ಹೈದರಾಬಾದ್: ಸಿನಿಮಾ(Cinema) ಹೀರೋಗಳು ಅಂದ್ರೆ ಅಭಿಮಾನ ಇರಬೇಕು, ಅದೇ ಅಭಿಮಾನ ಜಾಸ್ತಿ ಆಗೋದ್ರೆ ಅದು ದುರಭಿಮಾನ ಆಗೋಗುತ್ತೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈ ರೀತಿ ಅತಿಯಾದ ಅಭಿಮಾನ ಕಾಣಿಸುವುದಿಲ್ಲ. ಅಲ್ಲದೇ ಚಂದನವನದಲ್ಲಿ ಇತ್ತೀಚೆಗೆ ಫ್ಯಾನ್ಸ್ ವಾರ್ ಒಂದು ಹಂತಕ್ಕೆ ಕಡಿಮೆ ಆಗಿದೆ. ಆದರೆ ಆಗೊಮ್ಮೆ ಈಗೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ(social media) ಕಿಚ್ಚು ಕಾಣಿಸುತ್ತದೆ. ಹೊಡೆದಾಟ ಬಿಡಿದಾಟದ ಮಟ್ಟಿಗೆ ಇದು ಹೋಗಿರೋದು ಇತ್ತೀಚಿನ ದಿನಗಳಲ್ಲಿ ಕಡಿಮೇನೆ ಅಂತ ಹೇಳಬಹುದು.
ಆದರೆ ತೆಲುಗು(Tollywood) ಹೀರೋಗಳ ಅಭಿಮಾನಿಗಳು ಆಂಧ್ರ, ತೆಲಂಗಾಣದಲ್ಲಿ ಪರಸ್ಪರ ಕಿತ್ತಾಟ ಮಾಡಿಕೊಳ್ಳುವುದು ಆಗಾಗ ವರದಿ ಆಗುತ್ತದೆ. ಈ ಹಿಂದೆ ಕರ್ನಾಟಕದಲ್ಲೂ ಕೂಡ ತೆಲುಗು ನಟರ ಅಭಿಮಾನಿಗಳು ಬಡಿದಾಡಿಕೊಂಡಿರುವ ಘಟನೆ ನಡೆದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಆ ಘಟನೆಯ ಒಂದು ವಿಡಿಯೋ ವೈರಲ್ ಆಗಿತ್ತು. ಇದೀಗ ಅಂತಹದೇ ಒಂದು ಘಟನೆ ನಡೆದಿದ್ದು, ತನ್ನ ನೆಚ್ಚಿನ ಸ್ಟಾರ್ ವಿರುದ್ಧ ಆಕ್ಷೇಪಾರ್ಹ ವೀಡೀಯೋವನ್ನು ಹಂಚಿಕೊಂಡ ಯುಟ್ಯೂಬ್ ಚಾನೆಲ್ ಆಫೀಸ್ಗೆ ತೆರಳಿ ಗಲಾಟೆ ಮಾಡಿರುವ ಘಟನೆ ವರದಿಯಾಗಿದೆ.
ರೆಡ್ ಟಿವಿ(RED TV) ಎಂಬ ಸ್ಥಳೀಯ ಯುಟ್ಯೂಬ್ ಚಾನೆಲ್(YouTube) ಅಲ್ಲು ಅರ್ಜುನ್(Allu Arjun) ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಕಳೆದ ಕೆಲ ದಿನಗಳಿಂದ ಅಲ್ಲು ಅರ್ಜುನ್ ವಿರುದ್ಧ ನೆಗೆಟಿವ್(Negative) ಪೋಸ್ಟ್ ಗಳನ್ನು ಹಾಕುತ್ತಿತ್ತು ಎನ್ನಲಾಗಿದೆ. ಇಷ್ಟೇ ಆಗಿದ್ದರೆ ಅಭಿಮಾನಿಗಳು ಸುಮ್ಮನಾಗುತ್ತಿದಾರೋ ಏನೋ, ಆದರೆ ಆ ಯುಟ್ಯೂಬ್ ತಂಡ ಇತ್ತೀಚೆಗೆ ಅಲ್ಲು ಅರ್ಜುನ್ ಪತ್ನಿ ಸ್ನೇಹ ರೆಡ್ಡಿ ಅವರನ್ನು ಒಳಗೊಂಡತೆ ಅವರ ಮಕ್ಕಳ ಆಕ್ಷೇಪಾರ್ಹ ವಿಡೀಯೊಗಳನ್ನು ಆಪ್ ಲೋಡಿ ಮಾಡಿದ್ದು, ಥಂಬ್ ನೈಲ್ ನಲ್ಲಿಯೂ ಅಸಹ್ಯಕರ ಹೆಡ್ಲೈನ್ ನೀಡಿದ್ದಾರೆ. ಇದನ್ನು ಕಂಡು ರೊಚ್ಚಿಗೆದ್ದ ಅಲ್ಲು ಫ್ಯಾನ್ಸ್ ಆ ಯುಟ್ಯೂಬ್ ಚಾನೆಲ್ ಆಫೀಸ್ ಗೆ ನುಗ್ಗಿದ್ದು, ಅಲ್ಲಿನ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳ ತಂಡ ಹಾಗೂ ಯುಟ್ಯೂಬ್ ತಂಡದ ನಡುವೆ ವಾಗ್ವಾದ ನಡೆದಿದ್ದು, ವಿಡಿಯೊವನ್ನು ಡಿಲೀಟ್ ಮಾಡುವಂತೆ ತಾಕೀತು ಮಾಡಿದ್ದಾರೆ.
