ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

GUINNESS WORLD RECORD: 24 ಗಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಪಾಲಿಸಿ ಮಾರಾಟ- ಗಿನ್ನೆಸ್ ವಿಶ್ವ ದಾಖಲೆ ಬರೆದ LIC

"24 ಗಂಟೆಗಳಲ್ಲಿ ಮಾರಾಟವಾದ ಹೆಚ್ಚಿನ ಜೀವ ವಿಮಾ ಪಾಲಿಸಿಗಳು" ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಭಾರತೀಯ ಜೀವ ವಿಮಾ ನಿಗಮವು ಪಡೆದುಕೊಂಡಿದೆ. ಇದು ವಿಶ್ವ ದಾಖಲೆಯಾಗಿದ್ದು, ಇದನ್ನು ಘೋಷಿಸಲು ಎಲ್ಐಸಿ ತಂಡವು ಹೆಮ್ಮೆಪಡುತ್ತದೆ. ಗಿನ್ನೆಸ್ ವಿಶ್ವ ದಾಖಲೆಗೆ ಪರಿಶೀಲಿಸಲ್ಪಟ್ಟ ಈ ಐತಿಹಾಸಿಕ ಸಾಧನೆಯು 2025ರ ಜನವರಿ 20ರಂದು ನಡೆದಿದೆ. ಇದು ನಿಗಮದ ಏಜೆನ್ಸಿ ಜಾಲದ ಅಸಾಧಾರಣ ಕಾರ್ಯಕ್ಷಮತೆಯನ್ನು ಗುರುತಿಸುತ್ತದೆ ಎಂದು ಎಲ್ಐಸಿ ತಿಳಿಸಿದೆ.

ಅತ್ಯಧಿಕ ಪಾಲಿಸಿ ಮಾರಾಟ ಮಾಡಿ ವಿಶ್ವ ದಾಖಲೆ ಬರೆದ LIC

ಮುಂಬೈ: ಹೆಚ್ಚಿನ ಪ್ರಮಾಣದಲ್ಲಿ ಜೀವ ವಿಮಾ ಪಾಲಿಸಿಗಳನ್ನು (LIC Policy) 24 ಗಂಟೆಗಳಲ್ಲಿ ಮಾರಾಟ ಮಾಡಿದ ಖ್ಯಾತಿಯನ್ನು ಭಾರತೀಯ ಜೀವ ವಿಮಾ ನಿಗಮವು ( Life Insurance Corporation of India) ಪಡೆದುಕೊಂಡಿದೆ. ಇದು ಈಗ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಕಳೆದ ಜನವರಿ 20ರಂದು ಭಾರತೀಯ ಜೀವ ವಿಮಾ ನಿಗಮವು 5 ಲಕ್ಷಕ್ಕೂ ಹೆಚ್ಚು ಜೀವ ವಿಮಾ ಪಾಲಿಸಿಗಳನ್ನು 24 ಗಂಟೆಗಳಲ್ಲಿ ಮಾರಾಟ ಮಾಡಿದ್ದು ಇದರಿಂದ ಗಿನ್ನೆಸ್ ವಿಶ್ವ ದಾಖಲೆ (GUINNESS WORLD RECORD) ಬರೆದಿದೆ. ಈ ಕುರಿತು ಎಲ್ಐಸಿ ತಂಡವು ಘೋಷಣೆಯನ್ನು ಮಾಡಿದ್ದು, ಈ ಐತಿಹಾಸಿಕ ಸಾಧನೆಯು ತಂಡದ ಅಸಾಧಾರಣ ಕಾರ್ಯಕ್ಷಮತೆಯಿಂದ ಸಾಧ್ಯವಾಗಿದೆ ಎಂದು ಹೇಳಿದೆ.

"24 ಗಂಟೆಗಳಲ್ಲಿ ಮಾರಾಟವಾದ ಹೆಚ್ಚಿನ ಜೀವ ವಿಮಾ ಪಾಲಿಸಿಗಳು" ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಭಾರತೀಯ ಜೀವ ವಿಮಾ ನಿಗಮವು ಪಡೆದುಕೊಂಡಿದೆ. ಇದು ವಿಶ್ವ ದಾಖಲೆಯಾಗಿದ್ದು, ಇದನ್ನು ಘೋಷಿಸಲು ಎಲ್ಐಸಿ ತಂಡವು ಹೆಮ್ಮೆಪಡುತ್ತದೆ ಎಂದು ತಿಳಿಸಿದೆ. ಗಿನ್ನೆಸ್ ವಿಶ್ವ ದಾಖಲೆಗೆ ಪರಿಶೀಲಿಸಲ್ಪಟ್ಟ ಈ ಐತಿಹಾಸಿಕ ಸಾಧನೆಯು 2025ರ ಜನವರಿ 20ರಂದು ನಡೆದಿದೆ. ಇದು ನಿಗಮದ ಏಜೆನ್ಸಿ ಜಾಲದ ಅಸಾಧಾರಣ ಕಾರ್ಯಕ್ಷಮತೆಯನ್ನು ಗುರುತಿಸುತ್ತದೆ ಎಂದು ಎಲ್ಐಸಿ ತಿಳಿಸಿದೆ.

