಂಕರನ ಡ್ಯುಯೆಟ್ ಹಾಡನ್ನು ರಕ್ಷಿತ್ ಶೆಟ್ಟಿಿ ಕೇಳಿದ್ದಾರಂತೆ. ಹಾಡು ಕೇಳಿದ ನಂತರ ಬಹಳ ಖುಷಿಯಾದ ಸಿಂಪಲ್ ಸ್ಟಾಾರ್ ಹಾಡು ತುಂಬಾ ಚೆನ್ನಾಾಗಿದೆ ಎಂದು ಹೊಗಳಿದ್ದಾಾರೆ. ಈ ಹಾಡಿಗೆ ಅರಸು ಸಾಹಿತ್ಯ ರಚಿಸಿದ್ದು ಸಂಚಿತ್ ಹೆಗ್ಡೆೆ ದನಿಯಲ್ಲಿ ಮೂಡಿಬಂದಿದೆ. ಪ್ರದ್ಯೋೋಥನ್ ಸಂಗೀತ ನೀಡಿದ್ದಾರೆ. ’ರನ್ ಅಂಟೋನಿ’ ಚಿತ್ರದಲ್ಲಿ ನಟಿಸಿದ್ದ ಸುಶ್ಮಿಿತಾ ನಾಯಕಿಯಾಗಿ ನಟಿಸಿದ್ದಾರೆ. ಡೈಲಾಗ್ ಕಿಂಗ್ ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜತೆ ಲೀಲಾವತಿ, ಕುರಿ ಪ್ರತಾಪ್, ಶೋಭರಾಜ್, ಪ್ರಕಾಶ್ ರಾವ್, ಬಿರಾದರ್ ಮತ್ತಿಿತರರು ಚಿತ್ರದ ತಾರಾಗಣದಲ್ಲಿದ್ದಾಾರೆ.

Leave a Reply

Your email address will not be published. Required fields are marked *

error: Content is protected !!