Friday, 2nd June 2023

ಮಾ.29ರಂದು ವಕೀಲ್ ಸಾಬ್’ ಟ್ರೈಲರ್ ರಿಲೀಸ್‌

ಹೈದರಾಬಾದ್: ತೆಲುಗು ನಟ ಪವನ್ ಕಲ್ಯಾಣ್ ನಟನೆಯ ಬಹು ನಿರೀಕ್ಷೆಯ ‘ವಕೀಲ್ ಸಾಬ್’ ಚಿತ್ರದ ಟ್ರೈಲರ್ ಮಾ.29ರಂದು ರಿಲೀಸ್ ಆಗಲಿದೆ.

ಏಪ್ರಿಲ್ 9ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, 3 ವರ್ಷಗಳ ಬಳಿಕ ಪವರ್ ಸ್ಟಾರ್ ಪವನ್ ಕಲ್ಯಾಣ್ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ವೇಣು ಶ್ರೀರಾಮ್ ಈ ಚಿತ್ರ ನಿರ್ದೇಶಿಸಿದ್ದು, ದಿಲ್ ರಾಜು ಹಾಗೂ ಬೋನಿ ಕಪೂರ್ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ನಿಂದ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

2016ರಂದು ಹಿಂದಿಯಲ್ಲಿ ತೆರೆಕಂಡ ‘ಪಿಂಕ್’ ಚಿತ್ರದ ರಿಮೇಕ್ ಇದಾಗಿದ್ದು, ಪವನ್ ಕಲ್ಯಾಣ್ ಜೊತೆ ಶ್ರುತಿ ಹಾಸನ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಪಿಂಕ್ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌ ವಕೀಲನ ಪಾತ್ರಕ್ಕೆ ಜೀವ ತುಂಬಿದ್ದರು. ಸಹ ನಟಿಯಾಗಿ ತಾಪ್ಸಿ ಪನ್ನು ನಟಿಸಿದ್ದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

error: Content is protected !!