Saturday, 7th September 2024

ನಿರೂಪಕನಿಗೆ ನಟ ವಿಲ್​ ಸ್ಮಿತ್​ ಕಪಾಳ ಮೋಕ್ಷ

ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ವಿಲ್​ ಸ್ಮಿತ್​ ನಿರೂಪಕ ನಿಗೆ ಕಪಾಳ ಮೋಕ್ಷ

ಅಮೆರಿಕ: ಆಸ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿರೂಪಕ ತನ್ನ ಪತ್ನಿಯನ್ನು ಹೀಯಾಳಿಸಿದ ಎಂಬ ಕಾರಣಕ್ಕಾಗಿ ನಟ ವಿಲ್​ ಸ್ಮಿತ್​ ಕೋಪ ದಿಂದ ನಿರೂಪಕನ ಕಪಾಳಕ್ಕೆ ಹೊಡೆದಿದ್ದಾರೆ.

ನಿರೂಪಕ ಕ್ರಿಸ್​ ರಾಕ್,​ ನಟ ವಿಲ್​ ಸ್ಮಿತ್​ರ ಪತ್ನಿ ಜಡಾ ಪಿಂಕೆಟ್​ ಸ್ಮಿತ್​ರ ಬೋಳು ತಲೆಯ ಬಗ್ಗೆ ತಮಾಷೆ ಮಾಡಿದ್ದಾರೆ. ಜಡಾ ನೀವು ಬೋಳು ತಲೆ ಯಲ್ಲಿ ನಟಿಸಿದ ಸಿನಿಮಾ ಜಿಐ ನೋಡಲು ಇಷ್ಟಪಡುತ್ತೇನೆ ಎಂದಾಗ ಇಡೀ ಸಭಾಂಗಣ ಗೊಳ್ಳೆಂದು ನಕ್ಕಿದೆ.

ಕ್ರಿಸ್​ ರಾಕ್​ರ ಈ ತಮಾಷೆಯಿಂದ ಕೋಪಗೊಂಡ ವಿಲ್​ ಸ್ಮಿತ್​ ವೇದಿಕೆಯ ತೆರಳಿ ಕ್ರಿಸ್​ ರಾಕ್​ ಕಪಾಳಕ್ಕೆ ಹೊಡೆದಿದ್ದಾರೆ. ಬಳಿಕ ‘ನನ್ನ ಹೆಂಡತಿಯ ಹೆಸರನ್ನು ನಿಮ್ಮ ಬಾಯಲ್ಲಿ ಹೇಳಬೇಡಿ’ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಕೆಲ ಹೊತ್ತು ಕಾರ್ಯ ಕ್ರಮದಲ್ಲಿ ಗಲಿಬಿಲಿ ಉಂಟಾಗಿದೆ.

ಇನ್ನು ವಿಲ್​ ಸ್ಮಿತ್​ರ ಪತ್ನಿ ಜಡಾ ಪಿಂಕೆಟ್​ ಅಲೋಪೆಸಿಯಾ ಎಂಬ ಕಾಯಿಲೆಗೆ ತುತ್ತಾಗಿದ್ದು, ಈ ಕಾರಣಕ್ಕಾಗಿ ಅವರು ತಮ್ಮ ಕೂದಲನ್ನು ಕತ್ತರಿಸಿದ್ದಾರೆ. ಇದನ್ನು ಅರಿಯದ ನಿರೂಪಕ ಕ್ರಿಸ್​ ರಾಕ್​ ಸಿನಿಮಾಕ್ಕಾಗಿ ಕೂದಲು ಕತ್ತರಿಸಿ ಕೊಂಡಿದ್ದಾರೆ ಎಂದು ತಮಾಷೆ ಮಾಡಿ ಪೆಟ್ಟು ತಿಂದಿದ್ದಾರೆ. ಕ್ರಿಸ್​ ರಾಕ್​ಗೆ ವಿಲ್​ ಸ್ಮಿತ್​ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಲ್ಲದೇ ಇದು ಕಾರ್ಯಕ್ರಮದ ಭಾಗವಾಗಿ ಈ ಸ್ಕ್ರಿಪ್ಟ್​ ಮಾಡಲಾಗಿದೆಯಾ ಎಂಬ ಅನುಮಾನವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

ವಿಲ್​ ಸ್ಮಿತ್​ಗೆ ಅತ್ಯುತ್ತಮ ನಟ ಪ್ರಶಸ್ತಿ: ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಟ ವಿಲ್ ಸ್ಮಿತ್ ತಮ್ಮ ‘ಕಿಂಗ್ ರಿಚರ್ಡ್’ ಚಿತ್ರ ದಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದಿದ್ದಾರೆ. ಕಿಂಗ್​ ರಿಚರ್ಡ್​ ಸಿನಿಮಾ ಅವರ ತಂದೆ ರಿಚರ್ಡ್ ವಿಲಿಯಮ್ಸ್, ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ಅವರನ್ನೊಳಗೊಂಡ ಕಥೆಯಾಗಿದೆ.

ಸಿನಿಮಾದಲ್ಲಿನ ವಿಲ್​ ಸ್ಮಿತ್​ರ ನಟನೆಗೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

error: Content is protected !!