ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bonded Labourers: 25,000 ರೂ.ಗಾಗಿ ಮಗನನ್ನು ಒತ್ತೆ ಇಟ್ಟ ತಾಯಿ ಮರಳಿ ಬಂದಾಗ ಸಿಕ್ಕಿದ್ದು ಆತನ ಶವ

ಆಂಧ್ರ ಪ್ರದೇಶದ ತಿರುಪತಿಯಲ್ಲಿ ಬಾತುಕೋಳಿ ಸಾಕಣೆದಾರನ ಬಳಿ 25,000 ರೂಪಾಯಿ ಸಾಲ ಪಡೆದ ಬುಡಕಟ್ಟು ಸಮುದಾಯದ ಮಹಿಳೆ ಅನಕಮ್ಮ ಇದಕ್ಕೆ ಬದಲಿಯಾಗಿ ಮಗನನ್ನು ಜೀತದಾಳುಗಳನ್ನಾಗಿ ಆತನ ಬಳಿ ಇರಿಸಿದ್ದಳು. ಆದರೆ ಆಕೆ ಹಣ ಹೊಂದಿಸಿ ಬರುವಾಗ ಬಾಲಕನೊಬ್ಬ ಕಾಮಾಲೆಯಿಂದ ಸತ್ತಿದ್ದಾನೆ ಎನ್ನಲಾಗಿದೆ. ಆದರೆ ಈ ಬಗ್ಗೆ ಆಕೆಯ ತಾಯಿಗೂ ತಿಳಿಸದೆ ಶವವನ್ನು ಪಕ್ಕದ ರಾಜ್ಯವಾದ ತಮಿಳುನಾಡಿನಲ್ಲಿ ಹೂತು ಹಾಕಿದ್ದಾನೆ.

ಜೀತ ಪದ್ಧತಿಗೆ ಬಾಲಕ ಬಲಿ

ತಿರುಪತಿ: ಬುಡಕಟ್ಟು ಸಮುದಾಯದ (Tribal community) ಮಹಿಳೆಯೊಬ್ಬರು 25,000 ರೂ. ಗಾಗಿ ಮಗನನ್ನು ಬಾತುಕೋಳಿ ಸಾಕಣೆದಾರನ ಬಳಿ ಜೀತದಾಳುವಾಗಿ (Bonded labourers) ಇರಿಸಿದ್ದಳು. ಆದರೆ ಮಗನನ್ನು ಬಿಡಿಸುವ ಸಲುವಾಗಿ ಸಾಲದ ಹಣವನ್ನು ಹಿಂದಿರುಗಿಸಲು ಬಂದಾಗ ಆಕೆಗೆ ಮಗ ಸಿಗಲಿಲ್ಲ. ಆತನ ಹೆಣ ಸಿಕ್ಕಿತು. ಇಂತಹ ಒಂದು ದುರಂತ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ. ಮೃತಪಟ್ಟ ಬಾಲಕನ ಶವವವನ್ನು ಆತನ ತಾಯಿಗೂ ತಿಳಿಸದೇ ಬಾತುಕೋಳಿ ಸಾಕಣೆದಾರ ತಮಿಳುನಾಡಿನಲ್ಲಿ (Tamilnadu) ಹೂತು ಹಾಕಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಆಂಧ್ರ ಪ್ರದೇಶದ ತಿರುಪತಿಯಲ್ಲಿ ಬಾತುಕೋಳಿ ಸಾಕಣೆದಾರನ ಬಳಿ 25,000 ರೂಪಾಯಿ ಸಾಲ ಪಡೆದ ಬುಡಕಟ್ಟು ಸಮುದಾಯದ ಮಹಿಳೆ ಅನಕಮ್ಮ ಇದಕ್ಕೆ ಬದಲಿಯಾಗಿ ಆಕೆಯ ಮಗನನ್ನು ಜೀತದಾಳುಗಳನ್ನಾಗಿ ಆತನ ಬಳಿ ಇರಿಸಿದ್ದಳು. ಆದರೆ ಆಕೆ ಹಣ ಹೊಂದಿಸಿ ಬರುವಾಗ ಬಾಲಕನೊಬ್ಬ ಕಾಮಾಲೆಯಿಂದ ಸತ್ತಿದ್ದಾನೆ ಎನ್ನಲಾಗಿದೆ. ಆದರೆ ಈ ಬಗ್ಗೆ ಆಕೆಯ ತಾಯಿಗೂ ತಿಳಿಸದೆ ಶವವನ್ನು ಹೂತು ಹಾಕಿದ್ದಾನೆ.

