Wednesday, 11th December 2024

ಮಲ್ಟಿ ಸ್ಟಾರರ್‌ ಮೂವೀ ಸೂರ್ಯವಂಶಿ ಬಿಡುಗಡೆ ದಿನಾಂಕ ಫಿಕ್ಸ್‌

ಮುಂಬೈ: ಬಾಲಿವುಡ್‌ ನಟರಾದ ಅಜಯ್ ದೇವಗನ್, ಅಕ್ಷಯ್ ಕುಮಾರ್, ನಟಿ ಕತ್ರಿನಾ ಕೈಫ್ ಮತ್ತು ರಣವೀರ್ ಕಪೂರ್​ ನಟಿಸಿರುವ ಹಿಂದಿ ಚಿತ್ರ ‘ಸೂರ್ಯವಂಶಿ’ಯ ಬಿಡುಗಡೆ ಕುರಿತಂತೆ ಮಹತ್ವ ವಿಚಾರವನ್ನು ನಿರ್ಮಾಪಕ ಕರಣ್ ಜೋಹರ್‌ ತಿಳಿಸಿದ್ದಾರೆ.

‘ದ ವೇಯ್ಟ್ ಈಸ್ ಫೈನಲಿ ಓವರ್​!’ ಎನ್ನುತ್ತಾ ಚಿತ್ರದ ನಿರ್ಮಾಪಕ ಕರಣ್ ಜೋಹರ್ ‘ಸೂರ್ಯವಂಶಿ’ ಚಿತ್ರವು ಏಪ್ರಿಲ್ 30 ರಂದು ಸಿನಿಮಾ ಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಘೋಷಿಸಿದ್ದಾರೆ.

ನಿರ್ದೇಶಕ ರೋಹಿತ್ ಶೆಟ್ಟಿಯವರ ಜನ್ಮದಿನವಾದ ಇಂದು (ಮಾರ್ಚ್ 14) ಸೂರ್ಯವಂಶಿ ಬಿಡುಗಡೆಯ ದಿನಾಂಕ ಘೋಷಿಸ ಲಾಗಿದೆ.

‘ಆ ರಹಿ ಹೇ ಪೊಲೀಸ್​’ ಎಂಬುದು ಚಿತ್ರದ ಕಾಚ್​ಫ್ರೇಸ್​ ಆಗಿದ್ದು, ಮೂವರು ಬಾಲಿವುಡ್​ ನಟರು ಪೊಲೀಸ್ ಸಮವಸ್ತ್ರದಲ್ಲಿ ಸ್ಟೈಲಾಗಿ ನಡೆದು ಬರುವ ದೃಶ್ಯ ಆಕರ್ಷಕವಾಗಿದೆ. ಜೊತೆಗೆ ಬಿಳಿಯ ಚೂಡೀದಾರ್​ನಲ್ಲಿ ನಟಿ ಕತ್ರೀನಾ ಕೈಫ್​ ಕೂಡ ಇದ್ದಾರೆ.

ಈ ಚಿತ್ರದ ಬಿಡುಗಡೆ 2020 ರ ಮಾರ್ಚ್​ 24 ಕ್ಕೆ ಬಿಡುಗಡೆ ನಿಗದಿಯಾಗಿದ್ದು ಕೊನೇ ಕ್ಷಣದಲ್ಲಿ ಸ್ಥಗಿತಗೊಂಡಿತ್ತು. ಇದೀಗ ಪೂರ್ಣ ಸಾಮರ್ಥ್ಯದಲ್ಲಿ ಚಿತ್ರಮಂದಿರಗಳನ್ನು ನಡೆಸಲು ಸರ್ಕಾರ ಅನುಮತಿಸಿದ ನಂತರ, ಚಿತ್ರದ ಬಿಡುಗಡೆಗೆ ಸಕಾಲ ಬಂದಿದೆ ಎಂದಿದ್ದಾರೆ.

‘ಸೂರ್ಯವಂಶಿಯನ್ನು ಚಿತ್ರಮಂದಿರದಲ್ಲಿ ನೋಡುವ ಅನುಭವ ನೀಡುತ್ತೇವೆಂದು ಪ್ರಾಮಿಸ್​ ಮಾಡಿದ್ದೆವು. ಇದೀಗ ನಿಮ್ಮ ಪ್ರತೀಕ್ಷೆಯ ಕ್ಷಣಗಳು ಮುಗಿದಿವೆ. ಆ ರಹಿ ಹೇ ಪೊಲೀಸ್!’ ಎಂದು ಅಕ್ಷಯ್​ಕುಮಾರ್ ಟ್ವೀಟ್ ಮಾಡಿದ್ದಾರೆ.