ದೇಶಾದ್ಯಂತ ಜನವರಿ 20ರಂದು ಭಾರತೀಯ ಜೀವ ವಿಮಾ ನಿಗಮದ ಒಟ್ಟು 4,52,839 ಏಜೆಂಟರುಗಳು 5,88,107 ಜೀವ ವಿಮಾ ಪಾಲಿಸಿಗಳನ್ನು ವಿತರಿಸಿದ್ದಾರೆ. ಈ ಪ್ರಯತ್ನವು ಕೇವಲ 24 ಗಂಟೆಗಳ ಅವಧಿಯಲ್ಲಿ ನಡೆದಿದ್ದು, ಇದು ಜೀವ ವಿಮಾ ಉದ್ಯಮದಲ್ಲಿ ವಿಶ್ವ ದಾಖಲೆಯಾಗಿದೆ. ಇದರಿಂದ ಸಂಸ್ಥೆಯು ಪ್ರತಿಷ್ಠಿತ ಗಿನ್ನೆಸ್ ವಿಶ್ವ ದಾಖಲೆಗೆ ಅರ್ಹವಾಗಿದ್ದು, ಈ ಪ್ರಶಸ್ತಿಯನ್ನು ಸ್ವೀಕರಿಸಲು ಎಲ್ಐಸಿ ತಂಡವು ತುಂಬಾ ಉತ್ಸುಕವಾಗಿದೆ ಎಂದು ಎಲ್ಐಸಿ ಹೇಳಿದೆ.

ಇದನ್ನೂ ಓದಿ: Covid in Karnataka: ಕರ್ನಾಟಕದಲ್ಲಿ ಮತ್ತೆ ಕೋವಿಡ್ ಹಾವಳಿ; ಸೋಂಕಿಗೆ ಬೆಂಗಳೂರಿನಲ್ಲಿ ಮೊದಲ ಬಲಿ

ನಮ್ಮ ಏಜೆಂಟರ ಅವಿರತ ಸಮರ್ಪಣೆ, ಕೌಶಲ ಮತ್ತು ದಣಿವರಿಯದ ಕೆಲಸಕ್ಕೆ ಇದು ದೃಢೀಕರಣವಾಗಿದೆ. ಈ ಸಾಧನೆಯು ನಮ್ಮ ಗ್ರಾಹಕರು ಮತ್ತು ಅವರ ಕುಟುಂಬಗಳಿಗೆ ಪ್ರಮುಖ ಆರ್ಥಿಕ ರಕ್ಷಣೆಯನ್ನು ಒದಗಿಸುವ ನಮ್ಮ ಧ್ಯೇಯದ ಕಡೆಗೆ ನಮ್ಮ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದು ಎಲ್ಐಸಿಯ ಸಿಇಒ ಮತ್ತು ಎಂಡಿ ಸಿದ್ಧಾರ್ಥ ಮೊಹಾಂತಿ ಅವರ ಯೋಜನೆಯ ಪ್ರತಿಫಲವಾಗಿದೆ. ಅವರು ಪ್ರತಿಯೊಬ್ಬ ಏಜೆಂಟರು ಜನವರಿ 20ರಂದು "ಮ್ಯಾಡ್ ಮಿಲಿಯನ್ ಡೇ" ಆಚರಿಸಲು ಕರೆ ನೀಡಿದ್ದು, ಇದರ ಮೂಲಕ ಒಬ್ಬ ಏಜಂಟ್ ಕನಿಷ್ಠ ಒಂದು ಪಾಲಿಸಿಯನ್ನು ಪೂರ್ಣಗೊಳಿಸುವಂತೆ ಮನವಿ ಮಾಡಿದ್ದರು ಎಂದು ಎಲ್ಐ ಸಿ ತಿಳಿಸಿದೆ.

ವಿಶ್ವ ದಾಖಲೆ ನಿರ್ಮಿಸಿದ ಎಲ್ಐಸಿ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ಮೊಹಂತಿ, ಮ್ಯಾಡ್ ಮಿಲಿಯನ್ ಡೇ ಅನ್ನು ಐತಿಹಾಸಿಕವಾಗಿಸಿದ್ದಕ್ಕಾಗಿ ನಮ್ಮ ಎಲ್ಲಾ ಗ್ರಾಹಕರು, ಏಜೆಂಟರು ಮತ್ತು ಉದ್ಯೋಗಿಗಳಿಗೆ ಕೃತಜ್ಞತೆಗಳು. ಒಂದೇ ದಿನದಲ್ಲಿ ದಾಖಲೆ ಸಂಖ್ಯೆಯ ಪಾಲಿಸಿಗಳನ್ನು ಖರೀದಿಸುವ ಅವರ ಅದ್ಭುತ ಕಾರ್ಯಕ್ಷಮತೆಯನ್ನು ಗಿನ್ನೆಸ್‌ ವಿಶ್ವ ದಾಖಲೆಯಾಗಿದೆ ಎಂದು ಹೇಳಿದ್ದಾರೆ.