Largest economy: ಜಪಾನ್ ಹಿಂದಿಕ್ಕಿದ ಭಾರತ- ನಾಲ್ಕನೇ ಅತಿದೊಡ್ಡ ಆರ್ಥಿಕ ರಾಷ್ಟ್ರ
ಆಯೋಗದ 10 ನೇ ಆಡಳಿತ ಮಂಡಳಿ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸುಬ್ರಹ್ಮಣ್ಯಂ, ಒಟ್ಟಾರೆ ಭೌಗೋಳಿಕ ಮತ್ತು ಆರ್ಥಿಕ ವಾತಾವರಣವು ಭಾರತಕ್ಕೆ ಅನುಕೂಲಕರವಾಗಿದೆ. ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿದೆ. ಒಟ್ಟಾರೆಯಾಗಿ $4 ಟ್ರಿಲಿಯನ್ ಆರ್ಥಿಕತೆ ನಮ್ಮದಾಗಿದೆ. ಆಮೂಲಕ ಜಪಾನ್ ಅನ್ನು ಕೂಡ ಹಿಂದಿಕ್ಕಿದೆ ಎಂದು ತಿಳಿಸಿದ್ದಾರೆ.


ನವದೆಹಲಿ: ಅತಿವೇಗದಲ್ಲಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ(Largest economy) ಭಾರತ ಮುನ್ನುಗುತ್ತಿದೆ. ಇದೀಗ ಜಪಾನ್ ಅನ್ನು ಹಿಂದಿಕ್ಕಿ ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿ ಬೆಳೆದು ನಿಂತಿದೆ. ಈ ಬಗ್ಗೆ ನೀತಿ ಆಯೋಗದ ಸಿಇಒ ಬಿ ವಿ ಆರ್ ಸುಬ್ರಹ್ಮಣ್ಯಂ ಮಾಹಿತಿ ನೀಡಿದ್ದಾರೆ. ನೀತಿ ಆಯೋಗದ 10 ನೇ ಆಡಳಿತ ಮಂಡಳಿ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸುಬ್ರಹ್ಮಣ್ಯಂ, ಒಟ್ಟಾರೆ ಭೌಗೋಳಿಕ ಮತ್ತು ಆರ್ಥಿಕ ವಾತಾವರಣವು ಭಾರತಕ್ಕೆ ಅನುಕೂಲಕರವಾಗಿದೆ. ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿದೆ. ಒಟ್ಟಾರೆಯಾಗಿ $4 ಟ್ರಿಲಿಯನ್ ಆರ್ಥಿಕತೆ ನಮ್ಮದಾಗಿದೆ. ಆಮೂಲಕ ಜಪಾನ್ ಅನ್ನು ಕೂಡ ಹಿಂದಿಕ್ಕಿದೆ ಎಂದು ತಿಳಿಸಿದ್ದಾರೆ.
"ಯುಎಸ್, ಚೀನಾ, ಜರ್ಮನಿ ಮಾತ್ರ ಭಾರತಕ್ಕಿಂತ ದೊಡ್ಡದಾಗಿದೆ ಮತ್ತು ನಾವು ಯೋಜಿಸುತ್ತಿರುವ ಮತ್ತು ಯೋಚಿಸುತ್ತಿರುವ ವಿಷಯಗಳಿಗೆ ಕಠಿಬದ್ಧರಾದರೆ, 2.5-3 ವರ್ಷಗಳಲ್ಲಿ, ನಾವು ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿ ಹೊರ ಹೊಮ್ಮುತ್ತೇವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಮಾರಾಟವಾಗುವ ಆಪಲ್ ಐಫೋನ್‌ಗಳನ್ನು ಭಾರತ ಅಥವಾ ಬೇರೆಲ್ಲಿಯೂ ಅಲ್ಲ, ಅಮೆರಿಕದಲ್ಲಿ ತಯಾರಿಸಬೇಕೆಂದು ನಿರೀಕ್ಷಿಸುತ್ತೇನೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಬ್ರಹ್ಮಣ್ಯಂ, "ಸುಂಕ ಏನೆಂಬುದು ಖಚಿತವಿಲ್ಲ. ಪರಿಸ್ಥಿತಿಯನ್ನು ಗಮನಿಸಿದರೆ, ನಾವು ಅಗ್ಗದ ಬೆಲೆಯಲ್ಲಿ ತಯಾರಿಸಲು ಸಾಧ್ಯವಾಗಲಿದೆ" ಎಂದು ಹೇಳಿದರು. ಆಸ್ತಿ ಹಣಗಳಿಕೆಯ ಎರಡನೇ ಸುತ್ತಿನ ಪೈಪ್‌ಲೈನ್ ಅನ್ನು ಸಿದ್ಧಪಡಿಸಲಾಗುತ್ತಿದೆ ಮತ್ತು ಆಗಸ್ಟ್‌ನಲ್ಲಿ ಅದನ್ನು ಘೋಷಿಸಲಾಗುವುದು ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: Neeti Ayoga Meeting: ಕೇಂದ್ರ, ರಾಜ್ಯ ಸರ್ಕಾರಗಳು ಟೀ ಇಂಡಿಯಾದ ರೀತಿಯಲ್ಲಿ ಕೆಲಸ ಮಾಡಬೇಕು; ನೀತಿ ಆಯೋಗದ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಿದ ಮೋದಿ