ಅಷ್ಟೇ ಅಲ್ಲದೇ ಅಲ್ಲು ಅರ್ಜುನ್ಗೆ ಸಂಬಂಧಿಸಿದ ಎಲ್ಲಾ ವಿಡಿಯೊಗಳನ್ನು ಡಿಲೀಟ್ ಮಾಡದೇ ಹೋದಲ್ಲಿ, ಆಫೀಸ್ ಅನ್ನು ಧ್ವಂಸ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದಾರೆ. ಜೊತೆಗೆ ಇನ್ನೆಂದೂ ಇಂತಹ ಪೋಸ್ಟ್ ಗಳನ್ನು ಹಾಕದಂತೆ ಎಚ್ಚರಿಕೆಯನ್ನು ನೀಡಿದ್ದು, ಅಲ್ಲಿಯೇ ಸಂಪೂರ್ಣ ವಿಡಿಯೊಗಳನ್ನು ಡಿಲೀಟ್ ಮಾಡಿಸಿದ್ದಾರೆ.
ಈ ಘಟನೆ ಕುರಿತ ಸೋಷಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಆದ X ನಲ್ಲಿ ವೈರಲ್ ಆಗಿದ್ದು, ಆಲ್ ಇಂಡಿಯಾ ಅಲ್ಲು ಅರ್ಜುನ್ ಅಭಿಮಾನಿಗಳು ಮತ್ತು ಕಲ್ಯಾಣ ಸಂಘ ಎಂಬ ಪೇಜ್ ಈ ಸುದ್ದಿಯನ್ನು ಹಂಚಿಕೊಂಡಿದೆ. ಆಲ್ ಇಂಡಿಯಾ ಅಲ್ಲು ಅರ್ಜುನ್ ಅಭಿಮಾನಿಗಳು ಮತ್ತು ಕಲ್ಯಾಣ ಸಂಘ, ಈ ಪೇಜ್ ಅಲ್ಲು ಅರ್ಜುನ್ ಅಭಿಮಾನಿಗಳ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್ ಆಗಿದ್ದು, ರೆಡ್ ಟಿವಿಯನ್ನು ಕೆಲ ದಿನಗಳಿಂದ ಗಮನಿಸಿ, ಅವರ ವರ್ತನೆ ಅತಿರೇಕವಾದಾಗ ಈ ನಿರ್ಧಾರ ಮಾಡಿದ್ದೇವು ಎಂದು ತನ್ನ ಅಭಿಪ್ರಾಯ ತಿಳಿಸಿದೆ.
ಇನ್ನು ಆ ಯುಟ್ಯೂಬ್ ತಂಡದ ಹಿರಿಯ ಸಿಬ್ಬಂದಿಯೋರ್ವರು ಆಲ್ ಇಂಡಿಯಾ ಅಲ್ಲು ಅರ್ಜುನ್ ಹಾಗೂ ಅವರ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದು, ಇದು ಉದೇಶಪೂರ್ವಕವಾಗಿ ನಡೆದದ್ದು ಅಲ್ಲ. ಅರಿವಿಗೆ ಬರದಂತೆ ಈ ತಪ್ಪು ನಡೆದು ಹೋಗಿದ್ದು, ಮುಂದೆ ಎಂದೂ ಇಂತಹ ಘಟನೆ ನಡೆಯುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ.
ಇನ್ನು 2021 ರಲ್ಲಿ ಬಿಡುಗಡೆಯಾದ ಪುಷ್ಪ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೂಪರ್ ಹಿಟ್ ಆದ ನಂತರ ನಟ ಅಲ್ಲು ಅರ್ಜುನ್ ಗೆ ದೇಶದ ಮೂಲೆ ಮೂಲೆಗಳಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿತ್ತು. ಹಿಂದಿಯಲ್ಲೂ ಕೂಡಾ ಸಾಕಷ್ಟು ಮಂದಿ ಅಭಿಮಾನಿಗಳನ್ನು ಅಲ್ಲು ಅರ್ಜುನ್ ಗಳಿಸಿದ್ದರು. ಉತ್ತರದಲ್ಲೂ ಅವರಿಗೆ ಬಾಲಿವುಡ್ ಹೀರೋಗಳಿಗಿಂತ ಹೆಚ್ಚು ಕ್ರೇಜ್ ಸಿಕ್ಕಿದೆ. ಅಲ್ಲು ಅರ್ಜುನ್ ಅವರ ಮ್ಯಾನರಿಸಂ, ಮಾಸ್ ಆಕ್ಷನ್, ಡ್ಯಾನ್ಸ್, ಸ್ಟೈಲ್ ಎಲ್ಲರಿಗೂ ಇಷ್ಟವಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ಬಟ್ಟೆಯಂಗಡಿಯಲ್ಲಿ ಮಾಡೆಲ್ಗಳೇ ಗೊಂಬೆಗಳು! ಭಾರೀ ವೈರಲಾಗ್ತಿದೆ ಈ ವಿಡಿಯೊ