Dewald Brevis: ಸ್ಫೋಟಕ ಅರ್ಧಶತಕ ಸಿಡಿಸಿ ದಾಖಲೆ ಬರೆದ ಡೆವಾಲ್ಡ್ ಬ್ರೆವಿಸ್
5ನೇ ಕ್ರಮಾಂಕದಲ್ಲಿ ಆಡಲಿಳಿದ ಡೆವಾಲ್ಡ್ ಬ್ರೆವಿಸ್ ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಬರಪೂರ ರಂಜನೆ ಒದಗಿಸಿದರು. ಅವರು ಬ್ಯಾಟಿಂಗ್ ಆರ್ಭಟಕ್ಕೆ ಅಹಮದಾಬಾದ್ ಬೌಲರ್‌ಗಳು ಸಂಪೂರ್ಣ ಲಯ ಕಳೆದುಕೊಂಡರು.


ಅಹಮದಾಬಾದ್: ಚೆನ್ನೈ ಸೂಪರ್ ಕಿಂಗ್ಸ್(CSK) ತಂಡದ ಯುವ ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್(Dewald Brevis) ಅವರು ಗುಜರಾತ್ ಟೈಟಾನ್ಸ್(CSK vs GT) ವಿರುದ್ಧದ ಭಾನುವಾರದ ಐಪಿಎಲ್(IPL 2025) ಪಂದ್ಯದಲ್ಲಿ 19 ಎಸೆತಗಳಿಂದ ಅರ್ಧಶತಕ ಬಾರಿಸುವ ಮೂಲಕ ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ಚೆನ್ನೈಯ ನಾಲ್ಕನೇ ಬ್ಯಾಟರ್ ಎಂಬ ದಾಖಲೆ ಬರೆದರು. ಸುರೇಶ್ ರೈನಾ(16) ಮೊದಲಿಗ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಹಗಲು ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಬಿರುಸಿನ ಬ್ಯಾಟಿಂಗ್ ಮೂಲಕ 5 ವಿಕೆಟ್‌ಗೆ ಬೃಹತ್ 230 ರನ್ ಕಲೆಹಾಕಿತು.
ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಆಯುಷ್ ಮ್ಹಾತ್ರೆ ಮತ್ತು ಡೆವೋನ್ ಕಾನ್ವೆ ಅಹಮದಾಬಾದ್ ಬೌಲರ್‌ಗಳ ಮೇಲೆರಗಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು. ಅರ್ಷದ್ ಖಾನ್ ಅವರ ಒಂದೇ ಓವರ್‌ನಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದ ಆಯುಷ್ ಮ್ಹಾತ್ರೆ ಬರೋಬ್ಬರಿ 28 ರನ್ ದೋಚಿದರು. ಇವರ ಬಿರುಸಿನ ಬ್ಯಾಟಿಂಗ್‌ಗೆ ಕೊನೆಗೂ ಪ್ರಸಿದ್ಧ್ ಕೃಷ್ಣ ಬ್ರೇಕ್ ಹಾಕಿದರು. 17 ಎಸೆತ ಎದುರಿಸಿದ ಮ್ಹಾತ್ರೆ 34 ರನ್ ಬಾರಿಸಿದರು. ಡೆವೋನ್ ಕಾನ್ವೆ 52 ರನ್ ಬಾರಿಸಿದರು.
5ನೇ ಕ್ರಮಾಂಕದಲ್ಲಿ ಆಡಲಿಳಿದ ಡೆವಾಲ್ಡ್ ಬ್ರೆವಿಸ್ ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಬರಪೂರ ರಂಜನೆ ಒದಗಿಸಿದರು. ಅವರು ಬ್ಯಾಟಿಂಗ್ ಆರ್ಭಟಕ್ಕೆ ಅಹಮದಾಬಾದ್ ಬೌಲರ್‌ಗಳು ಸಂಪೂರ್ಣ ಲಯ ಕಳೆದುಕೊಂಡರು. 19 ಎಸೆತಗಳಿಂದ ಅರ್ಧಶತಕ ಪೂರೈಸಿದ ಅವರು ಅಂತಿಮವಾಗಿ 23 ಎಸೆತಗಳಿಂದ 5 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ 57 ರನ್ ಚಚ್ಚಿದರು. ರವೀಂದ್ರ ಜಡೇಜಾ 21 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದನ್ನೂ ಓದಿ IPL 2025: ಪ್ಲೇ ಆಫ್‌ಗೂ ಮುನ್ನ ಆರ್‌ಸಿಬಿಗೆ ಜೋಶ್ ತುಂಬಿದ ಜೋಶ್ ಹ್ಯಾಜಲ್‌ವುಡ್
ಚೆನ್ನೈ ಪರ ಅತಿ ವೇಗದ ಅರ್ಧಶತಕ
ಸುರೇಶ್ ರೈನಾ- 16 ಎಸೆತ (2014)
ಮೊಯಿನ್ ಅಲಿ-19 ಎಸೆತ(2022)
ಅಜಿಂಕ್ಯ ರಹಾನೆ-19 ಎಸೆತ (2023)
ಡೆವಾಲ್ಡ್ ಬ್ರೆವಿಸ್- 19 ಎಸೆತ (2025)