Friday, 13th December 2024

‘3 ಈಡಿಯೆಟ್ಸ್’ ನಟ ಅಖಿಲ್ ಮಿಶ್ರಾ ನಿಧನ

ಮುಂಬೈ: 3 ಈಡಿಯೆಟ್ಸ್ ಸಿನಿಮಾ ಖ್ಯಾತಿಯ ನಟ ಅಖಿಲ್ ಮಿಶ್ರಾ ಮುಂಬೈನ ನಿವಾಸದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಮಿಶ್ರಾ ಅವರಿಗೆ ರಕ್ತದ ಒತ್ತಡದ ಸಮಸ್ಯೆ ಇತ್ತು. ಮನೆಯಲ್ಲಿ ಬಿದ್ದು ತೀವ್ರ ಗಾಯಗಳಾಗಿ ಅವರು ಮೃತಪಟ್ಟಿ ದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಕುರ್ಚಿಯ ಮೇಲಿಂದ ಬಿದ್ದು ತಲೆ ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಗಾಯಗಳಾಗಿತ್ತು ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ವೈದ್ಯರ ಶ್ರಮದ ಹೊರತಾಗಿಯೂ ಅವರು ನಿಧನರಾಗಿದ್ದಾರೆ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

ಮಿಶ್ರಾ ನಿಧನರಾದಾಗ ಪತ್ನಿ ಬರ್ನರ್ಟ್ ಚಿತ್ರೀಕರಣಕ್ಕಾಗಿ ಹೈದರಾಬಾದ್ನಲ್ಲಿದ್ದರು. ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ ಮಿಶ್ರಾ 3 ಈಡಿಯಟ್ಸ್ನಲ್ಲಿ ಲೈಬ್ರೇರಿಯನ್ ದುಬೆ ಪಾತ್ರಕ್ಕಾಗಿ ನೆನಪಿನಲ್ಲಿ ಉಳಿದಿದ್ದಾರೆ.

ಅವರು ಡಾನ್, ಗಾಂಧಿ, ಮೈ ಫಾದರ್, ಉತ್ತರನ್, ಉಡಾನ್ ಮತ್ತು ಶ್ರೀಮಾನ್ ಶ್ರೀಮತಿ ಮುಂತಾದ ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ.