Actor Silambarasan: ಥಗ್ ಲೈಫ್ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾವುಕರಾದ ನಟ ಸಿಂಬು!
ಥಗ್ ಲೈಫ್'ಸಿನಿಮಾದ ಆಡಿಯೋ ಲಾಂಚ್ ಕಾರ್ಯ ಕ್ರಮವು ಚೆನ್ನೈನ ಸಾಯಿ ರಾಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅದ್ದೂರಿಯಾಗಿ ನಡೆದಿದ್ದು ಕಾರ್ಯಕ್ರಮದಲ್ಲಿ ನಟ ಸಿಂಬು ಭಾವುಕವಾಗಿ ಮಾತನಾಡಿದ್ದಾರೆ. ಸಿಂಬು ತಮ್ಮ ಸಿನಿಮಾ ಜರ್ನಿ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ.


ಚೆನ್ನೈ: ಬಹುನಿರೀಕ್ಷಿತ ಮಣಿರತ್ನಂ ಹಾಗೂ ಕಮಲ್ ಹಾಸನ್ ಕ್ರೇಜಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾ 'ಥಗ್ ಲೈಫ್' ಚಿತ್ರದ ಟ್ರೈಲರ್ ರಿಲೀಸ್ ಆಗಿ ಭಾರಿ ಸದ್ದು ಮಾಡುತ್ತಿದೆ. ಥಗ್ ಲೈಫ್' ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವು ಚೆನ್ನೈನ ಸಾಯಿ ರಾಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅದ್ದೂರಿಯಾಗಿ ನಡೆದಿದ್ದು ಕಾರ್ಯಕ್ರಮದಲ್ಲಿ ನಟ ಸಿಲಂಬರಸನ್ (Actor Simbu) ಭಾವುಕವಾಗಿ ಮಾತನಾಡಿದ್ದಾರೆ.ಥಗ್ ಲೈಫ್ ಚಿತ್ರದಲ್ಲಿ ಕಾಲಿವುಡ್ ಸ್ಟಾರ್ ಹೀರೋ ಸಿಲಂಬರಸನ್(Actor Silambarasan) ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಸಿಂಬು ಕಣ್ಣೀರು ಹಾಕುತ್ತಾ ತಮ್ಮ ಹೆತ್ತವರಿಗೆ ಧನ್ಯವಾದ ಅರ್ಪಿಸುವ ಜೊತೆಗೆ ಚಿತ್ರರಂಗದ ಅನೇಕ ಮಾರ್ಗ ದರ್ಶಕರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ನಾನು ಸ್ಕೂಲ್ ಹೋಗುವ ಬದಲು ಚಿಕ್ಕಂದಿನಲ್ಲಿಯೇ ಅಭಿನಯ ಶುರುಮಾಡಿದೆ. ಆಗ ಬೇಜಾರಾಗುತ್ತಿತ್ತು, ಆದರೆ ಇವತ್ತು 40 ವರ್ಷಗಳ ನಂತರ ಕಮಲ್ ಹಾಸನ್ ಅವರೊಂದಿಗೆ ನಟಿಸುವ ಅವಕಾಶ ನನಗೆ ಸಿಕ್ಕಿದೆ. ಈ ಜೀವನ ಕೊಟ್ಟ ತಂದೆ ತಾಯಿ ಟಿ. ರಾಜೆಂದರ್ ಮತ್ತು ಉಷಾ ರಾಜೆಂದರ್ ಅವರಿಗೆ ಧನ್ಯವಾದಗಳು ಎಂದು ಭಾವುಕರಾಗಿ ಮಾತನಾಡಿದ್ದಾರೆ. ಚಿತ್ರ ತಂಡದ ಬಗ್ಗೆ ಮಾತನಾಡುತ್ತಾ ಕಮಲ್ ಸರ್ ತನ್ನನ್ನು ತಾನು ಸಿನಿಮಾ ವಿದ್ಯಾರ್ಥಿ ಎಂದು ಹೇಗೆ ಕರೆದುಕೊಳ್ಳುತ್ತಾರೆ ಎಂಬುದನ್ನು ನೆನಪಿಸಿಕೊಂಡರು. ನಾವು ಅವರಿಂದ ಕಲಿಯಲು ತುಂಬಾ ಇದೆ. ಆದರೆ ಅವರು ತಮ್ಮನ್ನು ವಿದ್ಯಾರ್ಥಿ ಎಂದು ಕರೆದುಕೊಳ್ಳುತ್ತಲೇ ಇರುತ್ತಾರೆ. ಅವರು ವಿದ್ಯಾರ್ಥಿಯಾಗಿದ್ದರೂ, ನಾವು ಇನ್ನೂ ಅವರಿಂದ ಕಲಿಯುತ್ತಲೇ ಇರುತ್ತೇವೆ. ನಮಗೆಲ್ಲಾ ಅವರು ದಾರಿದೀಪದಂತೆ ಎಂದು ಕಮಲ್ ಹಾಸನ್ ಬಗ್ಗೆ ಮಾತನಾಡಿದರು.
ರೆಹಮಾನ್ ಬಗ್ಗೆ ಮಾತನಾಡುತ್ತಾ ನನ್ನ ಬಾಲ್ಯದಿಂದಲೂ ನಾನು ನಿಮಗೆ ಯಾವಾಗಲೂ ತೊಂದರೆ ಕೊಟ್ಟಿದ್ದೇನೆ. ಈಗಲೂ ತೊಂದರೆ ನೀಡುತ್ತಿದ್ದೇನೆ. ನನ್ನ ಬೀಪ್ ಹಾಡು ಬಿಡುಗಡೆಯಾದಾಗ, ಅದು ದುಃಖಕರ ಸಮಯ ಎಂದು ಎಲ್ಲರಿಗೂ ತಿಳಿದಿತ್ತು. ಬೀಪ್ ಸಾಂಗ್ ಸಂದರ್ಭದಲ್ಲಿ ಎಲ್ಲಾ ಕಡೆ ನನ್ನ ಬಗ್ಗೆ ಟೀಕೆ ಇತ್ತು. ಆ ಸಮಯದಲ್ಲಿ ಅವರು ಬೇರೆಡೆಗೆ ಪ್ರಯಾಣಿಸ ಬೇಕಾಗಿದ್ದರೂ ಅವರು ತಮ್ಮ ಶೆಡ್ಯೂಲ್ ರದ್ದುಮಾಡಿ ನನ್ನ ಹಾಡಿಗೆ ಬೆಂಬಲ ನೀಡಿದರು. ಇವತ್ತು ನಾನು 150ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದೇನೆ ಎಂದು ಸಿಂಬು ರಹೆಮಾನ್ ಸಹಾಯದ ಬಗ್ಗೆ ನೆನಪಿಸಿಕೊಂಡರು.
ಇನ್ನು ಮುಂದೆ ನನ್ನ ಸಿನಿಮಾಗಳು ವಿಳಂಬವಾಗುವುದಿಲ್ಲ.. ಥಗ್ ಲೈಫ್ ನನ್ನ ಹೊಸ ಆರಂಭ. ನನ್ನ ಅಭಿಮಾನಿಗಳು ನನ್ನ ಜೀವನದ ಭಾಗವಷ್ಟೇ ಅಲ್ಲ, ನನ್ನ ಹೃದಯವೂ ಹೌದು.. ತನ್ನ ಅಭಿಮಾನಿಗಳಿಗೆ ತಾನು ಎಂದಿಗೂ ಅಭಾರಿ ಎಂದರು. ಥಗ್ ಲೈಫ್ ರಾಜ್ ಕಮಲ್ ಫಿಲಂಸ್ ಇಂಟರ್ನ್ಯಾಷನಲ್, ಮದ್ರಾಸ್ ಟಾಕೀಸ್ ಹಾಗೂ ರೆಡ್ ಜೈಂಟ್ ಮೂವೀಸ್ ಬ್ಯಾನರ್‌ಗಳು ಜಂಟಿಯಾಗಿ ಈ ಚಿತ್ರ ನಿರ್ಮಿಸಿವೆ. ಕಮಲ್ ಹಾಸನ್, ಆರ್ ಮಹೇಂದ್ರನ್, ಮಣಿರತ್ನಂ, ಶಿವ ಅನಂತ್ ಹಾಗೂ ಉದಯ ನಿಧಿ ಸ್ಟಾಲಿನ್ ಬಂಡವಾಳ ಹೂಡಿದ್ದಾರೆ. ಜೂನ್ 5ಕ್ಕೆ ಸಿನಿಮಾ ತೆರೆಗೆ ಬರಬೇಕಿದ್ದು ಕಮಲ್ ಸಿಂಬು ಜೊತೆಗೆ ತ್ರಿಷಾ, ಅಭಿರಾಮಿ, ನಾಸರ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.