ಯಾನಾಡಿ ಬುಡಕಟ್ಟು ಸಮುದಾಯದ ಅನಕಮ್ಮ ಮತ್ತು ಆಕೆಯ ಪತಿ ಚೆಂಚಯ್ಯ ತಮ್ಮ ಮೂವರು ಗಂಡು ಮಕ್ಕಳೊಂದಿಗೆ ತಿರುಪತಿಯಲ್ಲಿ ಬಾತುಕೋಳಿ ಸಾಕಣೆದಾರರ ಬಳಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದರು. ಚೆಂಚಯ್ಯ ನಿಧನರಾದ ಬಳಿಕ ಉದ್ಯೋಗದಾತ ಅಂಕಮ್ಮ ಮತ್ತು ಅವರ ಮೂವರು ಮಕ್ಕಳನ್ನು ತನ್ನ ಬಳಿ ಕೆಲಸ ಮಾಡುವಂತೆ ಮಾಡಿದ್ದನು. ಆಕೆಯ ಪತಿ ಅವನಿಂದ 25,000 ರೂ. ಸಾಲ ಪಡೆದಿದ್ದರಿಂದ ಅನಕಮ್ಮ ಆ ಸಾಲವನ್ನು ತೀರಿಸಲು ಆತನ ಬಳಿ ತನ್ನ ಮೂವರು ಮಕ್ಕಳೊಂದಿಗೆ ಕೆಲಸ ಮಾಡುತ್ತಿದ್ದಳು.

ಅನಕಮ್ಮ ತನ್ನ ಮಕ್ಕಳೊಂದಿಗೆ ಕೆಲಸ ಬಿಡಲು ನಿರ್ಧರಿಸಿದಾಗ ಬಾತುಕೋಳಿ ಸಾಕಣೆದಾರ ಬಡ್ಡಿ 20,000 ರೂ. ಸೇರಿ ಒಟ್ಟು 45,000 ರೂ.ಹಿಂದಿರುಗಿಸಲು ಒತ್ತಾಯಿಸಿದ್ದಾನೆ. ಆಗ ಅನಕಮ್ಮ ಹಣದ ವ್ಯವಸ್ಥೆ ಮಾಡಲು 10 ದಿನಗಳ ಕಾಲಾವಕಾಶ ಕೇಳಿದ್ದಳು. ಇದಕ್ಕಾಗಿ ಒಬ್ಬ ಮಗನನ್ನು ಬಿಟ್ಟು ಹೋಗಲು ಒತ್ತಾಯಿಸಲಾಗಿದೆ. ಆಕೆ ಬೇರೆ ಆಯ್ಕೆಯಿಲ್ಲದೆ ಮಗನನ್ನು ಬಿಟ್ಟು ಹಣ ಹೊಂದಿಸಲು ಹೋಗಿದ್ದಳು. ಹಲವು ಬಾರಿ ಅನಕಮ್ಮ ಫೋನ್ ಮಾಡಿದಾಗ ಮಗನೊಂದಿಗೆ ಆಕೆಗೆ ಮಾತನಾಡಲು ಬಿಟ್ಟಿರಲಿಲ್ಲ. ಕೊನೆಯದಾಗಿ ಆಕೆ ಏಪ್ರಿಲ್ 12ರಂದು ಮಗನೊಂದಿಗೆ ಮಾತನಾಡಿದ್ದಳು.

ಕೊನೆಗೂ ಮಹಿಳೆ ಹಣ ಹೊಂದಿಸಿಕೊಂಡು ಮಗನನ್ನು ಕರೆದುಕೊಂಡು ಹೋಗಲು ಬಂದಾಗ ಹುಡುಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಅವನು ಅಲ್ಲಿಂದ ಓಡಿ ಹೋಗಿದ್ದಾನೆ ಎಂದು ಹೇಳಿದನು. ಇದರಿಂದ ಕಂಗಾಲಾದ ಅನಕಮ್ಮ ಕೆಲವು ಬುಡಕಟ್ಟು ಸಮುದಾಯದ ನಾಯಕರ ಸಹಾಯದಿಂದ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದಳು.

ಪೊಲೀಸರು ಬಾತುಕೋಳಿ ಸಾಕಣೆದಾರನನ್ನು ವಿಚಾರಣೆ ನಡೆಸಿದಾಗ ಬಾಲಕ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಆತ ಬಾಲಕನ ಶವವನ್ನು ತಮಿಳುನಾಡಿನ ಕಾಂಚಿಪುರಂನಲ್ಲಿರುವ ತನ್ನ ಅತ್ತೆಯ ಮನೆಯ ಬಳಿ ಹೂತು ಹಾಕಿದ್ದನು. ಪೊಲೀಸರು ಬಾಲಕನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: Physical Abuse Case: ಜಾಮೀನು ಸಿಗುತ್ತಿದ್ದಂತೆ ಮೆರವಣಿಗೆ , ರೋಡ್‌ ಶೋ....... ಗ್ಯಾಂಗ್ ರೇಪ್ ಆರೋಪಿಗಳು ಮತ್ತೆ ಅಂದರ್

ಬಾತುಕೋಳಿ ಸಾಕಣೆದಾರ, ಆತನ ಪತ್ನಿ ಮತ್ತು ಮಗನನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಜೀತಪದ್ಧತಿ (ನಿರ್ಮೂಲನೆ) ಕಾಯ್ದೆ, ಬಾಲಕಾರ್ಮಿಕ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ತಿರುಪತಿ ಜಿಲ್ಲಾಧಿಕಾರಿ ವೆಂಕಟೇಶ್ವರ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ.